ಹೊಟ್ಟೆ ಮೇಲೆ ಕಲ್ಲುಗಳು ಹಾಕಬೇಡಿ, ತಮಗೆ ಸರ್ಕಾರದ ಸಂಬಳವು ಇದೆ, ಎಂದು ಪ್ರಶ್ನೆ ಮಾಡಿದ್ದಕ್ಕೆ ಜಾತಿನಿಂಧನ ಪ್ರಕರಣ.!!? ಬಳ್ಳಾರಿ(27) ಭಾರತದ ದೇಶದಲ್ಲಿ ಯಾವುದೇ ಸಮಸ್ಯೆ ಅಗಲಿ ಹಲವಾರು ರೀತಿಯಲ್ಲಿ ಸರಿಪಡಿಸಿ ಕೊಂಡು ಹೋಗುವ ವ್ಯವಸ್ಥೆ ಇದೆ,ಆದರೆ ಬಳ್ಳಾರಿಯಲ್ಲಿ ಇರುವ ಕರೆಂಟ್ (ಕೆ.ಇ.ಬಿ.)ಇಲಾಖೆ ವ್ಯವಸ್ಥೆ ಯನ್ನು ಸರಿಪಡಿಸಲು ಯಾರಿಂದಲೂ ಸಾಧ್ಯವಿಲ್ಲ.
ಇಲ್ಲಿ ವ್ಯಾಪಕ ಭ್ರಷ್ಟಾಚಾರ ಎನ್ನುವುದು ತಾಂಡವ ನೃತ್ಯ ಮಾಡುತ್ತದೆ. ಇಲ್ಲಿ ಇರುವ ಕೆಲ ಮೇಲಿನ ಭ್ರಷ್ಟ ಅಧಿಕಾರಿಗಳು, ಮತ್ತು ಲೀಡರ್ ಗಳು ಕಪಿ ಮುಷ್ಟಿ ಯಲ್ಲಿ ವ್ಯವಸ್ಥೆ ನಡೆಯುತ್ತದೆ.ಇಲ್ಲಿ ಲೈನ್ ಮ್ಯಾನ್ ದಿಂದ ಹಿಡಿದು ಮೀಟರ್ ರೀಡರ್,So,JE,Aee,Ee,SE, Chief, ದಿಂದ, ಇನ್ನೂ ಹಲವಾರು ಸೆಕ್ಷನ್ ಗಳಲ್ಲಿ, ಎಲ್ಲಾರು ಕೈ ಚಾಚುವ,ಭ್ರಷ್ಟ ವ್ಯವಸ್ಥೆ ಯನ್ನು, ಪೋಷಣೆ ಮಾಡಿಕೊಂಡು ಬಂದಿದ್ದಾರೆ. ಇದರಲ್ಲಿ ಕೆಲ ಉತ್ತಮ ಅಧಿಕಾರಿಗಳು ಕೂಡ ಇದ್ದಾರೆ. ಪ್ರತಿ ಒಬ್ಬ ಅಧಿಕಾರಿ ದಿನನಿತ್ಯ ಅಷ್ಟೊ ಇಷ್ಟೊ, ಗಿಟ್ಟಿಸಿಕೊಂಡು, ಹೋಗುವ ಕೆಟ್ಟ ಪದ್ದತಿ ಅಭ್ಯಾಸವನ್ನು ಮಾಡಿಕೊಂಡಿದ್ದಾರೆ ಇವರನ್ನು ಯಾವ ಲೋಕಾಯುಕ್ತ,ಯಾವ ಅಧಿಕಾರಿಗಳು ಸರಿಪಡಿಸಲು ಸಾಧ್ಯವಿಲ್ಲದ ವಿಚಾರ, ಇದು ಬಹಿರಂಗ ಕೂಡ,ಇಲ್ಲಿನ ಉದ್ಯೋಗಿಗಳು,ಸರ್ಕಾರದ ಕೆಲಸ ಅಲ್ಲದೇ ವಿದ್ಯುತ್ ಗುತ್ತಿಗೆ ದಾರರ ಕೆಲಸವನ್ನು ಇವರೇ ಮಾಡುತ್ತಾರೆ,!!ಇದನ್ನು ಮಾಡಿದರೆ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಹಣ ಸಿಗುತ್ತದೆ.ಇನ್ನೂ ಕೆಲ ಅಧಿಕಾರಿಗಳು ಉಪ್ಪಿನ ಕಾಯಿಗಳು, ಎಣ್ಣೆ ಪಾರ್ಟಿ ಗಳು ಕೂಡ ಕೆಲಸವನ್ನು ಮಾಡಿಕೊಟ್ಟು ,ಹಣವನ್ನು ಪಡೆಯುತ್ತಾರೆ ಅನ್ನುವ ಆರೋಪ ಕೂಡ ಇದೇ.ಬಳ್ಳಾರಿಯ ಜೇಸ್ಕಂನ ಲೀಡರ್ ಗಳ ಹಾವಳಿ ಸಣ್ಣಪುಟ್ಟ ವಿಷಯಗಳನ್ನು ಕೂಡ ದೊಡ್ಡದು ಮಾಡುವ ಕಾಯಿಲೆ ಇದೆ.ಜಾತಿನಿಂಧನೆ(ಅಟ್ರಾಸಿಟಿ) ಕಾಯ್ದೆ ಎನ್ನುವುದು ಜೇಸ್ಕಂ ಇಲಾಖೆ ಇಲ್ಲಿ ಸಾದಾರಣ ವಿಚಾರ ಇದ್ದಂತೆ,ಪೋಲಿಸ್ ಇಲಾಖೆಯಲ್ಲಿ ಕೂಡ ಪ್ರಥಮ ಆಧಾರಗಳು ನೋಡದೆ ಪ್ರಕರಣ ಗಳು ದಾಖಲೆ ಮಾಡುತ್ತಾರೆ, ಯಾರು ಕೊಟ್ಟರು ಕೆಸು ತೆಗೆದುಕೊಳ್ಳುವುದು ನಮ್ಮ ಕಲಸ ಎನ್ನುತ್ತಾರೆ ಪೋಲಿಸ್ ಡಿಪಾರ್ಟ್ಮೆಂಟ್,ಇದು ಜೇಸ್ಕಂ ಇಲಾಖೆಗೆ ವರದಾನ.!! *ಜಾತಿನಿಂಧನ ಪ್ರಕರಣ ಏನು ಇದು.??* ಬಳ್ಳಾರಿ ಜೇಸ್ಕಂ ಇಲಾಖೆಯ ಘಟಕ 2 ನಗರ ಉಪವಿಭಾಗ1 ರಲ್ಲಿ ಪವರ್ ಮ್ಯಾನ್ ಮೆಕಾನಿಕ್ ಅಗಿರುವ ಹುಸೇನ್ ಎನ್ನುವರು ಫೆಬ್ರವರಿ19 ರಂದು ಬೊಮ್ಮನಹಾಳ್ ರಸ್ತೆ ಗೊಶಾಲೆ ಹತ್ತಿರ ದಲ್ಲಿ ವಿದ್ಯುತ್ ಕಾಮಗಾರಿ ಮಾಡೋದು ಗುತ್ತಿಗೆ ದಾರರ ಸಂಘಕ್ಕೆ ತಿಳಿದು ಬಂದಿದೆ,ತಕ್ಷಣವೇ ಸಂಘದ ಅಧ್ಯಕ್ಷರು ಅಗಿರುವ ಜಗನ್ ಸದಸ್ಯರು ಸ್ಥಳ ಕ್ಕೆ ಹೋಗಿ ನೋಡಲಾಗಿದೆ,ಕಾಮಗಾರಿ ಮಾಡೋದು ಕಂಡುಬರುತ್ತದೆ ತಕ್ಷಣವೇ ಮೇಲಿನ ಅಧಿಕಾರಿಗಳಿಗೆ ಸಂಪರ್ಕ ಮಾಡಿದ್ದಾರೆ, ಕೆಲ ಅಧಿಕಾರಿಗಳು ಅನಾಧಿಕೃತವಾಗಿ ಮಾಡುತ್ತಿದ್ದಾರೆ ಎಂದು ಕೆಲವರು ಅಧಿಕೃತ ಎಂದು ಗಾಳಿ ಯಲ್ಲಿ ದೀಪ ಇಟ್ಟು ಒಂದು ವಾರ ಸರ್ಕಸ್ ಮಾಡಿ,ತದನಂತರ ಅವರು ಹುಸೇನ್ ಮಾಡಿರುವ ಕೆಲಸ ಅಧಿಕೃತ ಅನ್ನುವುದು ಮಾಡಿಕೊಂಡು, ಕೈ ತೊಳೆದು ಕೊಳ್ಳುವ ಪ್ಲಾನ್ ಮಾಡಿದ್ದಾರೆ, ಗುತ್ತಿಗೆ ದಾರರಿಗೆ ಇದು ನುಂಗಲಾರದ ತುತ್ತು ಆಗಿದೆ.ಈಗಾಗಲೇ ಕೆಇಬಿ ಇಲಾಖೆ ಯಲ್ಲಿ ಗುತ್ತಿಗೆ ದಾರರ ಕೆಲಸ ಇಲ್ಲದೆ ಬಿದಿಪಾಲ್ ಆಗಿದ್ದಾರೆ.ದಯವಿಟ್ಟು ನೌಕರರು ಗುತ್ತಿಗೆ ದಾರರ ಕೆಲಸ ಮಾಡಬೇಡಿ ನಮ್ಮ ಹೊಟ್ಟ ಮೇಲೆ ಕಲ್ಲುಗಳು ಹಾಕಬೇಡಿ, ತಮಗೆ ಸರ್ಕಾರದ ಸಂಬಳವು ಇದೇ ಎಂದು ಪ್ರಶ್ನೆ ಮಾಡಿ ಮೇಲಿನ ಅಧಿಕಾರಿಗಳಿಗೆ ಇದರಲ್ಲಿ ಅನಾಧಿಕೃತ ಕಾಮಗಾರಿ ಆಗಿದ್ದರೆ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದು, ಜೇಸ್ಕಂ ಅಧಿಕಾರಿಗಳಿಗೆ ತಲೆ ಸುತ್ತು ಬಂದಂತೆ ಅಗಿದೆ. ಈಗಾಗಲೇ ಈರೀತಿ ಅನಾಧಿಕೃತ ಕಾಮಗಾರಿ ಗಳು ಮಾಡಿದ್ದು ಎಲ್ಲಾವು ಗುತ್ತಿಗೆದಾರರ ಬಳಿ ಅಧಾರಿತ ವಾಗಿ ಇದ್ದಾವೆ, ಜೇಸ್ಕಂ ಅಧಿಕಾರಿಗಳು ಮಾಡುವ ಪ್ರತಿ ಭ್ರಷ್ಟಾಚಾರ ಗುತ್ತಿಗೆ ದಾರರಿಗೆ ತಿಳಿದು ಇರುವ ಹಿನ್ನೆಲೆಯಲ್ಲಿ, ಇವರ ಮೇಲಿನ ಅಧಿಕಾರಿಗಳಿಗೆ ದೂರು ಹೋದರೆ ಕನಿಷ್ಠ ಹತ್ತು ಮಂದಿ ಅಮಾನತು ಆಗುವ ಸಾಧ್ಯತೆ ಇದೇ ಎನ್ನುವುದು ಅವರಿಗೆ ತಿಳಿದ ವಿಚಾರ ಇದನ್ನು ನಿಯಂತ್ರಣ ಮಾಡಿ ಗುತ್ತಿಗೆದಾರರ ಬೆನ್ನಿ ಗೆ ಚೂರಿಹಾಕಿ ಅವರನ್ನು ಬೀದಿ ಪಾಲು ಮಾಡಿ ಕಪ್ಪು ಹಣವನ್ನು ಸಂಪಾದನೆ ಮಾಡು ಬೇಕು ಅನ್ನುವ ಆಲೋಚನೆ ಇಟ್ಟುಕೊಂಡು ಪ್ಲಾನ್ ಪ್ರಕಾರ ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿರುದ್ಧ ಜಾತಿನಿಂಧನ ಪ್ರಕರಣ ದಾಖಲೆ ಮಾಡಿದ್ದು ಬಹಿರಂಗ ವಾಗಿದೆ.
ಇತ್ತೀಚೆಗೆ ಬಳ್ಳಾರಿಯಲ್ಲಿ ಜಾತಿನಿಂಧನ ಪ್ರಕರಣ ಗಳು ಜಾಸ್ತಿ ಅಗುತ್ತಾ ಇದ್ದಾವೆ ಅದಕ್ಕೆ ಇರುವ ಮಹತ್ವದ ಬೆಲೆ ಯನ್ನು ಇಂತಹ ಭ್ರಷ್ಟ ವ್ಯವಸ್ಥೆ ಬಳಕೆ ಮಾಡುತ್ತ ಇರೋದು ಶೋಚನೀಯದ ವಿಚಾರ ಆಗಿದೆ, ಗುತ್ತಿಗೆದಾರರರು ಅಗಲಿ ನೌಕರರು ಅಗಲಿ ತಪ್ಪು ಮಾಡಿದ್ದರೆ,ಅದಕ್ಕೆ ತಕ್ಕಂತೆ ಕ್ರಮ ಕೈಗೊಂಡು ವ್ಯವಸ್ಥೆ ಯನ್ನು ಸರಿಪಡಿಸಲು ಅವಕಾಶ ಇತ್ತು ಅದನ್ನು ಬಿಟ್ಟು ಠಾಣೆ ಗಳಲ್ಲಿ ಪ್ರಕರಣ ದಾಖಲೆ ಮಾಡುವ ವ್ಯವಸ್ಥೆ ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ ಅಗಿದೆ, ಇಲಾಖೆ ಯಲ್ಲಿ ವ್ಯಾಪಕ ಭ್ರಷ್ಟಾಚಾರ ಎಷ್ಟು ಅಗೆದರು ಅಷ್ಟು ಹಾಳವಾಗಿದೆ.
ಪೋಲಿಸ್ ಅಧಿಕಾರಿಗಳು ಕೂಡ ವಾಸ್ತವ ಸ್ಥಿತಿ ಯನ್ನು ನೋಡದೆ ಪ್ರಕರಣ ಗಳು ದಾಖಲೆ ಮಾಡಿದರೆ ವ್ಯವಸ್ಥೆ ಮೇಲೆ ನಂಬಿಕೆ ಹೋಗುತ್ತದೆ ಅಷ್ಟೊ ಇಷ್ಟು ಗೌರವ ಕೂಡ ಇಷ್ಟೇ ಅನ್ನುವ ಆಲೋಚನೆ ಜನಸಾಮಾನ್ಯರಿ ಗೆ ಬರುತ್ತದೆ.
ಈಗಾಗಲೇ ಗುತ್ತಿಗೆದಾರರ ಸಂಘ ರಾಜ್ಯಾಧ್ಯಕ್ಷರು ಕೂಡ ರಾಜ್ಯಮಟ್ಟದಲ್ಲಿ ಹೋರಾಟ ಮಾಡಲು ಚಿಂತನೆ ಮಾಡುತ್ತ ಇದ್ದಾರೆ. ಕೊನೆಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷರನ್ನು ಸಾಯಿಸಲು ಇಲಾಖೆ ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ ಅನ್ನುವ ಅನುಮಾಗಳು ,ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ಕೊನೆಗೆ ಜೇಸ್ಕಂ ಅಧಿಕಾರಿಗಳು ಮಾಡುವ ಭ್ರಷ್ಟಾಚಾರ ವ್ಯವಸ್ಥೆ ಯನ್ನು ಮುಚ್ಚಿಹಾಕಿ ಕೊಳ್ಳಲು ಇಂತಹ ದಾರಿಯನ್ನು ಮಾಡಬಾರದು ಆಗಿತ್ತು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)