This is the title of the web page
This is the title of the web page

Please assign a menu to the primary menu location under menu

State

ರೆಡ್ಡಿ ರಾಜಕೀಯ ಆಪ್ತರು ಆಲೊಚನ ದಲ್ಲಿ!!. ಗಾಲಿ ಜನಾರ್ದನ ರೆಡ್ಡಿ ,ಟೀಮ್ ಗೆ ಬಿಜೆಪಿ ಪಕ್ಷ ದಲ್ಲಿ ತೃಪ್ತಿ ಇದಿಯಾ.!?

ರೆಡ್ಡಿ ರಾಜಕೀಯ ಆಪ್ತರು ಆಲೊಚನ ದಲ್ಲಿ!!. ಗಾಲಿ ಜನಾರ್ದನ ರೆಡ್ಡಿ ,ಟೀಮ್ ಗೆ ಬಿಜೆಪಿ ಪಕ್ಷ ದಲ್ಲಿ ತೃಪ್ತಿ ಇದಿಯಾ.!?

*ರೆಡ್ಡಿ ರಾಜಕೀಯ ಆಪ್ತರು ಆಲೊಚನ ದಲ್ಲಿ!!. ಗಾಲಿ ಜನಾರ್ದನ ರೆಡ್ಡಿ ,ಟೀಮ್ ಗೆ ಬಿಜೆಪಿ ಪಕ್ಷ ದಲ್ಲಿ ತೃಪ್ತಿ ಇದಿಯಾ.!?* ಬಳ್ಳಾರಿ (5) ದೇಶದ ರಾಜಕಾರಣ ದಲ್ಲಿ ಕರ್ನಾಟಕ ರಾಜಕಾರಣ ಮಹತ್ವದ್ದು, ಅದರಲ್ಲಿ ಬಳ್ಳಾರಿ ರಾಜಕಾರಣ ಇನ್ನೂ ಕುತೂಹಲ ಇರುತ್ತದೆ,ಇಲ್ಲಿ ಗಾಲಿ ಜನಾರ್ದನ ರೆಡ್ಡಿ ರಾಜಕಾರಣ ಬಲಿಷ್ಠ ವಾಗಿ ಇರುತ್ತದೆ.

ಒಂದಾನೊಂದು ಕಾಲದಿಂದ ಶ್ರೀ ರಾಮುಲು, ಗಾಲಿ ಜನಾರ್ದನ ರೆಡ್ಡಿ,ಸಣ್ಣಪಕ್ಕಿರಪ್ಪ ಕರುಣಾಕರ ರೆಡ್ಡಿ, ಸುರೇಶ್ ಬಾಬು. ಸೋಮಶೇಖರ್ ರೆಡ್ಡಿ,ಶಾಂತಮ್ಮ ಇವರು ಎಲ್ಲಾರು ಸೇರಿ ಇತಿಹಾಸದ ರಾಜಕಾರಣ ಮಾಡಿದ ದಿಗ್ಗಜರು, ಇದರಲ್ಲಿ ಗಾಲಿ ಜನಾರ್ದನ ರೆಡ್ಡಿ ಬಹು ಮುಖ್ಯವಾದ ಲೀಡರ್,ತದನಂತರ ಹಲವಾರು ವಿಚಾರ ಗಳಿಂದ ರಾಜಕಾರಣದ ಬಣ್ಣ, ಬದಲಾವಣೆಗಳು, ನಡೆದು ಹೊಗಿದ್ದಾವೆ.

ರೆಡ್ಡಿ ಗಾರು,ಬಳ್ಳಾರಿ ಗೆ ಬಾರದೆ ಇರುವುದು ಹಿನ್ನೆಲೆಯಲ್ಲಿ ಎಲ್ಲವೂ ಬದಲಾವಣೆ ಆಗಿದ್ದಾವೆ.

ತದನಂತರ ಕೇಲ ವರ್ಷಗಳು ರೆಡ್ಡಿ ರಾಜಕಾರಣ ದಿಂದ ಅಂತರವನ್ನು ಕಳೆದು ಕೊಂಡಿದ್ದರು.

ಗಾಲಿ ಜನಾರ್ದನ ರೆಡ್ಡಿ ಅವರು ಕರ್ನಾಟಕದಲ್ಲಿ ಪುಟ್ಟುಗೊಸಿ ಕೂಡ ಸರಿಯಾಗಿ ಇಲ್ಲದೆ ಇರುವ ಹಲವಾರು ಮಂದಿಯನ್ನು ಲೀಡರ್ ಗಳನ್ನಾಗಿ ಮಾಡಿ ಉನ್ನತ ಮಟ್ಟದ ನಾಯಕರನ್ನು ಮಾಡಿದ್ದು ಇನ್ನೂ ಜೀವಂತವಾಗಿ ಇದೆ.

ಅದರೆ “ರೆಡ್ಡಿಗಾರು” ಕಷ್ಟದ ಸಮಯದಲ್ಲಿ ಯಾರು ನೆರವು ಗೆ ಬರಲಿಲ್ಲ ಅನ್ನುವುದು ಅಪವಾದ ಇದೆ.
ಇದರಲ್ಲಿ ರಾಜಕೀಯದ ಚದುರಂಗ ಇರಬಹುದು.

ಇದರ ಮಧ್ಯದಲ್ಲಿ ರಾಜಕೀಯವಾಗಿ ಬೆಳೆಸಿದ “ರೆಡ್ಡಿ ಗಾರು” ಇಲ್ಲದಿದ್ದರೂ ಶ್ರೀ ರಾಮುಲು ಬೆಳೆಯುತ್ತಾ ಬಂದಾಗ ಕಂಡುಬಂದಿದೆ.

ಆದರೆ ಕರ್ನಾಟಕ ದಲ್ಲಿ “ರೆಡ್ಡಿ ಗಾರು”ಗೆ ಗೌರವ ಕಡಮೆ ಆಗಿಲ್ಲ.

ರೆಡ್ಡಿಗಾರು ಕಥೆ ಮುಗಿದಿದೆ ಎಂದು ಬಿಜೆಪಿ ಕೇಂದ್ರ ಮಟ್ಟದ ನಾಯಕರು, ಅವರ ಬಗ್ಗೆ ಕಡಿಮೆ ಆಲೋಚನೆ ಮಾಡಿದ್ದರು.

ಇದರಲ್ಲಿ “ರೆಡ್ಡಿ ಗಾರು”ಅಣ್ಣಂದಿರು ಕೂಡಾ, “ರೆಡ್ಡಿ ಗಾರು”ಗೆ ಸಹಾಯ ಸಹಕಾರ ಮಾಡಲಿಲ್ಲ.

ಇದನ್ನು ಒಂದು ಕಣ್ಣುನಿಂದ ನೋಡಿದ ರೆಡ್ಡಿ, ಕೆ.ಆರ್.ಪಿ.ಪಿ ಪಕ್ಷವನ್ನು ಸ್ಥಾಪಿಸಿದರು.

ಕೆಲ ಕಡೆ ವಿಧಾನಸಭೆ ಚುನಾವಣೆ ಗೆ ಸ್ಪರ್ಧೆ ಮಾಡಿದ್ದರು.

ಅವರು ಗಂಗಾವತಿ ದಿಂದ ಅರುಣಾ ಲಕ್ಷ್ಮಿಅವರು ಬಳ್ಳಾರಿ ದಿಂದ ಸ್ಪರ್ಧೆ ಮಾಡಿದ್ದರು
ರೆಡ್ಡಿ ಗೆದ್ದಿದ್ದರು.

ಆದರೆ ಬಳ್ಳಾರಿ ದಿಂದ ಸ್ಪರ್ಧೆ ಮಾಡಿದ ಮಹಿಳೆ ಆಗಿರುವ ಅರುಣಾ ಲಕ್ಷ್ಮೀ ಅವರು ರಾಷ್ಟ್ರೀಯ ಪಕ್ಷಗಳನ್ನು ಡಿಕ್ಕಿ ಹೊಡೆದು ಎರಡನೇ ಸ್ಥಾನವನ್ನು ಪಡೆದು ಅತಿದೊಡ್ಡ ಅಭ್ಯರ್ಥಿ ಯಾಗಿ ನಿಂತಿದ್ದರು.

ಅದೇ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅವರ ಬಾವ ಸೋಮಶೇಖರ್ ರೆಡ್ಡಿ ಕೂಡ ಇವರ ವಿರುದ್ಧ ನಿಲ್ಲಲಾಗಿತ್ತು
ಅವರು ಕೂಡ ದೂಳಿಪಟ ಆಗಿದ್ದರು.

ಅದರೆ ಈಬಾರಿ ಲೋಕಸಭಾ ಚುನಾವಣೆಯಲ್ಲಿ, ಪ್ರಧಾನಿ ಮಂತ್ರಿಗಳು “ರೆಡ್ಡಿ ಗಾರು.” ಸಹಾಯ ಸಹಕಾರ ಬೇಕು ಬೇಕು ಎಂದು ಹಗಲು ರಾತ್ರಿ ಪ್ರಯತ್ನ ಮಾಡಿ ಸಹಕರಿಸಲು ಮನವಿ ಮಾಡಿದ್ದು,ಬಹಿರಂಗ ವಿಚಾರ ವಾಗಿದೆ.

ರೆಡ್ಡಿ ಅವರ ಶಕ್ತಿ ಕೇಂದ್ರ ಕ್ಕೆ ಮುಟ್ಟಿದೆ ಆದ್ದರಿಂದ ಬಿಜೆಪಿ ಸೇರ್ಪಡೆ ಗೊಂಡು, ಶ್ರೀ ರಾಮುಲು ಗೆಲುವು ಗೆ ನಿಂತಿದ್ದಾರೆ.

ಈಬಾರಿ ರಾಮುಲು ಗೆಲುವು ಖಚಿತ ಅನ್ನುವ ನಿರೀಕ್ಷೆ ದಲ್ಲಿ ಇದ್ದಾರೆ.

ಆದರೆ ಮೊನ್ನೆ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ದಿಗ್ಗಜರು ಇಲ್ಲದೆ “ರೆಡ್ಡಿ ಗಾರು” ಇಲ್ಲದೆ, ಸಂಬಂಧಿ ಗಳ ವಿರೋಧಿ ಗಳ ನಡುವೆ ಗಾಲಿ ಅರುಣಾ ಲಕ್ಷ್ಮಿ ಪ್ರತ್ಯೇಕ ಪಡೆಯನ್ನು ರಚನೆ ಮಾಡಿಕೊಂಡು, ವಾರ್ಡ್ ಗಳಲ್ಲಿ ಬುನಾದಿಯನ್ನು ಹಾಕಿ ಕಾರ್ಯಕರ್ತರನ್ನು ಯುದ್ಧ ಕ್ಕೆ ಸಿದ್ದ ಮಾಡಿಕೊಂಡು ಹೋರಾಟ ಮಾಡಿದ್ದರು,ಗೆಲುವು ಗುರಿಗೆ ಹತ್ತಿರ ದಲ್ಲಿ ಬಂದಿದ್ದರು.

ಎರಡು ರಾಷ್ಟ್ರೀಯ ಪಕ್ಷಗಳು ಗೆ ನಿದ್ದೆ ಇಲ್ಲದಂತೆ ಮಾಡಿದ್ದರು ಅವರ ಕಾರ್ಯಕರ್ತರು, ಆಪ್ತರು, ಇದು ಜೀವನ ದಲ್ಲಿ ಮರೆಯಲಾಗದ ಕ್ಷಣ.

ಇಂತಹ ಕಾರ್ಯಕರ್ತರ ಪಡೆ ಇರೋದು ಗಾಲಿ ಅರುಣಾ ಲಕ್ಷ್ಮಿ ಅವರ ಬಳಿ.

ಎಷ್ಟೋ ಕಷ್ಟಗಳು ಬಂದರು ಭಯಪಡದೆ “ರೆಡ್ಡಿ ಗಾರು” ಬೆನ್ನುಗೆ ನಿಂತಿದ್ದರು.

ದಿಗ್ಗಜರು ದಂಡು ಒಂದು ಕಡೆಗೆ, ರೆಡ್ಡಿ ಸೈನ್ಯ ಒಂದು ಕಡೆ,ಹೋರಾಟ ಮಾಡಿದ್ದು ಗೆಲ್ಲುವ ಮಟ್ಟಿಗೆ ಹೋರಾಟ ಮಾಡಿದ್ದರು.

ಅದರೆ ಪ್ರಸ್ತುತ ಬಿಜೆಪಿ ಯಲ್ಲಿ ಇವರ ಗೆ ಉಸಿರು ಗಟ್ಟಿದ ವಾತಾವರಣ ಇದೇ.

ಬಿಜೆಪಿ ಯಲ್ಲಿ ಇರುವ ನಾಯಕರ ಸಿಸ್ಟಮ್ ಬೇರೆ ರೀತಿಯಲ್ಲಿ ಇರುತ್ತದೆ, ಇವರಿಗೆ ರೆಡ್ಡಿ ಗಾರು ಕಾರ್ಯಕರ್ತರ ಜೊತೆಯಲ್ಲಿ ಹೋಗುವ ಹೊಂದಾಣಿಕೆ ಮಾಡಿಕೊಳ್ಳುವ ಗುಣಗಳು ಕಡಿಮೆ ಇರುತ್ತದೆ.

ಇದರಿಂದ ರೆಡ್ಡಿ ಅವರ ಕಾರ್ಯಕರ್ತರು ಆಲೋಚನೆ ದಲ್ಲಿ ಇದ್ದಾರೆ.

ರೆಡ್ಡಿ ಅವರ ಪಡೆ ಇಷ್ಟು ಬಲಿಷ್ಠ ವಾಗಿ ಇದ್ದದ್ದು, ದೊಡ್ಡ ದೊಡ್ಡ ಲೀಡರ್ ಗಳು ಇಲ್ಲದಿದ್ದರೂ ನೂತನ ವಾಗಿ ಪಕ್ಷ ಕಟ್ಟಿ, ರಣರಂಗದಲ್ಲಿ ಹೋರಾಟ ಮಾಡಿದ್ದು ಕಾರ್ಯಕರ್ತರ ಬಲ ಅನ್ನುವುದು ರಾಷ್ಟ್ರೀಯ ಪಕ್ಷಗಳಿಗೆ ನಿದ್ದೆಯಲ್ಲಿ ಕೂಡ ಕನಸು ಬೀಳುತ್ತದೆ.

ಇನ್ನೂ ಎರಡು ದಿನಗಳ ಗಲ್ಲಿ ಬಿಜೆಪಿ. ಕೆ.ಆರ್.ಪಿ.ಪಿ ಕಾರ್ಯಕರ್ತರ ಹೊಂದಾಣಿಕೆ ಎಷ್ಟರಮಟ್ಟಿಗೆ ಇರುತ್ತದೆ, ಇದರಲ್ಲಿ ಯಾರು ಬಲಿಪಶುಗಳು ಆಗುತ್ತಾರೆ ಅನ್ನವದು ಕಾದು ನೋಡಬೇಕು ಆಗಿದೆ.

ಇದರಲ್ಲಿ ಏನಾದರೂ ತಾರತಮ್ಯ ಆದರೆ “ರೆಡ್ಡಿ ಗಾರು” ಸೈನ್ಯ ವನ್ನು ಕಳೆದು ಕೊಂಡು, ಚಿಂತನ ಮಾಡಬೇಕು ಆಗುತ್ತದೆ. (ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.)


News 9 Today

Leave a Reply