*ಅಂತರರಾಜ್ಯ ಕುರಿಕಳ್ಳತನ ಆರೋಪಿತರನ್ನು ಬಂಧಿಸಿ ಅಂದಾಜು ರೂ 8.85,000/-ರೂ ಗಳ ಬೆಲೆ ಬಾಳುವ 67 ಕುರಿಗಳು, ಒಂದು ಟಗರು, ಒಂದು ಬೊಲೊರೋ ವಾಹನ ವಶಕ್ಕೆ.*
ಬಳ್ಳಾರಿ(10)ಸಿರುಗುಪ್ಪ ವೃತ್ತದ ಹಚ್ಚೋಳ್ಳಿ ಮತ್ತು ಸಿರುಗುಪ್ಪ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಕುರಿ-ಕಳ್ಳತನ ಪ್ರಕರಣಗಳಲ್ಲಿ ಆರೋಪಿತರ ಪತ್ತೆಗಾಗಿ ಸಿಪಿಐ ಸಿರುಗುಪ್ಪ ವೃತ್ತ ರವರ ನೇತೃತ್ವದಲ್ಲಿ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಬಳ್ಳಾರಿ,ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1-2 ಬಳ್ಳಾರಿ, ಮಾನ್ಯ ಡಿ.ಎಸ್.ಪಿ ಸಿರುಗುಪ್ಪ ಉಪವಿಭಾಗ, ರವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಿದ್ದು, ಸದರಿ ತಂಡದಲ್ಲಿ ಶ್ರೀ ವೈ.ಎಸ್ ಹನುಮಂತಪ್ಪ ಸಿಪಿಐ ಸಿರುಗುಪ್ಪ, ಮತ್ತು ಹಡ್ಕೊಳ್ಳಿ ಪೊಲೀಸ ಠಾಣೆಯ ಶ್ರೀ ಪರಶುರಾಮ ಪಿ.ಎಸ್.ಐ (ಕಾಸು), ವೀರನಗೌಡ ಪಿ.ಎಸ್.ಐ (ತನಿಖೆ) ಹಲ್ಗೊಳ್ಳಿ ಠಾಣೆ ಸಿಬ್ಬಂದಿರವರಾದ ಶ್ರೀ ಮಹಮ್ಮದ್ ಯೂನಿಸ್.ಎ.ಎಸ್.ಐ, ಶ್ರೀ ರಾಮರೆಡ್ಡಿ ಪಿಸಿ-128.ಶ್ರೀ ಘನಮೂರ್ತಿ ಪಿಸಿ-128, -955 ಸಿರುಗುಪ್ಪ ಠಾಣೆಯ ಸಿಬ್ಬಂದಿರವರಾದ ಶ್ರೀ ವಿಷ್ಣುಮೋಹನ ಪಿಸಿ-1202 ಶ್ರೀ ದ್ಯಾಮನಗೌಡ ಪಿಸಿ-93 ರವರ ಜೊತೆಗೂಡಿ ಆರೋಪಿ ಪತ್ತೆ ಕಾರ್ಯದಲ್ಲಿದ್ದಾಗ ನಿನ್ನೆ ದಿನ ದಿನಾಂಕ 07.04.2024 ರಂದು ಸಂಜೆ 7-00 ಗಂಟೆಗೆ ಭಾತ್ಮೀದಾರರಿಂದ ಕೌತಳಂ ಕಡೆಯಿಂದ ಬೊಲೊರೊ ವಾಹನದಲ್ಲಿ ಕಳ್ಳತನದ ಮಾಡಿದ ಕುರಿಗಳನ್ನು ಸಿಂಧನೂರು ಸಂತೆಗೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ಖಚಿತ ಮಾಹಿತಿ ಬಂದ ಮೇರೆಗೆ ಕೂಡಲೇ ಸಿಬ್ಬಂದಿರವರ ಜೊತೆಗೂಡಿ ವತ್ತು ಮುರಣಿ ರಸ್ತೆಯಲ್ಲಿ ಸಿರುಗುಪ್ಪ ಕಡೆಗೆ ಬರುತ್ತಿದ್ದ ಬೊಲೊರೊ ವಾಹನವನ್ನು ತಡೆದು ನಿಲ್ಲಿಸಿ ಬೋಲರೋ ವಾಹನದಲ್ಲಿದ್ದ 1)ದೊಡ್ಡಿಹನುಮಂತ ತಂದೆ ರಾಮುಡು ವ:55 ಬೋಯಾ ಜನಾಂಗ ಕೂಲಿ ಕೆಲಸ ವಾಸ:ಕಡವೇಲು ಗ್ರಾಮ ಎಮ್ಮಿಗನೂರು ತಾ: ಕರ್ನೂಲ್ ಜಿಲ್ಲೆ 2) ಚಿರತ ನರಸಿಂಹ ತಂದೆ ಚಿರತ ಪೆದ್ದಯ್ಯ ವ:38 ಬೋಯಾ ಜನಾಂಗ ಕೂಲಿ ಕೆಲಸ ವಾಸ:ಕಡವೇಲು ಗ್ರಾಮ ಎಮ್ಮಿಗನೂರು ತಾ: ಕರ್ನೂಲ್ ಜಿಲ್ಲೆ 3) ರಂಗಸ್ವಾಮಿ ತಂದೆ ರಂಗನ್ನ ವ: 32 ಬೋಯಾ ಜನಾಂಗ ಕೂಲಿ ಕೆಲಸ ವಾಸ:ಕಡವೇಲು ಗ್ರಾಮ ಎಮ್ಮಿಗನೂರು ತಾ: ಕರ್ನೂಲ್ ಜಿಲ್ಲೆ 4) ವಡ್ಡೆನರಸಿಂಹ ತಂದೆ ವಡ್ಡೆ ಶಂಕ್ರಪ್ಪ ವ:32 ವಡ್ಡರು ಜನಾಂಗ ವಾಸ:ಫಲಕೂರಬಂಡಿ ಗ್ರಾಮ ಆಲೂರು ತಾ: ಕರ್ನೂಲ್ ಜಿಲ್ಲೆ ಸದ್ರಿ ವಾಹನದಲ್ಲಿದ್ದ ನಾಲ್ಕು ಜನ ಸಂಶಯಾಸ್ಪದ ವ್ಯಕ್ತಿಗಳನ್ನು ಮತ್ತು ಕುರಿಗಳನ್ನು, ಬೊಲರೊ ವಾಹನವನ್ನು ವಶಕ್ಕೆ ಪಡೆದು ಆರೋಪಿತರನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಆರೋಪಿತರು ಹಕ್ಕೊಳ್ಳಿ ಠಾಣಾ ವ್ಯಾಪ್ತಿಯ ಚಳ್ಳೆಕೊಣ್ಣೂರು, ಸಿರುಗುಪ್ಪ, ತೆಕ್ಕಲಕೋಟ ಠಾಣಾ ವ್ಯಾಪ್ತಿಯ ಹಳೆಕೋಟ, ಸಿರಿಗೇರಿ ಠಾಣಾ ವ್ಯಾಪ್ತಿಯ ಕೊಂಚಗೇರಿಯಲ್ಲಿ ಕುರಿಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಸದರಿ ಆರೋಪಿತರಿಂದ ಒಟ್ಟು 67 ಕುರಿಗಳು, ಒಂದು ಟಗರು, ಕೃತ್ಯಕ್ಕೆ ಬಳಸಿದ ಒಂದು ಬೊಲೊರೋ ವಾಹನ ನಂ (ಎಪಿ 21 ಟಿ.ಡಬ್ಲ್ಯೂ 5926) ಒಟ್ಟು 8,85,000/-ಬೆಲೆಬಾಳುವ ಕುರಿಗಳು,ವಾಹನವನ್ನು ಜಪ್ತುಪಡಿಸಿಕೊಂಡಿರುತ್ತೇದ.
ಸದರಿ ಕಾರ್ಯಚರಣೆಯಲ್ಲಿ ಭಾಗವಹಿಸಿದ ತಂಡದ ಕಾರ್ಯವೈಖರಿಯನ್ನು ಶ್ರೀ ರಂಜಿತ್ ಕುಮಾರ ಬಂಡಾರು. ಪೊಲೀಸ್ ಅಧೀಕ್ಷಕರು ಬಳ್ಳಾರಿ, ಶ್ರೀ ಕೆ.ಪಿ ರವಿಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಳ್ಳಾರಿ. ಶ್ರೀ ನವೀನಕುಮಾರ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಳ್ಳಾರಿ, ರವರು ಶ್ಲಾಘಿಸಿರುತ್ತಾರೆ.