*ರಾಹುಲ್ ಗಾಂಧಿಯವರು ಬಳ್ಳಾರಿ ಗೆ. ತದನಂತರ ವಾತಾವರಣ ಏನು ಆಗಬಹುದು!?*
ಬಳ್ಳಾರಿ ಏ.(25): ಕಾಂಗ್ರೆಸ್ ಪಕ್ಷದ ಅಧಿನಾಯಕ ರಾಹುಲ್ ಗಾಂಧಿಯವರು ಏ.26 ರಂದು ಶುಕ್ರವಾರ ಸಂಜೆ 4.30.ಕ್ಕೆ ಬಳ್ಳಾರಿ ನಗರಕ್ಕೆ ಭೇಟಿ ನೀಡಲಿದ್ದು,ಮುನಿಸಿಪಲ್ ಕಾಲೇಜ್ ಮೈದಾನದಲ್ಲಿನಡೆಯಲಿರುವ ಬೃಹತ್ ಬಹಿರಂಗ ಸಭೆಯಲ್ಲಿ, ಬಳ್ಳಾರಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ.ತುಕರಾಂ ಪರ ಮತಯಾಚಿಸಲಿದ್ದಾರೆ. ಈ ಸಭೆಯಲ್ಲಿ ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ ಎಂದು ರಾಜ್ಯದ ಕ್ರೀಡಾ ಸಚಿವರೂ ಆಗಿರುವ, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ತಿಳಿಸಿಳಿಸಿದರು.
ನಗರದಲ್ಲಿ ಬುಧವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್‍ಗಾಂಧಿಯವರುಅಂದು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಲ್ಲಿನ ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಕೈಗೊಳ್ಳಲಿದ್ದು, ಅವರ ಜೊತೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ.ಶಿವರುಮಾರ್ ಸೇರಿದಂತೆ ಸಚಿವರು,ಕಾಂಗ್ರೆಸ್ ಧುರೀಣರು, ಅಖಂಡಬಳ್ಳಾರಿ ಜಿಲ್ಲೆಯಶಾಸಕರು, ಸಂಸದರು, ಬಳ್ಳಾರಿ-ಕೊಪ್ಪಳ ಕ್ಷೇತ್ರಗಳಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳು ಉಪಸ್ಥಿತರಿರಲಿದ್ದಾರೆ ಎಂದರು.
ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲಶಕ್ತಿಯಾಗಿ ಹೊರಹೊಮ್ಮಿದ್ದು, ರಾಹುಲ್ ಗಾಂಧಿಯವರ ಭೇಟಿ ಮತ್ತು ಪ್ರಚಾರವು ಕಾಂಗ್ರೆಸ್ ಪಕ್ಷ-ಕ್ಕೆ ಹೆಚ್ಚಿನ ಶಕ್ತಿತುಂಬಲಿದೆಯಲ್ಲದೇ, ಕಾರ್ಯಕರ್ತರಿಗೆ ಹೊಸ ಹುರುಪು, ಹುಮ್ಮಸ್ಸುನೀಡಲಿದೆ. 2004ರಿಂದ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುತ್ತಾ ಬಂದಿದೆ. ಒಂದು ಬಾರಿ ಉಪ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದೆ. ಆದರೆ ಈ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದಿಂದ ಗೆಲ್ಲಲಿದ್ದು, ಬಳ್ಳಾರಿ ಜಿಲ್ಲೆಯು ಕಾಂಗ್ರೆಸ್ ಪಕ್ಷದ ಅಭೇದ್ಯ ಕೋಟೆ`ಪಂಚ’ ಗ್ಯಾರೆಂಟಿಗಳ ಜೊತೆಗೆ ಎಐಸಿಸಿ ನೀಡಿರುವ ಇನ್ನೈದು ಗ್ಯಾರೆಂಟಿಗಳನ್ನು ಕೂಡಾ ಜನತೆ ಒಪ್ಪಿಕೊಂಡಿದ್ದು, ಕಾಂಗ್ರೆಸ್‍ಗೆ ಭರ್ಜರಿ ಬಲ ತಂದು ಕೊಡಲಿದೆ. ಕರ್ನಾಟಕದ ಗ್ಯಾರೆಂಟಿಗಳ ಈಡೇರಿಕೆಯು ಇಡೀ ದೇಶದ ಗಮನ ಸೆಳೆದಿದ್ದು, ಎಲ್ಲಾ ಪಕ್ಷಗಳಿಗೂ ಮಾದರಿಯಾಗಿ ನಿಂತಿದೆ.
ಈ ಬಾರಿ ಬಳ್ಳಾರಿಯೂ ಸೇರಿದಂತೆ ರಾಜ್ಯದಲ್ಲಿ25ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲವುದು ಗ್ಯಾರೆಂಟಿ ಎಂದು ನಾಗೇಂದ್ರ ಪುನರುಚ್ಛರಿಸಿದರು.
ಲೋಕಸಭಾ ಚುನಾವಣಾ ಅಭ್ಯರ್ಥಿ, ಸಂಡೂರು ಶಾಸಕ ಇ.ತುಕರಾಂ ಮಾತನಾಡಿ, ನಮ್ಮ ಅಚ್ಚುಮೆಚ್ಚಿನ ಅಧಿನಾಯಕ ರಾಹುಲ್‍ಗಾಂಧಿಯವರು ನಾಡಿದ್ದು ಶುಕ್ರವಾರ ಸಂಜೆ ಭಾಗವಹಿಸಲಿರುವ ಬೃಹತ್ ಬಹಿರಂಗ ಸಭೆಯು ಭರ್ಜರಿ ಯಶಸ್ಸಿಗೆ ಎಲ್ಲಾ ಏರ್ಪಾಟು ಮಾಡಲಾಗುತ್ತಿದೆ. ಇದೊಂದು ಐತಿಹಾಸಿಕ ಸಮಾವೇಶವಾಗಲಿದೆ, ದೇಶದಲ್ಲಿ ಪ್ರಜಾತಂತ್ರದ ಮೌಲ್ಯಗಳನ್ನು, ಸಂವಿಧಾನದ ಆಶಯಗಳನ್ನು ಉಳಿಸಿ-ಬೆಳೆಸಲು ಪ್ರಬುದ್ಧ ಮತದಾರರು ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.
ಬಳ್ಳಾರಿ ಕ್ಷೇತ್ರದಿಂದ ಕಳೆದ ನಾಲ್ಕು ಬಾರಿ ಬಿಜೆಪಿ ಸಂಸದರು, ಆರಿಸಿ ಬಂದಿದ್ದರೂ ಅಭಿವೃದ್ಧಿ ಕಾರ್ಯಗಳನ್ನು ಸಮರ್ಪಕವಾಗಿ ಮಾಡಲಾಗಿಲ್ಲ,ನಾಲ್ಕೂವರೆ ಲಕ್ಷ ಕೋಟಿ ರೂ.ಗಳನ್ನು ತೆರಿಗೆಯ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಕರ್ನಾಟಕ ರಾಜ್ಯವು ನೀಡುತ್ತಿದ್ದರೂ, ರಾಜ್ಯದ ಅಭಿವೃದ್ಧಿಗೆ ಕೇಂದ್ರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ, ಮಲತಾಯಿ ಧೋರಣೆಯನ್ನು ಮುಂದುವರೆಸಿದೆ, ಸಹಸ್ರಾರು ಕೋಟಿ ರೂ.ಗಳ ತೆರಿಗೆ ಹಣವನ್ನು, ರಾಜ್ಯದ ಪಾಲಿನ ಹಣವನ್ನೂ ನೀಡದೇ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜನರು ನನ್ನ ಮೇಲೆ ವಿಶ್ವಾಸವಿಟ್ಟು, ಗೆಲ್ಲಿಸಿ ಕಳುಹಿಸಿದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ರಾಷ್ಟ್ರೀಯ ಹೆದ್ದಾರಿ ರಸ್ತೆ ಅಭಿವೃದ್ಧಿ, ರೈಲ್ವೇ ಯೋಜನೆಗಳು ಸೇರಿದಂತೆ, ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತೇನೆ. ನೂತನ ರೈಲುಗಳ ಸಂಚಾರ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಆದ್ಯತೆಯನ್ನಾಗಿ ಪರಿಗಣಿಸುತ್ತೇನೆ ಎಂದು ತುಕರಾಂತಿಳಿಸಿದರು. ಬಳ್ಳಾರಿ ಬೆಟ್ಟ, ಮಿಂಚೇರಿ ಬೆಟ್ಟಗಳಲ್ಲಿ `ರೋಪ್ ವೇ’ ಕೂಡಾ ನಿಮಾಣ ಮಾಡಲಾಗುತ್ತದೆ, ಅಭಿವೃದ್ಧಿಗೆ ಬದ್ಧವಾಗಿ ಕಾಂಗ್ರೆಸ್ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.*ಆದರೆ ಈವರೆಗೆ ಕಾಂಗ್ರೆಸ್ ನಲ್ಲಿ ಎಚ್ಚಿನ ಉತ್ಸವ ಕಾಣುತ್ತಾ ಇಲ್ಲ, ಇನ್ನೂ ಕಾರ್ಯಕರ್ತರ ಹೊಂದಾಣಿಕೆ ಕೊರತೆ ಕೂಡ ಕಾಣಿಸುತ್ತದೆ, ತುಕಾರಾಂ ಕೂಡ ಬುದ್ಧಿವಂತಿಕೆ ಕಥೆಗಳು ಹೇಳುತ್ತಾ ಹೊರಟದ್ದಾರೆ, ಈವರೆಗೆ ಪಕ್ಷವನ್ನು ಯಾರು ಲೀಡ್ ಮಾಡುತ್ತಾರೆ, ಜವಾಬ್ದಾರಿ ಯಾರದ್ದು,ಅನ್ನುವ ಗೊಂದಲ ಕಾಣುತ್ತದೆ,ಮನೆ ಒಂದು ಬಾಗಿಲು ಗಳು 5 ಅನ್ನುವ ವಾತಾವರಣ ಕಾಣುತ್ತದೆ, ರಾಹುಲ್ ಗಾಂಧಿಯವರು ಬಂದು ಹೊದಮೇಲೆ, ನಾಯಕರುಗಳು ಮನಸ್ಸುನ ಸ್ಥಿತಿ ಏನು ಅನ್ನವದು ಕಾದುನೊಡಬೇಕು ಎಂದು ಕಾರ್ಯಕರ್ತರು ಮರ್ಮ ವಾಗಿ ಮಾತನಾಡು ಕೊಳ್ಳವದು ಕೇಳಿಬರುತ್ತದೆ.*
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಲಿಡ್ಕರ್ ಅಧ್ಯಕ್ಷಮುಂಡ್ರಿಗಿ ನಾಗರಾಜ್, ಕೆ.ಎಸ್.ಎಲ್.ಸ್ವಾಮಿ, ಹುಮಾಯೂನ್ ಖಾನ್ ಮತ್ತಿತರೆ ಪ್ರಮುಖರು ಉಪಸ್ಥಿತರಿದ್ದರು.