ಎನ್ ಪ್ರತಾಪ್ ರೆಡ್ಡಿ ಗೆ ಬುದ್ದಿ ಜೀವಗಳು ವಿದ್ಯಾವಂತರು ಅಗಿರವ ತಾವು ಮತ ಹಾಕ ಬೇಡಿ,ನೂರಾರು ಎಕರೆ ರೈತರ ಭೂಮಿಗೆ ಬೋಗಸ್ ದಾಖಲೆ ಗಳು ಸೃಷ್ಟಿ ಮಾಡಿದ್ದಾರೆ. ಹಲವಾರು ಸಮಾಜದ ಅವರಿಗೆ ಅನ್ಯಾಯ ಮಾಡುತ್ತಾ ಇದ್ದಾರೆ. ಕರಿಯಪ್ಪ ಗುಡಿಮನಿ.ಒತ್ತಾಯ.
ಬಳ್ಳಾರಿ (31) ಈಶಾನ್ಯ ಪದವೀಧರ ಕ್ಷೇತ್ರದ ಪದವೀಧರ ಅಭ್ಯರ್ಥಿ ಚುನಾವಣೆ ಗೆ ಸ್ವತಂತ್ರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಿದ ನಾರಾ ಪ್ರತಾಪ್ ರೆಡ್ಡಿ ಗೆ ಬುದ್ಧಿಜೀವಿಗಳು ವಿದ್ಯಾವಂತರು, ಅವರಿಗೆ ಮತ ಹಾಕದಂತೆ,ಕರಿಯಪ್ಪ ಗುಡಿಮನಿ,ಮೋಹನ್ ನಾಗರಾಜ್ ದುರುಗಣ್ಣ ಕರ್ನಾಟಕ ಜನ ಶಕ್ತಿ ಭೂಮಿ ಮತ್ತು ವಸತಿ ಹಕ್ಕು, ವಂಚಿತರ ಹೋರಾಟ ಸಮಿತಿ ಮತ್ತು ಕರ್ನಾಟಕ ಮಾದಿಗ ರಕ್ಷಣೆ ವೇದಿಕೆ. ಬಂಡಿಹಟ್ಟಿ ಮತ್ತು ದಾನಪ್ಪ ಬೀದಿ ಭೂಮಿ ವಂಚಿತ ರೈತರ ವತಿಯಿಂದಮತದಾರ ಬಾಂಧವರಲ್ಲಿ ವಿನಂತಿ ಮಾಡಿದ್ದಾರೆ.ಶುಕ್ರವಾರ ನಗರದ ಮಾನಸ ಇನ್ ಹೊಟೆಲ್ ನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಇವರು
ಎನ್ ಪ್ರತಾಪ್ ಇವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತಿದ್ದಾರೆ ಸರಿಯಷ್ಟೆ ಇವರಿಂದ ಅನ್ಯಾಯಕ್ಕೊಳಗಾಗಿ, ಕಷ್ಟವನ್ನು ಅನುಭವಿಸುತ್ತಿರುವ ನೂರಾರು ಕುಟುಂಬಗಳ ನೊವು ಆಲಿಸಿದ ನಂತರ ಎನ್ ಪ್ರತಾಪರೆಡ್ಡಿಯವರನ್ನು ಸೋಲಿಸಬೇಕೋ, ಬೇಡವೋ ನಿರ್ಧರಿಸಬೇಕು ಎಂದು ಕಳಕಳಿಯಿಂದ ಮನವಿಯನ್ನು ಮಾಡಿದ್ದಾರೆ.
ಬಳ್ಳಾರಿ ಬಂಡಿಹಟ್ಟಿ ಗ್ರಾಮಕ್ಕೆ ಹೊಂದಿಕೊಂಡಿರುವ ಸರ್ವೆ, ನಂ. 715 ರಲ್ಲಿ 44 ರೈತ ಕುಟುಂಬ 135 ಎಕರೆ ಭೂಮಿಯಲ್ಲಿ 1971 ರ ಟಿನೆಂಟ್ ಆ್ಯಕ್ಟ್ ನಂತೆ ಮಾದಿಗ ಸಮುದಾಯ, ಕುರುಬರು, ಈಡಿಗರು, ಅಗಸ, ಮುಸ್ಲಿಂಸರು, ಹರಿಜನ ಮತ್ತು ಇನ್ನಿತರೆ ಸಮುದಾಯಗಳಿಗೆ ಸರ್ಕಾರ 135 ಎಕರೆ. ಭೂಮಿಯನ್ನು ಹಂಚಿ ಕೊಟ್ಟಿದೆ. (ಫಾರಂ ನಂ.10 ಪ್ರಸ್ತುತ ವಹಾಣಿ ಎಲ್ಲವೂ ಇವೆ), ಅಂದಿನಿಂದ ಇಂದಿನವರೆಗೂ ನೂರಾರು ಕುಟುಂಬಗಳು ಇದೇ ಭೂಮಿಯಲ್ಲಿ ಸಾಗುವಳಿ ಮಾಡುತ್ತಾ ಜೀವನವನ್ನು ಅವಲಂಭಿಸಿದ್ದರು.
2003 ರಿಂದ ಪೆಂಡಿಂಗಾಗಿ 2005 ರಲ್ಲಿ ಎನ್.ಪ್ರತಾಪ್ ರೆಡ್ಡಿಯವರು ಟಿ.ಎಸ್.ನಂಬರ್ 1069, 1070 ಮತ್ತು 1071 ಎಂದು 135 ಎಕರೆ ಬೋಗಸ್ ದಾಖಲೆಗಳು ಸೃಷ್ಟಿ ಮಾಡಿದ್ದಾನೆ.
ಈ ಭೂಮಿಯ ಮೇಲೆ ಕಣ್ಣು ಹಾಕಿದ ಪ್ರತಾಪ್ ರೆಡ್ಡಿ, 2006ರಲ್ಲಿ ಪ್ರತಾಪ ರೆಡ್ಡಿ ತನ್ನ ಹೆಸರಲ್ಲಿ ಹಾಗೂ ಹೆಂಡತಿ ಶೈಲಜಾ ರೆಡ್ಡಿ ಹೆಸರಲ್ಲಿ ಒಟ್ಟು 135 ಎಕರೆ ಭೂಮಿಯನ್ನು ಈಗಿರುವ ಭೂಮಿಯ ಮೂಲ ಮಾಲೀಕರಿಂದ ಕೊಂಡು ಕೊಂಡಿದ್ದೇವೆಂದು ಸುಳ್ಳು ಕಾಗದ ಪತ್ರವನ್ನು ಸೃಷ್ಟಿಸಿಕೊಂಡು ಬಡವರ ಬದುಕಿನ ಜೊತೆಗೆ ಚಲ್ಲಾಟವಾಡುತ್ತಿದ್ದಾರೆ.
ನೂರಾರು ಕುಟುಂಬಗಳು ಎನ್.ಪ್ರತಾಪರೆಡ್ಡಿಯವರಿಂದ ಕೋರ್ಟ್ ಕಛೇರಿಗಳು, ಕೇಸುಗಳ ಅಲೆದಾಟದಲ್ಲಿ ಬಡವರ ಕುಟುಂಬಗಳು ಅತ್ಯಂತ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಎನ್.ಪ್ರತಾಪ್ ರೆಡ್ಡಿಯವರು ಹಲವಾರು ಸುಳ್ಳು ಕೇಸುಗಳನ್ನು ದಾಖಲಿಸುವುದು, ಗೂಂಡಾಗಳನ್ನು ಬಿಟ್ಟು ಬೆದರಿಸುವುದು, ಪೋಲೀಸರ ಮೂಲಕ ಕಿರುಕುಳ ನೀಡುವುದು ಕಳೆದ ಹತ್ತಾರು ವರ್ಷಗಳಿಂದ ನಡೆಯುತ್ತಲೇ ಇದೆ.ಇಂತಹ ವ್ಯಕ್ತಿಗಳು ಪದವೀಧರ ಕ್ಷೇತ್ರದಿಂದ ಗೆದ್ದು ಬಂದರೆ ಎನು ಆಗಬಹುದು??. ಪ್ರಜ್ಞಾವಂತರಾಗಿರವ ಎಲ್ಲಾ ಪದವೀಧರ ಕ್ಷೇತ್ರದ ಮತದಾರರು,ಓಟು ಹಾಕುವ ಮುನ್ನವೇ ಯೋಚಿಸಿ, ಯಾವುದೇ ಕಾರಣಕ್ಕೂ ಇಂತಹ ವಿರೋಧಿ ಗಳು ಗೆ ಮತ ನೀಡಬಾರದು ಎಂದು ಮನವಿ ಮಾಡಿದ್ದಾರೆ.ಇಂತಹ ವ್ಯಕ್ತಿಗಳು ಪದವೀಧರ ಕ್ಷೇತ್ರದಿಂದ ಗೆದ್ದು ಬಂದರೆ ಏನಾಗಬಹುದೆಂದು ಪ್ರಜ್ಞಾವಂತರಾಗಿರುವ ಎಲ್ಲಾ ಪದವೀಧರ ಕ್ಷೇತ್ರದ ಮತದಾರರು ಒದು ಹಾಕುವ ಮುನ್ನ ಯೋಚಿಸಿ ಯಾವುದೇ ಕಾರಣಕ್ಕೂ ಇಂತಹ ಜನ ವಿರೋಧಿಗಳಿಗೆ ಮತ ನೀಡಬಾರದೆಂದು ಈ ಮೂಲಕ ಮನವಿ ಮಾಡಿದ್ದಾರೆ.
ರೈತರ ದಾಖಲೆಗಳು:
1. 1 ರಿಂದ 44 ಜನ ರೈತ ಕುಟುಂಬಗಳ ದಾಖಲೆಗಳು
ಇವರ ಕಾನೂನು ಬಾಹಿರ ದಾಖಲೆಗಳು:
1. ಕೆ.ಕ್ರಿಷ್ಣ ಶಾಸ್ತ್ರಿ, ಮತ್ತು ಮಕ್ಕಳು ತನ್ನದಲ್ಲದ ಆಸ್ತಿಯನ್ನು ಕಾನೂನು ಬಾಹಿರ ದಾಖಲೆ ಸೃಷ್ಟಿಮಾಡಿ ಎನ್.ಪ್ರತಾಪ್ ರೆಡ್ಡಿಯ ಹೆಸರಿನಲ್ಲಿ ನೋಂದಣಿ ಮಾಡಿಸಿರುತ್ತಾರೆ.
2 . ಎನ್.ಪ್ರತಾಪ್ ರೆಡ್ಡಿ, ಆರ್.ಎಸ್. ಸರ್ವೆ ನಂ.1092/4, ವಿಸ್ತೀರ್ಣ 1-70 ಎಕರೆ ನೋಂದಣಿ ಮಾಡಿಸಿ ಮತ್ತು 5 ತಿಂಗಳ ನಂತರ ಟಿ.ಎಸ್.ಸರ್ವೆ ನಂ.1069, 1070, 1071, ವಿಸ್ತೀರ್ಣ 135 ಎಕರೆ ಟಿ.ಎಸ್.ಎಂದು ಪ್ರತಾಪ್ ರೆಡ್ಡಿ ಒಂದು ಎಕರೆಗೆ ರೂ.22,000/- ಮತ್ತು, ಶೈಲಜಾ ರೆಡ್ಡಿ ಒಂದು ಎಕರೆಗೆ ರೂ.18,000/- ರಂತೆ ಟಿ.ಎಸ್.ಭೂಮಿ ಖರೀದಿ ಮತ್ತು
ಅದೇ ಜಾಗಕ್ಕೆ ಆರ್.ಎಸ್.ಭೂಮಿ 1.70 ಎಕರೆಯನ್ನು ಒಂದು ಎಕರೆಗೆ ರೂ.1,20,000/- ರಂತ ಕಾನೂನು ಬಾಹಿರವಾಗಿ ಖರೀದಿ ಮಾಡಿರುತ್ತಾರೆ. . ಮಾನ ಕೆ.ಎ.ಟಿ ನ್ಯಾಯಾಲಯ, ಬೆಂಗಳೂರು, ಈ ನ್ಯಾಯಾಲಯಕ್ಕೆ, ಸರ್ವೆ ಇಲಾಖೆಯ ಅಧಿಕಾರಿಗಳಾದ ಎ.ಡಿ.ಎಲ್.ಆರ್. ದುರ್ಗಪ್ಪ, ಉದಯ ಪ್ರಕಾಶ್, ಸೂಪರ್ ವೈಜರ್ ದೊಡ್ಡ, ಬಸಪ್ಪ, ಸರ್ವೆಯರ್ ಸಾಬ್ಯಾನ್, ಗೌಸ್, ರಾಘವೇಂದ್ರ ವಿ.ಐ.ಸುರೇಶ್ ಇವರುಗಳು ಕಾನೂನು ಬಾಹಿರವಾಗಿ ಜಂಟಿ ಸರ್ವೆ ನಕಾಶೆಯನ್ನು ನ್ಯಾಯಾಲಯಕ್ಕೆ 3
ಎನ್.ಪ್ರತಾಪ್ ರೆಡ್ಡಿಯ ಹಣಕ್ಕೆ ಆಮೀಷಿಗೆ ಒಳಗಾಗಿ ಕಳುಹಿಸಿರುತ್ತಾರೆ.
4. ಮಾನ್ಯ ಉಚ್ಚ ನ್ಯಾಯಾಲಯ, ಧಾರವಾಡ ಪೀಠ ಆದೇಶ ದಿನಾಂಕ: 25.03.2021 ರಂದು ಎನ್.ಪ್ರತಾಪ್ ರೆಡ್ಡಿ ಮತ್ತು ಬಂಡಿಹಟ್ಟಿ ದಾನಪ್ಪ ಬೀದಿ ರೈತರಿಗೆ ಸರ್ವೆ ಮಾಡಿ 8 ತಿಂಗಳೊಳಗೆ ಕೊಡಿ ಎಂದು ಆದೇಶ ಮಾಡಿದ್ದರೂ ಎನ್.ಪ್ರತಾಪ್ ರೆಡ್ಡಿ ಮತ್ತು ರೈತರಿಗೆ ನೋಟೀಸ್ ನೀಡಿ 01.09.2021 ರಿಂದ 04.09.2021 ರಂದು ಎನ್.ಪ್ರತಾಪ್ ರೆಡ್ಡಿ ಸರ್ವೆ ಮಾಡಿಕೊಟ್ಟು ರೈತರಿಗೆ ಇಲ್ಲಿಯವರೆಗೆ ಸರ್ವೆ ಮಾಡಿ ಕೊಟ್ಟಿರುವುದಿಲ್ಲ. ಈ ಮೇಲಿನ ಅಧಿಕಾರಿಗಳನ್ನು ಕೇಳಿದರೆ ಎನ್.ಪ್ರತಾಪ್ ರೆಡ್ಡಿ ರೂಮಿನಲ್ಲಿ ಕುಳಿತುಕೊಂಡು ಪಾರ್ಟಿ ಮಾಡಿ ಪ್ರತಾಪ್ ರೆಡ್ಡಿ ಫೇವರ್ ಆಗಿ ಸರ್ವೆ ಮಾಡಿಕೊಟ್ಟಿರುತ್ತಾರೆ, ನ್ಯಾಯಾಲಯಕ್ಕೆ ಅಗೌರವ ತೋರಿರುತ್ತಾರೆ. ದಿನಾಂಕ: 03.01.2023 ರಂದು ರೈತರು ಅರ್ಜಿ ಹಾಕಿ ಎನ್.ಪ್ರತಾಪ್ ರೆಡ್ಡಿಯ ಸರ್ವೆ ಮಾಡಿದ ಸರ್ವೆ ಸ್ಕೆಚ್ ಕೇಳಿದರೂ ಇದೂ ವರೆವಿಗೂ ಕೊಟ್ಟಿರುವುದಿಲ್ಲ ಎಂದು ತಿಳಿಸಿದ್ದಾರೆ.