*ನಗರ ಶಾಸಕ ನಾರಾ ಭರತ್ ರೆಡ್ಡಿ ನೇತೃತ್ವದಲ್ಲಿ
ಸಚಿವ ನಾಗೇಂದ್ರರನ್ನ ಬೆಂಬಲಿಸಿ ಬೃಹತ್ ಮೌನ ಪ್ರತಿಭಟನೆ ಅಪಾರ ಸಂಖ್ಯೆಯಲ್ಲಿ ಸೇರಿದ ಕಾಂಗ್ರೆಸ್ ಕಾರ್ಯಕರ್ತರು *
ಬಳ್ಳಾರಿ:ಜೂ,01; ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರದಲ್ಲಿ ಸಚಿವ ನಾಗೇಂದ್ರ ಅವರ ಹೆಸರು ತಳಕು ಹಾಕಿಕೊಂಡ ಹಿನ್ನೆಲೆಯಲ್ಲಿ ನಾಗೇಂದ್ರ ರಾಜೀನಾಮೆಗೆ ವಿಪಕ್ಷದ ನಾಯಕರು ಸರಕಾರದ ವಿರುದ್ಧ ಮುಗಿಬಿದ್ದು ಸಿದ್ದು ಸರಕಾರದ ವಿರುದ್ಧ ವಾಗ್ದಾಳಿಗಳನ್ನ ಮಾಡುತ್ತಿವೆ. ಸಚಿವರ ರಾಜೀನಾಮೆಗೆ ಒತ್ತಾಯಿಸಿ, ಸರಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೇ ಈ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ಮೊನ್ನೆ ತಡ ರಾತ್ರಿಯವರೆಗೂ ಸಿಎಂ, ಡಿಸಿಎಂ ಮೀಟಿಂಗ್ ಮಾಡಿ ಸಚಿವ ನಾಗೇಂದ್ರರಿಗೆ ರಾಜೀನಾಮೆ ನೀಡಲು ಸೂಚಿಸಿದ್ದಾರೆ ಎಂಬ ಸ್ಪೋಟಕ ಸುದ್ದಿ ಹೊರಬೀಳುತ್ತಿದ್ದಂತೆ ಇತ್ತ ಬಳ್ಳಾರಿಯಲ್ಲಿ ನಾಗೇಂದ್ರ ಬೆಂಬಲಿಗರಲ್ಲಿ ಆತಂಕ ಮನೆಮಾಡಿ ಸಚಿವ ಬೆಂಬಲಕ್ಕೆ ನಿಲ್ಲುವ ಕೆಲಸ ಮಾಡಿದ್ದಾರೆ.
ಬಳ್ಳಾರಿಯಲ್ಲಿ ಇಂದು ಸಚಿವ ನಾಗೇಂದ್ರರಿಗೆ ಬೆಂಬಲಿಸಿ ಅವರ ಬೆಂಬಲಿಗರು, ಅಭಿಮಾನಿಗಳು ಸಿಡಿದೆದ್ದಿದ್ದಾರೆ. ಈ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ಪಾತ್ರವಿಲ್ಲ. ಸುಖಸುಮ್ಮನೇ ಬಿಜೆಪಿ ನಾಯಕರು ಸಚಿವ ನಾಗೇಂದ್ರರವರ ರಾಜೀನಾಮೆಗೆ ಅಗ್ರಹಿಸುತ್ತಿರುವುದು ಖಂಡನೀಯ ಸಚಿವ ನಾಗೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಬರಲ್ಲ ಸಚಿವರನ್ನ ಸಚಿವ ಸಂಪುಟದಿಂದ ಕೈಬಿಡಬಾರದು ಎಂದು ಸಿಎಂ ಸಿದ್ದರಾಮಯ್ಯರವರಿಗೆ ಮನವಿ ಮಾಡಲು ಹಾಗೂ ಸಚಿವ ನಾಗೇಂದ್ರರವರನ್ನ ಬೆಂಬಲಿಸಿ ನಗರದಲ್ಲಿಂದು ಅವರ ನೂರಾರು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಬೃಹತ್ ಮೌನ ಪ್ರತಿಭಟನೆ ನಡೆಸಿದರು.
ನಗರದ ಕನಕ ದುರ್ಗಮ್ಮ ದೇವಿಯ ದೇವಸ್ಥಾನದ ಅವರಣದಲ್ಲಿ ಜಮಾವಣೆಗೊಂಡ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ದುರ್ಗಮ್ಮ ದೇವಿಗೆ ನೂರಾರು ತೆಂಗಿನ ಕಾಯಿ ಒಡೆದು ವಿಶೇಷ ಪೂಜೆ ಸಲ್ಲಿಸಿ ಮೌನ ಪ್ರತಿಭಟನೆಗೆ ಚಾಲನೆ ನೀಡಿದರು.
ಈ ಮೌನ ಪ್ರತಿಭಟನೆಯ ನೇತೃತ್ವವನ್ನ ನಗರ ಶಾಸಕ ನಾರಾ ಭರತ್ ರೆಡ್ಡಿ ವಹಿಸಿದರೆ ಇವರಿಗೆ ನಿಗಮ ಮಂಡಳಿ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್.ಅಂಜನೇಯಲು ಸಾಥ್ ನೀಡಿದರು.
ಸಚಿವ ನಾಗೇಂದ್ರರವರ ನೂರಾರು ಅಭಿಮಾನಿಗಳು ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ದುರ್ಗಮ್ಮ ದೇವಸ್ಥಾನದಿಂದ ಬೃಹತ್ ಮೆರವಣಿಗೆ ಮೂಲಕ ರಾಯಲ್ ವೃತ್ತ ತಲುಪಿ ಅಲ್ಲಿ ಸಚಿವ ನಾಗೇಂದ್ರರಿಗೆ ಜೈಕಾರ ಕೂಗಿ ಅಲ್ಲಿಂದ ಜಿಲ್ಲಾಧಿಕಾರಿಗಳ ಕಛೇರಿಗೆ ಮೌನ ಮೆರವಣಿಗೆ ಮೂಲಕ ತೆರಳಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಸವಿವರವಾಗಿ ಬರೆದ ಮನವಿ ಪತ್ರವನ್ನು ಅಪಾರ ಜಿಲ್ಲಾಧಿಕಾರಿ ಜುಭೇರರವರಿಗೆ ಸಲ್ಲಿಸಿದರು.
ನೆರೆದಿದ್ದ ನೂರಾರು ಕಾರ್ಯಕರ್ತರು ಅಭಿಮಾನಿಗಳು ಮುಖಂಡರು ಸಚಿವ ನಾಗೇಂದ್ರರವರಿಗೆ ಜೈಕಾರ ಕೂಗಿ ರಾಜೀನಾಮೆ ನೀಡದಂತೆ ಸಚಿವ ನಾಗೇಂದ್ರರಿಗೆ ನೈತಿಕವಾಗಿ ಬೆಂಬವನ್ನ ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ವಕ್ಘ್ ಬೋರ್ಡ್ ಅಧ್ಯಕ್ಷ ಹುಮಾಯೂನ್ ಖಾನ್, ಮೇಯರ್ ಶ್ವೇತ, ಉಪ ಮೇಯರ್ ಜಾನಕಮ್ಮ, ಪಾಲಿಕೆಯ ಸದಸ್ಯರಾದ ರಾಜಶೇಖರ, ರಾಮಾಂಜನೇಯ, ಕುಬೇರ, ಪ್ರಭಂಜನ್ ಕುಮಾರ್, ಶ್ರೀನಿವಾಸ ಮಿಂಚು, ಶಿವರಾಜ್, ಪೇರಂ ವಿಕ್ಕಿ, ನೂರ್ ಮೊಹ್ಮದ್, ಕಾಂಗ್ರೆಸ್ ಮುಖಂಡ ಪಿ.ಜಗನ್, ಕಾಂಡ್ರ ಸತೀಶ್ ಬಿ.ಆರ್.ಎಲ್. ಸೀನಾ, ಚಾನಾಳ್ ಶೇಖರ್, ಅರ್ಶಾದ್, ಸರಗು ನಾಗರಾಜ್, ರೇಡಿಯೋ ಪಾರ್ಕ್ ಸೋಮು, ವಿ.ಕೆ.ಬಸಪ್ಪ, ವಿಷ್ಣುಬೋಯಪಾಟಿ, ಮಂಜುಳಾ, ಬಿ.ಪದ್ಮ ಸೇರಿದಂತೆ ನೂರಾರು ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು ಉಪಸ್ಥಿತರಿದ್ದರು.
ಈಗಾಗಲೇ ಕೈತಪ್ಪಿದ ಲೇಕ್ಕಚಾರವನ್ನು ಸರಿಪಡಿಸುವ ವ್ಯವಸ್ಥೆ ಯನ್ನು ನೋಡಿ ಸಿದ್ದ ರಾಮಯ್ಯ ಅವರಗೆ ತಲೆ ಬಿಸಿ ಆಗಿದೆ ಎಂದು ಸಚಿವರು ಆಪ್ತರು ಅಭಿಮಾನಿಗಳು, ಮುಖಂಡರು ಗಡಿ,ಗಡಿ ಮಾಡಿ ಮತ್ತಷ್ಟು ಸಮಸ್ಯೆ ಮಾಡುವ ವ್ಯವಸ್ಥೆ ಯನ್ನು ನೋಡಿ ಬೇಸರ ಮಾಡಿಕೊಳ್ಳಲಾಗಿದೆ ಏಂದು ಈಗಾಗಲೇ ತನಿಖೆ ಆರಂಭ ಆಗಿದೆ, ಸ್ವಲ್ಪ ಕಾದು ನೋಡುವ ವಾತಾವರಣ ದಲ್ಲಿ ಇರಬೇಕು, ಅನ್ನುವ ಮೇಸೆಜ್ ರವಾನೆ ಅಗಿದೆ ಏಂದು ಬಲ್ಲ ಮೂಲಗಳ ಮಾಹಿತಿ. ತಾತ್ಕಾಲಿಕ ವಾಗಿ ರಾಜೀನಾಮೆ ತೆಗೆದುಕೊಂಡರು, ತದನಂತರ ಮತ್ತೆ ಸಚಿವ ಸಂಪುಟದಲ್ಲಿ ಇರುತ್ತಾರೆ, ಈಗಾಗಲೇ ವಿರೋಧ ಪಕ್ಷದವರು ಕೈಯಲ್ಲಿ ಹಣ ವರ್ಗಾವಣೆ ಖಾತೆಯ ಪಿನ್ ಟೂ ಪಿನ್, ಸಿಕ್ಕಿದೆ ಮೊನ್ನೆ ಚುನಾವಣೆಯಲ್ಲಿ ಶ್ರೀ ರಾಮುಲು ಅವರ ಮೇಲೆ ಗೆಲುವು ಸಾಧಿಸಿದ್ದ ನಾಗೇಂದ್ರ ಅವರನ್ನು ಮರೆಯಲು ಸಾಧ್ಯವಾಗುವುದಿಲ್ಲ,ಬಿಜೆಪಿ ಅವರು ನಾಗೇಂದ್ರ ಮೇಲೆ,40 ಮೇಲೆ ಪಟ್ಟು ಪ್ರಕರಣ ಗಳು ಇದ್ದಾವೆ ಏಂದು ಆರೋಪಗಳನ್ನು ಮಾಡುತ್ತಾರೆ, ಅದರೆ ನಾಗೇಂದ್ರ ಅವರ ಬಗ್ಗೆ ಉತ್ತಮ ಅಭಿಪ್ರಾಯ ಇದೆ ಜನರ ಮೆಚ್ಚಿಗೆ ಇದೆ,ಆದರೆ ಇತ್ತೀಚೆಗೆ ಜಿಲ್ಲೆ ಯಿಂದ ಕೆಲ ಆರೋಪ ಗಳು ಕೇಳಿ ಬಂದಿವೆ ಅವರನ್ನು ಯಾರೂ ದಾರಿತಪ್ಪಿಸುವ ವ್ಯವಸ್ಥೆ ಅಗುತ್ತದೆ ಎಂದು ತಿಳಿದು ಬಂದಿದೆ, ಆದರೆ ಕಂಡಿತ ರಾಜೀನಾಮೆ ಇರುತ್ತದೆ ಕಾದು ನೋಡಬೇಕು ಎಂದು ಮರ್ಮವಾಗಿ,ಧರ್ಮವಾಗಿ ನುಡಿದಿದ್ದಾರೆ,ಎಂದು,ತಿಳಿದು ಬಂದಿದೆ. ಇಲ್ಲಿನ ಮುಖಂಡರು ವಾಸ್ತವ ವಿಷಯ ತಿಳಿಯದೇ ಭ್ರಷ್ಟಾಚಾರ ದಲ್ಲಿ ಸಚಿವರು ಪಾತ್ರ ಇಲ್ಲ ಇಲ್ಲ ಅನ್ನುತ್ತಾರೆ ಅದು ಮತ್ತಷ್ಟು ಸುಳ್ಳು ಗೆ ಪ್ರೋತ್ಸಾಹ ನೀಡಿದಂತೆ ಅಗುತ್ತದೆ. ಎನೆ ಅಗಲಿ ಸಚಿವ ನಾಗೇಂದ್ರ ಉತ್ತಮ ಲೀಡರ್ ಅನ್ನುವ ಮಾತು ಸತ್ಯದ ವಿಚಾರ ಕೂಡ ಇದೆ.ಯಾಲ್ಲವು ಕಾಲನಿರ್ಣಯ ಮಾಡಬೇಕು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)