This is the title of the web page
This is the title of the web page

Please assign a menu to the primary menu location under menu

State

ಗಾಂಧಿನಗರ ಪೋಲಿಸರ ಯಶಸ್ವಿ ಕಾರ್ಯಾಚರಣೆ.

ಗಾಂಧಿನಗರ ಪೋಲಿಸರ ಯಶಸ್ವಿ ಕಾರ್ಯಾಚರಣೆ.

*ಗಾಂಧಿನಗರ ಪೋಲಿಸರ ಯಶಸ್ವಿ ಕಾರ್ಯಾಚರಣೆ.*
ಮೂಲೆಗೆ ಬಿದ್ದ ಪ್ರಕರಣ ಗಳು..??
ಬಳ್ಳಾರಿ(11.) ದಾಖಲಾಗಿ 24 ಗಂಟೆಗಳಲ್ಲಿ ಮನೆಯ ಬೀಗ ಮುರಿದು ಮನೆಕಳ್ಳತನ ಮಾಡಿದ ಆರೋಪಿತಳ ಬಂಧನ 18,24,480/- ಮೌಲ್ಯದ ಚಿನ್ನ-ಬೆಳ್ಳಿ ಆಭರಣಗಳ ವಶ

ದಿನಾಂಕ 10-06-2024 ರಂದು ಸಂಜೆ 7 ಗಂಟೆಗೆ ಶ್ರೀ ಪಿ.ಎಲ್ ರವಿಕುಮಾರ್ ತಂ ಲೇಟ್ ಲಕ್ಷ್ಮೀಕಾಂತ ಶಾಸ್ತ್ರೀ ವಾಸ ನಯಾರ್ ಪೆಟ್ರೋಲ್ ಬಂಕ ಎದುರುಗಡೆ ಸಂಗನಕಲ್ಲ ರಸ್ತೆ ಬಳ್ಳಾರಿ ರವರು ದೂರು ದಿನಾಂಕ 09-06-2024 ರಂದು ರಾತ್ರಿ 10.30 ರಿಂದ ದಿನಾಂಕ 10-06-2024 ರಂದು ಬೆಳಿಗ್ಗೆ 6 ಎಎಂ ಸಮಯದೊಳಗೆ ತಮ್ಮ ಬೀಗ ಹಾಕಿದ ಮನೆಯ ಕೀಯನ್ನು ಮುರಿದು ಒಳಗೆ ಗಾದ್ರೇಜ್ ಬೀರು ಮುರಿದು ಗಾದ್ರೇಜ್ ನಲ್ಲಿಟ್ಟಿದ್ದ 228 ಗ್ರಾಂ ಬಂಗಾರದ ಆಭರಣಗಳು ಮತ್ತು 4281 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಆದರೆ ಅಂದಾಜು ಬೆಲೆ 18,24,480/- ಆಗಬಹುದು ಎಂದು ದೂರು ನೀಡಿದ್ದು ಸದರಿ ದೂರಿನ ಮೇರೆಗೆ ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸದರಿ ಮನೆಕಳ್ಳತನ ಪ್ರಕರಣದ ಪತ್ತೆಗಾಗಿ ಮಾನ್ಯ ಎಸ್.ಪಿ ಬಳ್ಳಾರಿ ಸಾಹೇಬರು ಪೊಲಿಸ್ ಇನ್ಸಪೆಕ್ಟರ್ ಗಾಂಧಿನಗರ ಹಾಗೂ ಅವರ ಅಪರಾಧ ಸಿಬ್ಬಂದಿಗಳ ತಂಡ ರಚಿಸಿದ್ದು ಸದರಿ ತಂಡವು ಐಪಿಎಸ್ ಪೋಲಿಸ್ ಅಧೀಕ್ಷಕರು ನಿರ್ದೇಶನದ ಮೇರೆಗೆ ಮಾನ್ಯ ಶ್ರೀ ಕೆ.ಪಿ ರವಿಕುಮಾರ ಹೆಚ್ಚುವರಿ ಪೋಲಿಸ್ ಅಧೀಕ್ಷಕರು. ಶ್ರೀ ನವೀನ್ ಕುಮಾರ ಹೆಚ್ಚುವರಿ ಪೋಲಿಸ್ ಅಧೀಕ್ಷಕರು-2 ರವರ ಮಾರ್ಗದರ್ಶನದಂತೆ ಶ್ರೀ ಚಂದ್ರಕಾಂತ ನಂದರಡ್ಡಿ ಪೋಲಿಸ್ ಉಪಾಧೀಕ್ಷಕರು ಬಳ್ಳಾರಿ ನಗರ ಉಪವಿಭಾಗರವ ನೇತೃತ್ವದಲ್ಲಿ ವಿವಿಧ ಆಯಾಮಗಳ ಮೂಲಕ ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿ ಮನೆ ಕಳ್ಳತನ ಮಾಡಿದ ಆರೋಪಿತಳಾದ ಪೆದ್ದಕ್ಕೆ ಗಂಡ ಭಾಸ್ಕರ 40 ವರ್ಷ ವಾಸ ಸರಕಾರಿ ಶಾಲೆ ಹತ್ತಿರ ಶ್ರೀರಾಮಪುರ ಕಾಲೋನಿ ಬಳ್ಳಾರಿ ನಗರ ಇವಳನ್ನು ದಸ್ತಗಿರಿ ಮಾಡಿ ಆರೋಪಿತಳ ಕಡೆಯಿಂದ ಕೀ ಮುರಿದು ಕಳ್ಳತನ ಮಾಡಿದ ಸುಮಾರು 228 ಗ್ರಾಂ ಬಂಗಾರದ ಆಭರಣಗಳಾದ ಸರಗಳು.ಉಂಗುರುಗಳು,ಬೆಂಡೋಲೆಗಳು ಪದಕಗಳು ಮತ್ತು 4281 ಗ್ರಾಂ ಬೆಳ್ಳಿಯ ಸಾಮಾನುಗಳಾದ ಬೆಳ್ಳಿಯ ತಟ್ಟೆಗಳು,ತಂಬಿಗೆಗಳು ಲೋಟಗಳು ಇತರೆ ಬೆಳ್ಳಿಯ ವಸ್ತುಗಳನ್ನು ಜಪ್ತಿಪಡಿಸಿಕೊಳ್ಳಲಾಯಿತು ಸದರ ಜಪ್ತಿಪಡಿಸಿಕೊಂಡ ಬಂಗಾರ ಮತ್ತು ಬೆಳ್ಳಿಯ ವಸ್ತುಗಳ ಮೌಲ್ಯ 18,24,480/-

ರೂಪಾಯಿಗಳಾಗಬಹುದು.

ಸದರಿ ಪ್ರಕರಣವನ್ನು ದಾಖಲಾದ 24 ಗಂಟೆಗಳಲ್ಲಿ ಪತ್ತೆ ಮಾಡಿದ ಗಾಂಧಿನಗರ ಪೋಲಿಸ್ ಇನ್ಸಪೆಕ್ಟರ್, ಪಿಐ, ನಾರಾಯಣಸ್ವಾಮಿ ಪಿ.ಎಸೈ ಹಾಗೂ ಸಿಬ್ಬಂದಿರವರಾದ ಜೈರಾಮ ಹೆಚ್.ಸಿ 259, ನಾರಾಯಣ ಹೆಚ್.ಸಿ 248, ತಿಮ್ಮಪ್ಪ ಪಿಸಿ 1133, ಮಾರುತಿ ಪಿಸಿ 1062 ಪ್ರವೀಣ ಪಿಸಿ 72 ಶ್ರೀಮತಿ ಬಸಲಿಂಗಮ್ಮ ಮಪಿಸಿ 52 ಶ್ರೀಮತಿ ಸರಸ್ವತಿ ಮಪಿಸಿ 68 ರವರು ಕಾರ್ಯಕ್ಕೆ ಐಪಿಎಸ್ ಪೋಲಿಸ್ ಅಧೀಕ್ಷಕರು ಮಾನ್ಯ ಶ್ರೀ ಕೆ.ಪಿ ರವಿಕುಮಾರ ಹೆಚ್ಚುವರಿ ಪೋಲಿಸ್ ಅಧೀಕ್ಷಕರು, ಶ್ರೀ ನವೀನ್ ಕುಮಾರ ಹೆಚ್ಚುವರಿ ಪೋಲಿಸ್ ಅಧೀಕ್ಷಕರು- 2 ಹಾಗೂ ಚಂದ್ರಕಾಂತ ನಂದರಡ್ಡಿ ಪೋಲಿಸ್ ಉಪಾಧೀಕ್ಷಕರು ಬಳ್ಳಾರಿ ನಗರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.ಇದೆ ಠಾಣೆಯ ವ್ಯಾಪ್ತಿಯಲ್ಲಿ ಈಹಿಂದೆ ಸಾಲು ಸಾಲು ಅಂಗಡಿ ಗಳು, ಮನೆ ಗಳು ಬೈಕ್ ಗಳು ಮೊಬೈಲ್ ಗಳು, ಕಳ್ಳತನ ಗಳು ಅಗಿವೆ.ವಿಕಾಸ್ ಬ್ಯಾಂಕ್ ಎಟಿಎಂ ನಲ್ಲಿ ಲಕ್ಷಗಟ್ಟಲೆ ಕಳವು, ಆಗಿದ್ದು ಅವುಗಳನ್ನು ಹಿಡಿಯಲು ಅಗಿಲ್ಲ ರಿಕವರಿ ಅಗಿಲ್ಲ. ಗಾಂಧಿನಗರ ಠಾಣೆ ಮೇಲೆ ಜನರ ಗೆ ನಂಬಿಕೆ ಇಲ್ಲದಂತೆ ಅಗಿದೆ. ಮೂಲೆಗೆ ಬಿದ್ದ ಪ್ರಕರಣ ಗಳು ಎಷ್ಟು?? ಇಲ್ಲಿನ ಅಧಿಕಾರಿಗಳ ವಿಫಲತೆ ಮತ್ತು ಠಾಣೆಯ ವ್ಯಾಪ್ತಿಯಲ್ಲಿ ಸುದ್ದ ಕಾರ್ಯಚಟುವಟಿಕೆಗಳನ್ನು ನ್ಯೂಸ್9ಟುಡೇ ದಲ್ಲಿ…??.ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.


News 9 Today

Leave a Reply