ವಾಲ್ಮೀಕಿ ನಿಗಮದಲ್ಲಿ ಮಾಡಿರುವ 187 ಕೋಟಿ ರೂಪಾಯಿಗಳ ಹಗರಣವನ್ನು ಖಂಡಿಸಿದ ಗಾಲಿಜನಾರ್ದನ ರೆಡ್ಡಿ.
ಕೊಪ್ಪಳ(28)ಭಾರತೀಯ ಜನತಾ ಪಾರ್ಟಿ ಕೊಪ್ಪಳ ವತಿಯಿಂದ ದಲಿತ ವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರವು ವಾಲ್ಮೀಕಿ ನಿಗಮದಲ್ಲಿ ಮಾಡಿರುವ 187 ಕೋಟಿ ರೂಪಾಯಿಗಳ ಹಗರಣವನ್ನು ಖಂಡಿಸಿ ಇಂದು ಕೊಪ್ಪಳ ನಗರದ ಅಶೋಕ್ ವೃತ್ತದಿಂದ ಜಿಲ್ಲಾ ಮಟ್ಟದ ಮುಖಂಡರು,ಪ್ರಮುಖರು ಹಾಗೂ 5000ಕ್ಕೂ ಹೆಚ್ಚು ಅಧಿಕ ಕಾರ್ಯಕರ್ತರೊಂದಿಗೆ ಗಂಗಾವತಿ ಶಾಸಕರಾದ ಗಾಲಿ ಜನಾರ್ದನ ರೆಡ್ಡಿ ಅವರು ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ಮಾಡಿದರು.
ಹಗರಣ ನಡೆಸಿ ಆ ಹಣವನ್ನು ಹೊರ ರಾಜ್ಯಗಳಿಗೆ ಅಕ್ರಮವಾಗಿ ಕಳುಹಿಸಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಳಸಿಕೊಂಡಿದೆ,
ಅಧಿಕಾರಿಗಳ ಮೇಲೆ ಈ ಪ್ರಕರಣದ ಆರೋಪ ಹೊರಿಸಿ ಈ ಸರ್ಕಾರ ಬಚಾವಾಗಲು ಯತ್ನಿಸುತ್ತದೆ ಎಂದರು.
ಗಾಲಿ ಜನಾರ್ದನ ರೆಡ್ಡಿ ಅವರು ಹಾಗೂ ಕಾರ್ಯಕರ್ತರನ್ನೂ ಬಂಧಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನವನ್ನೂ ಪೊಲೀಸ್ ಇಲಾಖೆ ಮಾಡುತ್ತಿದೆ, ಪೊಲೀಸ್ ಇಲಾಖೆಯು ದಯವಿಟ್ಟು ರಾಜ್ಯ ಸರ್ಕಾರದ ಮಾತನ್ನು ಕೇಳದೆ ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡಲು ಅವಕಾಶ ನೀಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನವೀನ್ ಗುಳಗಣ್ಣನವರ್, ವಿರೋಧ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ಶ್ರೀ ದೊಡ್ಡನಗೌಡ ಎಚ್ ಪಾಟೀಲ್, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಶ್ರೀ ಡಾ. ಬಸವರಾಜ್ ಕೆ ಶರಣಪ್ಪ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀಮತಿ ಹೇಮಲತ ನಾಯಕ್, ಮಾಜಿ ಶಾಸಕರುಗಳಾದ ಶ್ರೀ ಬಸವರಾಜ ಧಡೆಸೂಗೂರು, ಶ್ರೀ ಪರಣ್ಣ ಮುನವಳ್ಳಿ, ಸಿಂಗನಾಳ್ ವಿರೂಪಾಕ್ಷಪ್ಪ, ಮನೋಹರ ಗೌಡ ಹೇರೂರು, ಸಂಗಮೇಶ್ ಬಾದವಾಡಗಿ, ಅರ್ಜುನ್ ನಾಯಕ್ ಪಂಪಣ್ಣ ನಾಯಕ್, ದುರ್ಗಪ್ಪ ದಳಪತಿ, ಪಕ್ಷದ ಹಿರಿಯರು ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಹಾಗೂ ಸಹಸ್ರಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.