ಶ್ರೀ ಕನಕ ದುರ್ಗಮ್ಮ ದೇವಿ ದೇಗುಲ ಹುಂಡಿ ಎಣಿಕೆ,
43,44,266 ರೂ.ಸಂಗ್ರಹ
ಬಳ್ಳಾರಿ: ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ದೇಗುಲದ ಹುಂಡಿ ಎಣಿಕೆ ಕಾರ್ಯ ಶನಿವಾರ ಮಾಡಲಾಯಿತು. ಕಳೆದ 2024ರ ಮಾ.16 ರಿಂದ ಜು.6ರ ವರೆಗೆ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತರು ಬಳ್ಳಾರಿ ಕಾರ್ಯನಿರ್ವಾಹಕ ಅಧಿಕಾರಿಗಳು, ಹನುಮಂತಪ್ಪ, ದೇಗುಲದ ಪ್ರಧಾನ ಧರ್ಮಕರ್ತ p ಮ Ramanjineyyalu ಬಸವರಾಜ, a s i ಸೇರಿದಂತೆ ವ್ಯವಸ್ಥಾಪಕರು ಇತರರ ನೇತೃತ್ವದಲ್ಲಿ ಹುಂಡಿ ಹಣವನ್ನು ಎಣಿಕೆ ಕಾರ್ಯ ಮಾಡಲಾಯಿತು. ಒಟ್ಟು ಹುಂಡಿಯಲ್ಲಿ 43,44,266 ರೂ.
ಹಣ ಜಮಾ ಆಗಿದೆ ಜೊತೆಗೆ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳು ದೇಗುಲಕ್ಕೆ ಸಮರ್ಪಣೆ ಮಾಡಲಾಗಿದ್ದು, ಅದರ ತೂಕವನ್ನು ಎಲ್ಲರ ಸಮಕ್ಷಮ ಮಾಡಲಾಯಿತು.ಈ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ದೇಗುಲದ ಅರ್ಚಕರು, ಸಿಬ್ಬಂದಿಗಳು, ಭಕ್ತರು ಉಪಸ್ಥಿತರಿದ್ದರು.