ಸೂಲದಹಳ್ಳಿ:ಜಮೀನಿನಲ್ಲಿ ಅನಧಿಕೃತ ಕಂಬಗಳ ನಿರ್ಮಾಣ, ಪವನ ವಿದ್ಯುತ್ ಕಂಪನಿ ಹಾಗೂ ಕಂಪನಿ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ-ರೈತರ ಆಗ್ರಹ
-ವಿಜಯನಗರ ಜಿಲ್ಲೆ ಕೂಡ್ಲಿಗಿ:
ತಾಲೂಕಿನ ಸೂಲದಹಳ್ಳಿ ಗ್ರಾಮದಲ್ಲಿ ಘಟನೆ.
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ. ಹತ್ತಾರು ರೈತರ ಹೊಲಗಳಲ್ಲಿ ಪವನ ವಿದ್ಯುತ್ ಖಂಪನಿಯವರ ಹಾವಳಿ ಮಿತಿ ಮೀರಿದೆ ತಹಶಿಲ್ದಾರರಿಗೆ ದೂರು ನೀಡಿದ ರೈತರು
ಕಂಪನಿ ಹಾಗೂ ಕಂಪನಿ ಗುತ್ತಿಗೆದಾರರು ರೈತರಿಗೆ ವಂಚನೆ ಮಾಡಿರುವುದಾಗಿ ಹತ್ತು ಹಲವು ರೈತರಿಂದ ಗಂಭೀರ ಆರೊಪ ಕ್ರಮ ಕೈಗೊಳ್ಳುವಂತೆ ರೈತರ ದೂರು
ಪರಿಶೀಲಿಸಿ ಕಂಪನಿಯಿಂದ ರೈತರಿಗೆ ನ್ಯಾಯ ಯುತವಾದ, ಪರಿಹಾರ ಹಣ ಸಂದಾಯ ಮಾಡುವಂತೆ ಕ್ರಮ ಜರುಗಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.
ಕಂಪನಿ ವಿರುದ್ಧ ಹಾಗೂ ಕಂಪನಿಯ ಏಜೆಂಟ್, ಅಥವಾ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕ್ಕದ್ದಮ್ಮೆ ಹಾಕಬೇಕೆಂದು. ಕೂಡ್ಲಿಗಿ ತಹಶಿಲ್ದಾರರಿಗೆ ಗ್ರಾಮದ ಹಲವು ರೈತರು, ಮನವಿ ಹತ್ರ ನೀಡಿ ಕೊರಿದ್ದಾರೆ.
ತಹಶಿಲ್ದಾರರಾದ ಎಮ್.ರೇಣುಕಮ್ಮರವರು, ರೈತರ ಮನವಿ ಪತ್ರ ಪಡೆದು ಪರಿಶೀಲಿಸಿ. ವಸ್ಥು ಸ್ಥಿತಿಯನ್ನರಿತು ವಿಚಾರಿಸಿ, ಸೂಕ್ತ ಕಾನುನು ಕ್ರಮ ಜರುಗಿಸಲಾಗುವುದೆಂದು ಭರವಸೆ ನೀಡಿದ್ದಾರೆ.
ಸಂಬಂಧಿಸಿದಂತೆ ರೈತರು ಮಾತನಾಡಿ, ತಾವು ಗುಳೇ ಹೋದಾ ಸಂದರ್ಭದಲ್ಲಿ. ತಮ್ಮ ಅನುಮತಿ ಪಡೆಯದೇ ಜಮೀನಿನಲ್ಲಿ ಪವನ ವಿದ್ಯುತ್ ಕಂಬ ನಿರ್ಮಿಸಿದ್ದಾರೆ.
ಕೆಲವು ಹೊಲಗಳಲ್ಲಿ ಪವನ ವಿದ್ಯುತ್ ತಯಾರಿಕೆಗೆ ಅಳವಡಿಸಿರುವ. ವಿದ್ಯತ್ ತಂತಿಗೆ ಆಸರೆಯಾಗಿ ಕಂಬಗಳನ್ನು ಹೊಲಗಳಲ್ಲಿ, ಅನಧಿಕೃತವಾಗಿ ನಿರ್ಮಿಸಲಾಗಿದೆ.
ವಿಚಾರಿಸಿದರೆ ಅಷ್ಟೋ ಇಷ್ಟೋ ಹಣ ನೀಡಲು ಬರುತ್ತಾರೆ, ಕೆಲವರಿಗೆ 15,000₹ ನೀಡಿದ್ದಾರೆ ಹಲವರಿಗೆ 10.000₹ ನೀೆಡಿದ್ದಾರೆ ಕೆಲವರಿಗೆ ಕೇವಲ 3-4 ಸಾವಿರ ಹಣ ನೀಡಿದ್ದಾರೆ.
ನಿಯಮಾನುಸಾರ ಹಣ ನೀಡದೇ ಅನಧಿಕೃತವಾಗಿ ಭುಮಿಯಲ್ಲಿ ಕಂಬಗಳನ್ನು ನೆಟ್ಟಿದ್ದಾರೆ, ಕಾರಣ ಕಂಬಗಳನ್ನು ಶೀಘ್ರವೇ ಕೀಳಿಸಬೆೇಕು.
ಕಾನೂನಿನ ನಿಯಮಾನುಸಾರ ಕಂಪನಿಯಿಂದ, ನ್ಯಾಯ ಯುತವಾದ ಹಣ ನೀಡುವಂತೆ ಆದೇಶಿಸಬೇಕೆಂದು ಹತ್ತು ಹಲವು ರೈತರು ತಹಶಿಲ್ದಾರರಲ್ಲಿ ಕೋರಿದ್ದಾರೆ.
ರೈತರು ತಹಶಿಲ್ದಾರರಾದ ಎಮ್.ರೇಣುಕಮ್ಮರಿಗೆ, ತಮ್ಮ ಹಕ್ಕೊತ್ತಾಯ ಅಂಶಗಳಿರುವ ಪತ್ರವನ್ನು ನೀಡಿದ್ದಾರೆ.
ಸೂಲದಳ್ಳಿ ರೈತರಾದ ಬಿ.ಹನುಮಂತಪ್ಪ, ಹೆಚ್.ಕೃಷ್ಣ, ಗಂಗಮ್ಮ, ಚಿತ್ರಲಿಂಗಪ್ಪ, ಎನ್.ನಾಗಪ್ಪ, ಬೊಮ್ಮಪ್ಪ, ಮಾರಪ್ಪ, ಡಿ.ನಾಗರಾಜ, ಬಿ.ಕುಮಾರಸ್ವಾಮಿ, ಶರಣಪ್ಪ, ನಾಗರಾಜ, ಬಡೋಬಯ್ಯ, ಓಬಯ್ಯ , ಬಡೋಬಮ್ಮ ಸೇರಿದಂತೆ ಹತ್ತು ಹಲವು ರೈತರು ಉಪಸ್ಥಿತರಿದ್ದರು. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ, ಕೂಡ್ಲಿಗಿ ವೃಷಬೇಂದ್ರ.)