This is the title of the web page
This is the title of the web page

Please assign a menu to the primary menu location under menu

State

ಕಾಕರ್ಲತೋಟದ ಕ್ಯಾದಿಗೆ ಹಳ್ಳದ ಸೇತುವೆ ಕಾಮಗಾರಿಗೆ ಚಾಲನೆ.

ಕಾಕರ್ಲತೋಟದ ಕ್ಯಾದಿಗೆ ಹಳ್ಳದ ಸೇತುವೆ ಕಾಮಗಾರಿಗೆ ಚಾಲನೆ.

*ಕಾಕರ್ಲತೋಟದ ಕ್ಯಾದಿಗೆ ಹಳ್ಳದ ಸೇತುವೆ ಕಾಮಗಾರಿಗೆ ಚಾಲನೆ.*

ಬಳ್ಳಾರಿ, ಸೆ.12: ನಗರದ 5ನೇ ವಾರ್ಡಿನ ಕಾಕರ್ಲತೋಟ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಬಳ್ಳಾರಿ ನಗರ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ವಿಶೇಷ ಅನುದಾನದ ಅಡಿ ಅಂದಾಜು 8 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಸೇತುವೆ ಹಾಗೂ ರಸ್ತೆ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗುಗ್ಗರ ಹಟ್ಟಿಯ ಬಳಿ ಮುಖ್ಯ ರಸ್ತೆ (ಬಳ್ಳಾರಿ-ಬೆಂಗಳೂರು)ಯಲ್ಲಿ ವಾಹನ ದಟ್ಟಣೆಯಿಂದ ಸಂಚಾರ ಅಸ್ತವ್ಯಸ್ತ ಆಗುತ್ತಿರುವುದರಿಂದ ಸದರಿ ನೂತನ ಸೇತುವೆಯ ನಿರ್ಮಾಣದಿಂದ ಟ್ರಾಫಿಕ್ ಜಾಮ್ ತಗ್ಗಲಿದೆ, ಅಲ್ಲದೇ ಬಳ್ಳಾರಿ ನಗರ ಕೇಂದ್ರದಿಂದ ಕಾಕರ್ಲತೋಟದ ಭಾಗಕ್ಕೆ ಸಂಚರಿಸುವ ಜನರಿಗೂ ಅನುಕೂಲ ಆಗಲಿದೆ ಎಂದರು.

ಸೇತುವೆ ಕಾಮಗಾರಿಯ ಹೊರತಾಗಿ 5ನೇ ವಾರ್ಡಿನ ರಸ್ತೆ ಅಭಿವೃದ್ಧಿಗಾಗಿ 75 ಲಕ್ಷ ರೂ.ಗಳ ಹಣ ಮಂಜೂರು ಮಾಡಿಸಲಾಗುವುದು ಎಂದು ಹೇಳಿದರು.

ಇದೇ ವೇಳೆ 5ನೇ ವಾರ್ಡಿನ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು.

ಎಪಿಎಂಸಿಯ ಮೂಲಭೂತ ಸೌಕರ್ಯ ಕಾಮಗಾರಿಗೆ ಚಾಲನೆ: 3ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯ ಒಳಗೆ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ (4 ಕೋಟಿ 19 ಲಕ್ಷ ರೂ.ಗಳ ವೆಚ್ಚ, ಸಿಸಿ ರಸ್ತೆ) ಚಾಲನೆ ನೀಡಿದ ನಗರ ಶಾಸಕ ನಾರಾ ಭರತ್ ರೆಡ್ದಿ, ಎಪಿಎಂಸಿಯ ಪಕ್ಕದ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳಿಂದ ಹೊರ ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜನರಿಂದ ಅಹವಾಲು ಸ್ವೀಕರಿಸಿದರು.

ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಈಗಾಗಲೇ ಓವರ್ ಹೆಡ್ ಟ್ಯಾಂಕ್ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಹೊರ ಚರಂಡಿ ನಿರ್ಮಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ತಿಳಿಸಿದರು.

ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ: ನಗರದ 8ನೇ ವಾರ್ಡಿನ ಹಂದ್ರಾಳ ಪ್ರದೇಶದಲ್ಲಿ 1 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಚಾಲನೆ ನೀಡಿದರು.

ತದ ನಂತರ ನೂತನ ನಿರ್ಮಾಣ ಹಂತದಲ್ಲಿ ಚಾಲ್ತಿಯಲ್ಲಿರುವ ಹಂದ್ರಾಳ ಸೇತುವೆ ಕಾಮಗಾರಿಯನ್ನು ಪರಿಶೀಲಿಸಿದರು.

ಈ ಸಂದರ್ಭ ಮಹಾನಗರ ಪಾಲಿಕೆಯ ಮೇಯರ್ ಮುಲ್ಲಂಗಿ ನಂದೀಶ್, ಪಾಲಿಕೆಯ ಸದಸ್ಯರಾದ ರಾಜಶೇಖರ ಹಡ್ಲಿಗಿ, ಎಂ.ಪ್ರಭಂಜನಕುಮಾರ್, ರಾಮಾಂಜನೇಯ, ವಿಜಯ್, ಅನೂಪ್ ಸೇರಿದಂತೆ ಹಲವರು ಹಾಜರಿದ್ದರು.


News 9 Today

Leave a Reply