This is the title of the web page
This is the title of the web page

Please assign a menu to the primary menu location under menu

State

ಕೋಟಿ ಕೋಟಿ ವಂಚನ ಮಾಡಿದವನು ಬಂಧನ.

ಕೋಟಿ ಕೋಟಿ ವಂಚನ ಮಾಡಿದವನು ಬಂಧನ.

ಕೋಟಿ ಕೋಟಿ ವಂಚನ ಮಾಡಿದವನು ಬಂಧನ.

ಬಳ್ಳಾರಿ (18)ಸೈಬರ್ ಆರ್ಥಿಕ, ಮಾದಕ ದ್ರವ್ಯ . ಪೊಲೀಸ್ ಠಾಣೆ, ಬಳ್ಳಾರಿ ರವರ ಕಾರ್ಯಚರಣೆ ಒಬ್ಬ ವ್ಯಕ್ತಿಯ ಬಂಧನ ಈತನಿಂದ ನಗದು ಹಣ ರೂ. 1,21,04,500/- ವಶಪಡಿಸಿಕೊಂಡಿದ್ದು ಮತ್ತು ಆರೋಪಿತನ ಬೇರೆ ಬೇರೆ ಖಾತೆಗಳಲ್ಲಿದ್ದ ರೂ. 27.97,582/- ಹಣವನ್ನು ಡೆಬಿಟ್ ಫ್ರಿಜ್ ಮಾಡಿಸಿರುತ್ತದೆ. ಒಟ್ಟು ರೂ. 1,49,02,082/- ಹಣವನ್ನು ಹಾಗು ಆರೋಪಿತನು ಆನ್‌ಲೈನ್ ವಂಚನೆಗೆ ಉಪಯೋಗಿಸಿದ ಒಂದು ವಿವೋ ಕಂಪನಿಯ ಮೊಬೈಲ್ ಜಪ್ತು ಮಾಡಿದ್ದಾರೆ.
ದಿನಾಂಕ 03-09-2024 ರಂದು ವರದಿಯಾದ ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆಯ ಗುನ್ನೆ 2. 72/2024 500, 66 (4), 66 (2), 2 3 2 500. 318 (3) 2.2.2. ಯಾಕ್ಟ್ 2023 ಪ್ರಕರಣದ ,ಬಳ್ಳಾರಿ ನಗರದಲ್ಲಿರುವ Hindusthan Calcined Metal Private Limited Agarwal Coal Corporation Pvt Ltd ಕೋಲ್ ಖರೀದಿ ಮಾಡುತ್ತಿದ್ದು, ಅವರು ಕೊಟ್ಟ ಬ್ಯಾಂಕ್ ಖಾತೆಗಳಿಗೆ ಹಣವನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡುತ್ತಿದ್ದರು.

ಈ ಮಾಹಿತಿಯನ್ನು ಸಂಗ್ರಹಿಸಿದ ಆರೋಪಿತನು Agarwal Coal Corporation Pvt Ltd ಕಂಪನಿಯ ಬ್ಯಾಂಕ್ ಖಾತೆ ಸಂಖ್ಯೆ ಬದಲಾವಣೆ ಆಗಿದೆ ಎಂದು ಫೇಕ್ ಇ- ಮೇಲ್ ಐಡಿ ಮೂಲಕ ತನ್ನ ಮದ್ಯಪ್ರದೇಶ ರಾಜ್ಯದ IndusInd Bank ಖಾತೆ ಸಂಖ್ಯೆಯನ್ನು ಕಳುಹಿಸಿ ಅನ್‌ಲೈನ್ ವಂಚನೆ ಮೂಲಕ ತನ್ನ ಬ್ಯಾಂಕ್ ಖಾತೆಗೆ ಹಣ ರೂ. 2,11,50.224/- ಹಾಕಿಸಿಕೊಂಡು ಕಂಪನಿಗೆ ಮೋಸ ಮತ್ತು ವಂಚನೆ ಮಾಡಿರುತ್ತಾನೆ.

ಮಾನ್ಯ ಪೊಲೀಸ್ ಅಧೀಕ್ಷಕರು, ಬಳ್ಳಾರಿ ಮತ್ತು ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ಮತ್ತು 2 ಬಳ್ಳಾರಿ ರವರುಗಳ ಮಾರ್ಗದರ್ಶನದಲ್ಲಿ ಬಳ್ಳಾರಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿ.ಎಸ್.ಪಿ ಶ್ರೀ ಡಾ|| ಸಂತೋಷ ಚವ್ಹಾಣ್ ರವರ ನೇತೃತ್ವದ ತಂಡ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ.ರಮಾಕಾಂತ್. ವೈ.ಹೆಚ್. ಮತ್ತು ಸಿಬ್ಬಂದಿಯವರಾದ ಎ.ಎಸ್.ಐ ಶ್ರೀ.ಎಂ.ಜಿ.ತಿಪ್ಪೇರುದ್ರಪ್ಪ, ಶ್ರೀ.ಹನುಮಂತರೆಡ್ಡಿ, ಶ್ರೀ.ಯಲ್ಲೇಶಿ, ಶ್ರೀ.ವೆಂಕಟೇಶ್ ರವರೊಂದಿಗೆ ಮಧ್ಯಪ್ರದೇಶ ರಾಜ್ಯಕ್ಕೆ ಹೋಗಿ ತನಿಖೆಕೈಗೊಂಡು, ತಾಂತ್ರಿಕ ಸಹಾಯದೊಂದಿಗೆ ಸಾಕ್ಷ್ಯಧಾರಗಳನ್ನು ಸಂಗ್ರಹಿಸಿ ಆರೋಪಿ- Ajay Kumar Jayswal ಈತನನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಂಡು ಆರೋಪಿತನಿಂದ Hindusthan Calcined Metal Private Limited ಕಂಪನಿಗೆ ವಂಚಿಸಿದ ನಗದು ಹಣ ರೂ. 1,21,04,500/- ವಶಪಡಿಸಿಕೊಂಡಿದ್ದು ಮತ್ತು ಆರೋಪಿತನ ಬೇರೆ ಬೇರೆ ಖಾತೆಗಳಲ್ಲಿದ್ದ ರೂ. 27,97,582/- ಹಣವನ್ನು ಡೆಬಿಟ್ ಫ್ರಿಜ್ ಮಾಡಿಸಿರುತ್ತದೆ.

ಒಟ್ಟು ರೂ. 1,49,02,082/- ಹಣವನ್ನು ಹಾಗು ಆರೋಪಿತನು ಆನ್‌ಲೈನ್ ವಂಚನೆಗೆ ಉಪಯೋಗಿಸಿದ ಒಂದು ವಿವೋ ಕಂಪನಿಯ ಮೊಬೈಲ್ ಜಫ್ತು ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಮಾನ್ಯ ಪೊಲೀಸ್ ಅಧೀಕ್ಷಕರು, ಬಳ್ಳಾರಿ ರವರು ಈ ಕಾರ್ಯಚರಣೆ ಮಾಡಿದ ಅಧಿಕಾರಿ/ಸಿಬ್ಬಂದಿಯವರಿಗೆ ಶ್ಲಾಘಿಸಿರುತ್ತಾರೆ.


News 9 Today

Leave a Reply