ಶಾಲೆಯ ಬಸ್ಸು ಗಳ ಅಥವಾ ಜಾನುವಾರಗಳ ವಾಹನವೇ,ಮಕ್ಕಳು ಎಷ್ಟು ಸುರಕ್ಷಿತವಾಗಿ ಶಾಲೆ ಗೆ ಹೋಗುತ್ತಾ ಇದ್ದಾರೆ??
ಬಳ್ಳಾರಿ (24) ನಗರದ ಪ್ರತಿಷ್ಠಿತ ಶಾಲೆಯ ಒಂದು ವಾಹನದಲ್ಲಿ 80 ಮಕ್ಕಳು ಮೇಲೆ ಪಟ್ಟು ಮಕ್ಕಳನ್ನು ತೆಗೆದುಕೊಂಡು ಬರುವ ಘಟನೆ ನಡೆದಿದೆ. ನಗರದ ಶ್ರೀ ಗುರು ತಿಪ್ಪೇರುದ್ರ ಶಾಲೆ ಮತ್ತು ಕಾಲೇಜು (SGT)ಬಸ್ಸು ಗಳಲ್ಲಿ, ಲೆಕ್ಕಕ್ಕೆ ಮೀರಿ ಶಾಲೆ ಮಕ್ಕಳನ್ನು ತೆಗೆದುಕೊಂಡು ಬರುತ್ತಿದ್ದಾರೆ, ಮಂಗಳವಾರ ಮೋಕಾ ರಸ್ತೆಯ ಶಾಲೆ ಆವರಣದಲ್ಲಿ ಬಸ್ಸು ಗಳಲ್ಲಿ ಮಕ್ಕಳು ನಿಂತು ಕೊಂಡು ತುಂಬಾ ಲೋಡ್ ದಿಂದ ಬರುತ್ತಿದ್ದ ಬಸ್ಸು ಗಳನ್ನು ನೋಡಿ ಎಷ್ಟು ಮಕ್ಕಳು ಇದ್ದಾರೆ ಎಂದು ಕೌಂಟ್ ಮಾಡಲಾಗಿದೆ,ಒಂದು ಬಸ್ಸು ಯಲ್ಲಿ, 80 ಮೇಲ್ಪಟ್ಟು,ಇನ್ನೂ ಉಳಿದ ಬಸ್ಸು ಯಲ್ಲಿ 70 ಮಕ್ಕಳು ಮೇಲ್ಪಟ್ಟು ಇದ್ದಾರೆ. ಮಕ್ಕಳು ಒಬ್ಬರು ಮೇಲೆ ಒಬ್ಬರು ಎದ್ದು ಬಿದ್ದು ಕೊಂಡು ಕೂತು ನಿಂತಿರುವ ದೃಶ್ಯ ಗಳು ಕಂಡುಬಂದಿವೆ, ಬಸ್ಸು ನಲ್ಲಿ 45 ಆಸನದ ವ್ಯವಸ್ಥೆ ಇರುತ್ತದೆ ಆದರೆ ಇವರಿಗೆ ಇದು ಯಾವುದು ಲೆಕ್ಕಕ್ಕೆ ಇಲ್ಲ.ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಇದ್ದಾರೆ,ದುಬಾರಿ ಶಾಲೆ ಫೀಜ್ ಗಳು ತೆಗೆದುಕೊಂಡು, ಮಕ್ಕಳಿ ಗೆ ಸೂಕ್ತ ವಾಹನ ವ್ಯವಸ್ಥೆ ಇಲ್ಲದೆ ಇತಿಮಿತಿಗಳನ್ನು ಮೀರಿ ಮಕ್ಕಳನ್ನು ಕರೆದುಕೊಂಡು ಬರುವುದು ,ಎಷ್ಟು ಸೂಕ್ತ, ಏನಾದರೂ ಅಪಾಯಗಳು ನಡೆದರೆ ಜವಾಬ್ದಾರಿ ಯಾರು ಎನ್ನುವುದು ಪ್ರಶ್ನೆ. ಮಾಡುವಂತಹದ್ದ ಆಗಿದೆ.ಇದು ಶಾಲೆ ಬಸ್ಸ ಅಥವಾ ಜಾನುವಾರುಗಳ ಸಾಗಣೆ ಮಾಡುವ ವಾಹನವಾ ಎನ್ನುವ ತಿಳಿಯದಂತೆ ಆಗಿದೆ.