This is the title of the web page
This is the title of the web page

Please assign a menu to the primary menu location under menu

State

ಕಲಬುರಗಿ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಮಾಡಿಕೊಳ್ಳಳಿ,ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ದಿಂದ ನಮಗೆ ಅನ್ಯಾಯ!? ಪ್ರಶ್ನೆ ಮಾಡುವ ಲೀಡರ್ ಗಳು ಇಲ್ಲ.ನಮ್ಮ ಜಿಲ್ಲೆಯ ದುರಂತ!!

ಕಲಬುರಗಿ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಮಾಡಿಕೊಳ್ಳಳಿ,ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ದಿಂದ ನಮಗೆ ಅನ್ಯಾಯ!? ಪ್ರಶ್ನೆ ಮಾಡುವ ಲೀಡರ್ ಗಳು ಇಲ್ಲ.ನಮ್ಮ ಜಿಲ್ಲೆಯ ದುರಂತ!!

ಕಲಬುರಗಿ ಕರ್ನಾಟಕ ಅಭಿವೃದ್ಧಿ ಮಂಡಳಿ ಎಂದು ಮಾಡಿಕೊಳ್ಳಳಿ,ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ದಿಂದ ನಮಗೆ ಅನ್ಯಾಯ!? ಪ್ರಶ್ನೆ ಮಾಡುವ ಲೀಡರ್ ಗಳು ಇಲ್ಲ.ನಮ್ಮ ಜಿಲ್ಲೆಯ ದುರಂತ!!  ಬಳ್ಳಾರಿ-ವಿಜಯನಗರ ಜಿಲ್ಲೆಗಳಿಗೆ ಅನುದಾನದಲ್ಲಿ ತಾರತಮ್ಯ- ಪ್ರತಾಪ್ ರೆಡ್ಡಿ ಆರೋಪ

ಬಳ್ಳಾರಿ:ಸೆ,25; ವಿಭಜಿತ ಬಳ್ಳಾರಿ-ವಿಜಯನಗರ ಜಿಲ್ಲೆಗಳಿಗೆ 2024-25 ನೇ ಸಾಲಿನ 18 ನೇ ಸಚಿವ ಸಂಪುಟ ಸಭೆಯಲ್ಲಿ ಅನುದಾನ ತಾರತಮ್ಯ ಮಾಡಿರುವ ಸರಕಾರದ ಕ್ರಮವನ್ನು ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ ಖಂಡಿಸಿದ್ದಾರೆ.

ನಗರದ ಮೋಕ ರಸ್ತೆಯ ಖಾಸಗಿ ಕಾಲೇಜಿನ ಅವರ ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಎರಡು ವಿಭಜಿತ ಬಳ್ಳಾರಿ-ವಿಜಯನಗರ ಜಿಲ್ಲೆಗಳಿಗೆ ನಯಾ ಪೈಸೆಯ ಅನುದಾನವು ನೀಡದೆ ಸರಕಾರ ವಂಚನೆ ಮಾಡಿದೆ.

ಬರೀ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ನೀಡಿ ನಮ್ಮ ಭಾಗದ ಜಿಲ್ಲೆಗಳಿಗೆ ಅನ್ಯಾಯ ಮಾಡಿದೆ ಹಾಗಾಗಿ ಕಲ್ಯಾಣ ಕರ್ನಾಟಕದ ಬದಲು ಕಲಬುರಗಿ ಕರ್ನಾಟಕ ಎಂದು ಮಾಡಿ ಎಂದು ಸರಕಾರದ ವಿರುದ್ಧ ಪ್ರತಾಪ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯನಗರ-ಬಳ್ಳಾರಿ ಜಿಲ್ಲೆಗಳು ಯಾವಾಗ ವಿಭಜಿತವಾದವು ಅಲ್ಲಿಂದ ಎರಡು ಜಿಲ್ಲೆಗಳ ಅಭಿವೃದ್ಧಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅನುದಾನ ನೀಡುತ್ತಿಲ್ಲ ಬರೀ ಕಲಬುರಗಿ ಹಾಗೂ ಬೀದರ್ ಗೆ ಮಾತ್ರ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸೀಮಿತವಾಗಿದೆ.

ಸರಕಾರದ ಮಲತಾಯಿ ಧೋರಣೆ ನೀತಿಯನ್ನ ಖಂಡಿಸಿದ ಅವರು ನಮ್ಮ ಈ ಎರಡು ಜಿಲ್ಲೆಗಳ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.

ಎರಡು ಜಿಲ್ಲೆಗಳಿಗೆ ನಾಯಕತ್ವದ ಕೊರತೆ ಇದೆ, ಎರಡು ಜಿಲ್ಲೆಗಳಲ್ಲಿ ಸರಿಯಾಗಿ ಲೀಡರ್ ಗಳೇ ಇಲ್ಲ, ಇಲ್ಲಿನ ಜನಪ್ರತಿನಿಧಿಗಳಿಗೆ ಹೋರಾಟದ ಮನೋಭಾವನೇ ಇಲ್ಲ ಇನ್ನು ಪ್ರತಿಪಕ್ಷಗಳು ಇದವೋ ಇಲ್ಲವೋ ಗೊತ್ತಿಲ್ಲ. ಇಲ್ಲಿ ಎಲ್ಲಾ ಅಡ್ಜೆಸ್ಟ್ ಮೆಂಟ್ ರಾಜಕೀಯ ಹೀಗಾಗಿ ನಮ್ಮ ಈ ಎರಡು ಜಿಲ್ಲೆಗಳ ಗತೀ ಏತಿ ಮುಂದಿನ ನಮ್ಮ ಮಕ್ಕಳ ಭವಿಷ್ಯವೇನು ಎಂದು ಆತಂಕ ವ್ಯಕ್ತಪಡಿಸಿದರು.

ಅನುದಾನದಲ್ಲಿನ ತಾರತಮ್ಯಯ ವಿರುದ್ಧ ಸರಕಾರಕ್ಕೆ ಪತ್ರಬರೆಯುವುದಾಗಿ ಹೇಳಿದ ಅವರು ಜಿಲ್ಲೆಯಲ್ಲಿನ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಅಧಿಕಾರಿಗಳು ಕಛೇರಿಗಳು ಬಿಟ್ಟು ಫೀಲ್ಡಿಗೆ ಹೋಗುತ್ತಿಲ್ಲ. ಜಿಲ್ಲಾಧಿಕಾರಿಗಳು, ತಹಶಿಲ್ದಾರರು, ಕಂದಾಯ ಆಯುಕ್ತರು ಏನ್ ಮಾಡ್ತೀದ್ದಾರೆ. ಅಧಿಕಾರಿಗಳು ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದರು.

ಇವತ್ತಿನ ರಾಜಕೀಯ ನಾಯಕರಿಗೆ ಹೋರಾಟದ ಗುಣಗಳೇ ಇಲ್ಲ ಫೋಟೋ ವಾಟ್ಸಪ್ ಗಾಗಿ ಸೋಶಿಯಲ್ ಮೀಡಿಯಾಗಾಗಿ ಹೋರಾಟ ಮಾಡ್ತಾರೆ ಯಾವುದೇ ವಿಷಯವನ್ನ ಲಾಜಿಕ್ ಎಂಡ್ ಗೆ ತೆಗೆದುಕೊಂಡು ಹೋದ ಉದಾಹರಣೆಗಳೇ ಇಲ್ಲ ರಾಯಲ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಹತ್ತು ನಿಮಿಷ ದಿಕ್ಕಾರ ಕೂಗಿ ಫೋಟೋ ಸೆಷನ್ ಮುಗಿದ ಬಳಿಕ ಹೋರಾಟ ಮುಗಿತು. ಇಂತಹ ಹೋರಾಟವನ್ನ ಹೋರಾಟ ಅಂತ ಕರೆಯಲು ಸಾಧ್ಯವೇ ಎಂದು ಹೋರಾಟ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

ಎಂ.ವೈ.ಘೋರ್ಪಡೆ, ಎಂ.ಪಿ.ಪ್ರಕಾಶ್ ರವರು ಇಲ್ಲದ ಎರಡು ಜಿಲ್ಲೆಗಳು ಅನಾಥವಾಗಿವೆ ಎರಡು ಜಿಲ್ಲೆಗಳಲ್ಲಿ ಸರಿಯಾದ ಲೀಡರ್ ಗಳೇ ಇಲ್ಲ ಅಭಿವೃದ್ಧಿ ಬಗ್ಗೆ ಮಾತನಾಡುವವರಿಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ಪಕ್ಷದ ನಾಯಕರು, ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಚರ್ಚಿಸಿ ಹೋರಾಟ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.ಇಪ್ಪತ್ತು ನಾಲ್ಕು ತಾಸುಗಳು ದರ್ಶನ ಅವರ ದಿನಚರಿ ಗಳು ಮೇಲೆ ಫೋಕಸ್ ಮಾಡುತ್ತಿರುವ ಮಾಧ್ಯಮ ಗಳು,ಇಂತಹ ವಿಚಾರ ಗಳನ್ನು ಬಿತ್ತರಿಸುವ ದಲ್ಲಿ ವಿಫಲ ವಾಗಿದ್ದಾವೇ,ಎಂದರು.5.ಸಾವಿರ ಕೊಟಿ ಅನುದಾನ ನಮ್ಮ ಜಿಲ್ಲೆ ಗಳು ಗೆ ಶೂನ್ಯ. ಜಿಲ್ಲೆ ಗಳು ವಿಭಜನೆ ಆದಮೇಲೆ, ಸಂಪೂರ್ಣ ಸರ್ವನಾಶ ಅಗಿದ್ದಾವೆ.ನಮ್ಮ ಬಳಿ ಸಂಪನ್ಮೂಲ ಗಳು ಇದ್ದು ಅಭಿವೃದ್ಧಿ ಆಗುತ್ತಾನೆ ಇಲ್ಲ.ನಾಳೆ ನಮ್ಮ ಮಕ್ಕಳು ಭವಿಷ್ಯ, ಏನು ಅನ್ನವದು ಚಿಂತನೆ ಮಾಡಬೇಕು ಅಗಿದೆ. ವಿಶ್ವವಿದ್ಯಾಲಯ ಗಳು ನಮ್ಮ ಬಳಿ ಇದ್ದರೆ ಅದಕ್ಕೆ ಸದಸ್ಯರು ಬೇರೆ ಜಿಲ್ಲೆ ಯವರು,ಶಿವಮೊಗ್ಗದ ಅವರೆಗೆ ಆದ್ಯತೆ ನೀಡುತ್ತಾರೆ.ಈ ಹಿಂದೆ ಕೆಲ ವಿಚಾರ ಗಳಲ್ಲಿ ವಾಣಿಜ್ಯ ಕೇ ಗಾರಿಕೆ ಚೇಂಬರ್ ಆಫ್ ಕಾಮರ್ಸ್ ಚನ್ನಾಗಿ ಕೆಲಸ ಮಾಡುತ್ತ ಇತ್ತು ಅದು ಕೂಡ ವಿಕ್ ಅಗಿದೆ ಅಲ್ಲಿ ರಾಜಕಾರಣಿಗಳ ಕಾಮರ್ಸ್ ಅಗಿದೆ ಎಂದು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.ನಮ್ಮ ಭಾಗದ ಶಾಸಕರು ಸಂಪೂರ್ಣವಾಗಿ ವಿಫಲವಾಗಿಲ ವಾಗಿದ್ದಾರೆ.ನಾವು ಯಾರು ಮೇಲೆ ಆರೋಪಗಳನ್ನು ಮಾಡುತ್ತ ಇಲ್ಲ ಅನ್ಯಾಯ ತಾರತಮ್ಯ ವನ್ನು ಪ್ರಶ್ನೆ ಮಾಡಿ ಅಭಿವೃದ್ಧಿ ಗೆ ಮಾದರಿಯಾಗಿ ಎಂದು ನಮ್ಮ ಕಾಳಜಿ ಅಷ್ಟೇ.ಜಿಲ್ಲೆ ಯಲ್ಲಿ ಹೋರಾಟ ಗಾರರು ಇಲ್ಲದಂತೆ ಅಗಿದೆ. ಅಷ್ಟೋ ಇಷ್ಟೋ SFI,ಇನ್ನೂ ಮುಂತಾದ ಕಮ್ಯುನಿಸ್ಟ್ ಗಳು ಅವರ ಗುರಿ ತಲುಪುವ ಹೊರಗೆ ಹೋರಾಟ ಮಾಡುತ್ತಾರೆ ಸಂತೋಷ ಇದೆ, ಆದರೆ ನಮ್ಮ ಹೋರಾಟ ಗಳು ಇಲ್ಲ ಆಸಕ್ತಿ ಇಲ್ಲ, ಅಪಷೇಂಟ್ ಜಾಸ್ತಿ ಇದೆ.!!ಬಳ್ಳಾರಿ ಪಾಲಿಕೆ, ಬುಡಾ ಹಗರಣಗಳು ಪ್ರಪಂಚ ನೋಡುತ್ತ ಇದೇ. ಒಂದಾನೊಂದು ಕಾಲದಲ್ಲಿ ನೂರು ದಿನಗಳು ರಿಜಿಸ್ಟರ್ ಕಚೇರಿ ಸ್ಟಾಪ್ ಮಾಡಲಾಗಿತ್ತು. ಇದು ಪ್ರತಾಪ್ ರೆಡ್ಡಿ ಗೋಸ್ಕರ ಅಲ್ಲ,ಸೋಷಿಯಲ್ ಜೇಷ್ಟಿಸ್ ರೀ..ಎಂದರು. ಹಿಂದುಳಿದ ಜಿಲ್ಲೆ ಅನ್ನತ್ತಾ ಯಾಲ್ಲವು ಕಲಬುರಗಿ ಗೆ ಪಡೆದು ಕೊಂಡಿದ್ದಾರೆ ಎಂದರು. ಯಾಲ್ಲವು ಅವರೆ ಪಡೆದರೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಲಿ ಬೇಡ ಕಲಬುರಗಿ ಅಭಿವೃದ್ಧಿ ಮಂಡಳಿ ಎಂದು ಮಾಡಿಕೊಳ್ಳಲಿ,ಇನ್ನೂ ಎನು ಮಾಡೊದು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಖಂಡ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.


News 9 Today

Leave a Reply