*ಶ್ರೀ ರಾಮುಲು ಅವರ ಆರೋಗ್ಯ ವಿಚಾರಿಸಿದ ವಿಜಯೇಂದ್ರ ಅವರು ತಕ್ಷಣವೇ ಗುಣಮುಖ ರಾಗಿ ಸಂಡೂರು ಚುನಾವಣೆಯಲ್ಲಿ, ಪಾಲ್ಗೊಳ್ಳಲು ಸೂಚನೆ.!!*
ಬಳ್ಳಾರಿ (24) ಕೆಲ ದಿನಗಳು ದಿಂದ ಬಳ್ಳಾರಿ ಪ್ರಭಾವಿ ನಾಯಕರು ಆಗಿರುವ ಬಿ.ಶ್ರೀ ರಾಮುಲು ಅವರು ಜಾಸ್ತಿ ಕಾಣಿಸಿಕೊಳ್ಳದೆ, ಅಲ್ಲಿ ಅಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದರು, ಇತ್ತೀಚೆಗೆ ತಮ್ಮ ಸೋದರ ಸಮಾನವಾದ ರಾಜಕೀಯದ ಜೀವನ ಕೊಟ್ಟ ಗಣಿ ದಣಿ ಗಾಲಿ ಜನಾರ್ದನ ರೆಡ್ಡಿ ಅವರು ಕೂಡ ಬಳ್ಳಾರಿ ಗೆ ಬಂದ ಸಮಯದಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಇದು ಒಂದಿಷ್ಟು ಪಕ್ಷದ ವಲಯದಲ್ಲಿ ನೂರಾರು ಪ್ರಶ್ನೆ ಗಳು ಆರಂಭ ವಾಗಿದ್ದುವು.ತದನಂತರ ಅವರ ಆರೋಗ್ಯದ ವಿಚಾರ ಹಿನ್ನೆಲೆಯಲ್ಲಿ ಎಲ್ಲಿ ಕಾಣಿಸಿಕೊಂಡಿಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ದರು. ರೆಡ್ಡಿ ಗಾರು ಬಳ್ಳಾರಿ ಪ್ರವೇಶ ಮಾಡಿದ ದಿನದಿಂದ ಕಾಲಿಗೆ ಚಕ್ರವನ್ನು ಕಟ್ಟಿಕೊಂಡು ಸಂಡೂರು ಚುನಾವಣೆಯಲ್ಲಿ ಸಮರ ಮಾಡುತ್ತ ಇದ್ದಾರೆ. ಈ ಹಿನ್ನೆಲೆ ಈಗಾಗಲೇ ಸಂಡೂರು ಚುನಾವಣೆ ಬಹುತೇಕ ಕಾಂಗ್ರೆಸ್ ವಿರುದ್ಧ ಅಲೇ ಹುಟ್ಟು ಕೊಂಡಿದೆ, ಬಿಜೆಪಿ ಕಡೆಗೆ ಗಾಲಿ ಗಾಳಿ ಬೀಸುವ ವಾತಾವರಣ ಸೃಷ್ಟಿ ಮಾಡಿದ್ದಾರೆ, ಅನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.ಆಡಳಿತ ಪಕ್ಷ ಬಹುತೇಕ ಗೆಲುವು ತಮಗೆ ಇರುತ್ತದೆ ಅನ್ನುವ ಆಲೋಚನೆ ಸರ್ವ ಸಾದಾರಣ, ಆದರೆ ತುಕರಾಂ ಕುಟುಂಬದ ರಾಜಕಾರಣ, ದಿಕ್ಕು ಬದಲಾವಣೆ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ,ವಿಜಯೇಂದ್ರ ಸಂಡೂರು ಚುನಾವಣೆ ಜಿಲ್ಲೆ ಗೆ ಆಗಮಿಸಿದ ಅವರು ಶ್ರೀ ರಾಮುಲು ಮನೆಗೆ ಆಗಮಿಸಿ ಆರೋಗ್ಯವನ್ನು ವಿಚಾರಿಸಿ ತಕ್ಷಣವೇ ಗುಣಮುಖ ರಾಗಿ ಸಂಡೂರು ಚುನಾವಣೆಯಲ್ಲಿ ಪಾಲ್ಗೊಳ್ಳಲು ಮನವಿ ಮಾಡಿ ,ಜಿಲ್ಲೆಯ ಕೆಲ ರಾಜಕೀಯದ ವಿದ್ಯಮಾನಗಳ ಕುರಿತು ಚರ್ಚೆಯನ್ನು ಮಾಡಿದ್ದಾರೆ ಎಂದು, ತಿಳಿದು ಬಂದಿದೆ. ಇತ್ತೀಚೆಗೆ ರಾಮುಲು ಅವರು ಕೂಡ ಕೂಡ್ಲಿಗಿ ಕ್ಷೇತ್ರದ ಕಡೆಗೆ ಗುರಿ ಇಟ್ಟಿದ್ದಾರೆ ಎಂಬುವುದು ಕೇಳಿ ಬರುತ್ತಿದೆ. ರಾಜಕಾರಣಿಗಳ ನಡೆ ಯಾವ ಸಮಯದಲ್ಲಿ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂದು, ಹೇಳಲು ಸಾಧ್ಯವಿಲ್ಲ.
News 9 Today > State > ಶ್ರೀ ರಾಮುಲು ಅವರ ಆರೋಗ್ಯ ವಿಚಾರಿಸಿದ ವಿಜಯೇಂದ್ರ ಅವರು ತಕ್ಷಣವೇ ಗುಣಮುಖ ರಾಗಿ ಸಂಡೂರು ಚುನಾವಣೆಯಲ್ಲಿ, ಪಾಲ್ಗೊಳ್ಳಲು ಸೂಚನೆ.!!
ಶ್ರೀ ರಾಮುಲು ಅವರ ಆರೋಗ್ಯ ವಿಚಾರಿಸಿದ ವಿಜಯೇಂದ್ರ ಅವರು ತಕ್ಷಣವೇ ಗುಣಮುಖ ರಾಗಿ ಸಂಡೂರು ಚುನಾವಣೆಯಲ್ಲಿ, ಪಾಲ್ಗೊಳ್ಳಲು ಸೂಚನೆ.!!
Bajarappa24/10/2024
posted on
