*ಇಸ್ಪೀಟ್ ಜೂಜಾಟದ ಅಂದರ್ ಬಾರ್ ಅಡ್ಡಮೇಲೆ ದಾಳಿ. ಲಕ್ಷಾಂತರ ರೂಪಾಯಿ ಗಳು ವಶಕ್ಕೆ,ಜೂಜಾಟದ ದಾಳಿಯ ಮಾಹಿತಿ ಹಂಚಿಕೊಂಡ ಪ್ರಥಮ ಎಸ್ಪಿ.!!*
ಬಳ್ಳಾರಿ:-(26)ಶುಕ್ರವಾರ ಬೆಳಗಿನ ಜಾವ 00:10 ಗಂಟೆಗೆ ಶ್ರೀ. ಎನ್ ಸತೀಶ್ ಪೊಲೀಸ್ ಇನ್ಸ್ ಪೆಕ್ಟರ್ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆ ರವರು ರಾತ್ರಿ ಗಸ್ತು ಕರ್ತವ್ಯದಲ್ಲಿ ರಾಘವೇಂದ್ರ ಕಾಲೋನಿಯಲ್ಲಿದ್ದಾಗ, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣಾ ಸರಹದ್ದಿನ ಸಂಗನಕಲ್ಲು ಗ್ರಾಮದ ಹತ್ತಿರವಿರುವ ಅಂಜುಮ್ ತಂದೆ ಮೆಹಬೂಬ್ ಭಾಷಾ ರವರ ಹೆಸರಿನಲ್ಲಿರುವ ಬಿ.ಎಂ.ಎಸ್ ಫಾರಂ ಹೌಸ್‌ನಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಎನ್ನುವ ನಸೀಬಿನ ಇಸ್ಟೇಟ್ ಜೂಜಾಟವಾಡುತ್ತಿರುತ್ತಾರೆಂದು ಮಾಹಿತಿ ಬಂದ ಮೇರೆಗೆ,ತಕ್ಷಣವೇ ಸಿಬ್ಬಂದಿಯನ್ನು ದಾಳಿ ಮಾಡುವಂತೆ ಎಸ್ಪಿ ಅವರು ಡಾ|| ಶೋಭಾರಾಣಿ. ವಿ.ಜೆ. ಐ.ಪಿ.ಎಸ್. ಎಸ್.ಪಿ ಅವರು ಸೂಚನೆ ನೀಡಿದ್ದು. ಶ್ರೀ. ವೆಂಕಟೇಶ್, ಡಿ.ಎಸ್.ಪಿ ಸಿರುಗುಪ್ಪ ಉಪ ವಿಭಾಗ, ಶ್ರೀ. ಎನ್. ಸತೀಶ್, ಪೊಲೀಸ್ ಇನ್ಸ್‌ಪೆಕ್ಟರ್, ಬಳ್ಳಾರಿ ಗ್ರಾಮೀಣ ಠಾಣೆ. ಪಿ.ಎಸ್.ಐ ಗಳಾದ ಶ್ರೀ. ವೈ. ಶಶಿಧರ್ ಗ್ರಾಮೀಣ ಠಾಣೆ, ಶ್ರೀ. ಕಾಳಿಂಗ ಎ. ಮೋಕ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ನನ್ನ ಮಾರ್ಗದರ್ಶನ ಮತ್ತು ನೇತೃತ್ವದಲ್ಲಿ ಬೆಳಗಿನ ಜಾವ 01:30 ಗಂಟೆಗೆ ದಾಳಿಮಾಡಿ ಹಣವನ್ನು ಪಣವಾಗಿಟ್ಟು, ಅಂದರ್ ಬಹಾರ್ ಎಂಬ ನಸೀಟಿನ ಜೂಜಾಟ ಆಡುತ್ತಿದ್ದ 19 ಜನರನ್ನು ದಾಳಿಮಾಡಿ ಹಿಡಿದು ಅವರಿಂದ ರೂ. 12,95,120/- ( ಹನ್ನೆರೆಡು ಲಕ್ಷ ತೊಬ್ಬಂತೈದು ಸಾವಿರ. ನೂರು ಇಪ್ಪತ್ತು ರೂಪಾಯಿಗಳು ) ಮತ್ತು 52 ಇಸ್ಟೇಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತುಮಾಡಿಕೊಂಡು 19 ಜನ ಆರೋಪಿತರು ಹಾಗು ಇಸ್ಪೀಟ್ ಆಡಲು ಫಾರಂ ಹೌಸ್ ನೀಡಿದ ಬಿಎಂಎಸ್ ಪಾರಂ ಹೌಸ್ ಮಾಲಿಕ ಅಂಜುಮ್ ರವರ ವಿರುದ್ಧ ಕಲಂ 79-80 ಕೆ.ಪಿ. ಯಾಕ್ಟ್ ರೀತ್ಯ ಕ್ರಮ ಜರುಗಿಸಲಾಗಿದೆ.
ಮೇಲ್ಕಂಡ ದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.
*ಜನರ ಮೆಚ್ಚುಗೆ ಪಡೆದ ಎಸ್ಪಿ.ಶೋಭರಾಣಿ* ಹೌದು ಸತ್ಯದ ವಿಚಾರ ಈವರೆಗೆ ಇಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ವಶಕ್ಕೆ ಪಡೆದ 19 ಜನರನ್ನು ಬಂಧನ ಮಾಡಿ ಬಿಡುಗಡೆ ಮಾಡಿದ್ದು, ಜನರ ಮೆಚ್ಚುಗೆ ಗಳಿಸಿದ್ದಾರೆ.
ಗ್ರಾಮೀಣ ಠಾಣೆಗಳ ದಿಂದ ಹಿಡಿದು ನಗರದ ಮದ್ಯದಲ್ಲಿ, ಇಸ್ಪೀಟು, ಓಸಿ,ಅಕ್ರಮ ದಂದೆಗಳು, ಕಳವು ಗಳು ವಂಚನೆ ಪ್ರಕರಣಗಳು ಗೆ ಬಳ್ಳಾರಿ ಕೇಂದ್ರ ಸ್ಥಾನ ವಾಗಿದೆ, ಗಲ್ಲಿ,ಗಲ್ಲಿ ಗಳಲ್ಲಿ ರಾಜಾರೋಷವಾಗಿ ನಡೆಯುತ್ತವೆ ದಂದೆಗಳು,ಜನರು ಬೇಸತ್ತು ಹೋಗಿದ್ದಾರೆ.
ಪ್ರತಿ ದಂದೆ ಪೋಲಿಸರ ಗಮನದಲ್ಲಿ ಇದೆ,ಅದರೆ ಇದು ಎಸ್ಪಿ ಹೊರತುಪಡಿಸಿ ಕೆಲ ನಿಷ್ಠಾವಂತ ಅಧಿಕಾರಿಗಳ ಗಮನಕ್ಕೆ ಇಲ್ಲದಂತೆ ಮಾಡುತ್ತ ಇದ್ದಾರೆ.
ಜಿಲ್ಲೆ ಗೆ ಕೇಲ ನೂತನ ಎಸ್ಪಿ ಗಳು ಬಂದಾಗ ಸ್ವಲ್ಪ ದಿನ ಕಡಿವಾಣ ಹಾಕಿ,ಮತ್ತೆ ಆರಂಭ ಮಾಡುತ್ತಾರೆ. ಅದರೆ ನೂತನಎಸ್ಪಿ ಯಾಗಿ ಬರುವ ಮುನ್ನವೇ ಇದ್ದ ಅಧಿಕಾರಿಗಳು ಗೆ ಯಾಲ್ಲವು ಗೊತ್ತು ಆದರೆ ಮೇಡಂ ಗೆ ಮಾಯ ಮಾಡುವ ಆಲೋಚನೆ ಆಗಿತ್ತು. ನೂತನ ಎಸ್ಪಿ ಶೋಭರಾಣಿ ಅವರು ಕೇಲ ದಿನಗಳು ಸುಮ್ಮನೆ ಇದ್ದು, ಇವರ ಆಟಗಳು ನೊಡಿ, ಫೀಲ್ಡ್ ಗೆ ಬಂದರು, ಇದರಲ್ಲಿ ಒಬ್ಬ ಅಧಿಕಾರಿ ರಾಜಕಾರಣಿಗಳ ಸೇವಕರು!!.ಇದರಿಂದ ವ್ಯವಸ್ಥೆ ಮಾರಕವಾಗಿ ಪರಿಣಮಿಸಿತ್ತು.
ಸರ್ಕಾರ ಕ್ಕೆ ದೂರು ಗಳು ಹೊಗಿದ್ದವು,ಇದರಿಂದ ಮೇಡಂ ಗೆ ಕಟ್ಟು ನಿಟ್ಟಿನ ಕ್ರಮ ಮಾಡುವಂತೆ ಆದೇಶ ಸಿಕ್ಕಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ.
ಈವರೆಗೆ ಇಸ್ಪೀಟು, ದಂದೆಗಳು ಮೇಲೆ ದಾಳಿ ಅಗಿದೆ ಆದರೆ ಬಳ್ಳಾರಿ ಯಲ್ಲಿ ಮಾತ್ರ ಮೊಟ್ಟಮೊದಲ ಬಾರಿಗೆ ಬಹಿರಂಗ ವಾಗಿ ದಾಳಿಯ ಮಾಹಿತಿ ಹಂಚಿಕೊಂಡ ಎಸ್ಪಿ.
ಈಹಿಂದೆ ಇಂತಹ ದಾಳಿ ವಿಚಾರ ಗಳು ಠಾಣೆಯ ಸಣ್ಣ ಸಿಬ್ಬಂದಿ ಗಳು ಕೂಡ ಮಾಹಿತಿ ಕೊಡದೇ ಪಬ್ಲಿಕ್ ಗೆ ಪಂಗನಾಮ ಹಾಕುತ್ತಾ ಇದ್ದರು.
ಅಕ್ರಮ ಚಟುವಟಿಕೆಗಳು ಬಳ್ಳಾರಿ ನಗರದ ಮನೆ, ಅಪಾರ್ಟ್ ಮೆಂಟ್ ಗಳಲ್ಲಿ ಹೊಟೇಲ್ ಗಳು ನಡೆಯುತ್ತಾ ಇದೇ.
ಅಂದರ್ ಬಾರ್ ಅನ್ನುವ ಇಸ್ಪೀಟು ದಂದೆಗಳು ತೂಂಭ ಅಪಾಯಕಾರಿ ಜೂಜಾ.ಇದನ್ನು ಗ್ರಾಮೀಣ ,ತಾಲ್ಲೂಕಿನ ಪ್ರದೇಶಗಳಲ್ಲಿ ದೊಡ್ಡ ಮಟ್ಟದಲ್ಲಿ ನಿರ್ವಹಣೆ ಮಾಡುತ್ತಾರೆ. ಮೊದಲು ಆಪ್ರದೇಶದ ಠಾಣೆ ಗಳಲ್ಲಿ ಒಪ್ಪಂದ ಮಾಡಿಕೊಂಡು ಆರಂಭ ಮಾಡುತ್ತಾರೆ, ಅನ್ನುವ ಆರೋಪ ಇದೇ. ಸಂಗನಕಲ್ಲು ಫಾಮ್ ಹೌಸ್ ದಲ್ಲಿ ಇದು ಎರಡನೇ ಬಾರಿ ದಾಳಿ ಅನ್ನುತ್ತಾರೆ. ಈ ದಂದೆ ಮಾಡುವ ಅವರು ಕೆಲ ದಿನಗಳ ಹಿಂದೆ ಜಿಂದಾಲ್ ಗೆ ಬಂದ ಒಬ್ಬ ರಾಜಕಾರಣಿ ಜೊತೆಯಲ್ಲಿ ಮಾತುಕತೆ ಮಾಡಿಕೊಂಡಿದ್ದಾರೆ ಏಂದು, ಕೇಳಿ ಬರುತ್ತದೆ.
ಇಸ್ಪೀಟು ಅಡ್ಡಗಳು ದಿಂದ ಮಾಮೂಲು ಪಡೆಯುತ್ತಾರೆ ಅಂತೆ.ಓ.ಸಿ.ಗಾಂಜಾ ಇನ್ನೂ ನಿಯಂತ್ರಣ ಆಗಿಲ್ಲ. ಓ.ಸಿ ಬಿಟ್ ಕೂಡ ಕೇಲ ಠಾಣೆಯ ಪೇದೆಗಳು ತೆಗೆದುಕೊಂಡು ಬಿಜಿನೆಸ್ ಮಾಡುತ್ತ ಇದ್ದಾರೆ ಅನ್ನುವ ಮಾಹಿತಿ ಕೂಡ ಕೇಳಿ ಬರುತ್ತದೆ,ಅಂದರೆ ವ್ಯವಸ್ಥೆ ಯಾವ ಮಟ್ಟದಲ್ಲಿ ಇದೇ ಎಂದು ಸಾರ್ವಜನಿಕರ ಪ್ರಶ್ನೆ ಅಗಿದೆ. ನೂತನ ಎಸ್ಪಿ ಇವುಗಳ ಗೆ ಕಡಿವಾಣ ಹಾಕುವ ಕಟ್ಟುನಿಟ್ಟಿನ ಕ್ರಮಕ್ಕೆ ಹೆಜ್ಜೆ ಹಾಕಿದ್ದಾರೆ, ಇದಕ್ಕೆ ಸಾರ್ವಜನಿಕರ ಸಹಕಾರ ಕೊಡಬೇಕು ಅಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)