*ಕಾಂಗ್ರೆಸ್ ಗೆ ಒಳ ಮೀಸಲಾತಿಯ ಭಯದ ಆಂತಕ,ಲಾಡ್ ಮಾಡಿದ ಮೀಟಿಂಗ್ ನಿಂದ ಕೆಲ ಸಮಾಜಗಳಲ್ಲಿ ಆಕ್ರೋಶ.!! ಚುನಾವಣೆ ಪ್ರಚಾರಕ್ಕೆ ಜಿಲ್ಲೆಯ ನಾಯಕರಿಗೆ ಬೆಲೆ ಇಲ್ಲ!!* ಬಳ್ಳಾರಿ /ಸಂಡೂರು, ಈಗಾಗಲೇ ರಾಜ್ಯದಲ್ಲಿ ಒಳ ಮೀಸಲಾತಿ ಗೊಂದಲ ಹತ್ತಿಉರಿಯ ಸಮಯದಲ್ಲಿ ಸಂತೋಷ ಲಾಡ್ ಅವರು 29 ರಂದು ರಾತ್ರಿ ಜಿಂದಾಲ್ ಸಭಾಂಗಣದಲ್ಲಿ ರಾತ್ರಿ10 ಗಂಟೆ ಸಮಯದಲ್ಲಿ ಕೇಲ ದಲಿತ (ಮಾದಿಗ)ದಂಡೋರ ಸಮಾಜದವರೊಂದಿಗೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ಬಗ್ಗೆ ಮಾತನಾಡುತ್ತಾ, ಅತೀ ಶ್ರೀಘ್ರದಲ್ಲಿ ಜಾರಿ ಮಾಡುತ್ತಿವೆ, ಈಗಾಗಲೇ ಮುಖ್ಯಮಂತ್ರಿ ಎಲ್ಲಾರೂ ಸಮ್ಮತಿಸಿದ್ದಾರೆ ಎಂದು ಹೇಳಿದ್ದು, ಇನ್ನೂ ಉಳಿದ ಸಮಾಜದಾವರ ಆಕ್ರೋಶ ಕ್ಕೆ ಗುರಿಯಾಗಿ ವಿರೋಧ ಮಾಡಿಕೊಂಡಿದ್ದಾರೆ. ಸಂತೋಷ ಲಾಡ್ ಮಾತನಾಡಿದ ಅದರಲ್ಲಿ ಭೋವಿ,ಬಂಜಾರ,ಕೊರಮ ,ಕೊರಚ ಜಾನಂಗದ ಅನ್ಯಾಯ ಮತ್ತು ವಂಚನೆ ಮಾಡುತ್ತಿದ್ದಾರೆ ಎಂದು… ಬಂಧುಗಳೆ ಜಾಗ್ರತರಾಗರಿ… ಬೋವಿ ಸಮಾಜದ ಗ್ರೂಪ್ ಗಳಲ್ಲಿ ಚರ್ಚೆ ನಡೆಯುತ್ತಿದೆ, ಸಾಲು ಸಾಲಾಗಿ ಟೀಕೆ ಟಿಪ್ಪಣಿಗಳು ಆರಂಭ ಮಾಡಿದ್ದಾರೆ. ಸಂಡೂರು ತಾಲೂಕಿನಲ್ಲಿ ಭೋವಿ ಸಮಾಜದ ಮತಗಳು ಅಂದಾಜು 15 ಸಾವಿರ ದಿಂದ 16 ಸಾವಿರ ಮತಗಳು ಇದ್ದಾವೆ, ಆದರೆ ಇವರ ಜೊತೆಯಲ್ಲಿ ಇನ್ನೂ ಉಳಿದ ಸಮಾಜದ ಅವರು ಕೂಡ ಆಕ್ರೋಶ ದಲ್ಲಿ ಇದ್ದಾರೆ ಎಂದು ಸಮಾಜದ ಮುಖಂಡರು ಕೆಲವರು ದೂರವಾಣಿ ಮುಖಾಂತರ ತಿಳಿಸಿದ್ದಾರೆ. ನಾವು ಕೆಲವರು ಕಾಂಗ್ರೆಸ್ ನಲ್ಲಿ ಇದ್ದಿವಿ ಪಕ್ಷದ ಕೆಲಸ ಮಾಡುತ್ತೀದ್ದಿವಿ, ಆದರೆ ಸಮಾಜಗಳಿಗೆ ಅನ್ಯಾಯ ಆದರೆ ಯಾರು ಸಹಿಸಿ ಕೊಳ್ಳಲು ಸಾಧ್ಯವಿಲ್ಲ, ಇದು ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದರು. ಸಂತೋಷ ಲಾಡ್ ಮಾಡಿದ ಮೀಟಿಂಗ್ ಎಡವಟ್ಟು ಆಗಿದೆ ಸಮಾಜಕ್ಕೆ ಉತ್ತರ ಕೊಡಲು ಆಗುತ್ತಾ ಇಲ್ಲವೆಂದು ನೋವು ವ್ಯಕ್ತಪಡಿಸಿದರು. ಕೆಲ ಭೋವಿ ಮುಖಂಡರು ನೇರವಾಗಿ ಸಂತೋಷ್ ಲಾಡ್ ಪೋನ್ ಕಾಲ್ ಗೆ ಸಂಪರ್ಕ ಮಾಡಿದರೆ ಲಾಡ್ ಪೋನ್ ಗಪ್ ಚುಪ್ ಆಗಿದೆ!!. ಕೆಲ ಮೇಸೆಜ್ ಗಳು ಕೂಡ ಹಾಕಿದ್ದಾರೆ,ಆದರೆ *ಲಾಡ್ ಧಣಿ* ಗೊಂದಲ ವಾತಾವರಣ ದಲ್ಲಿ ಇದ್ದಾರೆ ಸಮಾಜದ ಜನರು ಎಲ್ಲಿ ನಿಲ್ಲಿಸಿ ಪ್ರಶ್ನೆ ಮಾಡೊತ್ತರೋ ಅನ್ನುವ ವಾತಾವರಣ ದಲ್ಲಿ ಇದ್ದಾರೆ.ಈಗಾಗಲೇ ಮೊನ್ನೆ ಬಸಾಪುರದಲ್ಲಿ ದಲಿತ ಮಹಿಳೆಯರು ಲಾಡ್ ಮುಂದೆ ತೂಕರಾಂ ಅವರಿಗೆ ಕ್ಲಾಸ್ ತೆಗೆದುಕೊಂಡು, ಏನು ಅಭಿವೃದ್ಧಿ ಮಾಡಿಲ್ಲ ಸುಮ್ಮನೆ ಸುಳ್ಳು ಹೇಳುವುದು ತಮಗೆ ಪಾಠ ಆಗಿದೆ ನಮ್ಮ ವಾತಾವರಣ ನೋಡಿ,ನಿಮ್ಮ ಮನೆಗಳ ಮುಂದೆ ಈರೀತಿ ಇದ್ದರೆ ತಾವು ಜೀವನ ಮಾಡುತ್ತಿರಾ ಎಂದು ಪ್ರಶ್ನೆ Components ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಲಾಡ್ ಗೆ ಮುಜುಗರ ಕ್ಕೆ ಗುರಿಯಾಗಿ ಅಲ್ಲಿಂದಲೇ ವಾಪಸ್ಸು ಆಗಿದ್ದು ಪ್ರಚಾರ ಮುಟುಕು ಗೊಳಿಸಿದ್ದು ತಿಳಿದು ವಿಚಾರ ಆಗಿದೆ. *ಸಂಡೂರು ಚುನಾವಣೆ ಗೆ ಬಳ್ಳಾರಿ ಜಿಲ್ಲೆಯ ನಾಯಕರಿಗೆ ಬೆಲೆ ಇಲ್ಲ.* ಸಂಡೂರು ಬಳ್ಳಾರಿ ಜಿಲ್ಲೆಯಲ್ಲಿ ಇದೆ, ಹೊರ ದೇಶದಲ್ಲಿ ಇಲ್ಲ ಆದರೆ ಉಪ ಚುನಾವಣೆ ಆರಂಭ ದಿಂದ ಜಿಲ್ಲೆ ನಾಯಕರಿ ಗೆ ಶಾಸಕರಿಗೆ ಕವಡೆ ಕಾಸ್ ಕಿಮ್ಮತ್ ಇಲ್ಲದಂತೆ ಆಗಿದೆ, ಯಾವುದೇ ಬ್ಯಾನರ್ ನಲ್ಲಿ ಆಗಲಿ, ಪ್ರಚಾರ ಕ್ಕೆ ಅವರಿಗೆ ಆಹ್ವಾನ ಆಗಲಿ ಇಲ್ಲವೆಂದು ಪಕ್ಷದ ವಲಯದಲ್ಲಿ ಬಹಿರಂಗ ಗೊಂಡಿದೆ, ಲಾಡ್ ಬೇರೆ ಜಿಲ್ಲೆಯ ಸಚಿವರು ಅವರಿ ಗೆ ಯಾಕೆ ಆದ್ಯತೆ ನೀಡುತ್ತಾರೆ, ಕೇವಲ ರಾಜ್ಯದ ಕೇಂದ್ರ ಮಟ್ಟದ ನಾಯಕರ ಭಾವ ಚಿತ್ರ ಗಳು ಹೊರತು ಪಡಿಸಿ ಜಿಲ್ಲೆಯ ಪ್ರಮುಖರ ಪೋಟೋ ಗಳು ಇಲ್ಲ..ಇದು ಸಂತೋಷ ಲಾಡ್ ಮತ್ತು ತೂಕರಾಂ ಅವರಿಗೆ ಮಾತ್ರವೇ ಚುನಾವಣೆ ಆಗಿದೆ ಎಂದು ಕೇಳಿ ಬರುತ್ತದೆ. ಜಿಲ್ಲೆಯ ನಾಯಕರಿಗೆ ಯಾಕೆ ಕಡೆಗಣಿಸಿದ್ದಾರೆ ಎಂದು ಇದರಲ್ಲಿ ಮರ್ಮ ಇದೇ ಎಂದು ಉಪ ಚುನಾವಣೆ ತದನಂತರ ರಾಜ್ಯದಲ್ಲಿ, ರಾಜಕಾರಣದ ಚಿತ್ರಣವು ಬದಲಾವಣೆ ನತ್ತ ನಡೆಯುತ್ತದೆ,ಅದರಲ್ಲಿ ಸಂತೋಷ ಲಾಡ್ ಗೇಮ್ ಪ್ಲಾನ್ ಬೇರೆ ಇದೇ ಅನ್ನವದು ಸಾರ್ವಜನಿಕ ಪಕ್ಷದ ವಲಯದಲ್ಲಿ ಕೇಳಿ ಬರುತ್ತದೆ. ಉಪ ಚುನಾವಣೆ ಒಂದು ಕಡೆಗೆ ಸಮಾಜಗಳ ಆಕ್ರೋಶ, ಮತ್ತೊಂದು ಕಡೆ ಪಕ್ಷದ ಮುಖಂಡರು ಕಡೆಗಣೆ, ಮತ್ತೊಂದು ಕಡೆ *ಗಾಲಿ ಜನಾರ್ದನ ರೆಡ್ಡಿ ಅಬ್ಬರ* ಸರ್ಕಾರದ ವಿಫಲತೆ ಗಳ ಸುಳಿಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ತುಕಾರಾಂ ಗೆ ಕೊಟ್ಟಿದ್ದು, ಕಾರ್ಯಕರ್ತ ರಲ್ಲಿ ಅಸಮಾಧಾನ, ಸಂತೋಷ ಲಾಡ್ ಗೆ ದಿಕ್ಕು ತೋಚದ ವಾತಾವರಣ ಆಗಿದೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)