*ಗಣಿನಾಡುಗೆ ಮುಖ್ಯಮಂತ್ರಿ ಗಳು,ಠಾಣೆಗಳು ಕಚೇರಿ ಗಳು,ಖಾಲಿ,ಖಾಲಿ.!!* ಬಳ್ಳಾರಿ, ರಾಜ್ಯ ದಲ್ಲಿ ನಡೆಯುವ ಕೇಲ ಉಪ ಚುನಾವಣೆ ಗಳು ಕಾಂಗ್ರೆಸ್ ಪಾರ್ಟಿ ತುಂಬಾ ಸುಲಭವಾಗಿ ಗೆಲ್ಲಬಹುದು ಎನ್ನುವ ಕನಸು ಮಾಯ ವಾಗಿದೆ. ಹಲವಾರು ಯೋಜನೆ ಗಳು ಎಲ್ಲವು ಉಚಿತ ಉಚಿತ ಕೊಟ್ಟರು, ಆಡಳಿತ ಸರ್ಕಾರ ಕ್ಕೆ ಜನರಿಂದ ಅಂದುಕೊಂಡ ರೀತಿಯಲ್ಲಿ ಸ್ಪಂದನೆ ಬರುತ್ತಾ ಇಲ್ಲವೆಂದು ಗೊತ್ತಾಗಿದೆ.ವಿರೋಧಿ ಪಕ್ಷದ ಬಿಸಿ ಗಾಳಿ ಗೆ ಕಾಂಗ್ರೆಸ್ ಪಕ್ಷದಲ್ಲಿ ಬೆವರು ಹುಟ್ಟಿಕೊಂಡಿದೆ. ಈಗಾಗಲೇ ಚನ್ನಪಟ್ಟಣ ಹೊರತು ಪಡಿಸಿ ಇನ್ನೂ ಉಳಿದ ಎರಡು ಕ್ಷೇತ್ರದಲ್ಲಿ ಕಷ್ಟದ ವಾತಾವರಣ ಸೃಷ್ಟಿಯಾಗಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು, ಚುನಾವಣೆ ತುಂಬಾ ಮಹತ್ತರ ಪಡೆದು ಕೊಂಡಿದೆ, ಈವರೆಗೆ ಸಂಡೂರು ಭಾಗದಲ್ಲಿ ಬಿಜೆಪಿ ಅಂದರೆ ಯಾವ ಲೆಕ್ಕಾಚಾರ ಅನ್ನುವ ಈಜಿ ಆಲೋಚನೆ ದಲ್ಲಿ ಇದ್ದವರಿಗೆ,ಬಿಜೆಪಿಯ ಗಾಲಿ ಜನಾರ್ದನ ರೆಡ್ಡಿ ಚುನಾವಣೆ ಕದನದಲ್ಲಿ ಪ್ರವೇಶ ಮಾಡಿದ್ದ ದಿನದಿಂದ, ತಾಲೂಕಿನ ಚುನಾವಣೆಯಲ್ಲಿ ಮಹತ್ತರ ಬದಲಾವಣೆ ಗಳು ಮಾಡಿದ್ದಾರೆ. ಕಾಂಗ್ರೆಸ್ನ ಇಡಿ ರಾಜ್ಯ ಸಂಪುಟ ನಿಂತು ಹೊಗಿವೇ ಠಿಕಾಣೆ ಹಾಡಲಾಗಿದೆ.ಮುಖ್ಯಮಂತ್ರಿ ಗಳು ಸಂಡೂರು ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಇದರ ಹಿನ್ನಲೆಯಲ್ಲಿ ಭದ್ರತಾ ಹಿನ್ನೆಲೆಯಲ್ಲಿ ಜಿಲ್ಲೆ ಬಹುತೇಕ ಠಾಣೆ ಗಳಲ್ಲಿ, ಕಚೇರಿ ಗಳಲ್ಲಿ,ಅಧಿಕಾರಿಗಳು ಸಿಬ್ಬಂದಿ ಇಲ್ಲದೆ ಖಾಲಿ,ಖಾಲಿ ಆಗಿವೇ.ನಗರದ ಬಹುತೇಕ ಠಾಣೆ ಗಳಿಗೆ ದೂರು ಕೊಡಲು ಬಂದಿರುವ ಅವರಿಗೆ ಅಲ್ಲಿರುವ ಸೀಮಿತ ಸಿಬ್ಬಂದಿ ಸಾಹೇಬರು ಇಲ್ಲ ಮೂರು ನಾಲ್ಕು ದಿನಗಳು ಆಗುತ್ತದೆ ತದನಂತರ ಬನ್ನಿ ಅನ್ನುವ ಸಮಾಧಾನ ವನ್ನು ನೀಡುತ್ತಾ,ಇದ್ದಾರೆ. ಸಾಧಾರಣ ಪ್ರಕರಣ ಗಳು ಇದ್ದರೇ ಅದು ಓಕೆ ಅದರೇ ಸೂಕ್ಷ್ಮವಾದ, ಅಪ್ರಾಪ್ತ ಮಕ್ಕಳ ಪ್ರಕರಣಗಳು, ನಿಂತುಹೊಗಿವೇ.ಕನಿಷ್ಟ ಸಿಡಿಆರ್ ಯಾಕಿ ಪತ್ತೆ ಹಚ್ಚುವ ಪ್ರಕರಣ ಗಳು ಹಳ್ಳ ಹಿಡಿದು ಹೋಗಿವೆ. ಮಹಿಳಾ ಠಾಣೆ ಯಲ್ಲಿ ಮತ್ತಿತರ ಠಾಣೆ ಗಳಲ್ಲಿ ಅಧಿಕಾರಿಗಳು ಇಲ್ಲದೆ ಖಾಲಿ, ಖಾಲಿ ಆಗಿದ್ದಾವೆ. ಸೂಕ್ಷ್ಮವಾದ ಪ್ರಕರಣ ಗಳಿಗೆ ಇಲಾಖೆ ಜವಾಬ್ದಾರಿ ಆಗುವ ಅಪಾಯ ಇದೇ.
News 9 Today > State > ಗಣಿನಾಡುಗೆ ಮುಖ್ಯಮಂತ್ರಿ ಗಳು,ಠಾಣೆಗಳು ಕಚೇರಿ ಗಳು,ಖಾಲಿ,ಖಾಲಿ.!!
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025