ಪಕ್ಷ ಇಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಆಗಿಲ್ಲ, ಪಾಲಿಕೆಗೆ ಹೆಸರು ತರಲು ಆಗಿಲ್ಲ.ಅವಧಿ ಮುಗಿಯಿತಾ ಬಂತು.
ಬಳ್ಳಾರಿ (26)ಜನರಗೆ ಸಹಕಾರ ಮಾಡಲು ಆಗದೆ ಇರುವ ಪಾಲಿಕೆ.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಹಿಂದೆ ಬಿಜೆಪಿ ಶಾಸಕರಾಗಿರುವ ಗಾಲಿ ಸೋಮಶೇಖರ್ ರೆಡ್ಡಿ ಅವರ ಪುತ್ರನ ಮೇಲೆ ಪ್ರಸ್ತುತ ಬಳ್ಳಾರಿ ಮೇಯರ್ ಆಗಿರುವ ನಂದೀಶ್ ಅವರು ಸ್ಪರ್ಧೆ ಮಾಡಿ ಗೆದ್ದು ಕಾಂಗ್ರೆಸ್ ಪಕ್ಷಕ್ಕೆ ಗೌರವ ತಂದುಕೊಟ್ಟಿದ್ದು ತಿಳದ ವಿಚಾರವಾಗಿದೆ.
ಆದರೇ ಮೇಯರ್ ಆಯ್ಕೆ ವಿಚಾರದಲ್ಲಿ ಬಹು ದೊಡ್ಡ ಗೊಂದಲ ಸೃಷ್ಟಿಯಾಗಿದ್ದು, ಈ ಹಿನ್ನೆಲೆ ಒಮ್ಮೆ ಅವಧಿಗೆ ಮುಲ್ಲಂಗಿ ನಂದೀಶ್ ಅವರನ್ನು ಮೇಯರ್ ಮಾಡಿದ್ರು.
ಕಾಂಗ್ರೆಸ್ ಸರ್ಕಾರ ಕೆಲಸ ಮಾಡಲು ಅವಕಾಶ ನೀಡಿತ್ತು ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಗ್ಯಾರೆಂಟಿ ಯೋಜನೆಗಳ ಯಿಂದ ಆರ್ಥಿಕ ಸಮಸ್ಯೆಗಳು ಉಂಟಾಗಿದ್ದು ತಿಳಿದ ವಿಚಾರವಾಗಿದೆ.
ಆದರೆ ಬಹುತೇಕ ಇಲಾಖೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ಸಾಧ್ಯವಾಗದಿರುವ ವಾತಾವರಣ ಸೃಷ್ಟಿಯಾಗಿದೆ.
ಸಂಪೂರ್ಣ ಅಭಿವೃದ್ಧಿಯನ್ನು ಮರೆತು ಕೇವಲ ಆಡಳಿತಕ್ಕೆ ಸೀಮಿತವಾಗಿದ್ದಾರೆ.
ಬಳ್ಳಾರಿ ಮೇಯರ್ ಕಮಿಷನರ್, ಜನರ ವಿಚಾರಗಳನ್ನು ನೋಡದೆ ಅನುದಾನ ಕೊರತೆ, ಅನುದಾನ ಕೊರತೆಯನ್ನು ಅಡ್ಡ ಇಟ್ಟುಕೊಂಡು ಇ.ಖಾತೆ ಬಿ ಖಾತೆ ಎಂದು ಜನರಿಗೆ ತೆರಿಗೆ ಭಾರವೂರಿಸಿ ಮಹಾನಗರ ಪಾಲಿಕೆ ಜನರ ಆಕ್ರೋಶಕ್ಕೆ ಗುರಿಯಾಗಿದೆ.
ಇತಿಹಾಸವುಳ್ಳ ರಾಜಕಾರಣಿ ಮನೆ ತನದ ಮೇಯರ್ ನಂದೀಶ್ ಗೆ ಜನ ಕಾಳಜಿ ಇಲ್ಲದಂತಾಯಿತು ಪದೇ ಪದೇ ಅನುದಾನದಲ್ಲಿ ತಾರತಮ್ಯ ಸ್ವಪಕ್ಷದ ಸದಸ್ಯರ ಆಕ್ರೋಶ ತೆರಿಗೆಯಲ್ಲಿ ಅಧಿಕಾರಿಗಳ ಕಿತಾಪತಿ ಜನರಿಂದ ಆಕ್ರೋಶ ಮೇಯರ್ ಏನು ಮಾಡಲು ಆಗದೇ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಶಾಸಕರಾಗಿರುವ ಭರತ್ ರೆಡ್ಡಿ ಅವರ ಗೆ ದೂರುಗಳು ಮುಂತಾದ ವ್ಯವಸ್ಥೆಯನ್ನು ಮಾಡಿಕೊಂಡು ನಾಮಕಾವಾಸ್ತಿಯಾಗಿ ಮೇಯರು ಸ್ಥಾನವನ್ನು ನಿಭಾಯಿಸಿ , ಆರೋಪಗಳಿಗೆ ಗುರಿಯಾಗಿದ್ದಾರೆ.
ಮೇ ತಿಂಗಳು ಅಂತಕ್ಕೆ ಮೇಯರ್ ಅವಧಿ ಮುಗಿಯಲಿದೆ.
ಈ ಹಿಂದೆ ಪಾಲಿಕೆಯ ಮೇಯರ್ ಆಡಳಿತ ವ್ಯವಸ್ಥೆಗೆ ಪ್ರಸ್ತುತ ವ್ಯವಸ್ಥೆಗೆ ಸಂಪೂರ್ಣ ವಿಭಿನ್ನವಾಗಿದೆ ಜನರು ಪಾಲಿಕೆಗೆ ಹಿಡಿ ಶಾಪ್ ಹಾಕುತ್ತಿದ್ದಾರೆ.