ಟ್ರ್ಯಾಪ್, ದಾಳಿ, ಆಗಿರುವ ಅಧಿಕಾರಿಗಳು ಗೆ ಪುನರ್ ಸೇವೆಗೆ ಬೇಡ!!ಅಬಕಾರಿ,ಉಪ ಆಯುಕ್ತ,ನಾಗಶಯನ ನಿರೀಕ್ಷಕ ರಮೇಶ್ ಅಗಡಿ ಮೇಲೆ ಕ್ರಮ ಕ್ಕೆ ಒತ್ತಾಯ.
ಬಳ್ಳಾರಿ (9)ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988 ರ ಅಡಿಯಲ್ಲಿ ಸಂಬಂಧಿಸಿದ ಪೊಲೀಸ್ ವಿಭಾಗದಿಂದ ಟ್ರ್ಯಾಪ್ ಅಥವಾ ದಾಳಿಗೊಳಗಾದ ಅಬಕಾರಿ ಅಧಿಕಾರಿಗಳನ್ನು ಅಮಾನತಿನ ನಂತರ ಸೇವೆಗೆ ಪುನರ್ ಸ್ಥಾಪಿಸುವ ಸಂದರ್ಭ ಯಾವುದೇ ಜಿಲ್ಲೆಯಲ್ಲಿ ಕಾರ್ಯನಿರ್ವಾಹಕ ಹುದ್ದೆ (Executive Post) ನೀಡದಂತೆ ಒತ್ತಾಯ ಮಾಡಿದ್ದಾರೆ.
ಯಾವುದಾದರೊಂದು ಜಿಲ್ಲೆಯಲ್ಲಿ ಸನ್ನದುದಾರರಿಗೆ ತೊಂದರೆ ನೀಡಿ ಅಕ್ರಮ ಸಂಪತ್ತು ಗಳಿಸಿ ಟ್ರ್ಯಾಪ್ ಅಥವಾ ದಾಳಿಗೆ ಒಳಗಾಗಿರುತ್ತಾರೆ, ಪುನಃ ಕಾರ್ಯನಿರ್ವಾಹಕ ಹುದ್ದೆ ನೀಡಿದಲ್ಲಿ ಚರಿತ್ರೆ ಪುನರಾವರ್ತನೆಯಾಗುತ್ತದೆ,ಮಂಡ್ಯ ಜಿಲ್ಲೆಯ ಉಪ ಆಯುಕ್ತ ಶ್ರೀ ನಾಗಶಯನ ಮತ್ತು ಕೊಪ್ಪಳದ ನಿರೀಕ್ಷಕ ಶ್ರೀ ರಮೇಶ ಅಗಡಿ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ. ರಾಜ್ಯಾದ್ಯಂತ ಅಬಕಾರಿ ಅಧಿಕಾರಿಗಳ ಮಿತಿಮೀರಿದ ಭ್ರಷ್ಟಾಚಾರದ ಕುರಿತು ಕ್ರಮಕ್ಕಾಗಿ ಮನವಿ, ರಾಜ್ಯದಲ್ಲಿ ಅಬಕಾರಿ ಅಧಿಕಾರಿಗಳು ಅಬಕಾರಿ ಕಾಯ್ದೆಯಲ್ಲಿರುವ ಲೋಪದೋಷಗಳ ಲಾಭ ಪಡೆದು ಸನ್ನದುದಾರರನ್ನು ಹಿಂಸಿಸಿ “ಮಾಮೂಲಿ (ಲಂಚ)” ಹಣವನ್ನು ಬಲತ್ಕಾರವಾಗಿ ವಸೂಲಿ ಮಾಡುತ್ತಿದ್ದಾರೆ.
ಈ ಕುರಿತು ದಿನಾಂಕ-11/01/2018 ರಂದು ವಿಸ್ತ್ರತವಾದ ಮನವಿ ನೀಡಿದ್ದು ತದನಂತರ ಹಲವಾರು ಬಾರಿ ಮನವಿ ನೀಡಿರುತ್ತೇವೆ,ಪರಿಸ್ಥಿತಿ ಸುಧಾರಿಸುವ ಬದಲು ಇನ್ನೂ “ಉಲ್ಬಣವಾಗಿದೆ” ಅಧಿಕಾರಿಗಳು ಸರ್ಕಾರದ ವರಮಾನದ ವಿಷಯವನ್ನು ಬದಿಗಿಟ್ಟು ಸ್ವಂತ ಸಂಪಾದನೆಯತ್ತ “ಸಂಪೂರ್ಣ ಗಮನ” ನೀಡುತ್ತಿದ್ದಾರೆ.
ಇದರಿಂದಾಗಿ ರಾಜ್ಯದಲ್ಲಿ ಕಾನೂನು ಬಾಹಿರವಾಗಿ ಡಾಬಾ, ಬೀಡಾ ಅಂಗಡಿ, ಮತ್ತಿತರ ಕಡೆಗಳಲ್ಲಿ ನಕಲಿ, ಗೋವಾ, ಮಿಲಿಟರಿ, ಡ್ಯೂಟಿ ಫ್ರೀ ಹೆಸರಿನಲ್ಲಿ ತೆರಿಗೆರಹಿತ ಮದ್ಯ ಮಾರಾಟ ಆಗುತ್ತಿರುವುದು ಎಲ್ಲರಿಗೂ ತಿಳಿದಿದೆ.
ಅವ್ಯಾಹತವಾಗಿ ಗಾಂಜಾ ಮತ್ತು ಮತ್ತಿತರ ಅಮಲು ಪದಾರ್ಥಗಳು ಮಾರಾಟ ಆಗುತ್ತಿದ್ದರೂ ಕೂಡಾ ಅಬಕಾರಿ ಅಧಿಕಾರಿಗಳು ಇದರತ್ತ ಗಮನವನ್ನು ಹರಿಸುತ್ತಿಲ್ಲ.
“ಇದರಿಂದ ಸರ್ಕಾರಕ್ಕೆ ಸಾವಿರ ಕೋಟಿಗೂ ಮಿಕ್ಕಿ ನಷ್ಟ ಉಂಟಾಗುತ್ತಿದೆ”
:-ರಾಜ್ಯದಲ್ಲಿ ಹಲವಾರು ಉನ್ನತ ಅಧಿಕಾರಿಗಳು ಬೇನಾಮಿ ಮದ್ಯ ಮಾರಾಟ ಸನ್ನದುಗಳನ್ನು ಹೊಂದಿರುತ್ತಾರೆ.
ಅಧಿಕಾರಿಗಳ ಮಿತಿಮೀರಿದ ಭ್ರಷ್ಠಾಚಾರದಿಂದ ಸನ್ನದುದಾರ ವ್ಯಾವಹಾರಿಕವಾಗಿ ಅವನತಿಯತ್ತ ಸಾಗುತ್ತಿದ್ದಾನೆ. ಅಬಕಾರಿ ಭ್ರಷ್ಟಾಚಾರದ ಕುರಿತು ಸರ್ಕಾರ ತುರ್ತು ಗಮನಹರಿಸಬೇಕಾಗಿದೆ…
ಅಬಕಾರಿ ಉದ್ಯಮದಲ್ಲಿ ನೇರವಾದ ಹಣಕಾಸು ವಹಿವಾಟುಗಳಿರುವುದರಿಂದ,ಸರರ್ಕಾರದ ರಾಜಸ್ವ, ಘನತೆ ಮತ್ತು ಸನ್ನದುದಾರರ ಹಿತದೃಷ್ಠಿಯಿಂದ ಪ್ರತಿ ಜಿಲ್ಲೆಗಳಲ್ಲಿ 3 (ಮೂರು) ವರ್ಷ ಪೂರೈಸಿರುವ ಅಬಕಾರಿ ಗಾರ್ಡ್, ಹೆಡ್ಗಾರ್ಡ್, S.D.C, F .D.C, ಡ್ರೈವರ್, ಸಬ್ ಇನ್ಸ್ ಪೆಕ್ಟರ್, ಇನ್ಸ್ ಪೆಕ್ಟರ್, ಡೆಪ್ಯೂಟಿ ಸುಪರಿನ್ಟೆಂಡೆಂಟ್ ಮತ್ತು ಇನ್ನಿತರ ಹುದ್ದೆಯ ನೌಕರರನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವ ಸಂಬಂಧ ಕೈಗೊಳ್ಳುವಂತೆ ವಿನಂತಿಸುತ್ತಿದ್ದೇವೆ (ಅವಧಿ ಪೂರ್ವಾನ್ವಯ ಆಗುವಂತೆ). ಯಾವುದೇ ಶ್ರೇಣಿಯ ನೌಕರರು ತವರು ಜಿಲ್ಲೆಯಲ್ಲಿ 3 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಕರ್ತವ್ಯ ನಿರ್ವಹಿಸದಂತೆ ಕಾನೂನು ತಿದ್ದುಪಡಿಗೆ ಕ್ರಮ ಕೈಗೊಳ್ಳುವಂತೆ ಮತ್ತು ತವರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಕಾರ್ಯನಿರ್ವಾಹಕ ಹುದ್ದೆ (Executive Post) ನೀಡದಂತೆ ಸರ್ಕಾರದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿನಂತಿ ಮಾಡಿದ್ದಾರೆ.
*ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಗೆ ಯಾವುದೇ ಕಾರಣಕ್ಕೂ ಮರು ವರ್ಗಾವಣೆಯಾಗದಂತೆ ಕ್ರಮ ಕೈಗೊಳ್ಳುವಂತೆ ಕೋರುತ್ತಿದ್ದೇವೆ. ಈ ಕುರಿತು ಈಗಾಗಲೇ ಮನವಿ ನೀಡಿರುತ್ತೇವಿ, ದಿನಾಂಕ-15/07/2022).ಹೆಚ್ಚಿನ,ಅಬಕಾರಿ,ಅಧಿಕಾರಿಗಳು ಕಾನೂನನ್ನು ದುರುಪಯೋಗಪಡಿಸಿಕೊಂಡು ನೀಡುತ್ತಿರುವ ತೊಂದರೆ ಸಂಬಂಧ ಕಠಿಣ, ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಶಿಸ್ತು ಪ್ರಾಧಿಕಾರ ರಚಿಸಿ ಭ್ರಷ್ಟಾಚಾರ ಮತ್ತು ದುರ್ವತ್ರನೆ ಸಾಬೀತಾದಲ್ಲಿ ಸರ್ಕಾರಿ ಸೇವೆಯಿಂದ ವಜಾಗೊಳಿಸಬೇಕು. ಈ ಕುರಿತು ಈಗಾಗಲೇ ಕೊಪ್ಪಳ ಜಿಲ್ಲೆಯ ಅಬಕಾರಿ ನಿರೀಕ್ಷಕ ರಮೇಶ ಅಗಡಿ, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಶ್ರೀಮತಿ ಜ್ಯೋತಿ ಮೆತ್ರಿ ಮತ್ತು ಮಹಾದೇವ ಪೂಜಾರಿ ಇವರುಗಳ ದುರ್ವತ್ರನೆ ಸಂಬಂಧ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದು ತುರ್ತು ಶಿಸ್ತು ಕ್ರಮ ಕೈಗೊಳ್ಳುವಂತೆ ವಿನಂತಿಮಾಡಿದ್ದಾರೆ.
ಅಬಕಾರಿ ಅಧಿಕಾರಿಗಳಿಗೆ, ಅಸೋಸಿಯೇಶನ್ ಪದಾಧಿಕಾರಿಗಳಿಗೆ ಕಾನೂನು ತಜ್ಞರ ಜೊತೆ ಕಾನೂನು ಮಾಹಿತಿ ಶಿಬಿರ ಚರ್ಚಾಗೋಷ್ಠಿಗಳನ್ನು ಆಯೋಜಿಸುವ ಕುರಿತು. ಇಲಾಖೆಯ ಕೋರಿಕೆ ಮೇರೆಗೆ ಅಂತಿಮವಾಗಿ ದಿನಾಂಕ-06/09/2022 ರಂದು ಮನವಿ ನೀಡಿರುತ್ತೇವೆ.
ಸನ್ನದು ತೆರೆಯುವ ಮತ್ತು ಮುಚ್ಚುವ ಸಂದರ್ಭಗಳಲ್ಲಿ ಸನ್ನದು ಆವರಣವನ್ನು ಸ್ವಚ್ಚಗೊಳಿಸಲು 1 ಗಂಟೆಗಳ ಕಾಲ ಅವಕಾಶ ನೀಡುವಂತೆ ಮತ್ತು ಬೆಳಗ್ಗಿನ ಜಾವ ತೆರೆಯುವ ಸನ್ನದುಗಳ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ವಿನಂತಿ.
ಮುಂದುವರಿದು
1965 ರಲ್ಲಿ ರಚಿತವಾಗಿರುವ ಉದ್ಯಮದ ಕಾನೂನು ಮತ್ತು ನಿಯಮಗಳನ್ನು (Excise Act ) ಪುನರ್ ಪರಿಶೀಲಿಸಿ, ಅನುಪಯುಕ್ತ ಕಾನೂನು ಮತ್ತು ನಿಯಮಗಳನ್ನು ರದ್ದುಗೊಳಿಸಿ ಪ್ರಸ್ತುತ ಸಮಯಕ್ಕನುಗುಣವಾಗಿ ಕಾಯ್ದೆ ಮತ್ತು ನಿಯಮಗಳನ್ನು ಪರಿಷ್ಕರಿಸಲು ಶ್ರೀ ವಿ. ಯಶವಂತ್ ಭಾ.ಆ.ಸೇ (ನಿವೃತ್ತ) (Consultant Excise Matters ) ಕೆ.ಎಸ್.ಬಿ.ಸಿ.ಎಲ್ ಇವರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಗೆ ನೀಡಿರುವ ಈ ಕೆಳಗಿನ ಮನವಿಗಳ ಕುರಿತು ತುರ್ತು ಕ್ರಮಕ್ಕಾಗಿ ವಿನಂತಿಸಿದೆ.
ಕಾನೂನು ತಿದ್ದುಪಡಿ ಸಮಿತಿಗೆ ನೀಡಿರುವ ಬೇಡಿಕೆಗಳು
ರದ್ದುಯಾ ತಿದ್ದುಪಡಿ ಮಾಡಬೇಕಾದ ಕರ್ನಾಟಕ ಅಬಕಾರಿ ಕಾಯ್ದೆ
(Excise Rules)
ಸೆಕ್ಷನ್ 43 ಕುರಿತು ಸನ್ನದು ಆವರಣದಲ್ಲಿ ಲೆಕ್ಕ ಪುಸ್ತಕದಲ್ಲಿರುವ ದಾಸ್ತಾನಿನ ವಿವರ ಮತ್ತು ಭೌತಿಕ ದಾಸ್ತಾನು ಪರಿಶೀಲಿಸಿದಾಗ ತಾಳೆಯಾಗದಿದ್ದಲ್ಲಿ – ತಾಳೆಯಾಗದ ದಾಸ್ತಾನು ಕೆ.ಎಸ್.ಬಿ.ಸಿ.ಎಲ್ ನಿಂದ ಖರೀದಿಸಿ ನೌಕರನು ಲೆಕ್ಕ ಬರೆಯುವಾಗ ಕೈ ತಪ್ಪಿನಿಂದ ಹೆಚ್ಚು-ಕಡಿಮೆಯಾದಲ್ಲಿ ಸೆಕ್ಷನ್ ಅನ್ವಯ ಅಗತಕ್ಕದ್ದಲ್ಲ ಮತ್ತು ಒಂದು ವೇಳೆ ನಕಲಿ ಮದ್ಯವಾದಲ್ಲಿ ಮಾತ್ರ ಸೆಕ್ಷನ್ ಅನ್ವಯ ಆಗುವಂತೆ ತಿದ್ದುಪಡಿ ಮಾಡಲು ಕೋರಿದ್ದಾರೆ.
ರದ್ದುಪಡಿಸಬೇಕಾದ ಮತ್ತು ತಿದ್ದುಪಡಿ ಮಾಡಬೇಕಾದ IMFL Rules 1968 (ಸ್ವದೇಶಿ ಮತ್ತು
ವಿದೇಶಿ ಮದ್ಯಗಳ ಮಾರಾಟ ನಿಯಮಗಳು Rule 9A-1 Affixture of excise Label –
Adhesive Label ಗಳಿಲ್ಲದೆ ಮದ್ಯ, ಬಿಯರ್ಗಳನ್ನು ಮಾರಾಟ ಮಾಡಬಾರದು.
2003 ರಿಂದ ಕೆ.ಎಸ್.ಬಿ.ಸಿ.ಎಲ್ ಇರುವುದರಿಂದ ಈ ಪ್ರಶ್ನೆ ಉದ್ಭವಿಸುವುದಿಲ್ಲ. ಆದುದರಿಂದ ಈ ನಿಯಮವನ್ನು ರದ್ದುಪಡಿಸಬೇಕು.
Rule 10
Foreign Liquor or Indian Liquor (Other than Arrack) weaker in strength than 25° under proof – ಇದನ್ನು ನಿಗದಿ ಮಾಡುವುದು ಯಾರು ಎನ್ನುವ ಪ್ರಶ್ನೆ ಉದ್ಭವಿಸಿರುವುದರಿಂದ ಮತ್ತು IMFL ಗೆ Spirit ಗೆ ಈ ಕುರಿತು Standard ನಿಗದಿ (Fix) ಮಾಡದೇ ಇರುವುದರಿಂದ ನಿಯಮವನ್ನು ಬದಲಾಯಿಸಬೇಕು.
Rule 14 – A, 14 – B- ರದ್ದುಮಾಡಿರುವುದರಿಂದ BLC ಪ್ರಕರಣಗಳನ್ನು ದಾಖಲಿಸಲು ಮಾನದಂಡಗಳೇನು.
ಕಸಗುಡಿಸಿಲ್ಲ, ನೌಕರನಾಮ ಹೊಂದಿಲ್ಲ ಇಂತಹ ಸಣ್ಣ ಪುಟ್ಟ ವಿಚಾರಗಳಿಗೆ BLC ಹಾಕಬಾರದು. BLC ಪ್ರಕರಣಗಳನ್ನು ದಾಖಲಿಸುವ ಕುರಿತು ಸ್ಪಷ್ಠ ಮಾರ್ಗಸೂಚಿಗಳ ಅಗತ್ಯವಿದೆ.
Rule 4 B – Disqualification &
IV – is a minor or an undischarged involvement or is of unsound mind.
ಈ ವಿಚಾರದಲ್ಲಿ ವಿವರಣೆ ಬೇಕು. unsound mind ಇದನ್ನು define ಮಾಡುವುದು ಯಾರು. ಅಬಕಾರಿ ಅಧಿಕಾರಿಯ ಅಭಿಪ್ರಾಯಕ್ಕೆ ಮಾನ್ಯತೆ ಇದೆಯಾ?
ತಿದ್ದುಪಡಿ ಮಾಡಬೇಕಾದ “ಸಾಮಾನ್ಯ ಷರತ್ತುಗಳು” (General Conditions)
4 A-Closure of Shops on Certain Occasions.
On the day of marriage in his family; or
On the day of the Occurrence of a death or accident on his family and During the time of renovation or repair of Licensed Premises.ಇದರ ಜೊತೆಯಲ್ಲಿ ಕೆಳಗಿನ ಬೇಡಿಕೆಯನ್ನು Amend ಮಾಡಬೇಕು.
Closure on severe illness.
Rule – ನಿಯಮ 5 ಕ್ಕೆ ಸಂಬಂಧಿಸಿ.
ಮೊದಲು ಸನ್ನದು ಇದ್ದು ನಂತರ ಆಕ್ಷೇಪಾರ್ಹ ಸಂಸ್ಥೆಗಳು ಬಂದರೆ ಸನ್ನದುದಾರರಿಗೆ ಸಮಸ್ಯೆ ಉಂಟಾಗುತ್ತದೆ.
ಆದುದರಿಂದ ನಿಯಮ 5-4(b) ರದ್ದುಪಡಿಸಬೇಕು.
ನಿಯಮ 6 ಕ್ಕೆ ಸಂಬಂಧಿಸಿ – Sign Board ಗಳ ವಿಚಾರ ಇದರಲ್ಲಿNature of shop, Number of Licence ನ್ನು Sign Board ನಲ್ಲಿ ಕಾನಿಸುತ್ತೇವೆ. Retail Price ನ್ನು Board ನಲ್ಲಿ ಕಾಣಿಸಲು ಸಾಧ್ಯವಿಲ್ಲ.
+ M.R.P ದರಗಳು ಮದ್ಯ, ಬಿಯರ್ನ ಬಾಟಲಿಗಳಲ್ಲಿ ಸ್ಪಷ್ಟವಾಗಿ ನಮೂದಿಸಿರುವುದರಿಂದ ದರಪಟ್ಟಿ ಪ್ರದರ್ಶಿಸುವುದನ್ನು
(Rule) 9 – Employment of Women and certain others. Prohibited
ನಿಯಮ 6 ರಿಂದ ಕೈ ಬಿಡಬೇಕು.
• The Licence shall not employ any women ಕೈ ಬಿಡುವಂತೆ ವಿನಂತಿ. ಈಗಾಗಲೇ ಮಾನ್ಯ ಸುಪ್ರೀಂ
ಕೋರ್ಟಿನ ತೀರ್ಮಾನ ಇರುವುದರಿಂದ ಈ ಕಾಯ್ದೆಯನ್ನು ಕೈ ಬಿಡುವಂತೆ ಕೋರಿದೆ.
. Rule 10
Persons known or believed to be drunk
Persons known or suspected to be about to take part in a riot or disturbance of public peace or any other crime « ដ៧.
Any revenue officer not below the rank of Tahashildar ,
ಆದುದರಿಂದ…
ದಿನಾಂಕ 21.02.2024ರಂದು ಮಾನ್ಯ ಅಬಕಾರಿ ಸಚಿವರು ಕೆ.ಎಸ್.ಬಿ.ಸಿ.ಎಲ್ ನಲ್ಲಿ ಆಸೋಸಿಯೇಷನ್ ಪದಾಧಕಾರಿಗಳ ಜೊತೆ ಈ ಸಂಬಂಧ ನಡೆಸಿರುವ ಸಭೆಯಲ್ಲಿ ಮತ್ತು ದಿನಾಂಕ 22.02.2024 ರಂದು ರಾಜ್ಯದ ಎಲ್ಲಾ ಜಿಲ್ಲೆಯ ಸನ್ನದುದಾರರು ಫ್ರೀಡಂ ಪಾರ್ಕ್ನಲ್ಲಿ ‘ಶಾಂತಿಯುತ’ವಾಗಿ ನಡೆಸಿರುವ ಪ್ರತಿಭಟನೆ ಸಂದರ್ಭ ಕೂಡಾ ಮನವಿಗಳನ್ನು ನೀಡಿ ಚರ್ಚಿಸಿರುತ್ತೇವೆ. ಮುಂದುವರಿದು 2 19.11.2024 ರಂದು ಗೌರವಾನ್ವಿತ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡ ಮಾನ್ಯ ಮುಖ್ಯಮಂತ್ರಿಯವರು ನಮ್ಮ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿ ಈಡೇರಿಸುವ ಭರವಸೆ ನೀಡಿರುತ್ತಾರೆ. ತುಂಬಾ ಸಮಯಗಳಿಮದ ಬೇಡಿಕೆ ಸಂಬಂಧ ಮನವಿಗಳನ್ನು ನೀಡುತ್ತಾ ಬಂದಿದ್ದು, ಬೇಡಿಕೆ ಈಡೇರದೇ ಇರುವುದರಿಂದ, ಸಮಸ್ಯೆ ಬಗೆಹರಿಯದೇ ಇರುವದರಿಂದ ಸನ್ನದುದಾರರ ತಾಳ್ಮೆ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ.
ಬೇಡಿಕೆ ಈಡೇರಿಸುವಂತೆ ಮತ್ತು ಸಮಸ್ಯೆಗಳನ್ನು ಪರಿಹರಿಸುವಂತೆ ವಿನಂತಿಸುತ್ತಿದ್ದೇವೆ.
ಅಬಕಾರಿ ಉದ್ಯಮದ ಆದಾಯ ರಾಜ್ಯ ವರಮಾನದ ಶೇಕಡಾ 25 ರಷ್ಟು ಇರುವುದರಿಂದ ಉದ್ಯಮಕ್ಕೆ ಸಂಬಂಧಪಟ್ಟು ಹೆಚ್ಚಿನ ಅಧಿಕಾರಿಗಳಲ್ಲಿ ಅಶಿಸ್ತು (ಶೇಕಡಾ 85 ರಿಂದ 90) ತಾಂಡವವಾಡುತ್ತಿರುವುದರಿಂದ, ಉದ್ಯಮದಲ್ಲಿ ಮೇಲೆ ಸೂಚಿಸಿರುವ ಬೇಡಿಕೆಗಳನ್ನು ಈಡೇರಿಸಿ ಸಮಸ್ಯೆಗಳನ್ನು ಬಗೆಹರಿಸಿದಲ್ಲಿ ಮತ್ತು ಅಗತ್ಯದ ಕಾನೂನು ತಿದ್ದುಪಡಿ ಮಾಡಿದಲ್ಲಿ ವರಮಾನ ಜಾಸ್ತಿ ಆಗುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ರಾಜ್ಯದ ಎಲ್ಲಾ ವರ್ಗದ ಸನ್ನ ದುದಾರರ ಮನವಿ ಪತ್ರ ದಲ್ಲಿ ಇದೇ. ಇದನ್ನೇ ಮುಖ್ಯ ಮಂತ್ರಿ ಗಳು ಗೆ ಅಬಕಾರಿ ಸಚಿವರು ಗೆ ಜಿಲ್ಲಾ ಅಧಿಕಾರಿಗಳ ಮೂಲಕ ಮನವಿ ಪತ್ರ ನೀಡಿದ್ದಾರೆ. ಜಿಲ್ಲಾ ಅಧಿಕಾರಿಗಳು ಗೆ 4/4/2025 ರಂದು ನೀಡಿದ ಮನವಿ ಪತ್ರ ದಲ್ಲಿ ಇದೇ ಇದರ ಮಾಹಿತಿ ನ್ಯೂಸ್9ಟು ಡೇ ಗೆ ಲಭ್ಯ ವಾಗಿದೆ.