ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಬ್ರಿಡ್ಜ್ ನ ಕಬ್ಬಿಣ ಕಳವು ಠಾಣೆಗೆ ದೂರು ನೀಡಲು ಬಂದ ತುಂಗಭದ್ರಾ ಬೋರ್ಡ್ ಅಧಿಕಾರಿಗಳು, ಪೊಲೀಸರ ಮೇಲೆ ಗೂಬೆ ಕೂಡಿಸಿ ಪರಾರಿಯಾಗಿರುವ ದುರ್ಘಟನೆ ಗಣಿನಾಡು ಬಳ್ಳಾರಿ ನಗರದಲ್ಲಿ ನಡೆದಿದೆ.
ಬಳ್ಳಾರಿ(14) ನಗರದ ಬೆಳಗಲ್ ರಸ್ತೆಯ ಡಿಸಿ ನಗರ ಪಕ್ಕದಲ್ಲಿರುವ ಒಂದು ಸಾರ್ವಜನಿಕರ ಬ್ರಿಡ್ಜ್ ಅನ್ನು ಈ ಹಿಂದೆ ಪಾಲಿಕೆಯಿಂದ ಅಗಲಿಕಾರಣ ಮಾಡಲಾಗಿದೆ ಎಂದು ತಿಳಿದಬಂದಿತ್ತು. ಈ ಬ್ರಿಡ್ಜ್ ತುಂಗಭದ್ರಾ ನಾಲೆಯ ಮೇಲೆ ಹಾರಿಹೋಗುವ ಬ್ರಿಡ್ಜ್ ಕಿಲೋಮೀಟರ್ 86ನಲ್ಲಿ ಬರುತ್ತದೆ ಈ ಬ್ರಿಡ್ಜ್ ಇರುವ ಕಬ್ಬಿಣವನ್ನು ಕಾಮಗಾರಿ ಮಾಡುವ ಸಂದರ್ಭದಲ್ಲಿ ಅಂದಾಜು 25 ರಿಂದ 30 ಟನ್ ಹೊಂದಿದೆ. ಗಡಾರಿಗಳನ್ನು ತೆಗೆದು ಸೈಡಿಗೆ ಇಡಲಾಯಿತು. ಕೆಲವು ವರ್ಷಗಳದಿಂದ ಅಲ್ಲೇ ಇದ್ದ ಕಾರಣ ಅವುಗಳನ್ನು ತುಂಗಭದ್ರ ಬೋರ್ಡ್ ನ ಅಧಿಕಾರಿಗಳಾಗಲಿ , ಗೋದಾಮಿಗೆ ಹಾಕಿಕೊಳ್ಳದೆ ಸ್ಥಳದಲ್ಲೇ ಬಿಡಲಾಗಿತ್ತು,
ಬಾರಿ ದೊಡ್ಡ ಮಟ್ಟದ ಕಬ್ಬಿಣ ಆಗಿರುವ ಹಿನ್ನೆಲೆ ಅದನ್ನು ಕ್ರೇನ್ ಮತ್ತು ಲಾರಿಗಳ ಮೂಲಕ ಮಾತ್ರವೇ ತೆಗೆದುಹಾಕಲು ಸಾಧ್ಯವಾಗುತ್ತದೆ. ಏಪ್ರಿಲ್ ಹನ್ನೊಂದು ಈ ಕಬ್ಬಿಣವನ್ನು ಎರಡು ಕ್ರೆನ್ ಮೂಲಕ ಲಾರಿನಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ಕಳವು ಮಾಡಿದ್ದಾರೆ ಎಂದು ಎಚ್.ಎಲ್.ಸಿ ತುಂಗಭದ್ರಾ ಬೋರ್ಡ್ ನ ಅಧಿಕಾರಿಗಳಾಗಿರುವ ಕೆಂಚಪ್ಪ, ಚೇತನ್ ಮುಂತಾದವರು ಭಾನುವಾರ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು, ಹಲವಾರು ಗಂಟೆಗಳಿಂದ ಠಾಣೆಯಲ್ಲಿ ಕಾಯುತ್ತಿದ್ದೇವೆ ಪೊಲೀಸ ಅಧಿಕಾರಿಗಳು ಯಾರು ? ನಮ್ಮ ದೂರನ್ನು ತೆಗೆದುಕೊಳ್ಳುತ್ತಿಲ್ಲವೆಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದನ್ನು ಚುಚ್ಚಿಕೊಂಡ ಪೊಲೀಸ್ ಅಧಿಕಾರಿಗಳು ದೂರು ದಾಖಲಿಸಿಕೊಳ್ಳಲು ಠಾಣೆಯಿಂದ ಹೋಗಿದ್ದ ಅಧಿಕಾರಿಗಳಿಗೆ ಅನೇಕ ಬಾರಿ ಪೋನ್ ಕಾಲ್ ಗಳನ್ನು ಮಾಡಿದ್ದಾರೆ. ದೂರ ನೀಡಲು ಬರಲೇ ಇಲ್ಲದೇ ಇರೋದ್ ದುರಂತ.
*ರಾಜಕೀಯ ವ್ಯಕ್ತಿ ಮಧ್ಯ ಪ್ರವೇಶ*
ಒಬ್ಬ ಪ್ರಭಾವಿ ರಾಜಕಾರಣಿ ಆಪ್ತ ಎನ್ನುವ ಶಶಿ ಈ ಕಬ್ಬಿಣ ಕಳುವು ಮಾಡಿಕೊಂಡು ಹೋಗಿದ್ದಾರೆ ಎಂದು ತುಂಗಭದ್ರಾ ಬೋರ್ಡ್ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರ ನೀಡಲು ಬರೆದುಕೊಂಡು ಬಂದಿರುವ ಪತ್ರದಲ್ಲಿದೆ. ಈ ಕಬ್ಬಿಣವನ್ನು ಕಟ್ ಮಾಡಲು ಬಂದಿರುವ ಗ್ಯಾಸ್ ವೆಲ್ಡರ್ ಬಷೀರ್ ಅವರ ಮೇಲೆ ದೂರ ನೀಡಿದ್ದಾರೆ ಪತ್ರದಲ್ಲಿ, ಬಷೀರ್ ಅವರನ್ನು ತಂದು ಭಾನುವಾರ ಗ್ರಾಮೀಣ ಠಾಣೆಯಲ್ಲಿ ಕುಡಿಸಲಾಗಿತ್ತು. ಆದರೆ ಪೊಲೀಸರು ಏನ್ ? ಮಾಡಿದ್ದಾರೆ ಎನ್ನುವುದು. ಅಂದಾಜು ಈ ಕಬ್ಬಿಣ 8 ರಿಂದ 10 ಲಕ್ಷ ಮೌಲ್ಯವಾಗಿರುತ್ತದೆ ಎಂದು ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.
*ಅಧಿಕಾರಗಳು ದೂರ ನೀಡಲು ಠಾಣೆಗೆ ಬಂದಿದ್ದು ಯಾಕೆ ?
ಪೊಲೀಸರು ದೂರು ತೆಗೆದುಕೊಂಡಿಲ್ಲ ಎಂದು ಸುಳ್ಳು ಹೇಳಿಕೆ ನೀಡಿ ಪರಾರಿ ಆಗಿದ್ದು ಏಕೆ ? ಎನ್ನುವುದು ಬೋರ್ಡ್ ಅಧಿಕಾರಿಗಳ ನಡೆ ಅನುಮಾನ ಉಂಟು ಮಾಡಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಕಬ್ಬಿಣ ಕಳುವು ಆಗಿದ್ದ ವಿಷಯ ಬೋರ್ಡ್ ನ ಕೆಂಚಪ್ಪ,ಚೇತನ್ ಇವರು ಮೇಲಿನ ಎಸ್,ಇ ಅವರಿಗೆ ಯಾವುದೇ ಮಾಹಿತಿ ನೀಡಲಿಲ್ಲ ಅನ್ನೋದು ಬೋಡ್ ಎಸ್.ಇ ಆಗಿರುವ ನಾಯಕ ಅವರು ದೂರವಾಣಿ ಮೂಲಕ ತಿಳಿಸಿದ್ದಾರೆ , ಇದರ ಪೂರ್ತಿ ಇವರುಗಳನ್ನು ಪಡೆದುಕೊಳ್ಳುತ್ತೇನೆ ಎಂದರು.
ಲಕ್ಷಾಂತರ ರೂಪಾಯಿ ಕಬ್ಬಿಣ ಕಳವು ಆಗಿದೆ ಎಂದು ಠಾಣೆ ಗೆ ಬಂದು ಡ್ರಾಮಾ ಮಾಡಿರುವ ತುಂಗಭದ್ರಾ ಬೋರ್ಡಿನ ಎಚ್,ಎಲ್, ಸಿ.ವಿಭಾಗದ ಅಧಿಕಾರಿಗಳ ಮೇಲೆ ಅನುಮಾನ ಮೂಡಿಸಿದೆ. ಇಲ್ಲವೇ ಪ್ರಭಾವಿ ರಾಜಕೀಯ ವ್ಯಕ್ತಿ ಭಯ ಬಿದ್ದು ಠಾಣೆಗೆ ದೂರು ನೀಡದೆ ಪಾರಾರಿಯಾದರೇ ಎನ್ನುವ ಅನುಮಾನ ಸಾರ್ವಜನಿಕರನ್ನು ಕಾಡುತ್ತದೆ. ಇಷ್ಟು ದೊಡ್ಡ ಮಟ್ಟದ ಕಬ್ಬಿಣ ಕಳವು ಹಿಂದೆ ಅಧಿಕಾರಿಗಳ ಪಾತ್ರ ಇರಬಹುದು ಅನ್ನುವು ಇಲ್ಲಿನ ಸ್ಥಳೀಯರ ಗುಸು, ಗುಸು ಮಾಹಿತಿ ಆಗಿದೆ.
*ಕಳ್ಳರ ಜೊತೆಗೆ ಕಳ್ಳರಾದ ತುಂಗಭದ್ರಾ ಬೋರ್ಡ್ ಸರ್ಕಾರಿ ಅಧಿಕಾರಿಗಳು!!*
ಈ ಸ್ಟೋರಿಯಲ್ಲಿ ಬೋರ್ಡ್ ಅಧಿಕಾರಿಗಳು ಮತ್ತೊಂದು ಡ್ರಾಮಾ ಸೃಷ್ಟಿಸಿ ಕಳುವಾಗಿರುವ ಕಬ್ಬಿಣ 30 ರಿಂ 40 ಟನ್ ಸೋಮವಾರ 11 ಗಂಟೆಗೆಲ್ಲ ತುಂಗಭದ್ರಾ ಬೋರ್ಡ್ ಗೋದಾಮಿಗೆ ತಂದು ಹಾಕುತ್ತಾರೆ ಎಂದು ಕಳುವು ಮಾಡಿರುವರ ಮೂಲಕ ತಿಳಿದಿದೆ ಎಂದರು. ಹಿಂದೆ ರಾಜಕಾರಣಿಗಳ ಹಸ್ತಕ್ಷೇಪವಿದೆ ಎಂದು ಕೆಲವರ ಮುಂದೆ ದೂರವಾಣಿಗಳಲ್ಲಿ ಮಾತನಾಡಿದ್ದಾರೆ ಅಧಿಕಾರಿಗಳು ಎನ್ನುವದು ಕೂಡ ಕೇಳಿಬಂದಿದೆ. ಇದೇ ತಿಂಗಳು 11ರಂದು ಕಬ್ಬಿಣ ಕಳೆವಾಗುತ್ತದೆ 13 ರಂದು ಠಾಣೆಗೆ ದೂರು ನೀಡಲು ಬರುತ್ತಾರೆ ಅಷ್ಟರಲ್ಲಿ ಕಬ್ಬಿಣ ವಾಪಸ್ ಬರುತ್ತದೆ ಎಂದು ಅಧಿಕಾರಿಗಳು ಆಡಿರುವ ಡ್ರಾಮಾ ಮೇಲು ನೋಟಕ್ಕೆ ಕಂಡು ಬರುತ್ತದೆ, ಈ ಕಬ್ಬಿಣದಲ್ಲಿ ಅಧಿಕಾರಿಗಳಿಗೆ ಏನಾದ್ರೂ ಕೈವಾಡ ವಿತ್ತಾ ಇವರಿಗೆ ತಲುಪ ಬೇಕಾಗಿರುವ ಹಣ ತಲುಪಿಲ್ಲವೇ ಇದರಿಂದ ಠಾಣೆಗೆ ದೂರು ನೀಡಲು ಬಂದಂತೆ ಡ್ರಾಮ ಮಾಡಿ ಪೊಲೀಸ್ ರ ಇಲಾಖೆ ಮೇಲೆ ಗೂಬೆ ಕೂಡಿಸಿರುವುದು ಅಪಹಾಸ್ಯಕ್ಕೆ ಗುರಿಯಾದರು. ಇದರ ಅಸಲಿ ಕಥೆ ಏನು ಅನ್ನವುದು ಬಹಿರಂಗ ಆಗಬೇಕಾಗಿದೆ.
ಇಲ್ಲಿ ತುಂಗಭದ್ರಾ ಬೋರ್ಡ್ ಅಧಿಕಾರಿಗಳೆ ಕಳ್ಳರ ಆಟವಾಡಿದ್ದಾರೆ ಎನ್ನುವ ಅನುಮಾನ ಮೂಡಿದೆ ಎನ್ನುವುದು ಸಾರ್ವಜನಿಕರ ಪ್ರಶ್ನೆ ಆಗಿಯಾಗಿ ಉಳಿದಿದೆ.