ಓಲ Ev ವಾಹನ ಯಾರಡು ಶೋ ರೂಮ್ ಗಳು ಮೇಲೆ RTO, ಅಧಿಕಾರಿಗಳು ದಾಳಿ ಯಾಲ್ಲವು ರಹಸ್ಯ!!. ಇದರ ಮರ್ಮ ಏನು.??. ಸಾರಿಗೆ ಇಲಾಖೆ ಗೆ ಭಯ ಇಲ್ಲವೇ, ಕ್ರಮ ಇಲ್ಲವೇ??.
ಬಳ್ಳಾರಿ(6) ಓಲ ಎಲೆಕ್ಟ್ರಾನಿಕ್ ಶೋರೂಮ್ ಗಳ ಮೇಲೆ ಬಳ್ಳಾರಿಯ ಸಾರಿಗೆ,ಆ ರ್.ಟಿ.ಓ. ಅಧಿಕಾರಿಗಳಾಗಿರುವ ಶ್ರೀನಿವಾಸಗಿರಿ ಮತ್ತು ಇನ್ಸ್ಪೆಕ್ಟರ್ಗಳು ಒಂದೇ ದಿನ ಎರಡು ದಾಳಿ ನಡೆಸಿ ಶೋರೂಮ್ ನ ಕಾಗದಪತ್ರಗಳು ಪರಿಶೀಲನೆ ಮಾಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಈ ಹಿಂದೆ ಓಲ Ev ವಾಹನಗಳ ಕಂಪನಿ ಗ್ರಾಹಕರಿಗೆ ವಾಹನ ಖರೀದಿ ಮಾಡಿದ ಮೇಲೆ ಸೂಕ್ತ ಸಮಯದಲ್ಲಿ ನಂಬರ್ ಪ್ಲೇಟ್ ವಿತರಣೆ ಮಾಡಿದೆ ವಾಹನಗಳನ್ನು ಮಾಲೀಕರು ಗೆ ನೀಡಿ ತೊಂದರೆ ಮಾಡುತ್ತಿರುವ ಘಟನೆ ಬೆಳಕಿಗೆ ಬಂದಿತ್ತು.
ಬಳ್ಳಾರಿಯಲ್ಲಿ ಒಬ್ಬ ಮಾಲೀಕರು ಗೆ ಕೆ.ಏ.34 ಅನ್ನುವ ರಿಜಿಸ್ಟ್ರೇಷನ್ ನಂಬರ್ ಕೊಡದೆ ರಾಮನಗರ ರಿಜಿಸ್ಟ್ರೇಷನ್ ನಂಬರು ಕೊಡಲು ಮುಂದಾಗಿದ್ದರು.
ಗಾಡಿ ಖರೀದಿ ಮಾಡಿದ ಮಾಲೀಕರು ಬಳ್ಳಾರಿಯ ಮೂಲತಃ ದಾಖಲೆಗಳನ್ನು ನೀಡಿದ್ದರು, ಆದರೆ ಒಂದು ತಿಂಗಳು ಕಳೆದರೂ ಗಾಡಿ ಮಾಲೀಕನಿಗೆ ಓಲ ಕಂಪನಿಯಿಂದ ಬಳ್ಳಾರಿಯ ರಿಜಿಸ್ಟ್ರೇಷನ್ ನಂಬರ್ ಕೊಡಲೇ ಇಲ್ಲ ಮಾಲೀಕರು ಶೋ ರೂಮ್ಗೆ ಸುತ್ತಾಡಿ ಸುಸ್ತಾದರು
ಈ ವಿಷಯ ಸುದ್ದಿ ಪ್ರಚಾರವಾಗಿ ಅಧಿಕಾರಿ ಗಳ ಗಮನಕ್ಕೆ ಬರಲಾಗಿತ್ತು ಈಹೆನ್ನೆಲೆ ಸಾರಿಗೆ ಅಧಿಕಾರಿಗಳಾಗಿರುವ ಶ್ರೀನಿವಾಸ್ ಗಿರಿ ಇನ್ಸ್ಪೆಕ್ಟರ್ಗಳು ಒಂದೇ ದಿನ ಶೋರೂಮ್ ಗಳ ಮೇಲೆ ದಾಳಿ ನಡೆಸಿ ನೋಟಿಸ್ ನೀಡಿದ್ದಾರೆ ಎನ್ನುವದು ತಿಳಿದು ಬಂದಿದೆ.
ಆದರೆ ಈವರೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದೇ, ರಹಸ್ಯವಾಗಿ ದಾಳಿಯ ಮಾಹಿತಿಯನ್ನು ನೀಡದೆ ಸಾರಿಗೆ ಅಧಿಕಾರಿಗಳು ಎಲ್ಲವು ಮುಚ್ಚಿಟ್ಟಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಈ ದಾಳಿ ಕೆಲ ದಿನಗಳ ಹಿಂದೆ ನಡೆದಿದೆ ಎಂದು ಬಲ್ಲ ಮೂಲಗಳ ಮಾಹಿತಿಯಾಗಿದೆ.
ಆದರೆ ಅಧಿಕಾರಿಗಳು ಮಾತ್ರ ಯಾವುದೇ ಮಾಹಿತಿ ನೀಡುತ್ತಾ ಇಲ್ಲ.!!
ಬಳ್ಳಾರಿ ಸಾರಿಗೆ ಇಲಾಖೆ ಮೇಲೆ ತುಂಬಾ ದೂರಗಳು ಬಂದಿದ್ದಾವೆ ಎಂದು ಈ ಹಿಂದೆ ಬಳ್ಳಾರಿಯ ಶಾಸಕರು ನಾರಾ ಭರತ್ ರೆಡ್ಡಿ ಅವರು ಕಚೇರಿ ವೀಕ್ಷಣೆ ಮಾಡಿದರು ಸಾರಿಗೆ ಇಲಾಖೆಯ ಕರ್ತವ್ಯದ ಲೋಪದೋಷಗಳು ಹತ್ತಿರದಿಂದ ನೋಡಿದ ಶಾಸಕರು ತುಂಬಾ ಆಕ್ರೋಶ ವ್ಯತ್ಯಪಡಿಸಿದ್ದರು.
ಅದು ನಡೆದ ಕೆಲವೇ ದಿನಗಳಿಗೆ ರಾಜ್ಯ ಉಪ ಲೋಕಾಯುಕ್ತರು ಬಿ ವೀರಪ್ಪ ಅವರು, ಕೂಡ ಆರ್ ಟಿ ಓ ಸಾರಿಗೆ ಇಲಾಖೆಯನ್ನು ಪರಿಶೀಲನೆ ಮಾಡಿದ್ದರು.
ಈ ರಾಜ್ಯದಲ್ಲಿ ಎಲ್ಲಿ ಕಾಣದೆ ಇರುವ ಭ್ರಷ್ಟಾಚಾರ,ಅಕ್ರಮಗಳು ಬಳ್ಳಾರಿ ಸಾರಿಗೆ ಇಲಾಖೆಯಲ್ಲಿ ನಡೆದಿದೆ ಎನ್ನುವುದು ಅವರಿಗೆ ತಿಳಿದುಬಂದಿತ್ತು.
ಸುಮೋಟ್ ಪ್ರಕರಣ ದಾಖಲಿಸಿಕೊಂಡು ವಿಚಾರಣೆಯನ್ನು ಕೂಡ ಆರಂಭ ಮಾಡಿದ್ದಾರೆ.
ಆದರೆ ಬಳ್ಳಾರಿಯ ಸಾರಿಗೆ ಆರ್ ಟಿ ಓ ಅಧಿಕಾರಿಗಳಿಗೆ ಇವು ಯಾವು ಲೆಕ್ಕಕ್ಕೆ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ಆದರೆ ಇವರು ಚರ್ಮ ಎಷ್ಟು ದಪ್ಪ ಇರಬಹುದು ಅನ್ನವ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿಸಿದೆ.
ಜಿಲ್ಲೆಯಲ್ಲಿ ಎಲೆಕ್ಟ್ರಾನಿಕ್ ವಾಹನ ಗಳ ಹಾವಳಿ ತುಂಬಾ ಇದೆ ಬಹುತೇಕ ವಾಹನಗಳು ನಂಬರ್ ಪ್ಲೇಟ್ ಇಲ್ಲದೇ ಸಂಚಾರ ಮಾಡುತ್ತಿದೆ ಟ್ರಾಫಿಕ್ ಅಧಿಕಾರಿಗಳು ಆಗಲಿ ಮಾಹಿತಿ ಪಡೆದ ಸಾರಿಗೆ ಅಧಿಕಾರಿಗಳು ಆಗಲಿ ಯಾವುದೇ ಕ್ರಮ ಕೈಗೊಳ್ಳದೆ ಗುಪ್ತವಾಗಿ ರಹಸ್ಯವಾಗಿ ದಾಳಿ ನಡೆಸಿ ಮುಚ್ಚಿಟ್ಟಿರುವುದು, ಬಹುದೊಡ್ಡ ಭ್ರಷ್ಟಾಚಾರವನ್ನು ಮುಚ್ಚಿಟ್ಟು ಅನುಮಾನ ಗಳು ಹುಟ್ಟುವಂತೆ ಮಾಡಿದ್ದಾರೆ ಸಾರ್ವಜನಿಕ ವಲಯದಲ್ಲಿ.
ಬೇರೆ ಬೇರೆ ಗುಸು ಗುಸು ಕೂಡ ಇದೆ,
ಓಲ ಶೋರೂಮ್ ಮೇಲೆ ದಾಳಿ ಮಾಡಿ ಯಾವದೇ ಕ್ರಮ ಕೈಗೊಳ್ಳದೇ ಯಾಕಾಗಿ ದಾಳಿಯನ್ನು ಮುಚ್ಚಿಟ್ಟಿದ್ದಾರೆ ಎನ್ನುವುದು ಪ್ರಶ್ನೆಯಾಗಿದೆ. ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಒತ್ತಾಯ ಆಗಿದೆ.
ಇದರ ಅಸಲಿ ಸ್ಟೋರಿ ಏನು..??.