ಚರಂಡಿ,ಯುಜಿಡಿ ನೀರುದಿಂದಲೇ ಆಹಾರದ ಪಲ್ಲೆಗಳು ಬೆಳೆಯುತಾರೆ. ಕಣ್ಣು ಮುಚ್ಚಿಕೊಂಡ ಆಡಳಿತ..!!
ಬಳ್ಳಾರಿ (8)ನಗರ ಭಾಗದಲ್ಲಿರುವ ಕೌಲ್ ಬಜಾರ್ ಎ ಪಿ ಎಂ ಸಿ ಹತ್ತಿರ ಮುಸ್ಲಿಂರ ಸ್ಮಶಾನ ಪಕ್ಕದಲ್ಲಿ ಸರ್ಕಾರದ ಮೂರು ನಾಲ್ಕು ಎಕರೆ ಪ್ರದೇಶದಲ್ಲಿ ಆಹಾರ ಪದಾರ್ಥಗಳಾಗಿರುವ
ಪಲ್ಲೆಗಳು ರಾಜಗಿರಿ,ಮೆಂತೆ ಪನಕನಪಲ್ಲೆ, ಪುಂಡೆಪಲ್ಲೆ ಮುಂತಾದ ಪಲ್ಲೇಗಳನ್ನು ಕೌಲ್ ಬಜಾರ್ ಮತ್ತು ಮುಂತಾದ ಭಾಗಗಳಿಂದ ಬರುವ ಚರಂಡಿ,ಯುಜಿಡಿ ನೀರನ್ನು ಬಳಕೆ ಮಾಡಿ ಕಾಯಿಪಲ್ಲೆಗಳು ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ಯುಜಿಡಿ ಚರಂಡಿ ನೀರುದಿಂದಲೇ ತರಕಾರಿ ಬೆಳೆಯುತ್ತಿದ್ದಾರೆ.
ಚರಂಡಿ ನೀರಿಗೆ ಅಡ್ಡ ಹಾಕಿ ಸರ್ಕಾರದ ಭೂಮಿಯಲ್ಲಿ ಒಂದು ನೀರಿನ ಹೊಂಡ ತೆಗೆದು ಆ ನೀರನ್ನು ಅಲ್ಲಿ ಶೇಖರಣೆ ಮಾಡಿಕೊಂಡು
ಆಗಲೀಜ್ ನೀರಿನಿಂದಲೇ ತರಕಾರಿ ಬೆಳೆಯಲು ಬಳಕೆ ಮಾಡುತ್ತಿದ್ದಾರೆ.
ಚರಂಡಿ ನೀರಿನಿಂದ ಬೆಳೆದ ಪಲ್ಲೆಗಳನ್ನು ಸ್ವಚ್ಛವಾಗಿ ಅದೇ ಗಲೀಜು ನೀರಿನಿಂದ ತೊಳೆದು ಮಾರುಕಟ್ಟೆಗೆ ಕಳುಹಿಸುತ್ತಿರುವುದು ಬಯಲಾಗಿದೆ.
ಪಲ್ಯಬೆಳೆಯುವ ಪ್ರದೇಶ ಸುತ್ತಮುತ್ತ ೂ ಅರ್ಧ ಕಿಲೋಮೀಟರ್ ವರೆಗೆ ಯುಜಿಡಿ ಚರಂಡಿ ನೀರಿನ ದುರ್ವಾಸನೆ ಬರುತ್ತಿರುತ್ತದೆ.
ಗಲೀಜ್ ನೀರಿನಿಂದ ಅಲ್ಲೇ ಬೆಳೆಯುತ್ತಿರುವುದು ಆರೋಗ್ಯ ಅಧಿಕಾರಿಗಳಿಗೆ ಆಗಲಿ ಜಿಲ್ಲಾಧಿಕಾರಿಗಳಿಗಾಗಲಿ ಗಮನವಿಲ್ಲದೆ ಇರಬಹುದೇ?? ಎನ್ನುವ ಪ್ರಶ್ನೆ ಉದ್ಭವಿಸಿದೆ.
ಈಗಾಗಲೇ ಹಲವಾರು ಕಾಯಿಲೆಗಳಿಂದ
ಜನರು ಬಳಲುತ್ತಿರುವುದು ದವಾಖಾನೆಗಳ ಸುತ್ತು ಓಡಾಡುತ್ತಿರುವುದು ತಿಳಿದು ಸಂಗತಿ ಆಗಿದೆ.
ಮಹಾನಗರ ಪಾಲಿಕೆ ಕೂಡ ಇತ್ತ ಗಮನ ಹರಿಸಲಿಲ್ಲ ಎನ್ನುವುದು ಕೇಳಿ ಬಂದಿದೆ, ಇಂಥ ಗಲೀಜು ನೀರಿನಿಂದ ಬೆಳೆದ ತರಕಾರಿಯನ್ನು ತಿಂದರೆ ಜನರ ಪಾಡು ಏನನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶುಕ್ರವಾರ ಗಲೀಜು ನೀರಿನಿಂದ ಬೆಳೆಯುತ್ತಿರುವ ಪ್ರದೇಶಕ್ಕೆ ನ್ಯೂಸ್ 9 ಟುಡೇ ವರದಿಗಾರರು ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಅಲ್ಲಿ ಪಲ್ಲೆ ಬೆಳೆಯುತ್ತಿರುವ ಅವರನ್ನು ಕೇಳಿದರೆ ಯುಜಿಡಿ,ಚರಂಡಿ ಗಲೀಜು ನೀರಿನಿಂದಲೇ ಪಲ್ಲೆ ಬೆಳಿತಾ ಇದ್ದೇವೆ. ನಮಗೆ ಮತ್ತೊಂದು ಮಾರ್ಗ ಇಲ್ಲ ಅಂದರು.
ಆದರೆ ಆ ನೀರನ್ನು ಬಾಯಲ್ಲಿ ಹಾಕಿಕೊಳ್ಳಲು ಸಾಧ್ಯವೇ ಎಂದು ವರದಿಗಾರರು ಪ್ರಶ್ನೆ ಮಾಡಿದರೆ
“ಅದು ಹೇಗೆ ಸಾಧ್ಯ ಸರ್ ಯುಜಿಡಿ,ಚರಂಡಿ ನೀರಿದು ಅದು ಸಾಧ್ಯವಿಲ್ಲ ಎಂದು ಮುಖವನ್ನು ಮುಚ್ಚಿಟ್ಟುಕೊಂಡರು.
ಅದೇ ಪ್ರದೇಶದ ಒಬ್ಬ ಮಹಿಳೆಯನ್ನು ಕೇಳಿದರೆ ನಾವು “ಈ ತರಕಾರಿ ಪಲ್ಲೆ ಗಳನ್ನು ತಿನ್ನೋದಿಲ್ಲ ನೋಡಿ ನೋಡಿ ಹೇಗೆ ತಿನ್ನುವುದು ಇದರಲ್ಲಿ ಕೌಲ್ ಬಜಾರ್ ಬಾಗದಿಂದ ಕಸಾಯದ ತ್ಯಾಜ್ಯ ವಸ್ತುಗಳು ಮತ್ತು ಜನರ ಶೌಚ,ಮೂತ್ರ ಮುಂತಾದ ವಿಸರ್ಜನಾ ಪದಾರ್ಥಗಳು ಈ ನೀರಿನಲ್ಲಿ ಬರುತ್ತವೆ ಈ ನೀರಿನಿಂದಲೇ ಪಲ್ಲೆ ಬೆಳೆಸುತ್ತಾರೆ ನಾವು ಅದನ್ನು ತಿನ್ನೋದಿಲ್ಲ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಔಪಚಾರಿಕವಾಗಿ ಮಾತನಾಡಿದ್ದು ಕೂಡ ಬಹಿರಂಗಗೊಂಡಿದೆ.
ಸ್ವಚ್ಛ ಭಾರತ್ ಅನ್ನುವ ಪದ ಕೇವಲ ಗೋಡೆಗೆಗಳು ಗೆ ಮಾತ್ರವೇ ಸೀಮಿತವಾಗಿದೆ. ಬಳ್ಳಾರಿಯಲ್ಲಿ ಸಾಕಷ್ಟು ಗಣಿ ಪ್ರದೇಶದ ಅನುದಾನ ಇದ್ದು ಬಹುದೊಡ್ಡ ಶ್ರೀಮಂತ ರಾಜಕಾರಣಿಗಳಿದ್ದು ಜನರಿಗೆ ಆರೋಗ್ಯದ ಹಿತಾಸಕ್ತಿಯಿಂದ ಸ್ವಚ್ಛವಾದ ತರಕಾರಿ ಬೆಳೆಸಲು ನೀಡಲು ಪ್ರಯತ್ನ ಮಾಡಿಲ್ಲವೆಂದರೆ ಇದು ಒಂದು ರೀತಿಯಲ್ಲಿ ನಾಚಿಕೆಗೇಡಿನ ಸಂಗತಿಯಾಗಿದೆ.
ಕನಿಷ್ಠ ಜಿಲ್ಲಾ ಆಡಳಿತ, ಆರೋಗ್ಯ ಅಧಿಕಾರಿಗಳಾಗಲಿ ಕಂದಾಯ ಇಲಾಖೆ ಅಧಿಕಾರಿಗಳಾಗಲಿ ಇದನ್ನು ಪರಿಶೀಲನೆ ಮಾಡಿ ಗಲೀಜು ನೀರಿನಿಂದ ತರಕಾರಿ ಬೆಳೆಯುವುದು ಎಷ್ಟು ಸೂಕ್ತ ಇದರಿಂದ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀಳಲಿದೆ ಎನ್ನುವುದು ಕಣ್ಣಿನಿಂದ ನೋಡಿದ ಮಹಾನುಭಾವರು ಇಲ್ಲದಂತಾಗಿದೆ.
ಈಗಲಾದರೂ ಜಿಲ್ಲಾಡಳಿತ ಕಣ್ಣು ತೆಗೆದು ನೋಡಲಿದಿಯಾ.. ಅಥವಾ ಕಣ್ಣು ಮುಚ್ಚಿಕೊಂಡು ಕೂತುಕೊಳ್ಳುಳಿದಿಯಾ ಎನ್ನುವುದು ಕಾದು ನೋಡಬೇಕಾಗಿದೆ.