ಮಹಿಳೆ ಗೆ ಕಿರುಕುಳ, ಕರ್ತವ್ಯ ಲೋಪ ದೊರನ್ನಡತೆ, ಮಾಡಿದ ಹಿನ್ನೆಲೆ,ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಸೈಯದ್ ಸಾದಿಕ್ ಅಲಿ ಅಮಾನತ್ತು.ಅಸಲಿ ಸ್ಟೋರಿ ನೋಡಿ.
•ಮಹಿಳೆ ಯನ್ನು ಕೈ ಹಿಡುದು, ಕಿಚಕ ನಂತೆ ವರ್ತನೆ.
•ಟ್ರೇನಿಂಗ್ ನಲ್ಲಿ ಕೂಡ ಕೆಟ್ಟ ಪ್ರವೃತ್ತಿ.
• ಕುರುಗೋಡು ಇತರ ಪ್ರದೇಶಗಲ್ಲಿ ಕೂಡ ಈತನ ನಡವಳಿಕೆ ಕೇಳಿ ಜನರು ಏನು ಅನ್ನುತಾರೆ.!!
• ಉತ್ತಮ ದಹಿಲಿ ಮಟ್ಟದ ರಾಜಕಾರಣಿ ಗಳ ಹೆಸರು ಬಳಿಕೆ ಮಾಡುತಾರೆ ಅಂತೆ.!!ಅದನ್ನು ಬಳಿಕೆ ಮಾಡಿ ಹಲವಾರು ವರ್ಷಗಳು ಓಓಡಿ ಯಲ್ಲಿ ಕರ್ತವ್ಯ!!
••ಹೊಸ SP ಬಂದ ಮೇಲೆ ಸಯ್ಯದ್ ಸಾದಿಕ್ ಅಲಿ ಆಟಗಳು ಬಂದ್.
ಬಳ್ಳಾರಿ (17)ಸಯ್ಯದ್ ಸಾದಿಕ್ ಅಲಿ, ಸಿಹೆಚ್ಸಿ-12, ಬ್ರೂಸ್‌ಪೇಟೆ ಪೊಲೀಸ್ ಠಾಣೆ, ಬಳ್ಳಾರಿ ಜಿಲ್ಲೆ(ಹಾಲಿ ಓಓಡಿ ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆ)ಇವರನ್ನು ಅಮಾನತ್ತು ಮಾಡಲಾಗಿದೆ.
ಪೊಲೀಸ್ ನಿರೀಕ್ಷಕರು, ಬ್ರೂಸ್‌ಪೇಟೆ ಪೊಲೀಸ್ ಠಾಣೆ, ಬಳ್ಳಾರಿ ಇವರ ವರದಿ ದಿನಾಂಕ:25-03-2025.
ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಬ್ರೂಸ್‌ಪೇಟೆ ಪೊಲೀಸ್ ಠಾಣೆ, ಬಳ್ಳಾರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ಸಯ್ಯದ್ ಸಾದಿಕ್ ಅಲಿ, ಸಿಹೆಚ್‌ಸಿ-12 ಆದ ಇವರು ಇಲಾಖೆಯ ನಿಯಮ ಅನುಸಾರವಾಗಿ, ಶಿಸ್ತು ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದು ನಿಮ್ಮ ಆದ್ಯ ಕರ್ತವ್ಯವಾಗಿರುತ್ತದೆ, ಆದರೆ, ಇವರು ಕರ್ತವ್ಯ ಲೋಪವೆಸಗಿ ಅತೀವ ದುರ್ನಡತೆ ತೋರಿರುವುದಾಗಿ ತಿಳಿದುಬಂದಿರುವ ಹೆನ್ನೆಲೆ ಈ ಕೆಳಕಂಡಂತೆ
”ಶ್ರೀಮತಿ xyz (22)ವರ್ಷ ಗಂಡ xyz ಬಳ್ಳಾರಿ ಜಿಲ್ಲೆ ಇವರು ದಿನಾಂಕ:24-03-2025ರಂದು ಬೆಳಿಗ್ಗೆ 11:30 ಗಂಟೆಯ ಸಮಯದಲ್ಲಿ ಅವರ ಮನೆಯ ಕೆಳಗಡೆ ವಾಸವಿರುವ ಶ್ರೀಮತಿ ರೇಣುಕಾ ಬಾಯಿ ಇವರನ್ನು ಮಾತನಾಡಿಸಲು ಹೋದಾಗ ನಿಮ್ಮ ಪರಿಚಯರಾದ ಶ್ರೀಮತಿ ರೇಣುಕ ಬಾಯಿ ರವರ ಮನೆಯಲ್ಲಿದ್ದ ನೀವು ಶ್ರೀಮತಿ xyz (22)ವರ್ಷ, ಇವರನ್ನು ಕೈ ಹಿಡಿದು ನಿಮ್ಮ ತೊಡೆಯ ಮೇಲೆ ಕೂರಿಸಿಕಕೊಳ್ಳಲು ಪ್ರಯತ್ನಿಸಿದ್ದು, ಈ ಸಂಬಂಧ ದೂರು ನೀಡಲು ಬಂದು ನಂತರದಲ್ಲಿ ದೂರನ್ನು ರಾಜಿ ಮಾಡಿಕೊಳ್ಳಲಾಗಿರುತ್ತದೆ.
ಈ ರೀತಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತನೆ ಮಾಡಿ ಶಿಸ್ತು ಬದ್ಧವಾದ ಇಲಾಖೆಗೆ ಮುಜುಗರವಾಗುವಂತಹ ಮತ್ತು ಸಾರ್ವಜನಿಕರು ಪೊಲೀಸ್ ಇಲಾಖೆಯ ಮೇಲೆ ಇಟ್ಟಿರುವ ನಂಬಿಕೆ ಕಡಿಮೆಯಾಗುವಂತೆ ವರ್ತಿಸಿ ನಿಮ್ಮ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತನ ಪ್ರದರ್ಶಿಸಿರುತ್ತೀರಿ”.
ಆದ್ದರಿಂದ, ಸದರಿ ಆರೋಪಗಳ ಮೇರೆಗೆ ಶಿಸ್ತಿನ ಇಲಾಖೆಯ ಸಿಬ್ಬಂದಿಯಾದ ನೀವು ನಿಮ್ಮ ಕರ್ತವ್ಯದಲ್ಲಿ ಅತೀವ ದುರ್ನಡತೆ ಮತ್ತು ಆಶಿಸ್ತು ತೋರಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನಲೆಯಲ್ಲಿ ನಿಮ್ಮ ವಿರುದ್ಧ ಇಲಾಖಾ ಶಿಸ್ತು ಕ್ರಮಜರುಗಿಸಲು ನಿರ್ಧರಿಸಿ, ಸಯ್ಯದ್ ಸಾದಿಕ್ ಅಲಿ, ಸಿಹೆಚ್ಸಿ- 12. ಬ್ರೂಸ್‌ಪೇಟೆ ಪೊಲೀಸ್ ಠಾಣೆ, ಬಳ್ಳಾರಿ ಜಿಲ್ಲೆ (ಹಾಲಿ ಓಓಡಿ ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆ) ಆದ ನಿಮ್ಮನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ನೀವು ಕೆಸಿಎಸ್‌ಆರ್ ನಿಯಮ 98 ರ ಅನ್ವಯ ಲಭ್ಯವಿರುವ ಜೀವನಾಧಾರ ಭತ್ಯೆ ಮತ್ತು ಇತರೆ ಭತ್ಯೆಗಳನ್ನು ಪಡೆಯಲು ಅರ್ಹರಿರುತ್ತೀರಿ.
ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ 1963 ರ ಕಲಂ 14 ಹಾಗೂ ಕೆಸಿಎಸ್‌ಆರ್ ನಿಯಮ 104 ರ ಅನ್ವಯ ನೀವು ಅಮಾನತ್ತಿನ ಪೂರ್ವದಲ್ಲಿ ಯಾರ ಅಧೀನದಲ್ಲಿರೋ ಅಮಾನತ್ತಿನ ಅವಧಿಯಲ್ಲಿಯೂ ಸಹ ಅವರ ಅಧೀನದಲ್ಲಿರುತ್ತೀರಿ.
ಅಮಾನತ್ತಿನ ಅವಧಿಯಲ್ಲಿ ಸ್ವಂತವಾಗಿ ಬೇರೆ ಯಾವ ಉದ್ಯೋಗ ಅಥವಾ ವ್ಯಾಪಾರ ಮಾಡಬಾರದು. ಹಾಗೇನಾದರೂ ಮಾಡಿದ್ದಲ್ಲಿ ಜೀವನಾಧಾರ ಭತ್ಯೆಯನ್ನು ಪಾವತಿ ಮಾಡಲು ನಿಯಮಗಳಲ್ಲಿ ಅವಕಾಶ ಇರುವುದಿಲ್ಲ. ಹಾಗೂ ಈ ಬಗ್ಗೆ ಮತ್ತೊಂದು ಆರೋಪಕ್ಕೆ ಗುರಿ ಮಾಡಿ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ, ಜೀವನಾಧಾರ ಭತ್ಯೆ ಪಡೆಯುವ ಮುನ್ನ ಬೇರೆ ಯಾವುದೇ ಉದ್ಯೋಗ ಅಥವಾ ವ್ಯಾಪಾರ ಮಾಡಿರುವುದಿಲ್ಲ ಎಂಬುದಾಗಿ ಪ್ರಮಾಣ ಪತ್ರವನ್ನು ಜಿಲ್ಲಾ ಪೊಲೀಸ್ ಕಛೇರಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.
ಅಮಾನತ್ತಿನ ಅವಧಿಯಲ್ಲಿ ಕೇಂದ್ರಸ್ಥಾನ ಬಿಟ್ಟು ಹೋಗತಕ್ಕದ್ದಲ್ಲ. ಒಂದು ವೇಳೆ ಕೇಂದ್ರಸ್ಥಾನ ಬಿಡುವುದಾದರೇ ನೀವು ಯಾರ ಅಧೀನದಲ್ಲಿರುವಿರೋ ಅವರ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದು ಕೇಂದ್ರಸ್ಥಾನ ಬಿಡತಕ್ಕದ್ದು ಎಂದು ಪೊಲೀಸ್ ಅಧೀಕ್ಷಕರು ಅಮಾನತ್ತು ಮಾಡಿದ್ದಾರೆ.
ಸಯ್ಯದ್ ಸಾದಿಕ್ ಅಲಿ ಸಿನಿಮಾ ಕೇಳಿ, ಪೊಲೀಸ್ ಉದೋಗ ಟ್ರೈನಿಂಗ್ ಅವಧಿ ಯಲ್ಲಿ ಕೂಡ ಕೆಟ್ಟ ಪ್ರವೃತ್ತಿ ದಲ್ಲಿ ಇದ್ದರು ಎಂದು ಗುಸು,ಗುಸು. ಕುರುಗೋಡು ಇತರ ಪ್ರದೇಶ ಗಳಲ್ಲಿ ಕೂಡ ಇತನ ನಡುವಳಿಕೆ ಕೇಳಿದ್ರೆ ಜನರು ಏನು ಅನ್ನುತಾರೆ ಛೇ ಛೇ. ಅನ್ನುತ್ತಾರೆ. ಉತ್ತಮ ರಾಜಕಾರಣಿ ಗಳು ದಹಿಲಿ ಮಟ್ಟದ ರಾಜಕಾರಣಿ ಗಳ ಹೆಸರು ಬಳಿಕೆ ಮಾಡುತಾರೆ ಅಂತೆ!!. ಅದನ್ನು ಬಳಿಕೆ ಮಾಡಿ ಓ ಓ ಡಿ ಯಲ್ಲಿ ಹಲವಾರು ವರ್ಷಗಳು ಕರ್ತವ್ಯ.!! ಹೊಸ SP ಶೋಭರಾಣಿ ಅವರು ಬಂದ ಮೇಲೆ “ಅಲಿ” ಆಟ ಇಲಿ ಆಯ್ತ್. 14/5/2025 ರಂದು ಅಮಾನತ್ತು ಮಾಡಿ ಆದೇಶ ಆದೇಶ ಮಾಡಲಾಗಿದೆ.
ನೊಂದ ಮಹಿಳೆ ಪರಶಿಷ್ಟ ಪಂಗಡ ಜಾತಿ ಅವರುಎಂದು, ಗೌರವ ಕುಟುಂಬ ಆಗಿದ್ದು ಬೀದಿ ಬದಿ ರಂಪಾಟ ಬೇಡ ಎಂದು ಠಾಣೆ ನಲ್ಲಿ ಬುದ್ದಿ ಹೇಳ್ಸಿ ಹೋಗಿದ್ದರು. 24/5/2025 ರಂದು ಬ್ರೂಸ್ ಪೇಟೆ ಠಾಣೆ ಯಲ್ಲಿ ದೂರು ಕೊಡಲು ಬರುತಾರೆ, ಅಲ್ಲಿ ದಹಿಲಿ ಮಟ್ಟದ ರಾಜಕಾರಣಿ ಹೆಸರು ಬಳಿಕೆ ಆಗಿತ್ತು ಎಂದು,ಅದು ಯಾಕೆ ನಮಗೆ ಎಂದು ಅಷ್ಟೇ ಕ್ಕೆ ಅಷ್ಟೇ ಮಾಡಿ ಮಾಡಿರಬಹುದು ಅನ್ನುವ ಗುಸು ಗುಸು. ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಆದರೇ ಠಾಣೆ ಯ ನಿರೀಕ್ಷಕರು ಯಾಲ್ಲವೂ ವರದಿಯಲ್ಲಿ ಇಟ್ಟಿದ್ದರು.
ಜನರು ಮೆಚ್ಚುವಂತಹ ಕೆಲಸ ಮಾಡಿದ್ದಾರೆ SP ಅವರು,ಸಯ್ಯದ್ ಸಾದಿಕ್ ಅಲಿ ಮೇಲೆ ನಿಗಾ ಇಟ್ಟಿದ್ದಾರೆ ಇನ್ನು ಇನ್ನು ಮಾಹಿತಿ ಗಳು ಸಿಕ್ಕಿದ್ದಾವೆ, DYSP ಹಂತ ದಲ್ಲಿ ಕೂಡ ಕೆಲ ವಿಚಾರ ಗಳು ಇದ್ದಾವೆ ಎಂದು ಗುಪ್ತ ಮಾಹಿತಿ ಇದೇ.SP ಅವರು ಮಹಿಳೆಯರ ಪರವಾಗಿ ನಿಂತು ದೂರು ಕೊಡಲು ಆಗದೆ ಮರ್ಯಾದೆಗೆ ಹಂಚಿಕೊಂಡಿದ್ದ ನೊಂದ ಮಹಿಳೆರಿಗೆ ಬಳ್ಳಾರಿ ಎಸ್.ಪಿ , ಡಾ.ಶೋಭರಾಣಿ ಅವರು ದುರ್ಗಾದೇವಿಯಂತೆ , ಜನ ರಕ್ಷಣೆಗೆ ನಿಂತಿದ್ದಾರೆ. ಸಾರ್ವಜನಿಕರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ.
ಪ್ರಸ್ತುತ ವಿದ್ಯಮಾನಗಳಲ್ಲಿ ಅಕ್ರಮ ದಂದೆ ಮಾಡುವ ಅವರ ಕೂಡ, ಓಸಿ,ಇಸ್ಪೇಟ್ ಮುಂತಾದ ಅಕ್ರಮ ದಂದೆ ಮಾಡುವವರು ಕೂಡ ವಿಧಾನಸಭೆ ರಾಜ್ಯಸಭೆ ಮುಂತಾದ ನಾಯಕರು ಕೂಡ ಫೋನ್ ಮಾಡಿಸಿ , “ರೆಕಮೆಂಡ್” ಮಾಡುವ ದಿನಮಾನಗಳಲ್ಲಿ ಎಸ್ ಪಿ ಯವರು ಕಟ್ಟುನಿಟ್ಟಿನ ಕ್ರಮ ನೆಡೆಸಿರುವುದು ಬಳ್ಳಾರಿ ಜನತೆಗೆ ಮತ್ತಷ್ಟು ಧೈರ್ಯ ತುಂಬಿಸಿದೆ ಎಂದರು ತಪ್ಪೇನಿಲ್ಲ.