ಕಾಂಗ್ರೆಸ್ ಪಕ್ಷದ ಮಹಿಳೆಯರ ರಂಪಾಟೆ ಬೀದಿಬದಿಗೆ ಬಂದಿದೆ.
ಬಳ್ಳಾರಿ (25) ಕಳೆದ ವಾರ ರಾಹುಲ್ ಗಾಂಧಿಯವರ ಜನ್ಮದಿನಾಚರಣೆ ಸಂದರ್ಭದಲ್ಲಿ ಬಳ್ಳಾರಿ ನಗರದ ರಾಕ್ ಗಾರ್ಡನ್ ಬಲಿ ಇರುವ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾಗಿರುವ ಅಲ್ಲಂ ಪ್ರಶಾಂತ್ ಅವರ ಸಮ್ಮುಖದಲ್ಲಿ ಪಕ್ಷದ ಮಹಿಳಾ ಪದಾಧಿಕಾರಿಗಳು ಕೆಲಮಹಿಳಾ ಮುಖಂಡರು ಏಕವಚನದಲ್ಲಿ ಬೈದಾಡಕೊಂಡಿದ್ದು ಆದಿ ಬೀದಿ ರಂಪಾಟ ಆಗಿದೆ.
ಈ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರಾಗಿರುವ ಒಬ್ಬರು ಮತ್ತೊಂದು ಮಹಿಳಾ ಕಾರ್ಯಕರ್ತರು ಎರಡು ಗುಂಪುಗಳಾಗಿ ಪರಸ್ಪರ ಜಗಳಾಡಕೊಂಡಿದ್ದು ಬೆಳಕುಗೆ ಬಂದಿದೆ.
ಪಕ್ಷದ ಕಚೇರಿಯಲ್ಲಿ ಆರಂಭವಾಗಿರುವ ಜಗಳವನ್ನು ಜಿಲ್ಲಾಧ್ಯಕ್ಷರಾಗಿರುವ ಪ್ರಶಾಂತ್ ಅವರು ಸರಿಪಡಿಸುವ ಪ್ರಯತ್ನ ಮಾಡಿದರು ಆಗದೇ ಪಕ್ಷದ ಕಚೇರಿಯಿಂದ ತಾವು ಏನಾದ್ರು ಮಾಡಿಕೊಳ್ಳಿ ಎಂದು ಹೊರಗೆ ನಡೆದು ಹೋಗಿರುವ ಘಟನೆ ಕೂಡ ನಡೆದಿದೆ.
ತದನಂತರ ಮಹಿಳೆಯರು ಪಕ್ಷದ ಕಚೇರಿಯಿಂದ ಕೆಳಗೆ ಇಳಿದು ನಡುರಸ್ತೆಯಲ್ಲಿ ಏಕವಚನದಲ್ಲಿ ಆವಾಂಚ ಶಬ್ದಗಳನ್ನು ದಿಂದ ನಿಂದನೆ ಮಾಡಿಕೊಂಡಿದ್ದು ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವಿಚಾರವಾಗಿ ದೂರವಾಣಿಯಲ್ಲಿ ಮಾತನಾಡಿದ ಶಾಂತಮ್ಮ ಅನ್ನುವ ಮಹಿಳ ಮುಖಂಡರು ಘಟನೆ ನಡೆದಿರುವುದು ವಾಸ್ತವಿದೆ ನಾವು ಮಂಜುಳಾ ಅನ್ನುವ ಅವರ ಮೇಲೆ ಪ್ರಕರಣ ದಾಖಲು ಮಾಡಲಿದ್ದೀವಿ,ನಾವು ದಲಿತರು ನಮಗೆ ಅವಮಾನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಎಚ್ಚಿನ ಮಾಹಿತಿ ಸಿಗಬೇಕು ಆಗಿದೆ.