ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜು.1 ರಂದು ಪತ್ರಿಕಾ ದಿನಾಚರಣೆ
ಪತ್ರಕರ್ತರ ಹಬ್ಬದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ – ಯಾಲ್ಪಿ ವಲಿಭಾಷ
ಬಳ್ಳಾರಿ:ಜೂ,29; ಪ್ರತಿ ವರ್ಷದಂತೆ ಈ ವರ್ಷವೂ ಪತ್ರಕರ್ತರ ಹಬ್ಬವನ್ನು ಜು.1 ರಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಅವರಣದ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ ಭಾನುವಾರ, ಕಾನಿಪ ಜಿಲ್ಲಾ ಸಮಿತಿಯ ಅಧ್ಯಕ್ಷ ಯಾಳ್ಪಿ ವಲಿಭಾಷಾ, ಉಪಾಧ್ಯಕ್ಷ ಕೆ.ಬಜಾರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ. ರವಿ ಕುಮಾರ್, ಕಾರ್ಯದರ್ಶಿ ಪಿ.ರಘುರಾಮ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಜಂಬುನಾಥ್, ಎಂ.ಇ.ಜೋಶಿ, ಪ್ರವೀಣ್ ರಾಜ್, ಪಂಪನಗೌಡ, ಆಂಧ್ರಜ್ಯೋತಿ ಮಲ್ಲಿಕಾರ್ಜುನ, ಕಂಪ್ಲಿಯ ರಸೂಲ್, ಕುರುಗೋಡು ಮಣ್ಣೂರು ಸುಧಾಕರ್ ಸೇರಿದಂತೆ ಎಲ್ಲಾ ಪತ್ರಕರ್ತರ ಸಮ್ಮುಖದಲ್ಲಿ ಪತ್ರಿಕಾ ದಿನಾಚರಣೆ ಅದ್ದೂರಿ ಆಚರಣೆ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಹಿರಿಯ ಪತ್ರಕರ್ತರಾದ ಗಣೇಶ್ ಇನಾಂದಾರ್, ಹನುಮೇಶ ರಾವ್, ಗಿರೀಶ್ ಕುಮಾರ್ ಗೌಡ, ದುರ್ಗೇಶ್ ಯಾದವ್, ಪ್ರವೀಣ್ ರಾಜ್ ಸೇರಿದಂತೆ ಎಲ್ಲಾ ಮಾಧ್ಯಮ ಮಿತ್ರರು ಕಾರ್ಯಕ್ರಮದ ರೂಪರೇಶದ ಕುರಿತು ಚರ್ಚೆ ನಡೆಸಿದರು.
*ಪತ್ರಕರ್ತರ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ:* ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯಾಳ್ಪಿ ವಲಿಭಾಷ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಜು.1 ರಂದು ಬೆಳಿಗ್ಗೆ 10.30ಕ್ಕೆ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾ ಭವನದಲ್ಲಿ, ಪತ್ರಿಕಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ನಮ್ಮ ಬಳ್ಳಾರಿ ಸೇರಿ ಜಿಲ್ಲೆಯ ಎಲ್ಲಾ ತಾಲೂಕಿನ ಪತ್ರಕರ್ತರು ಈ ಪತ್ರಕರ್ತರ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು. ಈ ಕುರಿತು ನಮ್ಮ ಜಿಲ್ಲಾ ಸಮಿತಿ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ಕಾರ್ಯಕ್ರಮವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ, ಹಬ್ಬದ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ದಿನದಂದು ಎಲ್ಲರೂ ಒಂದೇ ತರಹದ ಸಮವಸ್ತ್ರಗಳನ್ನು ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷ, ಕಾರ್ಯಕ್ರಮದಲ್ಲಿ ನಗರದ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು, ಸಚಿವರು, ಮಾಜಿ ಸಚಿವರು, ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸೇರಿ ಸದಸ್ಯರು, ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಜಿಲ್ಲೆಯ ನಮ್ಮ ಎಲ್ಲಾ ಮಾಧ್ಯಮ ಮಿತ್ರರು ಸೇರಿ ಎಲ್ಲರೂ ಪತ್ರಕರ್ತರ ಹಬ್ಬದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾ ದಿನಾಚರಣೆಯಂದು ಛಾಯಾ ಚಿತ್ರ ಪ್ರದರ್ಶನ, ಎಲ್ಲಾ ಪತ್ರಿಕೆಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರೂ ನಾವೆಲ್ಲರು ಒಂದೇ, ಭಿನ್ನಾಭಿಪ್ರಾಯಗಳು ಏನೇ ಇರಲಿ, ಎಲ್ಲವನ್ನೂ ಬದಿಗೊತ್ತಿ ನಮ್ಮ ಹಬ್ಬವನ್ನು ನಾವೆಲ್ಲರೂ ಸೇರಿ ಆಚರಿಸೋಣ,
ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ರವಿ ಕುಮಾರ್ ಮಾತನಾಡಿ, ಕಾನಿಪಾ ಸಂಘದ ಆಶ್ರಯದಲ್ಲಿ ಜು.1 ರಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ದಿನಾಚರಣೆಯನ್ನು ಆಯೋಜಿಸಲಾಗಿದ್ದು, ನಮ್ಮ ಎಲ್ಲ ಪತ್ರಕರ್ತರು, ಗಣ್ಯರು, ಸಂಘ ಸoಸ್ಥೆಯ ಪದಾಧಿಕಾರಿಗಳು, ಸೇರಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಕಾರ್ಯಕ್ರಮದ ಸಿದ್ಧತೆ ಬಹುತೇಕ ಪೂರ್ಣಗೊಂಡಿದ್ದು, ಹಬ್ಬದ ರೀತಿಯಲ್ಲಿ ಆಚರಿಸಲು ಸಿದ್ಧತೆಗಳು ಭರದಿಂದ ನಡೆದಿವೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ
ಜಿಲ್ಲಾ ಕಾರ್ಯಕಾರಣಿ ಸದಸ್ಯ ಎಂ.ಜಂಬುನಾಥ್ ಅವರು ಮಾತನಾಡಿ, ಜು.1 ರಂದು ಬಳ್ಳಾರಿಯಲ್ಲಿ ಅದ್ದೂರಿಯಾಗಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು. ಇದೊಂದು ನಮ್ಮ ಹಬ್ಬ, ಪತ್ರಕರ್ತರ ಹಬ್ಬವಿದು, ವರ್ಷಕ್ಕೊಮ್ಮೆ ಎಲ್ಲರೂ ಸೇರಿ ಅದ್ದೂರಿಯಾಗಿ ಆಚರಿಸುವ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ. ಈಗಾಗಲೇ ಸಂಘದ ಎಲ್ಲ ಸದಸ್ಯರಿಗೆ ಉಚಿತವಾಗಿ ಅಂಚೆ ಕಚೇರಿಯಲ್ಲಿ ವಿಮೆ ಮಾಡಿಸಲಾಗಿದ್ದು, ಉಳಿದವರು ಇನ್ನೂ ಮಾಡಿಸಬಹುದು. 10 ಲಕ್ಷ ರೂ.ವಿಮೆ ಸೌಲಭ್ಯ ಇದಾಗಿದೆ, ಈ ಬಾರಿಯ ನಮ್ಮ ಪತ್ರಕರ್ತರ ಹಬ್ಬದಲ್ಲಿ ಎಲ್ಲರೂ ಒಂದೇ ಸಮವಸ್ತ್ರ ಧರಿಸಬೇಕು ಎಂದು ನಿಶ್ಚಯಿಸಲಾಗಿದ್ದು, ಈ ಬಾರಿಯ ವಿಶೇಷ. ಎಲ್ಲ ನಮ್ಮ ಮಾಧ್ಯಮದವರಿಗೆ ನೆನಪಿಗಾಗಿ ಬ್ಯಾಗ್ ವಿತರಣೆ ಮಾಡುವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇವೆ ಎಂದರು.