ರಾ. ಬ. ಕೊ. ವಿ. (ಕೆಎಂಫ್ ಹಾಲು)
ಎನ್. ಧನಂಜಯ ನಾಮನಿರ್ದೇಶನ ರದ್ದು.
ಬಳ್ಳಾರಿ (4)
20:03.07.2025
ಅಧಿಸೂಚನೆ
ಸರ್ಕಾರದ ಅಧಿಸೂಚನೆ ದಿನಾಂಕ:12.07.2023ರಲ್ಲಿ ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ಇದರ ಆಡಳಿತ ಮಂಡಳಿಗೆ ಶ್ರೀ ಎನ್. ಧನುಂಜಯ ಹಮಲ್ ತಂದೆ ಮಲ್ಲಯ್ಯ ಎಲ್.ಐ.ಜಿ-246, ಕೆ.ಹೆಚ್.ಬಿ. ಕಾಲೋನಿ, ವಾರ್ಡ್ ನಂ.22, ಗಾಂಧಿನಗರ, ಬಳ್ಳಾರಿ ಜಿಲ್ಲೆ ಇವರನ್ನು ನಾಮನಿರ್ದೇಶನ ಮಾಡಿದ್ದು ಸದರಿಯವರ ನಾಮನಿದೇಶನ ರದ್ದು ಪಡಿಸಿ ಆದೇಶ ಮಾಡಲಾಗಿದೆ.
ಮುಂದುವರೆದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ರ ಪ್ರಕರಣ 28ಎ ಉಪ ಪ್ರಕರಣ (4ಬಿ)(1) ರ ಮೇರೆಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿ., ಬಳ್ಳಾರಿ ಇದರ ಆಡಳಿತ ಮಂಡಳಿಗೆ ಶ್ರೀ ಹಂಪಯ್ಯ ಸ್ವಾಮಿ ತಂದೆ ಮಹಾದೇವಯ್ಯ ಹಿರೇಮಠ, ಸಾ//ಚಿಕ್ಕಮ್ಯಾಗೇರಿ, ಯಲಬುರ್ಗಾ ತಾಲ್ಲೂಕು, ಕೊಪ್ಪಳ ಜಿಲ್ಲೆ ಇವರನ್ನು ಅಧಿಕಾರೇತರ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಸರ್ಕಾರದ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿ ಆದೇಶಿಸಿದೆ.ಚುನಾವಣೆ ಚುನಾವಣೆ ಸಮಯದಲ್ಲಿ ರದ್ದು ಮಾಡಿದ್ದೂ, ಅಚ್ಚರಿ ಗೊಂಡ ವಿಚಾರ, ಆಗಿದೆ.