ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ ಧರ ನೋಡಿ ರೈತರು ಸಂತೋಷ ವ್ಯಕ್ತ ಪಡಿಸಿದ್ದಾರೆ.
ಬಳ್ಳಾರಿ(11) ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸೋಮವಾರ ಅನಂತಪುರ ಕರ್ನೂಲು ಮುಂತಾದ ಪ್ರದೇಶಗಳಿಂದ 3000 ಚೀಲ ಮೇಲೆ ಶೇಂಗಾ ಮಾರುಕಟ್ಟೆ ಗೆ ಬಂದಿತ್ತು. ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಕಮಿಷನ್ ವಿಚಾರವಾಗಿ ವ್ಯಾಪಾರ ವಹಿವಾಟು ನಿಲ್ಲಿಸಲಾಗಿತ್ತು, ಸೋಮವಾರ ಮತ್ತೆ ರೈತರು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ದೊಡ್ಡ ಮಟ್ಟದಲ್ಲಿ ಆಗಮಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸೋಮವಾರ ಮಾರುಕಟ್ಟೆಯಲ್ಲಿ ಶೇಂಗಾದರ 7011. ರೂಪಾಯಿ ದಿಂದ 3500 ವರೆಗೆ ಟೆಂಡರ್ ಆಗಿದ್ದು ರೈತರಲ್ಲಿ ಸಂತೋಷ ಮೂಡಿಸಿದೆ.
ಹಲವಾರು ಘಟನೆಗಳಿಂದ ನಿಂತು ಹೋಗಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಸೋಮವಾರ ಪುನಃ ಆರಂಭವಾಗಿದ್ದು ಒಳ್ಳೆಯ ಧರ ಬಂದಿದೆ ಎಂದು ರೈತರು ಸಂತೋಷದಲ್ಲಿದ್ದಾರೆ.