ಅನ್ನಧಾತ ನೇ ಇವರ ಆಹಾರ,ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರಿಗೆ ಸುಳ್ಳು ಆಮಿಷ ಗಳನ್ನು ಹೇಳಿ ಟೋಪಿ!!
ರೈತರಿಗೆ ವಂಚನೆ.ಸರ್ಕಾರ ಭ್ರಷ್ಟಾಚಾರ ಪರವಾಗಿ ಇದಿಯಾ??.
ಬಳ್ಳಾರಿ(13) ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೊರ ರಾಜ್ಯಗಳಿಂದ ಅಪಾರ ಮಟ್ಟದಲ್ಲಿ ಬರುವ ಶೇಂಗಾ, ಸೂರ್ಯ ಪಾನ್, ಮುಂತಾದ ಸರಕುಗಳು ದೊಡ್ಡ ಮಟ್ಟದಲ್ಲಿ ಬರುತ್ತದೆ.
ಆದರೆ ಕೆಲ ದಿನಗಳ ಹಿಂದೆ ದಲಾಲಿ ವರ್ತಕರ ನಡುವೆ ಮತ್ತು ಅಂಡರ್ ನಡುವೆ ಗುಂದಲ ಸೃಷ್ಟಿಯಾಗಿ ಒಂದು ವಾರ ಮಾರುಕಟ್ಟೆ ವ್ಯಾಪಾರ ವಹಿವಾಟು ನಿಲ್ಲಿಸಲಾಗಿತ್ತು.
ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ರಾಜ್ಯದ ಸರಕುಗಳಿಂದ ಅಪಾರ ಮಟ್ಟದಲ್ಲಿ ಆದಾಯ ಬರುತ್ತದೆ, ಆದರೆ ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳದೆ ರೈತರಿಗೆ ಟೋಪಿ ಹಾಕಿ ಅಧಿಕ,ತೆರಿಗೆ, ಕಮಿಷನ್ ಹಮಾಲಿ, ಖರ್ಚು ಇನ್ನೂ ಮುಂತಾದ ಖರ್ಚುಗಳನ್ನು ಹಾಕಿ ರೈತರ ಬೆನ್ನು ಮುರಿದು ವಂಚನೆ ಮಾಡುತ್ತಿರುವುದು ಬಹಿರಂಗ ಸತ್ಯವಾಗಿದೆ.
ಬಳ್ಳಾರಿ ಮಾರುಕಟ್ಟೆಗೆ ರೈತರ ತಂದ ಶೇಂಗಾ ಹಸಿ ಇದೇ ಎಂದು ಕಡಿಮೆ ದರ ಹಾಕಿ ರೈತರಿಗೆ ತೊಂದರೆಯಾಗಿತ್ತು,
ಈ ವಿಚಾರದ ಹಿನ್ನೆಲೆ ಹೊರರಾಜ್ಯದ ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರದಂತೆ ಆಗಿದ್ದರು.
ತದನಂತರ ಚೇರ್ಮೆನ್ ಕಟ್ಟೆಮನೆ, ನಾಗೇಂದ್ರ, ಸೆಕ್ರೆಟರಿ, ಜಯರಾಜ್ ಡಿ.ಡಿ.ಓಂಕಾರ್ ಉಪಾಧ್ಯಕ್ಷ, ರಾಮಣ್ಣ ಪೊಲ ಬಸವರಾಜ್, ವ್ಯಾಪಾರಸ್ಥರು ದಲಾಲಿ ಅಂಗಡಿಯವರು ಟೆಂಡರ್ದಾರರು ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಮಾವೇಶವನ್ನು ನಡೆಸಿದ್ದರು.
ಈ ಸಮಾವೇಶದಲ್ಲಿ ರೈತರಿಗೆ ಯಾವುದೇ ಅಧಿಕ ಕಮಿಷನ್ ಆಗದಂತೆ ಕಮಿಷನ್ ರಹಿತ ಪಟ್ಟಿ ಮಾಡಿ ಕೊಡಬೇಕೆಂದು ದುಬಾರಿ ಖರ್ಚುಗಳು ಹಾಕದಂತೆ ರೈತರಿಗೆ ನ್ಯಾಯ ಕೊಡಿಸಬೇಕು ಎನ್ನುವ ತೀರ್ಮಾನವನ್ನು ಮಾಡಿಕೊಂಡಿದ್ದರು.
ಆದರೆ ಈ ಸಂದರ್ಭದಲ್ಲಿ ದಲಾಲಿ ಅಂಗಡಿ ಮಾಲೀಕರು ಕಮಿಷನ್ ಏಜೆಂಟರು, ನಾವು ಅಂಗಡಿ ನಡೆಸುವುದು ಹೇಗೆ ಈ ರೀತಿ ಆದರೆ ನಮಗೆ ತೊಂದರೆ ಆಗುತ್ತದೆ ಎಂದು ಹಳಲು ತೋಡಿಕೊಂಡಿದ್ದರು.
ಇದಕ್ಕೆ ಸೆಕ್ರೆಟರಿ ಅವರು ಕಾನೂನುಡಿಯಲ್ಲಿ ರೈತರಿಂದ ಯಾವುದೇ ಕಮಿಷನ್ ಪಡೆಯುವಂತಿಲ್ಲ, ದುಬಾರಿ ಖರ್ಚು ಹಾಕುವಂತಿಲ್ಲ ಬೆಳೆ ಚೀಟಿ ಯಲ್ಲಿ ಪಟ್ಟಿ ಮಾಡುವಂತೆ,ಇಲ್ಲವೆಂದು ಕಟ್ಟುನಿಟ್ಟಿನ ಆದೇಶವನ್ನು ಮಾಡಿದ್ದರು.
ದಲಾಲಿ ವರ್ತಕರು ರೈತರಿಗೆ ಯಾವುದೇ ಕಮಿಷನ್ ಹಾಕದಂತೆ ಪಟ್ಟಿ ಮಾಡಿಕೊಳ್ಳಲು ಬಹುತೇಕ ಅಂಗಡಿಯವರು ಒಪ್ಪಿಕೊಳ್ಳಲಾಗಿತ್ತು,ಆದರೆ ದಲ್ಲಾಲಿ ವರ್ತಕರಿಗೆ ಕಮಿಷನ್ ನನ್ನು ಟೆಂಡರ್ ಹಾಕುವರು ಸರಕುಗೆ ಹಾಕುವ ಧರದಲ್ಲೇ ಅದನ್ನ ಸೇರಿಸಿ ಇಟ್ಟುಕೊಂಡು ಟೆಂಡರ್ ಹಾಕಿ ದಲಾಲಿ ಯವರ ಕಮಿಷನ್ ಕೂಡ ಟೆಂಡರ್ ಶೇಂಗಾ ಖರೀದಿದಾರರೇ ಕೊಡಬೇಕು ಎನ್ನುವುದು ತೀರ್ಮಾನ ಮಾಡಿಕೊಂಡಿದ್ದರು.
ಆದರೆ ಕೆಲ ಟೆಂಡರ್ ಹಾಕುವ ಟೆಂಡರ್ದಾರರು ಅದನ್ನು ಸೇರಿಸಿ ಟೆಂಡರ್ ಹಾಕಲು ಆಗೋದಿಲ್ಲ ಕಮಿಷನ್ ರೈತರ ಮುಖಾಂತರ ತೆಗೆದುಕೊಳ್ಳಬೇಕು ಹಾಗಾದ್ರೆ ನಾವು ಟೆಂಡರ್ ಹಾಕುತ್ತೇವೆ ಎಂದು ಬಿಗಿ ಹಿಡಿದಿದ್ದರು, ಈ ರೀತಿ ಆದರೆ ಕೃಷಿ ಉತ್ಪನ್ನ ಮಾರುಕಟ್ಟೆ ಬೀಗ ಹಾಕಿಕೊಳ್ಳಬೇಕು ಆಗುತ್ತೆ ಎಂದು ಒಂದು ರೀತಿಯಲ್ಲಿ ಎಚ್ಚರಿಕೆಯನ್ನು ನೀಡಿದ್ದರು.
ಟೆಂಡರ್ ಹಾಕಲು ಯಾರು ಬರುವುದಿಲ್ಲವೆಂದು ವ್ಯಾಪಾರ ವಹಿವಾಟು ನಿಲ್ಲುತ್ತದೆ ಎಂದುತಿಳಿಸಿದ್ದರು,ಇದಕ್ಕೆ ಆಕ್ರೋಶ ಗೊಂಡ ಅಧ್ಯಕ್ಷರು ಕೃಷಿ ಉತ್ಪನ್ನ ಮಾರುಕಟ್ಟೆ ಯಾರದ್ದುಲ್ಲ ಸರ್ಕಾರದ್ದು ತಮಗೆ ಇಷ್ಟ ಇದ್ದರೆ ಟೆಂಡರ್ ಹಾಕಬಹುದು,ಇಲ್ಲದಿದ್ದರೆ ಸುಮ್ಮನೆ ಕೂಡಬೇಕು ಹೊರ ಜಿಲ್ಲೆಗಳಿಂದ ರಾಜ್ಯದಿಂದ ಟೆಂಡರ್ ಹಾಕೊವರನ್ನು ಕರೆಸಿ ಹಾಕಿಸಲಾಗುತ್ತದೆ ಎಂದು ರೈತರಿಗೆ ನ್ಯಾಯ ಒದಗಿಸಬೇಕು ಎನ್ನುವುದು ಕೃಷಿ ಉತ್ಪನ್ನ ಮಾರುಕಟ್ಟೆಗೆ ಆದಾಯ ಬರಬೇಕು ಎನ್ನುವುದು ನಮ್ಮ ಗುರಿ ಆಗಿದೆ ಎಂದು , ರೈತರಿಂದ ಕಮಿಷನ್ ಪಡೆಯುವುದನ್ನು ಒಪ್ಪೋದೇ ಇಲ್ಲವೆಂದು ತಿಳಿಸಿದ್ದರು.
ಇಷ್ಟು ಆದಮೇಲೆ ಸೋಮವಾರ ಖುಷಿ ಉತ್ಪನ್ನ ಮಾರುಕಟ್ಟೆಗೆ ರೂ.3,000 ಚೀಲ ಮೇಲ್ಪಟ್ಟು ಶೇಂಗಾ ಬಂದಿತ್ತು ಮಾರುಕಟ್ಟೆಯಲ್ಲಿ, 7,000 ಅವರಿಗೆ ಲಾಭದಾಯಕ ಧರ ಆಗಿತ್ತು ರೈತರು ಕೂಡ ಖುಷಿಯಿಂದ ಸಂತೋಷವನ್ನು ವ್ಯಕ್ತಪಡಿಸಿದ್ದರು.
ಇದಕ್ಕ ಮೊದಲು ದಲಾಲಿ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು ಮೈಕ್ ಮುಖಾಂತರ ರೈತರ ತಂದು ಮಾಲಿಗೆ ಯಾವುದೇ ಕಮಿಷನ್ ತೆಗೆದು ಕೊಳ್ಳಬಾರದೆಂದು ಬಹಿರಂಗ ಪ್ರಚಾರ ಮಾಡಿದ್ದರು ಅಷ್ಟರಲ್ಲಿ ವರ್ತಕರು ಮತ್ತೊಮ್ಮೆ ಮೀಟಿಂಗ್ ಮಾಡಿ ಕಮಿಷನ್ ಇಲ್ಲದೆ ವ್ಯಾಪಾರ ಮಾಡೋದು ಆಗಲ್ಲವೆಂದು ಅಧಿಕಾರಿಗಳು, ಅಧ್ಯಕ್ಷರು ಅವರು ಹೇಳಿದಂತೆ ಮಾಡಲು ಸಾಧ್ಯವಿಲ್ಲ ಎಂದು ಆ ರೀತಿಯಾದರೆ ನಾವು ಟೆಂಡರ ಹಾಕೋದಿಲ್ಲವೆಂದು ಮತ್ತೊಂದ ನಿರ್ಣಯ ಮಾಡಿಕೊಂಡು, ಕೊನೆಗೆ ರೈತರಿಂದ ಕಮಿಷನ್ ಪಡೆಯುವದನ್ನೇ ತೀರ್ಮಾನ ಮಾಡಿ ಸೋಮವಾರ ಶೇಂಗಾ ವ್ಯಾಪಾರ ನಡೆದಿದ್ದು ಸವಾಲ್ ಆಗಿದೆ.
ಆದರೆ ದಲಾಲಿ ಅಂಗಡಿಯವರು ಸರ್ಕಾರದ ಆದೇಶದ ಪ್ರಕಾರ ರೈತರಿಂದ ಕಮಿಷನ್ ಪಡೆಯುವಂತಿಲ್ಲ ಎಂದರು ಕೂಡ
ರಾಜಾರೋಷವಾಗಿ ಸೆಕ್ರೆಟರಿ ಚೇರ್ಮೆನ್ ಅವರಿಗೆ ಚಾಲೆಂಜ್ ಆಗಿ ಕಮಿಷನ್ ಪಡೆದು ದುಬಾರಿ ಖರ್ಚುಗಳನ್ನು ಹಾಕಿ ಬಿಳಿ ಚೀಟಿಯಲ್ಲಿ ಪಟ್ಟಿ ಮಾಡಿಕೊಟ್ಟಿದ್ದು ಬಹಿರಂಗವಾಗಿದೆ.
ಸರ್ಕಾರ ಆದೇಶಕ್ಕೆ ಯಾರು ಕಿಮ್ಮತ್ತು ನೀಡಿಲ್ಲ. ರೈತರಿಗೆ ಸುಳ್ಳು ಆಮಿಷಗಳನ್ನು ಹೇಳಿ ಕಮಿಷನ್ ಹಾಕುವುದಿಲ್ಲ ಎಂದು ಪ್ರಚಾರ ಮಾಡಿ ಟೋಪಿ ಟೋಪಿ ಹಾಕಿದ್ದಾರೆ.
ರೈತರಿಗೆ ನೀಡಿರುವ ಪಟ್ಟಿ ಬಹಿರಂಗಗೊಂಡಿದೆ ಅಧಿಕಾರಗಳು ಕೂಡ ಮೌನವಾಗಿದ್ದು ರೈತರಿಗೆ ಪಂಗನಾಮ ಹಾಕದಿದ್ದರು ಲೂಟಿ ಮಾಡುತ್ತಿದ್ದರು ರೈತರ ಬೆನ್ನು ಮುರಿಯುತ್ತಿದ್ದಾರೆ.
ಅಧಿಕಾರಿಗಳೇ ನೇರ ಹೊಣೆ ಎಂದು ರೈತರಿಂದ ಆಕ್ರೋಶ ವ್ಯಕ್ತವಾಗಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೆಲ ಇತಿಹಾಸದ ವರ್ಷಗಳಿಂದ ರೈತರಿಂದ ಕಮಿಷನ್ ಪಡೆದು ಟೋಪಿ ಹಾಕುತ್ತಿರುವುದು ವಂಚಿನ ಮಾಡುತ್ತಿರುವುದು ಬರುತ್ತಾನೆ ಇದೆ.
ಮತ್ತೊಂದು ಕಡೆ ಖರೀದಿದಾರರು ಸರಕುಗಳನ್ನು ಖರೀದಿ ಮಾಡಿ ಕಡಿಮೆ ಧರ ತೋರಿಸಿ ತೆರಿಗೆ ಮಾರುಕಟ್ಟೆ ಫೀ ಇದು ಯಾವುದನ್ನು ಸರಿಯಾಗಿ ಕಟ್ಟದೆ ಹೊಂಗನಾಮ ಹಾಕುತ್ತಿರುವುದು ಕೂಡ ಬಹಿರಂಗಗೊಂಡಿದೆ.
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರಿಗೆ ವಂಚನೆ, ಮಾಡತಾ ಇದ್ದರು,ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ನಾಚಿಕೆಗೇಡು ಸಂಗತಿ ಆಗಿದೆ ಎಂದು ಇನ್ನು ಮುಂದೆ ಕೃಷಿ ಉತ್ಪನ್ನ ಮಾರುಕಟ್ಟೆಗೆ ರೈತರು ಯಾವುದೇ ಸರಕುಗಳನ್ನು ತರಲು ಹಿಂದಿ ಮುಂದೆ ನೋಡುವ ವಾತಾವರಣ ಸೃಷ್ಟಿಯಾಗಿದೆ.
ಇದರಿಂದ ಸರ್ಕಾರಕ್ಕೆ ಬರುವ ಆದಾಯ ಶೂನ್ಯವಾಗುತ್ತದೆ ಈಗಲಾದರೂ ಆಡಳಿತ ಎಚ್ಚೆತ್ತುಕೊಂಡು ರೈತರ ಬೆನ್ನಿಗೆ ನಿಂತು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಆದಾಯ ವನ್ನು ಹೆಚ್ಚು ಮಾಡುತಾರೆ, ಅಥವಾ ಪಂಗನಾಮ ಹಾಕಿ ಲೂಟಿ ಮಾಡುವವರೇ ಎನ್ನುವುದು ಕಾದು ನೋಡಬೇಕಾಗಿದೆ.