This is the title of the web page
This is the title of the web page

Please assign a menu to the primary menu location under menu

State

ನ್ಯೂಸ್ 9ಟುಡೇ ಇನ್ ಫಲಶ್ರುತಿ.  ತಕ್ಷಣವೇ ಗುಂಡಿ ಮುಚ್ಚಿದ ಆಡಳಿತ.

ನ್ಯೂಸ್ 9ಟುಡೇ ಇನ್ ಫಲಶ್ರುತಿ.   ತಕ್ಷಣವೇ ಗುಂಡಿ ಮುಚ್ಚಿದ ಆಡಳಿತ.

🏹 ನ್ಯೂಸ್ 9ಟುಡೇ ಇನ್ ಫಲಶ್ರುತಿ. ತಕ್ಷಣವೇ ಗುಂಡಿ ಮುಚ್ಚಿದ ಆಡಳಿತ.

ಬಳ್ಳಾರಿ (20)ನಡು ರಸ್ತೆಯಲ್ಲಿ ಗುಂಡಿ ಬಿದ್ದು ವರ್ಷಗಳು ಕಳೆದರೂ ಪುಟ್ಟಿ ಮಣ್ಣು ಹಾಕುವ ನಾಥರಿಲ್ಲ, ಗಿಡ ಮರ ಹಾಕಿದ್ದರೆ, ಅನ್ನುವ ಸುದ್ದಿಯನ್ನು ನ್ಯೂಸ್ 9ಟುಡೇ,ಇನ್.ವರದಿ ಮಾಡಲಾಗಿತ್ತು.ಎಚ್ಚುತ್ತುಕೊಂಡ ಆಡಳಿತ ತಕ್ಷಣವೇ ಗುಂಡಿ ಮುಚ್ಚ ಲಾಗಿದೆ.

ಡಾಂಬರ್ ಕೂಡ ಹಾಕಲಾಗುತ್ತೆ ಎಂದು ಪಾಲಿಕೆ ಕಮಿಷನರ್ ಖಾಲಿಲ್ ದೂರವಾಣಿ ಮೂಲಕ ತಿಳಿಸಿದ್ದಾರೆ.

 

🏹ನ್ಯೂಸ್9 ಟುಡೇ ವರದಿ ಈಹೆಂದೆ ಮಾಡಲಾಗಿತ್ತು.

ಬಳ್ಳಾರಿ,ನಗರದ ತಾಳೂರು ರಸ್ತೆಯ ನೂತನ ಕೋರ್ಟ್ ಮುಂಭಾಗದ ಹತ್ತಿರ ಹೆದ್ದಾರಿಯಲ್ಲಿ ಗುಂಡಿ ಬಿದ್ದು ವರ್ಷಗಳು ಕಳೆದರೂ ಸಂಬಂಧಿತ ಇಲಾಖೆ ಅಧಿಕಾರಿಗಳು ಒಂದು ಪುಟ್ಟಿ ಮಣ್ಣು ಹಾಕಿ ಮುಚ್ಚುವ ಪ್ರಯತ್ನ ಮಾಡಿಲ್ಲ.

 

ಈ ರಸ್ತೆ ಮೂಲಕ ಹಳ್ಳಿಗಳಿಗೆ ಮತ್ತು ಇಂಟ್ರನ್ಯಾಷನಲ್ ಶಾಲೆಗಳಿಗೆ ಓಡಾಟ ಮಾಡುವ ಮುಖ್ಯ ರಸ್ತೆ, ಭಾರಿ ದೊಡ್ಡ ಮಟ್ಟದಲ್ಲಿ ರಿಯಲ್ ಎಸ್ಟೇಟ್ ಕೂಡ ಬೆಳೆದು, ಎಕ್ಕರೆಗಟ್ಟಲೆ, ಭೂಮಿಗಳು ನಿವಾಸ ಗಳು ಆಗಿದ್ದಾವೆ.

 

ಈ ರಸ್ತೆಯಲ್ಲಿ ಪ್ರತಿನಿತ್ಯ ಶಾಲಾ ಬಸ್ಸುಗಳು, ಬಹುತೇಕ ಇಲಾಖೆ ಅಧಿಕಾರಿಗಳು, ರಾಜಕಾರಣಿಗಳು, ಈ ಭಾಗದಲ್ಲಿ ಹೆಚ್ಚಾಗಿದ್ದಾರೆ.!!

ಓಡಾಟ ಮಾಡುತ್ತಿದ್ದಾರೆ.

 

ಇವರಿಗೆ ಯಾರಿಗೆ ಈ ಗುಂಡಿ ಕಂಡಿಲ್ಲವೋ ಅಥವಾ ಸಂಬಂಧಿತ ಅಧಿಕಾರಿಗಳಿಗೆ ಕಣ್ಣುಗಳು ಇಲ್ಲವೋ ಅನ್ನುವದು ತಿಳಿಯದಂತಾಗಿದೆ.

 

ಈ ರಸ್ತೆಯಲ್ಲಿ ಬೀದಿಬದಿ ವ್ಯಾಪಾರಮಾಡುವ ಅವರು ಕೂಡ ದೊಡ್ಡ ಸಂಖ್ಯೆಯಲ್ಲಿ ವ್ಯಾಪಾರ ಮಾಡುತ್ತಾ ಇರುತ್ತಾರೆ.

 

ಅರ್ಧ ರಸ್ತೆ ಬೀದಿಬದಿ ವ್ಯಾಪಾರ ವಾಹನಗಳಿಂದಲೇ ತುಂಬಿ ತುಳುಕುತ್ತಾ ಇರುತ್ತದೆ.

 

ಅಂತಹ ಸಂದರ್ಭದಲ್ಲಿ ಯಾವುದೇ ವಾಹನ ಈ ಗುಂಡಿಯನ್ನು ತಪ್ಪಿಸಿ ಹೋಗಲು ಸಾಧ್ಯವಾಗದ ವಿಚಾರವಾಗಿದೆ ದುಡ್ಡು ವಾಹನದಿಂದ ಹಿಡಿದು ಸಣ್ಣ ವಾಹನ ಕೂಡ ಈ ಕುಣಿಯೊಳಗೆ ಬಿದ್ದು ಹೋಗುವಂತಹ ಪರಿಸ್ಥಿತಿ ಸೃಷ್ಟಿ ಯಾಗಿದೆ.

 

ಎಷ್ಟೋ ಬಾರಿ ವಾಹನಗಳಿಗೆ ಅಪಾಯ ಸಂಬವಿಸಿದ್ದು, ಗಾಡಿಗಳು ರಿಪೇರಿಗೆ ಬಂದಿರುವುದು ತಿಳಿದ ವಿಚಾರವಾಗಿರುತ್ತದೆ.

 

ಆದರೆ ಅಧಿಕಾರಿಗಳು ಮಾತ್ರ ಸಾರ್ವಜನಿಕರು ಓಡಾಡುವ ಸ್ಥಳೀಯ ಗುಂಡಿಯನ್ನು ಪುಟ್ಟಿ ಮಣ್ಣು ಹಾಕಿ ಅದನ್ನು ಸರಿಪಡಿಸಲು ಆಗುತ್ತಿಲ್ಲ ಕೊನೆಗೆ ಸಾರ್ವಜನಿಕರು ಆ ಗುಂಡಿ ಮೇಲೆ ಗಿಡ ಮರಗಳನ್ನು ಹಾಕಿ ಅಪಾಯವಿದೆ ಎನ್ನುವ ಸೂಚನೆಯನ್ನು ನಗರ ಮಧ್ಯದಲ್ಲಿ ಮಾಡುತ್ತಿರುವುದು ಆಡಳಿತ ಕ್ಕೆ ಕಪ್ಪು ಚುಕ್ಕೆಯಾಗಿದೆ.


News 9 Today

Leave a Reply