ಲಕ್ಷಗಟ್ಟಲೆ ಮೌಲ್ಯವನ್ನು ಪಡೆದ
ಪಡಿತರ ಅಕ್ಕಿ ವಶಕ್ಕೆ. ಲಾರಿ ಗೋದಾಮು ಸಿಜ್, ಪ್ರಕರಣ ದಾಖಲೆ.
ಬಳ್ಳಾರಿ/ಗಂಗಾ ವತಿ (27)
ದಿನಾಂಕ, 26-08-2025 ರಂದು 5-00 ಪಿಎಂ, ಗಂಟೆಯ ಸುಮಾರಿಗೆ ಸುಹಾಸ್ ತಂದೆ ಗಣೇಶ್ ಆಹಾರ ಶಿರಸ್ತೇದಾರರು ತಹಶೀಲ್ದಾರರ ಕಛೇರಿ ಗಂಗಾವತಿ ರವರು ಠಾಣೆಗೆ ಹಾಜರಾಗಿ ಜಪ್ತಿ ಪಡಿಸಿಕೊಂಡ ಮುದ್ದೆಮಾಲು, ಶ್ಯಾಂಪಲ್ ಅಕ್ಕಿಯ ಜೊತೆಗೆ ಒಂದು ಗಣಕಿಕೃತ ದೂರನ್ನು ನೀಡಿದ್ದು,
ದಿನಾಂಕ 25-08-2025 ರಂದು ಈವರು ಮತ್ತು ಕೆ.ಎಂ. ಸಾಗರತ್ನ, ಆಹಾರ ನಿರೀಕ್ಷಕರು, ಗಂಗಾವತಿ ನಗರ ಮತ್ತು 2) ಶೇಖರಪ್ಪ .ಎಸ್ ಆಹಾರ ನಿರೀಕ್ಷಕ ಗಂಗಾವತಿ ಗ್ರಾಮೀಣ ಕರ್ತವ್ಯದಲ್ಲಿ ಇದ್ದಾಗ,ಕಿಲಾ, ಏರಿಯಾದಲಿ, ಪಡಿತರ ಅಕ್ಕಿಯನ್ನು ಮನೆಯೊಂದರಲಿ, ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಮಾಹಿತಿ ಮೇರೆಗೆ ದಾಳಿ ಮಾಡಿ ತನಿಖೆ ಮಾಡುತ್ತಿರುವ ಸಮಯದಲ್ಲಿ, 5.00 ಸಂಜೆ ಆಗಿರುತ್ತದೆ.
ಅದೇ ಸಮಯದಲ್ಲಿ ಗಂಗಾವತಿ ನಗರದ KFCSC ಗೋದಾಮಿನಿಂದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂದು ನಮಗೆ ದೂರವಾಣಿ ಮೂಲಕ ಮತ್ತು ಲಿಖಿತವಾಗಿ ಡಾ: ವೆಂಕಟೇಶ ಬಾಬು ಅಧ್ಯಕ್ಷರು, ತಾಲೂಕ ಮಟ್ಟದ ಪಂಚಗ್ಯಾರಂಟಿ ಯೋಜನೆ ಸಮೀತಿ ಗಂಗಾವತಿ ಇವರು ಮಾಹಿತಿ ನೀಡಿದರು, ಆಗ ನಾವು ಕಿಲ್ಲಾ ಏರಿಯಾದಲಿ, ಹುಸೇನ್ ಪೀರಾ ಇವರ ಮನೆಯಲ್ಲಿದ್ದ ಅಕ್ಕಿಯನ್ನು ನಿಯಮಾನುಸಾರ ಸರ್ಕಾರಕ್ಕೆ ಜಪ್ತಿ ಮಾಡಿಕೊಂಡು ತಕ್ಷಣದಲ್ಲಿ, ಮುಂದೆ ನಗರದ KFCSC ಹೊಸ ಗೋದಾಮಿಗೆ ಹೋದೆವು, ಸದರಿ ಗೋದಾಮು ನಗರದ ಚೆನ್ನಬಸವೇಶ್ವರ ಸರ್ಕಲ್ ನಿಂದ 200 ಮೀಟರ್ ದೂರದಲಿ ಕನಕಗಿರಿ ಮುಖ್ಯರಸ್ತೆಯ ವಿವೇಕಾನಂದ ಆಸ್ಪತ್ರೆ ಎದುರುಗಡೆ ಬಲಭಾಗದಲ್ಲಿ, KFCSCಯ ಹೊಸ ಗೋದಾಮು ಇರುತ್ತದೆ, ಅಲ್ಲಿ ತಹಶೀಲ್ದಾರರು ಗಂಗಾವತಿ ಪೋಲಿಸಿ ಸಿಬ್ಬಂಧಿಗಳು ಮತ್ತು ನಾವುಗಳು ಹಾಜರಿದೆವು ಡಾ|| ವೆಂಕಟೇಶ ಬಾಬು ಇವರು ಸ್ಥಳದಲ್ಲಿ ಹಾಜರಿದ್ದು,ಅವರಂತೆ ಶ್ರೀ ಉಮಾಶಂಕರ್ ರೈಸ್ ಮಿಲ್ ನಲ್ಲಿ,, ವಶಪಡಿಸಿಕೊಂಡ 168.40 ಕ್ವಿಂಟಲ್ ಅಕ್ಕಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮಾಡಲಾದ ಆದೇಶದಂತೆ ಶ್ರೀ ಉಮಾಶಂಕರ ರೈಸ್ ಮಿಲ್ ಮಾಲೀಕರಿಗೆ ಹಿಂತಿರುಗಿಸುವಾಗ ನಾನು ಗೋದಾಮಿಗೆ ಹೋಗಿದ್ದು, ಈ ವಿಷಯವನ್ನು ನಾನು ಗೋದಾಮು ಮ್ಯಾನೇಜರ್ ರಿಂದ ಕರೆ ಮಾಡಿ ತಿಳುದುಕೊಂಡಿರುತ್ತೇನೆ, ಆದರೆ ಲಾರಿಯಲಿ.. ಆದೇಶಕ್ಕಿಂತ ಹೆಚ್ಚು ಅಂದರೆ ಅಂದಾಜು 250 ಕ್ವಿಂಟಲ್ ಅಕ್ಕಿಯನ್ನು ಕಳುಹಿಸುತ್ತಿದ್ದು, ಅನುಮಾನ ಬಂದು ಈ ಬಗ್ಗೆ,ಕೂಡಲೆ ಪರಿಶೀಲಿಸಲಸಿ ಎಂದು ತಿಳಿಸಿರುತ್ತಾರೆ, ಮತ್ತು ಲಿಖಿತವಾಗಿ ಮುದ್ರಾಮು ಪತ್ರ ನೀಡಿರುತ್ತಾರೆ, ಆಗ ಸಮಯ ರಾತ್ರಿ 7.30 ಆಗಿತ್ತು, ಅಲ್ಲಿ ಇದ್ದ 05 ಜನರನ್ನು ಪಂಚರಾಗಿ ನೇಮಕಮಾಡಿಕೊಂಡು ಪರಿಶೀಲಿಸಲಾಗಿ ಗೋದಾಮಿಗೆ ಬೀಗ ಹಾಕಿದ್ದು ಇರುತ್ತದೆ ಹಾಗೂ ಆವರಣದಲ್ಲಿ ಕೆಂಪು ಬಣ್ಣವ ಲಾರಿ ಸಂಖ್ಯೆ KA30A1312 ನಿಂತಿರುತ್ತದೆ, ಗೋದಾಮು ವ್ಯವಸ್ಥಾಪಕರಾದ ಸೋಮಶೇಖರ್ ಬುಡ್ಡಣ್ಣನವರ್ ಇವರಿಗೆ ದೂರವಾಣಿ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿರುವುದಿಲ್ಲ. ನಂತರ ಮೊಬೈಲ್ ಸ್ವಿಚ್ ಆಫ್ ಬಂದಿರುತ್ತದೆ, ಸ್ವಲ್ಪ ಹೊತ್ತು ಕಾಯ್ದು ನೋಡಲಾಗಿ ಗೋದಾಮು ವ್ಯವಸ್ಥಾಪಕರು ಬಾರದೇ ಇದ್ದಾಗ ಪಂಚರೊಂದಿಗೆ ಗೋದಾಮು ಹೊರಗಡೆ ಆವರಣದಲ್ಲಿ ನಿಂತಿದ್ದ ಕೆಂಪು ಬಣ್ಣದ ಲಾರಿ ಸಂಖ್ಯೆ KA30A1312 ಅನ್ನು ಪರಿಶೀಲಿಸಲಾಗಿ ಲಾರಿ ಚಾಲಕ ಇರುವುದಿಲ್ಲ, ಲಾರಿಯಲ್ಲೇ ಕೀ ಬಿಟ್ಟು ಓಡಿಹೋಗಿರುವುದು ತಿಳುದುಬಂದಿರುತ್ತದೆ.
ಲಾರಿಯಲ್ಲಿ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲಗಳಿದ್ದು, ಅದರ ಶಿರೋನಾಮೆ LALA Rice ಎಂದು ಇರುತ್ತದೆ, ಅದು ಹೊಲಿಗೆ ಮಾಡಿದ್ದು ಇರುತ್ತದೆ, ಅವುಗಳನ್ನು ತೆರೆದು ನೋಡಿದಾಗ ಅದರರಲ್ಲಿ ಪಡಿತರ ಆಕ್ಕಿಗೆ ಹೋಲುವ ಅಕ್ಕಿ ಇರುವುದು ಕಂಡುಬಂದಿರುತ್ತದೆ, ಲಾರಿಯಲ್ಲಿದ ಚೀಲಗಳು ಅಂದಾಜು 540 ಅವುಗಳ ತೂಕ ವಿಭಿನ್ನವಾಗಿ ಕಂಡುಬಂದ ಕಾರಣ ಅದನ್ನು ವೇ ಬ್ರಿಡ್ಜ್ ಮಾಡಿಸಿ ತೂಕ ನೋಡಲಾಗಿ ಅಂದಾಜು 250 ಕ್ವಿಂಟಲ್ ಇರುವುದು ಕಂಡುಬಂದಿರುತ್ತದೆ.
ಗೋದಾಮು ಬೀಗ ಇಲ್ಲದೆ ಇರುವುದರಿಂದ ಮತ್ತು ಸದರಿ ಸ್ಥಳದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದಿದ್ದರಿಂದ ತಡರಾತ್ರಿಯಾಗಿದ್ದರಿಂದ ಗೋದಾಮಿನ ಬೀಗವನ್ನು ಬಿಳಿ ಬಟ್ಟೆಯಿಂದ ಸುತ್ತಿ ಕಟ್ಟಿ ಅರಗಿನಿಂದ ತಾತ್ಕಾಲಿಕ ಸೀಲ್ ಮಾಡಲಾಯಿತು, ಮತ್ತು ಲಾರಿಯನ್ನು ನಗರದ ಪೋಲೀಸ್ ಠಾಣೆಯಲ್ಲಿ ತಂದು ನಿಲಿಸಲಾಯಿತು.
ಗೋದಾಮಿಗೆ ಪೋಲೀಸ್ ಬಂದೋಬಸ್ತ್ ನೀಡುವಂತೆ ಪೋಲೀಸ್ ಇಲಾಖೆಗೆ ಕೋರಿದಂತೆ ಪೋಲೀಸ್ ಗಸ್ತಿನಲ್ಲಿದ್ದರು ಆಗ ಸಮಯ 9.30 ಗಂಟೆಯಾಗಿತ್ತು.
ಮರುದಿನ ಬೆಳಿಗ್ಗೆ ಅಂದರೆ ದಿನಾಂಕ 26-08-2025ರಂದು ಮತ್ತೆ
ನಾವುಗಳು ಸ್ಥಳದಲ್ಲಿದ್ದ ಪಂಚರೊಂದಿಗೆ ಬೆಳಿಗ್ಗೆ ಸಮಯ 10.00 ಗಂಟೆಗೆ ಹಾಜರಿದ್ದೆವು.
ಸುಮಾರು ಹೊತ್ತು ಕಾದು ನೋಡಿದರೂ ಗೋದಾಮು
ವ್ಯವಸ್ಥಾಪಕರು ಸ್ಥಳಕ್ಕೆ ಬಂದಿರುವುದಿಲ್ಲ, ಅಷ್ಟರಲ್ಲಿ ಗೋದಾಮಿನ ವ್ಯವಸ್ಥಾಪಕರು ತಹಶೀಲ್ದಾರ್ ಕಛೇರಿಯ ಇ-ಮೇಲ್ ಗೆ ಸಂದೇಶ ಕಳುಹಿಸಿ ಆರೋಗ್ಯ ಸರಿಯಿಲ್ಲದ ಕಾರಣ ನಾನು ಗೋದಾಮಿಗೆ ಹಾಜರಾಗಲು ಸಾಧ್ಯವಿಲ್ಲ,ಎಂದು ಗೋದಾಮಿನ ಬೀಗವನ್ನು ಸಹಾಯಕರೊಂದಿಗೆ ಕಳೊಹಿಸಿ ಕೊಟ್ಟಿರುತ್ತೇನೆಂದು ತಿಳಿಸಿರುತ್ತಾರೆ, ಅಷ್ಟರಲ್ಲಿ. ಹಮಾಲಿ ಒಬ್ಬರು ಬೀಗವನ್ನು ತಂದು ನೀಡಿದರು ಆಗ ಸಮಯ 12.30 ಆಗಿತ್ತು, ಬೀಗ ಲಭ್ಯವಾದ ತಕ್ಷಣ ಸ್ಥಳದಲ್ಲಿದ್ದ ಪಂಚರೊಂದಿಗೆ ಸೀಲ್ ಇರುವ ಬೀಗಗಳನ್ನು ತೆರೆದು ಗೋದಾಮಿನ ಒಳಗಡೆ ಹೋಗಿ ಪರಿಶೀಲಿಸಲಾಯಿತು, ಪ್ರಾರಂಭದಲಿ, ಮದ್ಯಾಹ್ನ ಬಿಸಿ ಊಟಕ, (MDM) ಸಂಬಂಧಿಸಿದ ಪಾಮ್ ಆಯಿಲ್ ಎಣ್ಣೆಯ ಬಾಕ್ಸ್ ಗಳು, ಹಾಸ್ಟೆಲ್ ಗಳಿಗೆ ಸಂಬಂಧಿಸಿದ ಗೋದಿ ಚೀಲಗಳು ಮತ್ತು
ಪಡಿತರ ಅಕ್ಕಿ ಚೀಲಗಳ ನಿಟ್ಟುಗಳು ಇದ್ದವು.
ಹಾಗೆಯೇ ಪರಿಶೀಲಿಸುತ್ತಾ ಮುಂದೆ ಹೋದಾಗ ಹಳದಿ ಬಣ್ಣದ ಪ್ಲಾಸ್ಟಿಕ್ ಚೀಲಗಳಲ್ಲಿ,, ಅಕ್ಕಿಯನ್ನು ತುಂಬಿ ಇಟ್ಟಿರುವುದು ಕಂಡುಬಂದಿದ್ದು ಅವುಗಳಲ್ಲಿ ಕೆಲವೊಂದು ಹೊಲಿಗೆ ಹಾಕಿದ್ದು, ಇನ್ನೂ ಕೆಲಕ್ಕೆ ಹೊಲಿಗೆ ಹಾಕದೆ ಇಟ್ಟಿದ್ದು ಮತ್ತು ಖಾಲಿ
ಪಾಸ್ಟಿಕ್ ಚೀಲಗಳು ಸಹ ಇರುತ್ತವೆ ಪರಶೀಲನೆ ನಂತರ ಗೋದಾಮನ್ನು ತಾತ್ಕಾಲಿಕವಾಗಿ ಸೀಲ್ ಮಾಡಲಾಗಿ ಸ್ಥಳದಲ್ಲಿ ಪಂಚನಾಮ ಮುಕ್ತಾಯ ಮಾಡಿದ್ದು ಆಗ ಸುಮಾರು 1:30 ಆಗಿತು. ಪ್ರಕರಣ ಪರಿಶೀಲನೆ ನೇತರ ನಗರದದ ಕೆ.ಎಫ್.ಸಿ.ಎಸ್.ಸಿ ಗೋದಾಮಿನಲ್ಲಿ, ಪಡಿತರ ಅಕ್ಕಿಯನ್ನು ಆಕ್ರವಾಗಿ ಸಾಗಾಣಿಕೆ ಮಾಡುತ್ತಿರುವುದು ತಿಳಿದು ಬಂದಿರುತ್ತದೆ, ಆದ್ದರಿಂದ ಪ್ರಕರಣದಲ್ಲಿ ವಶಪಡಿಸಿಕೊಂಡ ಲಾರಿ ವಾಹನ ಸಂಖ್ಯೆ KA30A1312 ಅದರಲಿದ್ದ ಸುಮಾರು 250 ಕ್ವಿಂಟಲ್ ಅಕ್ಕಿ ಗೋದಾಮಿನಲಿ, ಪಾಸ್ಮಿಕ್ ಚೀಲದಲಿ ಲಭ್ಯವಾದ 75 ಕ್ವಿಂಟಲ್ ಒಡು ಅಂದಾಜು ಕಿಮ್ಮತ್ತು ರೂ. 9,10,000-00 ಗಳು ಬೆಲೆಬಾಳುವ ಪಡಿತರ ಅಕ್ಕಿಯನ್ನು ಆಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವುದು ತಿಳಿದು ಬಂದ ಕಾರಣ 1) ಗೋದಾಮು ವ್ಯವಸ್ಥಾಪಕರಾದ ಶ್ರೀ ಸೋಮಶೇಖರ ಬುಡ್ನನವರ, 2) ಶ್ರೀ ಉಮಾಶಂಕರ್ ರೈಸ್ ಮಿಲ್ ಮಾಲೀಕರು ವಿದ್ಯಾನಗರ ಗಂಗಾವತಿ 3) ಲಾರಿ ವಾಹನ ಮಾಲೀಕರು ಮತ್ತು 4) ವಾಹನ ಚಾಲಕರ ಮೇಲೆ ಆಗತ್ಯ ವಸ್ತುಗಳ ಕಾಯ್ದೆ 1955ರ ಕಲಂ 387 ರಸ್ತೆಯ ವಿಚಾರಣೆಗೆ ಒಳಪಡಿಸಿ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಕೋರಿ ದೂರು ನೀಡಿದ್ದಾರೆ. ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನ ನಂ 179/2025 ಕಲಂ: 3 & 7 ಅಗತ್ಯ ವಸ್ತುಗಳ ಕಾಯ್ದೆ 1955 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.