ಕೆ ಆರ್ ಪಿ ಪಿ ಪಕ್ಷದ ಗೆಲುವಿಗೆ 101 ಡೊಳ್ಳುಗಳನ್ನು ವಿತರಿಸಿದ ಅಭಿಮಾನಿ
ಬಳ್ಳಾರಿ: ಕೆ ಆರ್ ಪಿ ಪಿ ಪಕ್ಷದ ಗೆಲುವಿಗಾಗಿ ಸಂಸ್ಥಾಪಕರಾದ ಗಾಲಿ ಜನಾರ್ಧನ ರೆಡ್ಡಿ ಅವರಿಗೆ ಈ ಹಿಂದೆ 101 ಕುರಿಗಳನ್ನು ದಾನವಾಗಿ ನೀಡಿದ್ದು. ಅದರಂತೆ ಇಂದು ಕೆ ಆರ್ ಪಿ ಪಿ ಪಕ್ಷದ ಬಳ್ಳಾರಿ ನಗರ ಅಭ್ಯರ್ಥಿಯಾಗಿರುವ ಲಕ್ಷ್ಮಿ ಅರುಣ ಜನಾರ್ದನ ರೆಡ್ಡಿ ಅವರ ಗೆಲುವಿಗಾಗಿ ಇಂದು 101 ಡೊಳ್ಳುಗಳನ್ನ ನೀಡುತ್ತೇನೆ ಎಂದು ಜನಾರ್ದನ ರೆಡ್ಡಿ ಅವರ ಅಪ್ಪಟ ಅಭಿಮಾನಿ ಯಮನೂರಪ್ಪ ಕುಂಡೆಗೌಡ ಹೇಳಿದರು.
ಕಲ್ಯಾಣ ಕರ್ನಾಟಕಕ್ಕೆ ಹೊಸ ಹೊಸ ಬೆಳಕಾಗಿ ಸ್ಥಾಪನೆಗೊಂಡಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಗೆಲುವಿಗಾಗಿ ಬೀರಲಿಂಗೇಶ್ವರ ಆಶೀರ್ವಾದದೊಂದಿಗೆ ಪಕ್ಷದ ಸಂಸ್ಥಾಪಕರಾದ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಈ ಹಿಂದೆ ಗಂಗಾವತಿಯಲ್ಲಿ 101 ಕುರಿಗಳನ್ನು ದಾನವಾಗಿ ನೀಡಿದ್ದೇ, ಅದರಂತೆ ಇಂದು ಕೆ ಆರ್ ಪಿಪಿ ಪಕ್ಷದ ಬಳ್ಳಾರಿ ನಗರ ಅಭ್ಯರ್ಥಿಯಾದ ಲಕ್ಷ್ಮಿ ಅರುಣ ರವರ ಗೆಲುವಿಗಾಗಿ ಬೀರಲಿಂಗೇಶ್ವರ ಆಶೀರ್ವಾದದೊಂದಿಗೆ 101 ಡೊಳ್ಳುಗಳನ್ನು ನೀಡುತ್ತೇನೆ ಎಂದು ಹೇಳಿದರು.
ನಾನು ಗಾಲಿ ಜನಾರ್ದನ ರೆಡ್ಡಿ ಅವರ ಅಪ್ಪಟ ಅಭಿಮಾನಿಯಾಗಿದ್ದು ಪಕ್ಷದ ಗೆಲುವಿಗೆ ನನ್ನ ಶಕ್ತಿ ಮೀರಿ ಪ್ರಯತ್ನ ಪಡುತ್ತಿದ್ದೇನೆ. ಬಳ್ಳಾರಿ ನಗರದಲ್ಲಿ ಲಕ್ಷ್ಮಿ ಅರುಣ ರವರ ಗೆಲುವಿಗಾಗಿ ಪ್ರಚಾರವನ್ನು ಕೈಗೊಳ್ಳುತ್ತೇನೆ. ನಾನು ನನ್ನ ಸ್ವಂತ ದುಡ್ಡಿನಲ್ಲಿ ದ್ವಿಚಕ್ರ ವಾಹನಕ್ಕೆ ಕೆ ಆರ್ ಪಿ ಪಿ ಪಕ್ಷದ ಗುರುತನ್ನು ಅಳವಡಿಸಿ ಪ್ರಚಾರವನ್ನು ಮಾಡುತ್ತಿದ್ದೇನೆ, ಕೆ ಆರ್ ಪಿ ಪಿ ಪಕ್ಷ ಗೆದ್ದರೆ ನಾನು ಕೂಡ ಗೆದ್ದಂತೆ ಎಂದು ಭಾವಿಸಿ ಇಂದು ಲಕ್ಷ್ಮಿ ಅರುಣರವರಿಗೆ ಒಂದು ಡೊಳ್ಳನ್ನು ವಿತರಿಸಿ ಇನ್ನುಳಿದವುಗಳನ್ನು ನಂತರ ವಿತರಿಸುವೆ ಎಂದು ತಿಳಿಸಿದರು.
ಈಸಂದರ್ಭದಲ್ಲಿ ಶ್ರೀಧರ, ವಿರೂಪಾಕ್ಷಿ, ವೀರೇಶ,ರವಿ ಸೇರಿದಂತೆ ಬೆಂಬಲಿಗರು ಇದ್ದರು.