This is the title of the web page
This is the title of the web page

Please assign a menu to the primary menu location under menu

State

ನಿರಂತರ ಜ್ಯೋತಿಗೆ ವಿದ್ಯುತ್ ಸಂಪರ್ಕ ಕೊಡಲು ಹೋಗಿ ಯುವಕ ದಾರುಣ ಸಾವು

ನಿರಂತರ ಜ್ಯೋತಿಗೆ ವಿದ್ಯುತ್ ಸಂಪರ್ಕ ಕೊಡಲು ಹೋಗಿ ಯುವಕ ದಾರುಣ ಸಾವು

ನಿರಂತರ ಜ್ಯೋತಿಗೆ ವಿದ್ಯುತ್ ಸಂಪರ್ಕ ಕೊಡಲು ಹೋಗಿ ಯುವಕ ದಾರುಣ ಸಾವು

ಬಳ್ಳಾರಿ : ಜಿಲ್ಲೆಯ ದಮ್ಮೂರು ಗ್ರಾಮದಲ್ಲಿ ಕೃಷಿ ಲೈನ್’ನನ್ನು ನಿರಂತರ ಜ್ಯೊತಿ ಲೈನ್ ಗೆ ಸ್ವತಃ ಸಂಪರ್ಕ ಕೊಡಲು ಹೋದ ರೈತನೊಬ್ಬ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.

ಅದೇ ಗ್ರಾಮದ ವೀರಭದ್ರ 30 ವರ್ಷ ತಮ್ಮ ಸಂಬಂದಿಗಳ ಹೊಲಕ್ಕೆ ನೀರು ಕಟ್ಟಲು ಹೋಗಿದ್ದು, ಐ.ಪಿ. ಸೆಟ್’ಗಳಿಗೆ ಸರಬರಾಜು ಆಗುವ ವಿದ್ಯುತ್ ಸಮಯಕ್ಕೆ ಕಡಿತಗೊಂಡ ಮೇಲೆ ರೈತರು ಅನಧಿಕೃತವಾಗಿ ನಿರಂತರ ಜೋತಿಗೆ ಸಂಪರ್ಕ ಮಾಡಿಕೊಂಡು ಪಂಪ್’ಸೆಟ್ ನಡೆಸಲು ಹೋಗಿದ್ದಾನೆ.

ಇದು ಇಡಿ ಜಿಲ್ಲೆ ತುಂಬಾ ನಡೆಯುತ್ತಿದೆ. ಗುರುವಾರ ಬೆಳಿಗ್ಗೆ 6 ಗಂಟೆಯಲ್ಲಿ ವೀರಭದ್ರ ಕಂಬದ ಮೇಲೆ ಹತ್ತಿ ಸಂಪರ್ಕ ಪಡೆಯುತ್ತಿರುವ ಸಮಯದಲ್ಲಿ ದುರ್ಘಟನೆ ಸಂಭವಿಸಿದೆ.

ದೇಹದಿಂದ ತಲೆ ಬೇರ್ಪಟ್ಟಿದೆ. ನಿರಂತರ ಜ್ಯೋತಿ ಸಂಪರ್ಕದಿಂದ ಐಪಿ ಪಂಪ್ ಸೆಟ್’ಗಳು ನಡೆಸುವಂತಿಲ್ಲ.. ಆದರೆ ಕೆಲ ರಾಜಕಾರಣಿಗಳ ಒತ್ತಡ ಹಾ್ಯು ಕೆಲ ಕೆಇಬಿ ಅಧಿಕಾರಿಗಳು ದಿಗಲುಬಾಚಿ ವ್ಯವಸ್ಥೆ ಅನ್ನದಾತನ ಸಾವುಗಳಿಗೆಗೆ ಕಾರಣವಾಗುತ್ತಿದೆ.

ಜೆಸ್ಕಾಂ ಅಧಿಕಾರಿಗಳು ನಿರಂತರ ಜ್ಯೋತಿಗೆ ಸಂಪರ್ಕ ಬೇಡ ಎಂದು ಅಡ್ಡಿ ಪಡಿಸಿದರೆ ಅವರ ಮೇಲೆ ಹಲ್ಲೆಗಳು ಮಾಡುತ್ತಾರೆ. ಇಲ್ಲ ನಾಲ್ಕು ಬಿಡಿಗಾಸಿಗೆ ಅವರನ್ನು ಖರೀದಿ ಮಾಡುತ್ತಾರೆ.

ಇದರಿಂದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಖಾಸಗಿ ಲೈನ್ ಮ್ಯಾನ್ಗಳು, ಅನಧಿಕೃತ ವಿದ್ಯುತ್ ಸಂಪರ್ಕವನ್ನು ಮಾಡುವ ಅವರು ಪುಟ್ಟ ಪುಟ್ಟಿಗೆ ಇರುತ್ತಾರೆ.
ಅವರಿಗೆ ವಿದ್ಯುತ್ ಬಗ್ಗೆ ತಿಳುವಳಿಕೆ ಇರೊದು ಇಲ್ಲ, ಈ ಹಿನ್ನೆಲೆಯಲ್ಲಿ ಅಪಾಯಗಳು ನಡೆಯುತ್ತಿವೆ.
ಇದಕ್ಕೆ ಒಂದು ರೀತಿಯಲ್ಲಿ ವಿದ್ಯುತ್ ಅಧಿಕಾರಿಗಳು ಕಾರಣ ಎನ್ನಬಹುದು.

ಖಾಸಗಿ + ಜೆಸ್ಕಾಂ ಇಲಾಖೆ ಅವರು ಸೇರಿಕೊಂಡು ಪ್ರತಿ ಹಳ್ಳಿಯಲ್ಲಿ ವಿದ್ಯುತ್ ಕಾಮಗಾರಿಗಳನ್ನು ಅಕ್ರಮ ಸಕ್ರಮದಲ್ಲಿ ಮಾಡುತ್ತಿದ್ದಾರೆ.

ಅದಕ್ಕೆ ಪ್ರತಿ ಹಳ್ಳಿಯಲ್ಲಿ ಖಾಸಗಿ ಲೈನ್ ಮ್ಯಾನ್’ಗಳು ತುಂಬಾ ಇರುತ್ತಾರೆ. ಪ್ರತಿ ಸಣ್ಣ ಕೆಲಸಕ್ಕೆ ಲೈನ್ ಮ್ಯಾನ್’ಗಳು ಹೋಗಿ ಕೆಲಸಮಾಡಲು ಸಾಧ್ಯವಿಲ್ಲ.

ಕೆಇಬಿಯಲ್ಲಿ ಅಧಿಕಾರಿಗಳು ಗುತ್ತಿಗೆದಾರರು ಆಗಿದ್ದಾರೆ.
ಇದರಿಂದ ಇಲಾಖೆ ಮಾರಾಟ ಆಗುವ ಸಾಧ್ಯತೆ ಗಳು ಇದ್ದಾವೆ.

ರೈತರ ಪಾಡು ಹೇಳುವಂತಿಲ್ಲ, ಬೇಸಾಯದ ಮೇಲೆ ಜೀವನ ಮಾಡುವ ಅವರು ಅಪಾಯವನ್ನು ಲೆಕ್ಕಿಸದೆ ಬೇಸಾಯ ಮಾಡಬೇಕು. ಸಾಲು ಸೋಲು ಮಾಡಿ ವರ್ಷದ ಪೂರ್ತಿ ಕಷ್ಟ ಪಟ್ಟರೆ ಮಾತ್ರವೇ ಜೀವನ.

ಈಗಾಗಲೇ ಮಳೆರಾಯನ ಅಭಾವ, ನಾಲೆಗಳು ಡ್ಯಾಮೇಜ್, ದುಬಾರಿ ಖರ್ಚುಗಳು ಇವುಗಳನ್ನು ಮೀರಿ ಜೀವನ ಮಾಡಬೇಕು ಅಗಿದೆ. ಸಕ್ರಿಯವಾಗಿ ರೈತರಿಗೆ ವಿದ್ಯುತ್ ಸರಬರಾಜು ಮಾಡಿದರೆ ಇಂತಹ ಸಮಸ್ಯೆಗಳು ನಿಯಂತ್ರಣ ಮಾಡಬಹುದು.

ರಾಜಕಾರಣಿಗಳು ಕೂಡ ಬಣ್ಣದ ಮಾತುಗಳನ್ನು ಆಡಿ ಆಕ್ರೋಶ ಮಾತುಗಳಿಂದ ಜನರನ್ನು ಮರಳು ಮಾಡುವ ತಂತ್ರಜ್ಞಾನ ಮಾಡಿಕೊಂಡಿದ್ದಾರೆ. ರೈತರು ಕಷ್ಟ ಸುಖಗಳನ್ನು ನೋಡುವವರು ಯಾರು ಇಲ್ಲ. ಇನ್ನೂ ಬಳ್ಳಾರಿ ಜೆಸ್ಕಾಂ ಇಲಾಖೆಯಲ್ಲಿ ಕೆಲ ಅಧಿಕಾರಿಗಳ ದರ್ಪ, ದುರಹಂಕಾರ, ತಲೆ ಮೇಲೆ ಮೂರು ಅಡಿ ಎತ್ತರದದಲ್ಲಿದೆ.

ಕೆಲ ಅಧಿಕಾರಿಗಳು ಅಚ್ಚುಕಟ್ಟಾಗಿ ಕೆಲಸ ನಿಭಾಯಿಸುವ ಛಲ ಇದ್ದರೂ ಅವರನ್ನು ಕೂಡ ಸಗಣಿ ತಿನ್ನುವ ವ್ಯವಸ್ಥೆಗೆ ಮಾರ್ಪಾಡು ಮಾಡುತ್ತಾರೆ.

ಅಕ್ರಮ ಲೂಟಿ ಆರೋಪದ ಅಡಿಯಲ್ಲಿ ಸಿಕ್ಕಿಕೊಂಡರು ಕೂಡ ಅವರು ಇನ್ನೂ ಗೌರವಸ್ಥರು ಅನ್ನುವ ರೀತಿಯಲ್ಲಿ ವ್ಯವಸ್ಥೆಯಿದೆ

ಮೇಲಿನ ಅಧಿಕಾರಿಗಳನ್ನು XYZ ಮೂಲಕ ದಾರಿತಪ್ಪಿಸುವ ಕೆಲಸವನ್ನು ಮಾಡುವ ಮುಟ್ಟಾಳರು ಇದ್ದಾರೆ.

ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ


News 9 Today

Leave a Reply