*ಬಳ್ಳಾರಿಯ ಶಾಸ್ತ್ರಿ ನಗರದಲ್ಲಿ ಕಳೆಪೆ ಅಭಿವೃದ್ಧಿ ಕಾಮಗಾರಿ ; ಎಎಪಿ ಮುಖಂಡ ಮಂಜುನಾಥ ತೀವ್ರ ಆಕ್ಷೇಪ*
ಬಳ್ಳಾರಿ ನಗರದ ಶಾಸ್ತ್ರಿ ನಗರದಲ್ಲಿ ಕುಡಿಯುವ ನೀರು ಪೋಲಾಗುತ್ತಿದ್ದು, ಆಮ್ ಆದ್ಮಿ ಪಕ್ಷದ ಮುಖಂಡ ಜೆ.ವಿ ಮಂಜುನಾಥ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಬೇಸಿಗೆ ಕಾಲ ಆರಂಭವಾಗಿದೆ. ಬಳ್ಳಾರಿ ನಗರದಲ್ಲಿ 15 ದಿನಕ್ಕೆ ಒಂದು ಸಲ ನೀರು ಬಿಡಲಾಗುತ್ತದೆ. ಆ ಬಿಡುವ ನೀರು ಕೂಡ ಸರಿಯಾಗಿ ಬಿಡುತ್ತಿಲ್ಲ. ಬಿಟ್ಟು ನೀರು ಈ ರೀತಿ ಅವೈಜ್ಞಾನಿಕ ಕಾಮಗಾರಿಯಿಂದ ಪೋಲಾಗುತ್ತಿದೆ. ಒಂದೆಡೆ ಜನರಿಗೆ ಕುಡಿಯುವ ನೀರಿಲ್ಲದೆ ಪರದಾಡುತ್ತುದ್ದಾರೆ, ಇನ್ನೊಂದು ಕಡೆ ನೀರು ಪೋಲಾಗಿ ರಸ್ತೆಯ ಮೇಲೆ ಹರಿಯುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಬಳ್ಳಾರಿ ನಗರದ ಕ್ರಿಯಾಶೀಲ ಅಭಿವೃದ್ಧಿಯ ಹರಿಕಾರ ಅಂತ ಹೇಳಿಕೊಂಡು ಬರುವ ಶಾಸಕ ಶಾಸಕ ಸೋಮಶೇಖರ್ ರೆಡ್ಡಿ ನೆನ್ನೆ ಖಾಸಗಿ ಹೋಟೆಲ್ ನಲ್ಲಿ ರಹಸ್ಯವಾಗಿ ಪತ್ರಿಕಾಗೋಷ್ಠಿ ನಡೆಸಿ 2018ರಿಂದ ಇಲ್ಲಿಯವರೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸಂಕ್ಷಿಪ್ತ ಮಾಹಿತಿ ಕೊಟ್ಟಿದ್ದಾರೆ.
ಅವರ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಎಷ್ಟು ಪ್ರಮುಖ ಆದ್ಯತೆ ಕೊಟ್ಟಿದ್ದಾರೆ ಅಂತ ಬಹಿರಂಗಪಡಿಸಲಿ. ಹಾಗಾದರೆ ಶಾಸ್ತ್ರಿ ನಗರದಲ್ಲಿ ಕಳಪೆ ಕಾಮಗಾರಿ ನಡೆಸಿ ಬಿಲ್ಲುಗಳನ್ನು ನುಂಗಿರುವುದು ಶಾಸಕರ ಗಮನಕ್ಕೆ ಗೊತ್ತಿಲ್ಲವಾ ಎಂದು ಪ್ರಶ್ನಿಸಿದ್ದಾರೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)