This is the title of the web page
This is the title of the web page

Please assign a menu to the primary menu location under menu

State

ಹಳ್ಳ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂ. ಮಣ್ಣು ಮಾಯ. ಆಂದ್ರಾಳ್ ಸೀತಾರಾಂ ಅರೋಪ

ಹಳ್ಳ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂ. ಮಣ್ಣು ಮಾಯ. ಆಂದ್ರಾಳ್ ಸೀತಾರಾಂ ಅರೋಪ

*ಹಳ್ಳ ಅಭಿವೃದ್ಧಿ ಹೆಸರಿನಲ್ಲಿ ಲಕ್ಷಾಂತರ ರೂ. ಮಣ್ಣು ಮಾಯ. ಆಂದ್ರಾಳ್ ಸೀತಾರಾಂ ಅರೋಪ*

ಬಳ್ಳಾರಿ : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 8ನೇ ವಾರ್ಡಿನ ಆಂದ್ರಾಳ್ ಪ್ರದೇಶದ ಬೊಮ್ಮನಹಾಳ್ ರಸ್ತೆ ಗೊ ಶಾಲೆ ಪಕ್ಕದಲ್ಲಿರುವ ಮುಖ್ಯ ರಸ್ತೆಯ ಹಳ್ಳ ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗುತ್ತದೆ.

ಹಳ್ಳದಲ್ಲಿ ಕಸ, ಕಡ್ಡಿ ಷಿಲ್ಟ್ ತೆಗೆದು ಮರಗಿಡಗಳು ಇಡುವ ಕೆಲಸವನ್ನು ಪಾಲಿಕೆ ಮಾಡಲು ಚಿಂತನೆ ಮಾಡಿ ಪಾಲಿಕೆ ಸದಸ್ಯ ರಾಮಾಂಜನೇಯಲು ಸೇರಿಕೊಂಡು ಕೆಲಸವನ್ನು ಆರಂಭ ಮಾಡಿದ್ದಾರೆ.

ಪಾಲಿಕೆಯ ಖರ್ಚಿನಿಂದಲೇ ಯಂತ್ರಗಳು ಮೂಲಕ ಕೆಲಸವನ್ನು ಕೆಲ ದಿನಗಳಿಂದ ಹಳ್ಳದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ಅದನ್ನು ನೋಡಿದ ಜನರು ಅದೇ ವಾರ್ಡ್‌ನ ಮಾಜಿ ಪಾಲಿಕೆ ಸದಸ್ಯರಾದ ಸೀತಾರಾಮ ಅಭಿವೃದ್ಧಿ ಕಾಮಗಾರಿಯನ್ನು ಮಾಡುತ್ತಾರೆ ಎಂದು ಸಂತೋಷ ಪಟ್ಟಿದ್ದಾರೆ.

ಆದರೆ ಕೆಲ ದಿನಗಳಿಂದ ನೋಡಿದ ಜನರಿಗೆ ಹಳ್ಳದಲ್ಲಿ ಯಾವುದೇ ಕಾಮಗಾರಿ ನಡೆಯದೆ, ಅಲ್ಲಿರುವ ತುಂಬಾ ಬೆಳೆ ಬಾಳುವ ಮಣ್ಣು ವಾಹನಗಳ ಮೂಲಕ ಪಾಲಿಕೆ ಸದಸ್ಯ ರಾಮಾಂಜನೇಯಲು ತಮ್ಮ ಖಾಸಗಿ ಲೇಔಟ್ ಗಳಿಗೆ ತೆಗೆದುಕೊಂಡು ಹೋಗುವುದನ್ನು ಗಮನಿಸಿದ್ದಾರೆ.

ಅಲ್ಲಿಯೇ ಕೇಲ ಎಸ್‌ಸಿ, ಎಸ್ಟಿ ಬಡವರ ಭೂಮಿಗಳಲ್ಲಿ ಮಣ್ಣು ತೆಗೆದು ಅವರಿಗೆ ಕೂಡ ತೊಂದರೆ ಮಾಡಿದ್ದಾರೆ ಎಂದು ಸೀತರಾಮ್ ಆರೋಪ ಮಾಡಿದ್ದು, ಮೇಲಿನ ಅಧಿಕಾರಿಗಳಿಗೆ ದೂರು ನೀಡಲಿದ್ದೇನೆ ಎಂದಿದ್ದಾರೆ.

ಪಾಲಿಕೆ ಕಮಿಷನರ್ ದೂರವಾಣಿ ಮೂಲಕ ಮಾತನಾಡಿದ್ದು ಹಳ್ಳದಲ್ಲಿ ಮಾಲಿನ್ಯ ತುಂಬಿ ಕೊಂಡಿದೆ ಅದನ್ನು ಕ್ಲೀನ್ ಮಾಡಿ ಹಳ್ಳದ ಬದಿಯಲ್ಲಿ ಗಿಡ ಮರಗಳು ಬೆಳೆಸುವುದು ಯೋಜನೆಯಾಗಿತ್ತು,ಹಳ್ಳದಲ್ಲಿ ಮಣ್ಣು ಅಕ್ರಮ ಸಾಗಾಟ ಮಾಡುವದು ಅಪರಾಧವಾಗುತ್ತಿದೆ, ಪರಿಶೀಲನೆ ಮಾಡಿ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದರು.

*ಜನರ ಅಭಿಪ್ರಾಯ:-*
*ಹಳ್ಳದಲ್ಲಿ ಕ್ಲೀನ್ ಮಾಡೋದು ಉತ್ತಮ ಕೆಲಸ ಆದರೆ ಹಳ್ಳವನ್ನು ಇನ್ನಷ್ಟು ಅಗಲವಾಗಿ ಮಾಡಿ ಮನೆಗಳಿಗೆ ನೀರು ನುಗ್ಗುವ ಅಪಾಯಕಾರಿ ಕೆಲಸವನ್ನು ಮಾಡುತ್ತಿದ್ದಾರೆ. ಈಗಾಗಲೇ ಮಳೆಗಾಲದಲ್ಲಿ ಹಳ್ಳ ತುಂಬಿಕೊಂಡು ಬರುವ ಸಮಯದಲ್ಲಿ ಊರಿನ ಒಳಗೆ ನೀರು ಬಂದು ಕೊಚ್ಚಿಕೊಂಡು ಹೋಗುತ್ತವೆ.

ಒಡ್ಡು ಹಾಕಿ ನಿಯಂತ್ರಣ ಮಾಡೋದು ಬಿಟ್ಟು ಅಲ್ಲಿನ ಮಣ್ಣು ತೆಗೆದು ಅಪಾಯವನ್ನು ಆಹ್ವಾನ ಮಾಡುತ್ತಿದ್ದಾರೆ ಸ್ಥಳೀಯ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

*ಪಾಲಿಕೆ ಸದಸ್ಯ ರಾಮಾಂಜನೇಯಲು ಅಭಿಪ್ರಾಯ:-*

ಹಳ್ಳದಲ್ಲಿ ಈ ಹಿಂದೆ ಜನರ ಮೃತಪಟ್ಟಿದ್ದರು. ದೊಡ್ಡ ಮಟ್ಟದಲ್ಲಿ ಒಡ್ಡು ನಿರ್ಮಾಣ ಮಾಡಲಾಗಿದೆ. ಹೆಚ್ಚಾಗಿರುವ ಮಣ್ಣು ಸಾವಿರಾರು ರೂ ಖರ್ಚು ಮಾಡಿ ಸ್ವಂತ ಹಣದಿಂದ ತೆಗೆದುಕೊಂಡು ಹೋಗಲಾಗಿದೆ. ದೇವಸ್ಥಾನಗಳಿಗೆ ಫ್ರೀಯಾಗಿ ಹಾಕಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು.

ಜೆಂಟಲ್ ಮ್ಯಾನ್ ಕೆಲಸವನ್ನು ಮಾಡುತ್ತಿದ್ದೇನೆ,ಅದನ್ನು ಪ್ರೋತ್ಸಾಹ ಮಾಡಬೇಕು ಎಂದು ದೂರವಾಣಿ ಮೂಲಕ ತಿಳಿಸಿದ್ದಾರೆ.

ಜನರ ತೆರಿಗೆ ಹಣದಿಂದ ಅಭಿವೃದ್ಧಿ ಕೆಲಸವನ್ನು ಮಾಡುತ್ತಿರುವ ಕೆಲಸದಲ್ಲಿ ಇತರರು ಲಾಭವನ್ನು ಪಡೆಯುತ್ತಾರೆ ಅಂದರೆ ಅಡಳಿತ ವ್ಯವಸ್ಥೆ ಸರಿಯಾಗಿ ಇಲ್ಲವೆಂದು ಭಾವಿಸಲಾಗುತ್ತದೆ. ಸರ್ಕಾರ ರಚನೆಯಾಗಿ ಇನ್ನೂ ಕೆಲ ದಿನಗಳು ಆಗಿಲ್ಲ ಇಂತಹ ಘಟನೆಗಳು ವಿರೋಧ ಪಕ್ಷಗಳಿಗೆ ಆಹಾರ ಅಗಬಾರದು.

(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply