This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾರಾ ಭರತ್ ಹೆಸರು ಘೋಷಣೆ

ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾರಾ ಭರತ್ ಹೆಸರು ಘೋಷಣೆ

*ಬಳ್ಳಾರಿ ನಗರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾರಾ ಭರತ್ ಹೆಸರು ಘೋಷಣೆ*

 

*ಸಹಿ ಹಂಚಿ ಪಟಾಕಿ ಸಿಡಿಸಿದ ಕಾಂಗ್ರೆಸ್ ಕಾರ್ಯಕರ್ತರು*

 

ಬಳ್ಳಾರಿ : ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆ ಅಗಿ ಕೆಲವು ದಿನಗಳು ಕಳೆದರು, ಬಳ್ಳಾರಿ ನಗರ ಕಾಂಗ್ರೆಸ್‌ ಅಭ್ಯರ್ಥಿ ಯಾರೆಂಬುದು ಯಕ್ಷ ಪ್ರಶ್ನೆಯಾಗಿತ್ತು. ಕೊನೆಗೆ ಶನಿವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾರಾ ಭರತ್ ರೆಡ್ಡಿ ಅವರು ಹೆಸರನ್ನು ಎಐಸಿಸಿ ಘೋಷಣೆ ಮಾಡಿದರು.

 

ಈ ಹಿನ್ನೆಲೆಯಲ್ಲಿ ನಾರಾ ಭರತ್ ರೆಡ್ಡಿ ಅವರ ಅಭಿಮಾನಿಗಳು ನಗರದ ರಾಯಲ್ ವೃತ್ತಿದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

 

ಕಾಂಗ್ರೆಸ್ ಮುಖಂಡ ಬಿ.ಆರ್.ಎಲ್ ಸೀನಾ ಶಿವ, ಮಂಜು, ರಾಜ್, ರವಿ, ಜಗದೀಶ್ ಸೇರಿದಂತೆ ಕಾಂಗ್ರೆಸ್ಸಿನ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

 

ಒಂದು ಕಡೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ.

 

ಮತ್ತೊಂದು ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯ ಸಂಭ್ರಮದ ವಾತಾವರಣ ಮನೆ ಮಾಡಿತ್ತು.

 

ಕೆಲ ಸಮಯ ಬಳ್ಳಾರಿ ನಗರ ರಾಯಲ್ ಸರ್ಕಲ್ ಬಳಿ ಕಾರ್ಯಕರ್ತರಿಂದ ತುಂಬಿ ತುಳುಕಿತ್ತು.

 

ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ನೋಡಿದರೆ ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಕಷ್ಟದ ವಾತಾವರಣ ಕಣ್ಣು ಮುಂದೆ ಕಾಣುತ್ತದೆ.

 

ಇನ್ನೂ ಎರಡೂ ದಿನಗಳ ಎರಡು ಪಕ್ಷಗಳ ಸಾಮರ್ಥ್ಯ ತಿಳಿಯುತ್ತದೆ.

 

ನಾರಾ ಭರತ್ ರೆಡ್ಡಿ ಸುಲಭವಾಗಿ ಗೆಲ್ಲುವ ಸಾಧ್ಯತೆ ಎದ್ದು ಕಾಣುತ್ತಿದೆ.

 

*ಶಾಸಕ ಸೋಮಶೇಖರ್ ರೆಡ್ಡಿ ಕಕ್ಕಬಿಕ್ಕಿ*

ಬಳ್ಳಾರಿ ನಗರ ಹಾಲಿ ಶಾಸಕ ಸೋಮಶೇಖರ್ ರೆಡ್ಡಿ ನಾಮಪತ್ರ ಸಲ್ಲಿಕೆಗೆ ಸಚಿವ ಶ್ರೀರಾಮುಲು ಅವರು ತಡವಾಗಿ ಬಂದರು.

 

ಈ ಸಂದರ್ಭದಲ್ಲಿ ಹಾಲಿಶಾಸಕ ಸೋಮಶೇಖರ್ ರೆಡ್ಡಿ ಕಕ್ಕಬಿಕ್ಕಿಯಾಗಿದ್ದರು.

 

ಕಂಪ್ಲಿಯಲ್ಲಿ ಅಳಿಯ ಸುರೇಶ್ ಬಾಬು ನಾಮಪತ್ರ ಸಲ್ಲಿಕೆಯೂ ಕೂಡ ಇಂದು ಇತ್ತು.

 

ಅಲ್ಲಿಯ ಕಾರ್ಯಕರ್ತರು ಶ್ರೀ ರಾಮುಲು ಅವರನ್ನು ಬಿಟ್ಟಿಲ್ಲ.

 

ಅದ್ದೂರಿಯಾಗಿ, ಸಂಭ್ರಮದಿಂದ ಸುರೇಶ್ ಬಾಬು ನಾಮಪತ್ರ ಸಲ್ಲಿಕೆಗೆ ಅಭಿಮಾನಿಗಳು ಶ್ರೀರಾಮುಲು ಅವರನ್ನು ಸಂಭ್ರಮಿಸುವ ಕಾರ್ಯಕ್ರಮದಲ್ಲಿದ್ದರು.

 

ಜನರನ್ನು ನೋಡಿ ಶ್ರೀರಾಮುಲು ಸಂತೋಷದಿಂದ ಅಲ್ಲಿಯೇ ಕೆಲ ಸಮಯ ಇದ್ದರು.

 

ಆದರೆ ಸೋಮಶೇಖರ್ ರೆಡ್ಡಿ ಅವರ ನಾಮಪತ್ರ ಸಲ್ಲಿಕೆಗೆ ಶ್ರೀರಾಮುಲು ತಡವಾಗಿ ಬಂದಿದ್ದು ನಗರದ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನ ವಾತಾವರಣ ಸೃಷ್ಟಿ ಆಗಿತ್ತು.

 

ಹಲವು ರೀತಿಯಲ್ಲಿ ಮಾತುಗಳು ಕೇಳಿಬಂದವು, ಶ್ರೀರಾಮುಲು ಬರಲಿಲ್ಲ ಎನ್ನುವ ಸಂದೇಶ ರೆಡ್ಡಿ ಏಕಾಂಗಿಯಾದ್ದಾರೆ, ಯಾವೊಬ್ಬ ದೊಡ್ಡ ಲೀಡರ್ ಇರಲಿಲ್ಲ ಎನ್ನುವ ಮಾತುಗಳು ಉದ್ಭವಗೊಂಡಿದ್ದವು.

 

ಶ್ರೀರಾಮುಲು ತಡವಾಗಿ ಬಂದರು, ಆದರೆ ಕೂಡ ಬಿಜೆಪಿ ಕಾರ್ಯಕರ್ತರಲ್ಲಿ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.

 

(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)


News 9 Today

Leave a Reply