*ಬಂಗಾರದ ಅಂಗಡಿಯ ಮಾಲೀಕರ ಹಣ ಮತ್ತು ಬಂಗಾರವನ್ನು ತೆಗೆದುಕೊಂಡು ಹೋಗುವಾಗ ದರೋಡೆ ಮಾಡಿದ್ದ ಅರೋಪಿತರ ಬಂಧನ ಅವರಿಂದ ಒಟ್ಟು 21,71,000.ರೂ .ಮೌಲ್ಯದ ಬಂಗಾರ ಮತ್ತು ನಗದು, ಹಣ ಹಾಗೂ ಘಟನೆಗೆ ಉಪಯೋಗಿಸಿದ್ದ ಸ್ಕೂಟರ್/ಮೋಟಾರ್ ಸೈಕಲ್ಗಳು ಒಟ್ಟು: 22,41,000/- ವಶ.*
ಬಳ್ಳಾರಿ.(21).12-09-2024ರಂದು ಬೆಳಿಗ್ಗೆ 4.45 ಗಂಟೆಗೆ ಟ್ಯಾಂಕ್ ಬಂಡ್ ರಸ್ತೆ ಇಂದ ರಾಯದರ್ಗ ಬಸ್ ನಿಲ್ದಾಣದ ಕಡೆಗೆ ಹೋಗುವ ಓಣಿಯಲ್ಲಿ ಸ್ಕೂಟರಿನಲ್ಲಿ ಹೋಗುತ್ತಿದ್ದ ದೂರುದಾರರು ಆತನ ತಮ್ಮನೊಂದಿಗೆ ಹೋಗುತ್ತಿದ್ದಾಗ ಇಬ್ಬರು ದ್ವಿಚಕ್ರವಾಹನದಲ್ಲಿ ಬಂದು ದೂರುದಾರರ ಕಣ್ಣಿಗೆ ಕಾರದಪುಡಿಯನ್ನು ಎರಚಿ ಅವರ ಬಳಿ ಇದ್ದ ನಗದು ಹಣ ರೂ. 22,99,000/- ಮತ್ತು 318 ಗ್ರಾಂ ತೂಕದ ಬಂಗಾರದ ಗಟ್ಟಿ ಮತ್ತು ರಿಪೇರಿಗೆ ಕೊಟ್ಟಿ ಬಂಗಾರದ ಆಭರಣಗಳು ಒಟ್ಟು ಬೆಲೆ 38,89,000/-ರೂ ಬಾಳುವವುಗಳು ಉಳ್ಳ ಬ್ಯಾಗ್ ತೆಗೆದುಕೊಂಡು ಹೊಗಿದ್ದಾಗಿ ದೂರು ನೀಡಿದ್ದ ಮೇರಗೆ ಬ್ರೂಸ್ ಪೇಟೆ ಪೋಲಿಸ್ ಠಾಣೆ ಅಪರಾಧ ಸಂಖ್ಯೆ: 183/20024 ಕಲಂ 310(2) బి.ಎನ್.ಎಸ್ ఆడియల్లి ప్రಕರಣ ದಾಖಿಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಈಪ್ರಕರಣ ಪತ್ತೆ ಕುರಿತು ಡಾ.ಶೋಭರಾಣಿ ವಿ.ಜಿ. ಮಾನ್ಯ ಪೋಲಿಸ್ ವರಿಷ್ಠ ಅಧಿಕಾರಿಗಳ ರವರ ಮಾರ್ಗದರ್ಶನದಲ್ಲಿ, ಮಾನ್ಯ ಶ್ರೀ ಚಂದ್ರಕಾಂತ ನಂದರೆಡ್ಡಿ, ಡಿಎಸ್ಪಿ, ಬಳ್ಳಾರಿ ನಗರ ಉಪವಿಭಾಗ, ಶ್ರೀ ಎಂ.ಎನ್. ಸಿಂಧೂರ, ಪೌಲಿನ್ ಇನ್ಸ್ಪೆಕ್ಟರ್, ಬ್ರೂಸ್ ಟೌನ್ 21-09-2024 0 5-10 ಸೂಮಾರಿಗೆ ಬಾತ್ಮಿದಾರರಿಂದ ಪಡೆದ ಖಚಿತ ಮಾಹಿತಿ ಮೇರೆಗೆ ಬಳ್ಳಾರಿನಗರದ ಗಂಗಜಿನ್ನ್ ಸರ್ಕಲ್ ಹತ್ತಿರ ಆರೀಫ್ ಎಂಬಾತನನ್ನು ಹಿಡಿದುಕೊಂಡು ಪರಿಶೀಲಿಸಲಾಗಿ ಅವನ ಹತ್ತಿರ ಬಂಗಾರ ವಸ್ತುಗಳು, ಇದ್ದು ಠಾಣೆಗೆ ಕೆರದುಕೊಂಡು ಬಂದು ವಿಚಾರಸಲಾಗಿ ಸದರಿಯವನು ಸಂಚು ರೂಪಿಸಿ ಸೂಚಿಸಿದಂತೆ, ದಿನಾಂಕ 12-09-2024 ರಂದು ಟ್ಯಾಂಕ್ ಬಂಡ್ ರಸ್ತೆಯಿಂದ ರಾಯದುರ್ಗ ಬಸ್ ನಿಲ್ದಾಣ ಕಡೆಗೆ ಹೊಗುವ ಓಣಿಯಲ್ಲಿ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಇಬ್ಬರು ವ್ಯಕ್ತಿಗಳು, ಅವರ ಪರಿಚಯಸ್ಥರು 1) ತೌಸಿಫ್ ಲಾಲು,ಜಾವಿದ್ ,ಪೀರ, ದಾದಾ ಕಲಂದರ್ ಮುಸ್ತಾಕ್ ರಿಹಾನ್ವ ಎರಡು ಸೈಕಲ್ ನಲ್ಲಿ ಹೋಗಿ ಹಣ ಮತ್ತು ಬಂಗಾರದ ಬ್ಯಾಗ್ ತಂದಿದ್ದು, ಆರೀಫ್ ಬಳಿ ತಂದಿದ್ದರು.
ಬೈಪಾಸ್ ಹತ್ತರ ತೆಗದುಕೊಂಡು ಬಂದಿದ್ದು ಮತ್ತು ಉಳಿದ ಹಣದಲ್ಲಿ ಸ್ವಲ್ಪ ಹಣವನ್ನು ಅವರಿಗೆ ಹಂಚಿದನು, ಆರಿಫ್ಗೆ ಪ್ರಿಯನಾಗಿದ್ದ ಬ್ರೂಸ್,ಪೇಟೆ ಠಾಣೆಯ ಹೇಡ್ ಕಾನ್ಸ್ಟೇಬಲ್ ಅದ ಮಹಿಬೂಬ್ ಅವರ ಮನೆಯಲ್ಲಿ 9,00,000/- ಹಣಕೊಟ್ಟು ಘಟನೆಯ ಬಗ್ಗೆ ತಿಳಿಸಿರುತ್ತಾನೆ.ಮತ್ತು ಬಂಗಾರವನ್ನು ಎಲ್ಲಿ ಯಾದರು ಮಾರಾಟ ಮಾಡೋಣ ಅಂತ ತೆಗೆದುಕೊಂಡು ಹೋಗಿರುತ್ತಾನಿ ಎಂದು ಹೇಳಿಕೆ ನೀಡಿದ್ದು, ಅವರಿಂದ ಹಣ ಬಂಗಾರ, ಹಾಗು ಕೃತ್ಯ ಕ್ಕೆ ಉಪಯೋಗಿಸಿದ್ದ ಸ್ಕೂಟರ್, ಮೋಟರ್ ಸೈಕಲ್ ಗಳು ಸೇರಿ 22,41,000ರೂ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸಿಂಧೂರ್, ಪೊಲೀಸ್ ಇನ್ಸ್ಪೆಕ್ಟರ್, ಬ್ರೂಸ್ ಟೌನ್ ಪೊಲೀಸ್ ಠಾಣೆ, ಎಂ. ಅನ್ವರ್ ಪಿ.ಎಸ್.ಐ(ಕಾ.ಸು), ಎ.ಎಸ್.ಐ ಬಿ. ಹೊನ್ನೂರಪ್ಪ, ಎಚ್.ಸಿ. ಶ್ರೀನಿವಾಸ, ಬಿ ಉಮೇಶ ರೆಡ್ಡಿ, ಪಿಸಿಗಳಾದ ಕೆ. ಶಿವರಾಜಕುಮಾರ್, ಚಂದ್ರಶೇಖರ ಎನ್. ಕೆ. ರಾಮಾಂಜಿನಿ, ದೊಡ್ಡಬಸನಗೌಡ , ಪಿ.ಸಿ. ಕುಮಾರಿ ನೀಲಮ್ಮ ಇವರು ಯಶಸ್ವಿ ಯಾಗಿರುತ್ತಾರೆ
ಈ ಪತ್ತೆ ಕಾರ್ಯವನ್ನು ಮಾನ್ಯ ಡಾ” ಶೋಭಾರಾಣಿ ವಿ.ಜೆ. ಐ.ಪಿ.ಎಸ್, ಪೊಲೀಸ್ ವರಿಷ್ಠಾಧಿಕಾರಿಗಳು, ಬಳ್ಳಾರಿ ಇವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.