ಬಿ.ಗೋನಾಳ್ ಬುಡಾ ಬಡಾವಣೆಯಲ್ಲಿ ಸೋಲು, ಗೆಲುವು ಯಾರದ್ದು?
*ಶಾಸಕ ಭರತ್ ರೆಡ್ಡಿ V/S ಮುಖ್ಯಮಂತ್ರಿ*
*ಕಾಮಗಾರಿಗೆ ರಾಜಕಾರಣಿಗಳಿಂದ ಗ್ರಹಣ*
*ಮುಖ್ಯಮಂತ್ರಿಗಳಿಗೆ ಚಾಲೆಂಜ್ ಅಗಿರವ ಕಾಮಗಾರಿ,!?*
ಬಳ್ಳಾರಿ : ಬಳ್ಳಾರಿ ನಗರದ ಬಿ ಗೋನಾಳ್ ಹತ್ತಿರದಲ್ಲಿರುವ 101.98 ಎಕರೆ ಪ್ರದೇಶದಲ್ಲಿ 50:50 ಅನುಪಾತದಲ್ಲಿ ಬುಡಾ ಬಡಾವಣೆ ಮಾಡಲು ತೀರ್ಮಾನವನ್ನು
ಅಂದಿನ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆಗಿತ್ತು.!
ಕೆಲ ವರ್ಷಗಳು ಕಳೆದ ನಂತರ ಬಡಾವಣೆ ಕಾಮಗಾರಿಗಳು ಬಿಜೆಪಿ ಅಡಳಿತ ಸಮಯದಲ್ಲಿ ಒಂದು ಹಂತದ ಕಾಮಗಾರಿ ಆರಂಭವಾಗಿತ್ತು.
55 ಕೋಟಿಗಳ ವೆಚ್ಚದಲ್ಲಿ ಅದನ್ನು ಬೆಂಗಳೂರಿನ ಅಕಿಲ್ ಇನ್ ಫ್ರಾ ಪ್ರಾಜೆಕ್ಟ್ ಪ್ರೈವೇಟ್ ಲಿಮಿಟೆಡ್ ಗೆ ಕಾಮಗಾರಿ ಟೆಂಡರ್ ಆಗಿತ್ತು.
ಆದರೆ ಸಂಸ್ಥೆ ಕೆಲವರಿಗೆ ಸಬ್ ಕಾಂಟ್ಯಾಕ್ಟ್ ನೀಡಲಾಗಿತ್ತು. ಅದನ್ನು ಬಳ್ಳಾರಿ ಮೂಲದ ಸುಬ್ಬಾರೆಡ್ಡಿ ಅನ್ನುವ ದೊಡ್ಡ ಗುತ್ತಿಗೆದಾರರು ತೆಗೆದುಕೊಂಡು ಕಾಮಗಾರಿ ಆರಂಭ ಮಾಡಿದ್ದು ಬಡಾವಣೆಯಲ್ಲಿ ಈಗಾಗಲೇ 14.ಕೋಟಿ ಖರ್ಚು ಮಾಡಿ ಸಾಮಗ್ರಿ ಸಿವಿಲ್ ಕಾಮಗಾರಿಗಳು ಆರಂಭ ಮಾಡಿದ್ದು ಕಣ್ಣು ಮುಂದೆಯಿದೆ.
ಸಂಬಂಧಿಸಿದ ಇಲಾಖೆ ಪಾರ್ಟ್ ಪೇಮೆಂಟ್ ಕೂಡ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಅಷ್ಟರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೊಗಿ ಕಾಂಗ್ರೆಸ್ ಸರ್ಕಾರ ಬಂದಿತ್ತು.
ಮೊದಲೇ ಹಲವಾರು ಭಾಗ್ಯಗಳು ಕೊಟ್ಟ ಸರ್ಕಾರ ಹೊಸ ಅನುದಾನದಿಂದ ಅಭಿವೃದ್ಧಿ ಮಾಡಲು ಪ್ರಸ್ತುತ ಸಾಧ್ಯವಿಲ್ಲದ ವಾತಾವರಣವಾಗಿದೆ.
ಸ್ಥಳೀಯ ರಾಜಕಾರಣಿಗಳು ಏನು ಮಾಡಬೇಕು ಅನ್ನುವ ಆಲೋಚನೆ ಮಾಡಿರಬಹುದು. ತಕ್ಷಣವೇ ಬಳ್ಳಾರಿ ನಗರ ಶಾಸಕರಿಗೆ ಬಿ.ಗೋನಾಳ್ ಬಡಾವಣೆ ಕಾಮಗಾರಿ ಕಂಡುಬಂದಿದೆ.
ತಕ್ಷಣವೇ ಸುಬ್ಬಾರೆಡ್ಡಿಗೆ ಕಾಮಗಾರಿ ನಿಲ್ಲಿಸುವಂತೆ ಅದನ್ನು ನಾವು ಮಾಡುತ್ತಿವೆ. ನಮ್ಮ ಸರ್ಕಾರ ಇದೇ ಎಂದು ಹೇಳಿದ್ದಾರೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಅದಕ್ಕೆ ಅದು ಸಾದ್ಯವಿಲ್ಲ ತಮ್ಮ ಸರ್ಕಾರಕ್ಕಿಂತ ಮೊದಲೇ ಕಾಮಗಾರಿ ಬಿಜೆಪಿ ಸರ್ಕಾರದಿಂದ ಮಾಡಲಾಗಿತ್ತು. ತಮ್ಮ ಸರ್ಕಾರದಲ್ಲಿ ಹೊಸ ಅನುದಾನದಿಂದ ಏನಾದರೂ ಮಾಡಿಕೊಳ್ಳಿ, ನಾವು ಈಗಾಗಲೇ ಕೋಟಿ ಗಟ್ಟಲೆ ಖರ್ಚು ಮಾಡಲಾಗಿದೆ, ದಯವಿಟ್ಟು ತಮ್ಮ ಸರ್ಕಾರದ ಹೊಸ ಕಾಮಗಾರಿಗೆ ನಾವು ಅಡ್ಡ ಬರೋದು ಇಲ್ಲವೆಂದು ಗೌರವ ವಾಗಿ ಹೇಳಿದ್ದಾರೆ.
ಅದಕ್ಕೆ ಒಪ್ಪದೆ ಇರುವ ಶಾಸಕರು ಬೆಂಗಳೂರು ಮೂಲದ ಗುತ್ತಿಗೆದಾರನಿಂದ ಪತ್ರ ಪಡೆದು ಕಾಮಗಾರಿ ಆರಂಭ ಮಾಡಿದ್ದಾರೆ.
ಸುಬ್ಬಾರೆಡ್ಡಿ ಬಡಾವಣೆಗೆ ಬರದಂತೆ ಕಾಮಗಾರಿ ಮಾಡದಂತೆ ತಡೆಹಿಡಿಯುವ ಕೆಲಸ ಮಾಡಿದ್ದಾರೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಇಷ್ಟರಲ್ಲಿ ಸುಬ್ಬಾರೆಡ್ಡಿ ಕಾಂಗ್ರೆಸ್‌ನ ಶಾಸಕ ಭರತ್ ರೆಡ್ಡಿ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಕೊಟ್ಟಲ ಪಲ್ಲಿ ರಘು ಅವರನ್ನು ಕಾಮಗಾರಿ ಮಾಡಲು ಪರಸ್ಪರ ಮಾತುಕಥೆ ಮಾಡಿಕೊಂಡು ಬುದುವಾರ ಯಂತ್ರಗಳ ಮೂಲಕ ಕಾಮಗಾರಿ ಮಾಡಲು ಬಡಾವಣೆ ಗೆ ಬಂದಿದ್ದಾರೆ.
ಅಷ್ಟರಲ್ಲಿ ನೂರಾರು ಮಂದಿ ಪೋಲಿಸರು ಕೆಲ ಪಾಲಿಕೆ ಸದಸ್ಯರು, ಹಿಂಬಾಲಕರು ಬಡಾವಣೆಯಲ್ಲಿ ಇದ್ದರು.
ವಾತಾವರಣ ಕೂಡ ಬಿಗಿ, ಬಿಸಿ ಆಗಿತ್ತು.
ಸುಬ್ಬಾರೆಡ್ಡಿ ರೆಡ್ಡಿ ಪರವಾಗಿ ಕೆಲ ಬಿಜೆಪಿ ಅವರು ಸುಬ್ಬಾರೆಡ್ಡಿ ಗಾಲಿ ಜನಾರ್ದನ ರೆಡ್ಡಿ ಸಂಬಂಧಿಗಳು ಎಂದು ತಿಳಿದು ಕೊಂಡು ಗಾಲಿ ಜನಾರ್ದನ ರೆಡ್ಡಿ ಪಡೆ ನೂರಾರು ಕಾರ್ಯಕರ್ತರು ಕರೆದುಕೊಂಡಹ ಸ್ಥಳಕ್ಕೆ ಬಂದಿದ್ದರು.
ಸ್ವಲ್ಪ ಹೊತ್ತು ಗೊಂದಲದ ವಾತಾವರಣ ಸೃಷ್ಟಿ ಆಗಿತ್ತು.
ಕೊನೆಗೆ ಇಬ್ಬರ ಗುತ್ತಿಗೆದಾರರ ದಾಖಲೆಗಳು ಪರಿಶೀಲನೆ ಮಾಡಿ, ತಾವು ಒಂದು ತೀರ್ಮಾನಕ್ಕೆ ಬಂದು ಕಾಮಗಾರಿ ಮಾಡಿಕೊಂಡು ಹೊಗಬೆಕು ಎಂದು ಪೋಲೀಸರು ತಿಳಿ ಹೇಳಿದರು.
ಈ ಹಿಂದೆ ಈ ವಿಚಾರ ಮುಖ್ಯಮಂತ್ರಿಗಳ ಗಮನಕ್ಕೆ ಬಂದಿರುತ್ತದೆ, ಮೊನ್ನೆ ಜಿಂದಾಲ್ ಗೆ ಮುಖ್ಯಮಂತ್ರಿಗಳು ಬಂದಿದ್ದ ಸಮಯದಲ್ಲಿ ಕೂಡ ಭರತ್ ರೆಡ್ಡಿಗೆ ಕಾಮಗಾರಿ ಯಲ್ಲಿ ಹಸ್ತಕ್ಷೇಪ ಮಾಡಬೇಡಿ, ಸುಮ್ಮನೆ ಇರುವಂತೆ ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಉಸ್ತುವಾರಿ ಸಚಿವರುರಿಂದಲೂ ಹೇಳಿದ್ದರು ತಮಗೆ ಸಂಬಂಧಿಸಿದ ವಿಚಾರ ಅಲ್ಲ. ತಮಗೆ ನೊ ಎಂಟ್ರಿ ಎಂದು ಹೇಳಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ ಅಗಿದೆ.
ಕೊನೆಗೆ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಉಸ್ತುವಾರಿ ಸಚಿವರು ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೊನೆಗೆ ಇದರಲ್ಲಿ ಸಚಿವ ಭೈರತಿ ಸುರೇಶ್ ಕೂಡ ಎಂಟ್ರಿ ಅಗುತ್ತಾರೆ. ಅವರು ಸ್ವಲ್ಪ ಭರತ್ ರೆಡ್ಡಿ ಪರವಾಗಿ ಬ್ಯಾಟಿಂಗ್ ಮಾಡಿದ್ದರು ಎಂದು ಅದಕ್ಕೆ ಮುಖ್ಯಮಂತ್ರಿಗಳು ತುಂಬಾ ಗರಂ ಆಗಿ ಸುಬ್ಬಾರೆಡ್ಡಿ, ಗೋಪಿ ಅವರನ್ನು ಕೆಲಸ ಆರಂಭ ಮಾಡಿ ಎಂದಿದ್ದಾರೆ ಎಂದು ಗುಸು ಗುಸು ಇದೆ.
ನಗರ ಶಾಸಕ ಭರತ್ ರೆಡ್ಡಿ ಅವರು ಮುಖ್ಯಮಂತ್ರಿಗಳು ಮಾತಿಗೆ ಕೂಡ ಬೆಲೆ ಕೊಟ್ಟಿಲ್ಲ ಅನ್ನುವುದು, ಪಕ್ಷದ ವಲಯದಲ್ಲಿ ಕೇಳಿ ಬಂದಿದೆ.
ಶಾಸಕ ಒಂದು ಹಂತದಲ್ಲಿ ರಾಜಕೀಯ ಬೇಡ ನಮಗೆ ರಾಜೀನಾಮೆಗೆ ಬೇಕಾದರೂ ಸಿದ್ದ ಅನ್ನುವ ಸಂದೇಶ ಭೈರತಿ ಸುರೇಶ್ ಮೂಲಕ ಸಂದೇಶ ರವಾನೆ ಅಗಿದೆ ಅನ್ನುವುದು ಕೂಡ ಗಾಳಿಯಲ್ಲಿ ಕೇಳಿ ಬಂದಿದೆ. ಯಾವುದು ಸತ್ಯವೋ ಎನ್ನುವುದು ಮುಖ್ಯಮಂತ್ರಿಗಳು ಬಹಿರಂಗ ಪಡಸಬೇಕಾಗಿದೆ. ಒಟ್ಟಾರೆ ಗೋನಾಳ್ ಬಡಾವಣೆಗೆ ರಾಜಕೀಯದ ಗ್ರಹಣ ಆರಂಭವಾಗಿದೆ.
ಇದರಲ್ಲಿ ಮುಖ್ಯಮಂತ್ರಿಗಳ ಗೆಲುವ ಅಥವಾ ಶಾಸಕ ಭರತ್ ರೆಡ್ಡಿಯವರು ಗೆಲುವ ಅನ್ನುವುದು ಪ್ರಶ್ನೆ ಅಗಿದೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣಿಗಳು ರಾಜಕೀಯ ಮಾಡದಂತೆ ಹೊಂದಾಣಿಕೆಯಿಂದ ಹೋದರೆ ನಗರ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಅನ್ನುವುದು ಎಲ್ಲರ ಅಭಿಪ್ರಾಯವಾಗಿದೆ.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)