ಬಕ್ರೀದ್ ಆಚರಣೆ. ಬಳ್ಳಾರಿ(10):ತ್ಯಾಗ ಮತ್ತು ಬಲಿದಾನ ಸಂಕೇತ ಸಾರುವ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಗಣಿನಾಡು ಬಳ್ಳಾರಿಯಲ್ಲಿ ಶೃದ್ಧಾ ಭಕ್ತಿಯಿಂದ ಆಚರಿಸಿದರು
ಮುಂಜಾನೆಯೇ ನಗರದ ಈದ್ಗಾ ಮೈದಾನದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಧರ್ಮ ಗುರುಗಳು ಹಬ್ಬದ ಸಂದೇಶ ನೀಡಿ ಬಕ್ರೀದ್ ಹಬ್ಬದ ಆಚರಣೆ ಹಾಗೂ ದಾನ ಧರ್ಮದ ಮಹತ್ವ ಕುರಿತು ಭೋಧನೆ ಮಾಡಿದರು.ಸಮಾಜದಲ್ಲಿ ಎಲ್ಲರೊಂದಿಗೂ ಸಹೋದರರಂತೆ ,ಒಳ್ಳೆತನವಾಗಿ ಬಾಳಿರಿ ಎಂದು ಕರೆ ನೀಡಿದರು.
ಪ್ರಾರ್ಥನಾ ಸ್ಥಳಕ್ಕೆ ಶಾಸಕ ನಾಗೇಂದ್ರ, ಡಾ”ನಾಸೀರ್ ಹುಸೇನ್, ಹಾಗೂ ಬಿಜೆಪಿ ಮುಖಂಡರು,ಪಾಲಿಕೆ ಸದಸ್ಯರು ಭಾಗಿಯಾಗಿದ್ದರು. ಬಕ್ರೀದ್ ಆಚರಣೆ ಹಿನ್ನೆಲೆ ಈದ್ಗಾ ಮೈದಾನದ ಸುತ್ತಾಮುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು. ಸಾಮೂಹಿಕ ಪ್ರಾರ್ಥನೆ ಹಿನ್ನೆಲೆ ಗೃಹ ರಕ್ಷಕ ಸಿಬ್ಬಂದಿ ಸೇರಿದಂತೆ 200 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ADVT
News 9 Today > State > ಬಕ್ರೀದ್ ಆಚರಣೆ