*ಕೂಡ್ಲಿಗಿ:ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಿ- ವಕೀಲರ ಸಂಘ ಆಗ್ರಹ*- ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದಲ್ಲಿ ಇತ್ತೀಚೆಗೆ, ರಾತ್ರಿ ಕಳ್ಳತನ ಮಾತ್ರವಲ್ಲ ಹಗಲು ಮನೆ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಕಾರಣ ಪಟ್ಟಣದ ನಾಗಕರೀಕರು ಹಾಗೂ ಸಾರ್ವಜನಿಕರು, ನೆಮ್ಮದಿಯನ್ನು ಕಳೆದು ಕೊಂಡು ಆತಂಕದಿಂದ ಜೀವನ ಸಾಗಿಸುವಂತಾಗಿದೆ. ಇದು ಕೂಡಲೇ ನಿಲ್ಲಬೇಕು ಕಳ್ಳತನ ಪ್ರಕರಣಗಳನ್ನು, ಕೂಡ್ಲಿಗಿ ಪೊಲೀಸರು ನಿಯಂತ್ರಿಸದಿದ್ದಲ್ಲಿ. ನಿರ್ಲಕ್ಷ್ಯ ಧೋರಣೆಯ ಪೊಲೀಸ್ ಇಲಾಖೆಯ ವಿರುದ್ಧ, ಪ್ರತಿಭಟನೆ ಹಾಗೂ ಕಾನೂನು ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದೆಂದು ವಕೀಲರ ಸಂಘ ಎಚ್ಚರಿಸಿದೆ. ವಕೀಲರ ಸಂಘದ ಅಧ್ಯಕ್ಷ ಜಿ.ಎಮ್.ಮಲ್ಲಿಕಾರ್ಜುನಯ್ಯ ಮಾತನಾಡಿ, ಪಟ್ಟಣದಲ್ಲಿ ದನ ಕರ ಕಳ್ಳತನ , ಮೊಬೈಲ್ ಕಳ್ಳತನ, ಸರಗಳ್ಳತನ , ಬೈಕ್ ಕಳ್ಳತನ ಪ್ರಕರಣಗಳು ಸಾಮಾನ್ಯವಾಗಿ ಬಿಟ್ಟಿವೆ. ಇತ್ತೀಚೆಗೆ ಹಾಡು ಹಗಲು ಹೊತ್ತಲ್ಲೆೇ, ಸರಣಿ ಮನೆ ಕಳ್ಳತನಗಳು ಹೆಚ್ಚಾಗಿ ಜರುಗುತ್ತಿವೆ. ಮತ್ತು ಕಳ್ಳತನಕ್ಕೆ ಒಳಗಾಗಿರುವ ನೊಂದವರು ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ, ಪೊಲೀಸ್ ಠಾಣೆಯಲ್ಲಿ ದೂರು ಪಡೆಯಲು ನಿರಾಕರಣೆ ತೋರಲಾಗುತ್ತಿದೆ. ದೂರು ದಾರಿಗೆ ಇಲ್ಲ ಸಲ್ಲದ ಸಬೂಬು ಹೇಳಿ ದೂರು ನೀಡ ದಂತೆ ಸಾಗಿ ಹಾಕುವೂದು, ಹಾಗೂ ವಿನಾ ಕಾರಣ ದೂರು ದಾರರನ್ನು ಠಾಣೆಗೆ ಅಲೆದಾಡಿಸುವ ಪರಿಪಾಠವನ್ನು ರೂಡಿಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದ್ದು. ಇದು ಕಾನೂನು ರೀತ್ಯ ಅಕ್ಷಮ್ಯ ಅಪರಾಧವಾಗಿದ್ದು, ಇದರ ವಿರುದ್ಧ ಸಂಘ ಕಾನೂನು ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಪೊಲೀಸ್ ಇಲಾಖೆಗೆ ಈ ಮೂಲಕ ಎಚ್ಚರಿಸಿದರು. ಪಟ್ಟಣದಲ್ಲಿ ಕಳೆದರೆಡು ತಿಂಗಳುಗಳಿಂದ ಕಳ್ಳತನ ಪ್ರಕರಣಗಳ ಸಂಖ್ಯೆ ಮಿತಿ ಮೀರಿದ್ದು, ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಾಗಿ ಮನವರಿಕೆಯಾಗಿದೆ. ಇತ್ತೀಚೆಗೆ ಕಳ್ಳತನ ಪ್ರಕರಣಗಳು ಅತೀ ಹೆಚ್ಚಾಗಿದ್ದು ಠಾಣೆಯಲ್ಲಿ ಮಾತ್ರ, ಬೆರಳೆಣಿಕೆಯಷ್ಟು ದಾಖಲಾಗಿರುವುದು ತಿಳಿದು ಬಂದಿದೆ. ಇದರಿಂದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾರರಿಂದ ದೂರು ಪಡೆಯುವಲ್ಲಿ, ಠಾಣೆಯಲ್ಲಿ ವಿಳಂಬ ನೀತಿ ಅಥವಾ ನಿರಾಕರಣೆ ಅನುಸರಿದುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಗಂಭೀರ ಆರೋಪವಾಗಿದ್ದು ಸಂಬಂಧಿಸಿದ ಠಾಣಾಧಿಕಾರಿಗಳು ಲೋಪವನ್ನು ಸರಿಪಡಿಸಿಕೊಳ್ಳಬೇಕು, ಕಳ್ಳತನ ಪ್ರಕರಣಗಳನ್ನು ನೆನೆಗುದಿಗಿಡಲಾಗುತ್ತಿದೆ ಎಂಬ ಆರೋಪ ಪೊಲೀಸ್ ಠಾಣೆಯ ಮೇಲಿದೆ. ಇದು ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದ್ದು, ಇದನ್ನೆಲ್ಲಾ ಕೂಡಲೇ ಸರಿಯಾಗಬೇಕು ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಬೇಕು. ಈ ವರೆಗೆ ಜರುಗಿರುವ ಕಳ್ಳತನ ಪ್ರಕರಣಗಕರಣಗಳನ್ನು ಶೀಘ್ರವೇ ಬೇಧಿಸಿ, ಸಾರ್ವಜನಿಕರಿಗೆ ನ್ಯಾಯವದಗಿಸಬೇಕಿದೆ. ನಿರ್ಲಕ್ಷ್ಯ ಧೋರಣೆ ತಾಳಿದ್ದಲ್ಲಿ, ಠಾಣಾಧಿಕಾರಿ ವಿರುದ್ಧ ಕಾನೂನು ಹೋರಾಟ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರ ಹಿತಕ್ಕಾಗಿ ವಕೀಲರ ಸಂಘದಿಂದ ಠಾಣೆಯ ಮುಂದೆ, ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಮಲ್ಲಿಕಾರ್ಜುನಯ್ಯ ಎಚ್ಚರಿಸಿದರು. *ದೂರು ಪಡೆಯದಿದ್ದಲ್ಲಿ ನ್ಯಾಯಾಲಯದಲ್ಲಿ ಉಚಿತ ನೆರವು ಪಡೆಯಿರಿ-ಹೆಚ್.ವೆಂಕಟೇಶ ಕರೆ*- ಪ್ಯಾನೆಲ್ ವಕೀಲರು ಹಾಗೂ ವಕೀಲರ ಸಂಘದ ಉಪಾಧ್ಯಕ್ಷರಾದ ಹೆಚ್.ವೆಂಕಟೇಶ್ ಮಾತನಾಡಿ, ಕಳ್ಳತನ ಹಾಗೂ ಯಾವುದೇ ರೀತಿಯ ವಂಚನೆ ಮೋಸಕ್ಕೆ ದೌರ್ಜನ್ಯ ಶೋಷಣೆಗೊಳಗಾದ. ನೊಂದ ಸಾರ್ವಜನಿಕರು ಹಾಗೂ ನಾಗರೀಕರು, ತಮ್ಮಗಾದ ಅನ್ಯಾಯದ ವಿರುದ್ಧ ಠಾಣೆಗೆ ದೂರು ನೀಡಲು ತೆರಳಿದಾಗ. ಠಾಣೆಗಳಲ್ಲಿ ತಮ್ಮ ದೂರನ್ನು ಪಡೆಯಲು ನಿರಕರಿಸಿದರೆ, ದೂರು ಪಡೆಯಲು ಅಥವಾ ವಿನಾಕಾರಣ ವಿಳಂಬ ಮಾಡಿದ್ದಲ್ಲಿ. ಅದು ಕಾನೂನು ರೀತ್ಯ ಅಕ್ಷಮ್ಯ ಅಪರಾಧವಾಗಿದ್ದು ಅದು ಸಾಬೀತಾದರೆ, ಠಾಣಾಧಿಕಾರಿ ಮತ್ತು ಸಿಬ್ಬಂದಿ ಕಾನೂನು ರೀತ್ಯ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಇದನ್ನ ಇಲಾಖಾ ಉನ್ನತಾಧಿಕಾರಿಗಳು, ತಮ್ಮ ಸಿಬ್ಬಂದಿಗೆ ಸರಿಯಾಗಿ ತಿಳಿ ಹೇಳಬೇಕಿದೆ. ಹಾಗೊಮ್ಮೆ ಸಾರ್ವಜನಿಕರು ನೊಂದವರು ದೂರುದಾರರು ಪೊಲೀಸರಿಂದ ನೆರವು ಪಡೆಯಲು ಸಾಧ್ಯವಾಗದಿದ್ದಲ್ಲಿ, ಕೂಡಲೇ ನ್ಯಾಯಾಲಯದಲ್ಲಿರುವ ಕಾನೂನು ಸೇವಾ ಸಮಿತಿ ಸಂಪರ್ಕಿಸಬಹುದಾಗಿದೆ. ಕಾನೂನು ಸೇವಾ ಸಮತಿ ಸೇವೆ ಸಂಪೂರ್ಣ ಉಚಿತವಾದ ಸೇವೆಯಾಗಿದ್ದು, ಇಲ್ಲಿ ಯಾರಿಗೂ ಯಾವುದೇ ಕಾರಣಕ್ಕೆ ಹಣ ಸಂದಾಯ ಮಾಡುವ ಅವಶ್ಯಕತೆ ಇರುವುದಿಲ್ಲ. ಉಚಿತವಾಗಿ ಅತಿ ಶೀಘ್ರವಾಗಿ ನೊಂದವರು ಕಾನೂನು ನೆರವು ಪಡೆಯಬಹುದಾಗಿದೆ, ನೊಂದ ದೂರು ದಾರರು ಮೊದಲು ಠಾಣೆಯಲ್ಲಿ ದೂರು ಸಲ್ಲಿಸಬೇಕು ಅಲ್ಲಿ ನಿರಾಕರಿಸಿದ್ದಲ್ಲಿ, ಇಲಾಖೆಯ ಉನ್ನತಾಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡೋವಲ್ಲಿ ಪ್ರಯತ್ನಿಸಬೇಕಿದೆ. ಆಗೂ ಕೂಡ ದೂರು ದಾಖಲಿಸಿಕೊಳ್ಳುವಲ್ಲಿ ನಿರಾಕರಿಸಿದರೆ, ಅಥವಾ ದೂರು ಪಡೆಯಲು ಅನಗತ್ಯ ವಿಳಂಬ ನೀತಿ ತೋರಿದ್ದಲ್ಲಿ. ಅಂತಹ ದೂರುದಾರರು ಕೂಡಲೇ ನ್ಯಾಯಾಲಯದ ಆವರಣದಲ್ಲಿರುವ, ಕಾನೂನು ಸೇವಾ ಸಮಿತಿ ಸಂಪರ್ಕಿಸಿ ಉಚಿತ ಕಾನೂನು ನೆರವು ಪಡೆಯಬಹುದಾಗಿದೆ. ನೊಂದವರು ಅನ್ಯಾಯಕ್ಕೊಳಗಾದವರು ಆರೋಪಿಗಳ ವಿರುದ್ಧ ದೂರು ಸಲ್ಲಿಸಬಹುದು, ಹಾಗೂ ಅಗತ್ಯವಾದರೆ ನಿರ್ಲಕ್ಷ್ಯ ಧೋರಣೆ ತಾಳಿದ ಪೊಲೀಸ್ ಅಧಿಕಾರಿ ವಿರುದ್ಧ ದೂರು ದಾಖಲಿಸಬಹುದಾಗಿ ಎಂದರು. ಈ ಸಂದರ್ಭದಲ್ಲಿ ವಕೀಲರಾದ ಮದ್ದಾನಪ್ಪ, ಸಿ.ರಾಜು, ಬಸವರಾಜ ಮತ್ತಿತರರು ಇದ್ದರು. ✍️ *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*
News 9 Today > State > ಕೂಡ್ಲಿಗಿ:ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಿ- ವಕೀಲರ ಸಂಘ ಆಗ್ರಹ