ಬಳ್ಳಾರಿ ವಕ್ಫ್ ಗೆ, ರಾಜಕೀಯ ಬಣ್ಣ.ಆರೋಪಗಳು ಇರುವ ಅವರೆ ಬಟ್ಟೆ ಬಿಚ್ಚಿ ಪ್ರತಿಭಟನೆ.!! ಬಳ್ಳಾರಿ ಯ ವಕ್ಫ್ ಮಂಡಳಿ ಅಂದರೆ ಸಮಸ್ಯೆಗಳ ಸಂಸ್ಥೆ ಆಗಿದೆ.
ಇಲ್ಲಿ ಸಕ್ರಿಯ ವಾಗಿ ಅಡಳಿತ ಅಧಿಕಾರಿ ಇಲ್ಲದೆ ಅಡಳಿತ ಗೊಂದಲಕ್ಕೆ ಗುರಿಯಾಗಿದೆ.
ಇಲ್ಲಿ ಈಹಿಂದೆ ಅಧ್ಯಕ್ಷರು ಆಗಿದ್ದ ಸಮಯದಲ್ಲಿ ಹಲವಾರು ಆರೋಪಗಳು ಕೇಳಿ ಬಂದಿದ್ದವು.
ಇನ್ನೂ ಕೇಲ ಅಧ್ಯಕ್ಷರು ಸ್ಮಶಾನದಲ್ಲಿ ತೋಟಗಳನ್ನು ಮಾಡಿದ್ದು ಅದರ ವಿರುದ್ಧ ಹೋರಾಟ ಗಳು ಕೂಡ ಆಗಿದ್ದವು.
ಪ್ರಸ್ತುತ ಅಧ್ಯಕ್ಷರು ಕಾಂಗ್ರೆಸ್ ಪಕ್ಷದ ಹುಮಾಯೂನ್ ಖಾನ್ ನೇಮಕಗೊಂಡಿದ್ದರು.
ರಾಜ್ಯ ಮಟ್ಟದಲ್ಲಿ ವಕ್ಫ್ ಸಂಸ್ಥೆ ಯಲ್ಲಿ ಹಲವಾರು ಪಕ್ಷದ ಹಿರಿಯರು ಸದಸ್ಯರು ಇರುತ್ತಾರೆ ಅವರು ಯಾಲ್ಲರು ನಿಷ್ಠಾವಂತ ರಾಜಕಾರಣಿ ಅನ್ನುವ ಹಿನ್ನೆಲೆಯಲ್ಲಿ ಹುಮಾಯೂನ್ ಖಾನ್ ಅವರನ್ನು ನೇಮಕ ಮಾಡಿದ್ದಾರೆ.
ಅದರ ಇತ್ತೀಚಿನ ದಿನಗಳಲ್ಲಿ ರಾಜ್ಯದ ನೂತನ ವಾಗಿ ಹುಟ್ಟು ಕೊಂಡ ಪಕ್ಷದ ಮುಖಂಡ ಅಲಿ ಖಾನ್ ಇದಕ್ಕೆ ಕಡ್ಡಿ ಹಚ್ಚಿ ಚಳಿ ಕಾಯುಸು ಕೊಳ್ಳವ ಪ್ರಯತ್ನ ಮಾಡಿಕೊಳ್ಳುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ಅಧ್ಯಕ್ಷರು ನೇರವಾಗಿ ಆರೋಪ ಮಾಡಿದ್ದಾರೆ.
ನಗರದಲ್ಲಿ 103 ಎಕರೆ ಭೂ ವಿವಾದ ನ್ಯಾಯಾಲಯದ ದಲ್ಲಿ ಇದೇ, ಅದನ್ನು ಕೆಲವರು ಗುಳಂ ಮಾಡಲು ಪ್ರಯತ್ನ ಮಾಡಿದ್ದಾರೆ ಅನ್ನುವ ಆರೋಪ ಬಯಲು ಗೆ ಹಾಕಿದ್ದಾರೆ.
ಸಿಬ್ಬಂದಿಯನ್ನು ಏಕವಚನ ದಲ್ಲಿ ಮಾತನಾಡುವ ಸಂಸ್ಕೃತಿಯನ್ನು ಹೊಂದಿದ್ದಾರೆ ಎಂದರು.
ಮಂಗಳವಾರ, ನಗರದ ವಕ್ಫ್ ಕಚೇರಿ ಮುಂದೆ ಹೈಡ್ರಾಮಾ ನಡೆದು ಹೊಯುತು,ಒಬ್ಬ ಮಾಜೀ ಅಧ್ಯಕ್ಷ ಬಟ್ಟೆ ಬಿಚ್ಚಿ ಹೋರಾಟಕ್ಕೆ ಮುಂದೆ ಆಗಿದ್ದರು.
ಅಧ್ಯಕ್ಷರು ಗೆ ಸಂಬಂಧ ಇಲ್ಲದೇ ಇರುವ ವಿಚಾರ ಗಳು ಇಟ್ಟುಕೊಂಡು,ದಿಕ್ಕಾರ ಕೂಗುತ್ತಾ ಇದ್ದರು.
ಇದಕ್ಕೆ ಅಧ್ಯಕ್ಷರು ಹುಮಾಯೂನ್ ಖಾನ್ ನೀಡಿರುವ ಉತ್ತರ ನೋಡಿದರೆ, ಇವರ ಅಸಲಿ ಬಣ್ಣ ಬಹಿರಂಗ ಗೊಂಡಿದೆ, ಮೂರು ತಿಂಗಳ ಚುನಾವಣೆ ಇರುವ ಹಿನ್ನೆಲೆಯಲ್ಲಿ ಇಂತಹ ಪ್ಲಾನ್ ಮಾಡಿ ಕೊಂಡು ಆಟ ಆಡಲು ಪ್ರಾರಂಭಿಸಿದ್ದಾರೆ, ನಾವು ರಾಜಕೀಯ ದಲ್ಲಿ ನೈಪುಣ್ಯತೆಯನ್ನು ಹೊಂದಿದ್ದಿವಿ,ನಮಗೆ ಜನರು ಇದ್ದಾರೆ ಆದರೆ ನಾವು ಅಂತಹ ಕೆಲಸವನ್ನು ಮಾಡೋದು ಇಲ್ಲ ಅಭಿವೃದ್ಧಿ ವಿಚಾರದಲ್ಲಿ ಪಾರದರ್ಶಕ ವಾಗಿ ಬರಲಿ ನಾವು ಅವರ ಜೋತಯಲ್ಲಿ ಹೋರಾಟ ದಲ್ಲಿ ಪಾಲ್ಗೊಂಡು ಸಮಾಜಕ್ಕೆ ಒಳ್ಳೆಯ ಕೆಲಸವನ್ನು ಮಾಡೋಣ ಎಂದರು.
ಈರೀತಿ ಕುಲ್ಡಪ್ಲಾನ್ ಗಳು ಮೂಲಕ ನನ್ನು ಅವರು ಏನು ಮಾಡಲು ಸಾಧ್ಯವಿಲ್ಲ ಎಂದರು.
ಇಡೀ ಸಮಾಜ ನಮ್ಮ ಜೊತೆಯಲ್ಲಿ ಇದೇ.
ನಾವು ಯಾವುದೇ ಲಾಭಕ್ಕೆ ಅಧ್ಯಕ್ಷರು ಆಗಿಲ್ಲ ಸಮಾಜದ ಗೋಸ್ಕರ ಅಗಿದ್ದಿವಿ ಎಂದರು.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)