ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಕಳ್ಳರ ಸಂತೆ!!. ಕೋಟಿ ಕೋಟಿ ಟಾಕ್ಸ್ ವಂಚನೆ!!.
•ಬ್ಲಾಕ್ ಮನಿ ವೈಟ್!!
25,ಲಕ್ಷ ಮಾಮೂಲಿ ತೆರಿಗೆ ಅಧಿಕಾರಿಗಳು ಗೆ!!
ಬಳ್ಳಾರಿ (10)
ಮಾರ್ಕೆಟ್ 25 ಕೋಟಿ ಟ್ಯಾಕ್ಸ್ ಬರೋದ್ರಲ್ಲಿ ಕೇವಲ 10 ಕೋಟಿಗೆ ಸೀಮಿತ.. ಗೋಲ್ಮಾಲ್!!
ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೆನ್ನು ಯಾವ ರೀತಿಯಲ್ಲಿ ಮುರಿಯುತ್ತಾರೆ ಎನ್ನುವುದು ಬಹಿರಂಗ ಗೊಂಡಿದೆ.
ಇದೇ ಕೃಷಿ ಉತ್ಪನ್ನ ಮಾರುಕಟ್ಟೆ ಯನ್ನು ಬ್ಲಾಕ್ ಹಣ ವನ್ನು ವೈಟ್ ಮನಿ ಯಾಗಿ ಪರಿವರ್ತಿಸಲು ದಲಾಲಿ ಅಂಗಡಿಗಳನ್ನು ಬಳಕೆ.
30 ಕೆಜಿ ಶೇಂಗಾ ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದರೆ ರೈತ 300 ರೂಪಾಯಿ ಕಳೆದುಕೊಳ್ಳಬೇಕಾಗಿದೆ.
ಮಾರ್ಕೆಟ್ ಫೀ ದಿಂದ ಹಿಡಿದು ಹಮಾಲಿ 3% ಟ್ಯಾಕ್ಸ್, 6% ಸೇರಿ ನೂರು ರೂಪಾಯಿ ಹಮಾಲಿ ಖರ್ಚು ಈ ರೀತಿಯಲ್ಲಿ ರೈತರು ವಂಚನೆಕ್ಕೆ ಗುರಿಯಾಗುತ್ತಿರುವ ಘಟನೆ ಬಹಿರಂಗ ಗೊಂಡಿದೆ,
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆಗೆ ಆಂಧ್ರ ಮತ್ತು ಹೊರ ರಾಜ್ಯಗಳಿಂದ ಅಪಾರ ಮಟ್ಟದಲ್ಲಿ ಶೇಂಗಾ ಜೋಳ ಸೂರ್ಯ ಪಾನ್ ಇನ್ನೂ ಮುಂತಾದ ಧಾನ್ಯಗಳು ಬರುತ್ತವೆ, ಆಂಧ್ರ ಮೂಲದಿಂದ ಬರುವ ಶೇಂಗಾ ಬಳ್ಳಾರಿ ಮಾರುಕಟ್ಟಗೆ ಜೀವನಾಡಿಯಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಬಳ್ಳಾರಿ ಮಾರುಕಟ್ಟೆಯಲ್ಲಿ
ಒಂದು ವಾರದಿಂದ ವ್ಯಾಪಾರ ವಹಿವಾಟು ನಿಂತುಹೋಗಿತ್ತು.
ರೈತರು ತಂದ ಮಾಲು ಗೆ ಅಂಗಡಿಯವರು 2 % ತೆಗೆದುಕೊಳ್ಳಬಾರದೆಂದು ನೂತನವಾಗಿ ಬಂದಿರುವ ಸೆಕ್ರೆಟರಿ ಅವರು ಆದೇಶ ಮಾಡಿದ್ದರು.
ದಲಾಲಿ ಅಂಗಡಿಯವರು ತೆಗೆದುಕೊಳ್ಳುವ ಕಮಿಷನ್,
ಟೆಂಡರ್ ಹಾಕುವ ಖರೀದಿಧಾರಿಯಿಂದಲೇ ಪಡೆದುಕೊಳ್ಳಬೇಕು ಎನ್ನುವ ಕಾನೂನಿನ ಪ್ರಕಾರ ಮಾಡಬೇಕು ಎಂದು ಖಡಕ್ ಸಂದೇಶ ರವಾನೆ ಮಾಡಿದ್ದರು.
ಇದರಿಂದ ಗೊಂದಲಕ್ಕೆ ಗುರಿಯಾದ ದಲಾಲಿ ಅಂಗಡಿ ಮಾಲೀಕರು ಮತ್ತು ಟೆಂಡರ್ ಹಾಕುವರು ವಹಿವಾಟು ನಿಲ್ಲಿಸಿದ್ದರು.
ಕೊನೆಗೆ ಶುಕ್ರವಾರ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿರುವಂತ ಕಟ್ಟೆಮನೆ.ನಾಗೇಂದ್ರ ಉಪಾಧ್ಯಕ್ಷರು ಕಪ್ಪಗಲು ರಾಮಣ್ಣ ಸೆಕ್ರೆಟರಿ ಜಯಕುಮಾರ್ , ಡಿ,ಡಿ ಓಂಕಾರ ಮತ್ತು ಅಂಗಡಿ ಮಾಲೀಕರು ಸೇರಿ ಸಮಾವೇಶ ನಡೆಸಿ ರೈತರಿಂದ ಯಾವುದೇ ಕಮಿಷನ್ ಪಡೆಯುವಂತಿಲ್ಲ ಮರಾಟಾಗಿರುವ ಧರದಲ್ಲಿ ರೈತರಿಗೆ ಹಣವನ್ನು ಕೊಟ್ಟು ಕಳಿಸಬೇಕು ಎನ್ನುವುದು ತೀರ್ಮಾನ ಮಾಡಿದ್ದರು.
ಅದೇ ದಿನ ಶೇಂಗಾ ಮಾರುಕಟ್ಟೆ ಕೂಡ ಆರಂಭವಾಗಿತ್ತು 7ಸಾವಿರ ವರೆಗೆ ಧರ ಕೂಡ ನಡೆದಿತ್ತು.
ಆದರೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹಗಲು ದರೋಡೆ ನಡೆಯುತ್ತದೆ ಮಾರುಕಟ್ಟೆಯಲ್ಲಿ ಬರುವ ಸರಕುಗಳನ್ನು ಯಾವ ಅಧಿಕಾರಿಗಳು ಪರಿಶೀಲನೆ ಮಾಡುವುದೇ ಇಲ್ಲ ಮಾರುಕಟ್ಟೆ ಒಳಗೆ ಬರುವ ಮುನ್ನವೇ ರೈತರು ತಂದಿರುವ ಮಾಲು ಎಷ್ಟು ಇದೆ ಎಂದು ಪರಿಶೀಲನೆ ಮಾಡಿ ಲಾಟ್ ನಂಬರ್ ಕೊಡಬೇಕಾಗುತ್ತದೆ ಆದರೆ ಬಳ್ಳಾರಿ ಮಾರುಕಟ್ಟೆಯಲ್ಲಿ ಅದು ಶೂನ್ಯ.
ಇದರಿಂದ ಟೆಂಡರ್ ಹಾಕುವ ವರಿಗೆ ಟ್ಯಾಕ್ಸ್ ಟೋಪಿ ಹಾಕಲು ಅನುಕೂಲ ಮಾಡುತ್ತಿದ್ದಾರೆ ಎನ್ನುವುದು ಕಣ್ಣ ಮುಂದೆ ಕಾಣುತ್ತದೆ.
ಯಾವ ಅಂಗಡಿಗೆ ಎಷ್ಟು ಮಾಲು ಬಂದಿದೆ ಅಷ್ಟು ಖುಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಎಂಟ್ರಿ ಆದರೆ ಆದಾಯ ಸರ್ಕಾರಕ್ಕೆ ದೊಡ್ಡ ಮಟ್ಟದಲ್ಲಿ ಬರುತ್ತದೆ.
ಅದರಲ್ಲಿ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಂತವ್ರೆ.
ಉದಾಹರಣೆಗೆ ಒಂದು ಅಂಗಡಿಗೆ ನೂರು ಚೀಲ ಬಂದರೆ ಕೇವಲ ಹತ್ತು ಚೀಲ ಬಂದಿದೆ ಎಂದು ಲಾಟ್ ಮಾಡಿ ಮಾರುಕಟ್ಟೆಗೆ ತೋರಿಸಿ ಇನ್ನು ಉಳಿದ 90 ಚೀಲಗಳನ್ನು ಅಕ್ರಮ ಮಾರ್ಗದಿಂದ ಟ್ಯಾಕ್ಸ್ ಮಾರ್ಕೆಟ್ ಫೀ ಮುಂತಾದನ್ನು ಟೋಪಿ ಹಾಕಿ ಬಿಜಿನೆಸ್ ಮಾಡುತ್ತಿದ್ದಾರೆ ಎನ್ನುವುದು ಹೊರಬಂದಿದೆ.
ಆಕ್ರಮ ವ್ಯಾಪಾರ ವಹಿವಾಟು ಮಾಡುವ ವ್ಯಾಪಾರಸ್ಥರು ಟ್ಯಾಕ್ಸ್ ಪೇ ಮಾಡದೆ 6,000.ರೂ ಶೇಂಗಾ ಧರ
ಮಾರುಕಟ್ಟೆಯಲ್ಲಿ ನಡೆದರೆ, ಖರೀದಿದಾರರು 10 ಚೀಲಕ್ಕೆ ಇದೇ ಧರವನ್ನು ತೋರಿಸಿ ಇನ್ನ ಉಳಿದ ಸರಕುಗೆ 3000 ಬಿಲ್ಲನ್ನು ತೋರಿಸಿ, ಇದಕ್ಕೆ ಮಾತ್ರೆವೇ,ಟ್ಯಾಕ್ಸ್ ಕಟ್ಟಿ ಸಾವಿರಾರು ಚೀಲ ಒಂದಿಷ್ಟು ಮಾರುಕಟ್ಟೆಯಲ್ಲಿ ಖರೀದಿ ಮಾಡಿದಂತೆ ಇನ್ನೂ ಒಂದಿಷ್ಟು ಚೀಲ ಅವರೇ ನೇರವಾಗಿ ಖರೀದಿ ಮಾಡಿದಂತೆ ಬಿಲ್ಲುಗಳನ್ನು ಸೃಷ್ಟಿ ಮಾಡಿ ಕೋಟಿ ಕೋಟಿ ಟ್ಯಾಕ್ಸ್ ಲೂಟಿ ಮಾಡುತ್ತಿದ್ದಾರೆ ಎನ್ನುವುದು ಬಹಿರಂಗ ಗೊಂಡಿದೆ.
ಈ ರೀತಿ ಬಳ್ಳಾರಿಯಿಂದ ಹೋಗುವ ಶೇಂಗಾ ಮುಂತಾದ ಸರಕು ವಾಹನಗಳನ್ನು ವಾಣಿಜ್ಯ ತೆರಿಗೆ ಇಲಾಖೆಯವರು ಯಾವುದೇ ತನಿಖೆ ಮಾಡದಂತೆ ವರ್ಷ ಕ್ಕೆ 20 ಲಕ್ಷದಿಂದ 25 ಲಕ್ಷದವರೆಗೆ ಮಾಮೂಲು ನೀಡುತ್ತಿದ್ದಾರೆ ಎನ್ನುವದು ಕೂಡಾ ಕೇಳಿ ಬರುತ್ತದೆ.
ಇದು ಒಂದು ರೀತಿಯಲ್ಲಿ ಹಗಲು ದರೋಡೆ, ಆದರೆ ಎಂಜಿಲು ಕಾಸುಗೆ ಆಸೆ ಬಿದ್ದ ಅಧಿಕಾರಿಗಳು ವ್ಯಾಪಾರ ದಾರರು ಸರಬರಾಜು ಮಾಡುವ ಆನ್ಲೈನ್ ಪರಿಮೆಂಟ್, 24 ತಾಸುಗಳಲ್ಲಿ ಅವಕಾಶವಿರುತ್ತದೆ, ಆದರೆ ಇದರಲ್ಲಿ ಕೂಡ ವಂಚನೆ ಮಾಡುತ್ತಾ ಒಂದು ಪರಮಿಟ್ ಮೇಲೆ ಗಂಗಾವತಿ ರಾಯಚೂರು ಮುಂತಾದ ಪ್ರದೇಶಗಳಿಗೆ ಎರಡು ಬಾರಿ ಒಂದೇ ಪರಮೇಟ್ ಮೇಲೆ ಸರಕನ್ನು ಸರಬರಾಜು ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿಬರುತ್ತದೆ.
ಇದರಿಂದ ಲಕ್ಷಾಂತರ ರೂಪಾಯಿ ಟ್ಯಾಕ್ಸ್ ಕೂಡ ಪಂಗನಾಮ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಳ್ಳಾರಿ ಕೃಷಿ ಉತ್ಪನ್ನ ಮಾರುಕಟ್ಟೆ ಕಳ್ಳರ ಸಂತೆ ಆಗಿದೆ,ಹಗಲು ದರೋಡೆ ನಡೆಯುತ್ತಿದೆ.
ಎಂಜಲಿ ಕಾಸುಗೆ ಅಸೆ ಬಿದ್ದ ಮೂರು ಬಿಟ್ಟ ಸರ್ಕಾರಿ ಅಧಿಕಾರಿಗಳು
ಅನ್ನಧಾತನಗೆ, ವಂಚನೆ ಮಾಡಿ, ಗಲೀಜು, ತಿನ್ನುತಿರುವ, ಹೆಗ್ಗಣ ಗಳು ಆಗಿದ್ದಾರೆ, ಅಂದರು ತಪ್ಪು ಇಲ್ಲ ಅನ್ನುತ್ತಾರೆ ರೈತರು.
ಬಳ್ಳಾರಿ ಮಾರುಕಟ್ಟೆ ಬೆಂಗಳೂರು ಮಾರುಕಟ್ಟೆ ಗಿಂತ ಅಧಿಕ ಫೀ ಟ್ಯಾಕ್ಸ್ ವರ್ಷಕ್ಕೆ 25,ಕೋಟಿ ಬರುವ ಗುರಿ ಇದೇ ಎಂದು ಅಂತದನ್ನ ಮಣ್ಣು ಹಾಕಿ ಮುಚ್ಚಿ ಕೇವಲ ಹತ್ತು ಕೋಟಿಗೆ ಮಾಡಿದ್ದು ಇವರ ಕೈ ಚಳಕ ಏನು ಎನ್ನುವುದು ಬೆತ್ತಲಾಗಿದೆ.
ಇದಲ್ಲದೆ ಪ್ರಭಾವಿಗಳು ರಾಜಕಾರಣಿಗಳ ಆಪ್ತರಾಗಿರುವವರು ಚುನಾವಣೆ ಸಮಯದಲ್ಲಿ ಕೂಡ ಕಪ್ಪು ಹಣವನ್ನು ದಾಲಾಲಿ ಅಂಗಡಿ ಅವರು ಗೆ ಹಾಕಿ ವೈಟ್ ಮಾಡಿಕೊಂಡಿದ್ದಾರೆ ಎಂದು, ಒಂದು ಅಂಗಡಿಗೆ ಒಂದು ಕೋಟಿ ದಿಂದ ಎರಡು ಕೋಟಿ ವರಿಗೆ ಅಕ್ರಮ ಹಣ ವರ್ಗಾವಣೆ ಮಾಡಿ ಅದಕ್ಕೆ ಕೇವಲ 6% ಫೀ ಕಟ್ಟಿ ಬಿಲ್ಲು ತೋರಿಸಿ ವೇಟ್ ಮಾಡಿಕೊಂಡು ರಾಜಕಾರಣಿಕ್ಕೆ ಬಳಕೆ ಮಾಡಿದ್ದಾರೆ ಅನ್ನುವ ಆರೋಪ ಕೂಡ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೆಸರನ್ನು ಹೇಳದೆ ಇರುವ ಅವರ ಮಾಹಿತಿ ಯಾಗಿದೆ.
ಇದು ಅಲ್ಲದೆ ಮಾರುಕಟ್ಟೆಯಲ್ಲಿ600₹ ಆರು ನೂರು ರೂಪಾಯಿ ಚದರಡಿರುವ ಸಾವಿರಾರುಡಿ ಜಾಗವನ್ನು ಕೇವಲ300₹ ಮೂರು ನೂರು ರೂಪಾಯಿಗಳು ಗೆ ಪ್ರಭಾವಿಗಳು ಹೊಡೆದು ಕೊಂಡಿದ್ದಾರೆ, ಎನ್ನುವುದು ಕೂಡ ಮರ್ಮವಾಗಿ ಉಳಿದಿದೆ.
ಇಲ್ಲಿ ಕೃಷಿ ಮಾರುಕಟ್ಟೆ ಕೆಲವರ ಕಬಂದ ಹಸ್ತದಲ್ಲಿ ದಿಗ್ಬಂದನೆಯಾಗಿದೆ, ಎಂದು ಅವರು ಏನು ಹೇಳಿದರೆ ಅದೇ ನಡಿಯುತ್ತದೆ,ಎಂದು ಇದರಿಂದ ಬಳ್ಳಾರಿ ಮಾರುಕಟ್ಟೆ ಎಷ್ಟೋ ಎತ್ತರದಲ್ಲಿ ಬೆಳೆಯಬೇಕಾಗಿರುವ ದಿನಮಾನಗಳಲ್ಲಿ ಲೂಟಿ ಮಾಡುವ ಇಲಿಚಿ, ಹೆಗ್ಗಣಗಳಿಂದ ವ್ಯವಸ್ಥೆ ಸಂಪೂರ್ಣ ಸರ್ವನಾಶ ಆಗಿದೆ ಎಂದು, ಅನಾಮದೇಯರು ಕೂಡ ಮಾರುಕಟ್ಟೆಯಲ್ಲಿ ಇತರ ಹೆಸರಲ್ಲಿ ಟೆಂಡರ್ ಮಾಡುತ್ತಿದ್ದಾರೆ,
ಎಂದು ಅಂತವರಿಂದ ಅಂಗಡಿಯಾವರಿಗೆ ಐ.ಪಿ(ಕೈ ಹೆತ್ತಿವ) ಮಾಡಿ ಟೋಪಿ ಹಾಕುತ್ತಿದ್ದಾರೆ ಎನ್ನುವ ನೋವಿನ ವಿಚಾರ ಕೂಡ ಕೇಳಿ ಬರುತ್ತದೆ.