ಬಳ್ಳಾರಿ ಯಲ್ಲಿ ಉದೋಗ ಮೇಳ.
ಬಳ್ಳಾರಿ (5)ರಾಜ್ಯ ಅಹಿಂದ ಸಂಘಟನೆ, ಬಳ್ಳಾರಿ ಘಟಕ ಮತ್ತು ಕ್ಯಾಡ್ ಮ್ಯಾಕ್ಸ್ ಎಜುಕೇಷನ್ ಟ್ರಸ್ಟ್ ವತಿಯಿಂದ ಭಾನುವಾರ ಏ.06 ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ
ಅಹಿಂದ ಕರ್ನಾಟಕ ಸಂಘದ ಜೋಗಿನ ಚಂದ್ರಪ್ಪ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಉದ್ಯೋಗಮೇಳವನ್ನು ಬಸವರಾಜೇಶ್ವರಿ ಕಾಲೇಜ್ ನಲ್ಲಿ ಭಾನುವಾರ ಹಮ್ಮಿಕೊಂಡಿದ್ದು ಸುಮಾರು 10ಕ್ಕೂ ಹೆಚ್ಚು ಕಂಪನಿ ಗಳು ಭಾಗವಸಿದ್ದು, ಎಸ್ ಎಸ್ ಎಲ್ ಸಿ, ಪಿಯುಸಿ, ಐಟಿಐ, ಡಿಪ್ಲೋಮ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು, ವಯೋಮಿತಿ 18 ರಿಂದ 30 ವರ್ಷ ಇರಬೇಕಾಗಿದ್ದು, ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದ್ದು ನಿರುದ್ಯೋಗಿಗಳು ಇದರ ಸದುಪಯೋಗ ಪಡೆದು ಕೊಳ್ಳಬೇಕು ಇದರಲ್ಲಿ ಟೊಯೋಟಾ, ಬಿರ್ಲಾ, ಏಶಿಯನ್ ಪೈಂಟ್ಸ್ ಸೇರಿದಂತೆ ಹಲವಾರು ಕಂಪನಿಗಳು ಭಾಗವಸಿದ್ದು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಅಹಿಂದ ಕಲ್ಯಾಣ್ ಕರ್ನಾಟಕ ವಿಭಾಗೀಯ ಅಧ್ಯಕ್ಷ ಭಟ್ಟಿ ಎರಿಸ್ವಾಮಿ, ರವಿ ಕಾರ್ಪಂಚಪ್ಪ, ಪಿ.ಶೇಖರ್, ಹುಸೇನಪ್ಪ, ಕಟ್ಟೆಪ್ಪ, ಲಕ್ಷ್ಮಿ ರೆಡ್ಡಿ, ನಾಗರಾಜ, ಕ್ಯಾಡ್ ಮಾಕ್ಸ್ ನ ನಾಗಚಾರ್ಯ, ಗಿರೀಶ್ ಸೇರಿದಂತೆ ಉಪಸ್ಥಿತರಿದ್ದರು.