ಬಳ್ಳಾರಿ ಕನಕ ದುರ್ಗಮ್ಮ ಭಾಗ್ಯದ ಲಕ್ಷ್ಮಿ ಬಾರಮ್ಮ ಅನ್ನುವಂತೆ ಧನ,ಬೆಳ್ಳಿ ,ಬಂಗಾರ ಹರಿದು ಬಂತು!! ಅರ್ಚಕರ ಗೊಂದಲ, ಗುಡಿ ಅವರ ಕೈ ನಲ್ಲಿ ಇರಬೇಕು.!!.
ಬಳ್ಳಾರಿ (22).ಕರ್ನಾಟಕದ ಬಳ್ಳಾರಿಯ ಆದಿ ದೇವತೆ ಈ ನಾಡಿನ ಮುಖ್ಯ ಆರಾಧ್ಯ ದೈವ ಕನಕ ದುರ್ಗಮ್ಮ ಸಿಡಿ ಬಂಡ ರಥೋತ್ಸವ ನಡೆದು ಒಂದು ವಾರದ ನಂತರ ಶುಕ್ರವಾರ ತಾಯಿಯ ದೇವಸ್ಥಾನದಲ್ಲಿದ್ದ 13 ಹುಂಡಿಗಳ ಪೈಕಿ 11 ಹುಂಡಿಗಳನ್ನು ಮುಜರಾಯಿ ಇಲಾಖೆಯವರು ಡಿಸಿ ಆದೇಶದಂತೆ ಎಣಿಕೆ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ 74,21,390 ( ಎಪ್ಪತ್ತು ನಾಲ್ಕು ಲಕ್ಷದ ಇಪ್ಪತ್ತೊಂದು ಸಾವಿರದ ಮೂನ್ನೂರತ್ತೋಂಬತ್ತು ರೂಪಾಯಿಗಳ ) ನಗದು1 36 ಗ್ರಾಂ ಚಿನ್ನ ನಾಲ್ಕು ಕೆಜಿ 526 ಗ್ರಾಮ ಬೆಳ್ಳಿ ಬಂದಿದೆ ಇನ್ನೂ ಎರಡು ಹುಂಡಿಗಳು ಬಾಕಿ ಇದ್ದು ಅದರಲ್ಲಿ ಕೂಡ ಸಾಕಷ್ಟು ಧನ ಧಾನ್ಯ ,ಬೆಳ್ಳಿ ,ಬಂಗಾರ ಇರಬಹುದು ಅನ್ನುವ ನಂಬಿಕೆ ಮೂಡಿಸುತ್ತದೆ , ಒಂದು ರೀತಿಯಲ್ಲಿ ಭಾಗ್ಯದ ಲಕ್ಷ್ಮಿ ಬಾರಮ್ಮ ಅನ್ನುವಂತೆ ತಾಯಿಗೆ ಎಲ್ಲವೂ ಹರಿದು ಬಂದಿದೆ ಲಕ್ಷಾಂತರ ಭಕ್ತರು ತಾಯಿ ದರ್ಶನ ಪಡೆದು ಕಾಣಿಕೆಗಳನ್ನು ಹುಂಡಿಗೆ ಹಾಕಿದ್ದು ಸಂತೋಷ ಮತ್ತು ಶುಭ ಸುದ್ದಿಯಾಗಿದೆ.
ಈವರ್ಷ ಹುಂಡಿಗಳು ಹೆಚ್ಚಿಗೆ ಅಳವಡಿಕೆ ಮಾಡಿದ್ದು ಸಾಕಷ್ಟು ಹಣ ಬಂದಿರುವುದು ಮುಜರಾಯಿ ಇಲಾಖೆಯ ಅಧಿಕಾರಿಗಳ ಹೆಮ್ಮೆಯೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ದುರ್ಗಾದೇವಿ ಸಿಡಿಬಂಡೆ ಪೂಜೆ ಕಾರ್ಯಕ್ರಮ ಒಂದಿಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು,ಅರ್ಚಕರ ಧರ್ಮ ಕರ್ತರ ವಂಶ ಪಾರಂಪರ್ಯ ಅರ್ಚಕರು ಎಂದು ಗೊಂದಲ ನಡೆಯುತ್ತಲೇ ಇದೆ. ಸಿಡಿ ಬಂಡೆ ರಥೋತ್ಸವ ಸಂದರ್ಭದಲ್ಲಿ ಎರಡು ದಿನ ಕಾಲ ಲಕ್ಷ್ಮೀದೇವಿ ಅನ್ನುವ ಹಿರಿಯ ಅರ್ಚಕರು ಅವರಿಗೆ ಅವಕಾಶ ಕೊಡಬೇಕು ಎನ್ನುವ ಹಿನ್ನೆಲೆ ಪೊಲೀಸ್ ಠಾಣೆ ಅವರಿಗೆ ಹೋಗಿ ದೂರನ್ನು ನೀಡಿದರು.
ಕೊನೆಗೂ ಲಕ್ಷ್ಮೀದೇವಿ ಅವರ ಮಕ್ಕಳಿಗೆ ಬಂದಿರುವ ಪೂಜಾ ಸಮಯದಲ್ಲಿ ಎರಡು ದಿನ ಲಕ್ಷ್ಮಿ ದೇವಿಗೆ ಅನುವು ಮಾಡಿಕೊಟ್ಟಿದ್ದಾರೆ.
ಸಿಡಿಬಂಡಿ ರಥೋತ್ಸವ ವಿಜೃಂಭಣೆಯಿಂದ ಯಾವುದೇ ಕೊರತೆಯಿಲ್ಲದೆ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಿ ಭಕ್ತರ ಮೆಚ್ಚುಗೆ ಪಡೆದಿದ್ದಾರೆ ಮುಜರಾಯಿ ಇಲಾಖೆಯ ಅಧಿಕಾರಿಗಳು.
ತದನಂತರ ದೇವಸ್ಥಾನಕ್ಕೆ ಬಂದಿರುವ ದಾವಸ ಧಾನ್ಯಗಳು ಅರ್ಚಕರಿಗೆ ನೀಡುವ ವಿಚಾರದಲ್ಲಿ ಒಂದಿಷ್ಟು ಗೊಂದಲ ಸೃಷ್ಟಿಯಾಗಿದೆ.
ಕಾಯ್ದೆ ಪ್ರಕಾರ ದೇವಸ್ಥಾನಕ್ಕೆ ಬಂದಿರುವ ದಾವಸ ದಾನ್ಯಗಳು ಇನ್ನೂ ಮುಂತಾದ ಅವುಗಳನ್ನು ಅರ್ಚಕರು ಯಾರು ತೆಗೆದುಕೊಳ್ಳುವಂತಿಲ್ಲ ಅನ್ನುವುದು ಕಾಯ್ದೆ, ಆದರೆ ಅರ್ಚಕರು ಪ್ರತಿ ವರ್ಷ ತೆಗೆದು ಕೊಳ್ಳುವುದು ಅಭ್ಯಾಸ ಇದೇ.
ಈ ಬಾರಿ ಅದು ಆಗಿಲ್ಲ ಈ ಹಿನ್ನಲೆ ಮೂಲ ಅರ್ಚಕರು ಎಂದು ಹೇಳಿಕೊಳ್ಳುವವರೆಲ್ಲರೂ, ಗೊಂದಲ ಕ್ಕೆ ಗುರಿ ಆಗಿದ್ದಾರೆ.
ಅಮ್ಮನ ದೇವಾಲಯಕ್ಕೆ,ಅರ್ಚಕರು ಧರ್ಮ ಕರ್ತರು ವಂಶ ಪಾರಂಪಾರ್ಯರು ಅನ್ನುವುದು ದೇವಾಲಯದಲ್ಲಿ ಗೊಂದಲ ಗಿಡಗಿದೆ ಈಗಾಗಲೇ ಈ ದೇವಾಲಯಕ್ಕೆ ರಾಜಕಾರಣಿಗಳ ಬಣ್ಣ ಪಡೆದುಕೊಂಡಿದೆ ಅರ್ಚಕರು ದೇವಾಲಯವನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು,ವ್ಯವಸ್ಥವನ್ನು ನಡೆಸಬೇಕು ಅನ್ನುವ ಆಲೋಚನೆ ಅವರದಾಗಿದೆ.
ಈಗಾಗಲೇ ದೇವಾಲಯ ಹಿಂದೂ ಧಾರ್ಮಿಕ ದತ್ತ ಇಲಾಖೆಯ ಅಧೀನದಲ್ಲಿದೆ.
ಅರ್ಚಕರು ಮುಖ್ಯ ಅರ್ಚಕರು ಅನ್ನುವವರು ಪದೇ ಪದೇ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣೆ ಅಧಿಕಾರಿಗಳು ಮೇಲೆನ ಅಧಿಕಾರಿಗಳ ಆದೇಶ ಪಾಲನೆ ಮಾಡಿದ್ದಾರೆ. ಅದು
ಅವರಿಗೆ ಆಗುತ್ತಾನೆ ಇಲ್ಲ ಇದರಿಂದ ಅರ್ಚಕರು ಧರ್ಮ ಕರ್ತರು ಅನ್ನುವುದು ಗೊಂದಲಾಗಿ ಉಳಿದಿದೆ.
ಈಗಾಗಲೇ ನ್ಯಾಯಾಲಯದಲ್ಲಿ ದುರ್ಗಮ್ಮ ಗುಡಿಗೆ ಮೂಲತಃ ಅರ್ಚಕರು ಧರ್ಮ ಕರ್ತರು ಯಾರು ಇಲ್ಲ ಅನ್ನುವುದು ನ್ಯಾಯ ಲಯ ಮೆಟ್ಟಲುನಲ್ಲಿ ಇದೇ.
ಮುಂದೆ ಏನು ಆಗಬಹುದು ಅನ್ನುವದು, ಬಹಿರಂಗ ಆಗುತ್ತೆ.
ಒಟ್ಟಾರೆ ದುರ್ಗಾ ದೇವಿ. ಗುಡಿ ಯಲ್ಲಿಅಲ್ಲೋಲ ಕಲ್ಲೋಲ ಇದೇ ಪದೇ ಪದೇ ಶಾಸಕರರು ಗುಡಿ ವಿಚಾರ ಒಬ್ಬರ ಪರವಾಗಿ ಬ್ಯಾಟಿಂಗ್ ಮಾಡೋದು, ಬಹಿರಂಗ ಆಗಿದೆ. ಸರ್ಕಾರದ ಪರವಾಗಿ ಇರಬೇಕು ಆಗಿರುವ, ರಾಜಕಾರಣಿ ಗಳು, ವಾಸ್ತವ ತೆಳಿದು ಕೊಂಡು ಪಂಚಾಯಿತಿ ಮಾಡಬೇಕು, ಅದನ್ನು ಬಿಟ್ಟು ಮಾಡಿದ್ರೆ… ಜನ ಏನು ಅನ್ನುತ್ತಾರೆ..??.