This is the title of the web page
This is the title of the web page

Please assign a menu to the primary menu location under menu

State

88 ನೇ ಅ.ಭಾ.ಸಾ.ಸಮ್ಮೇಳನಾಧ್ಯಕ್ಷೆಯಾಗಿ ಭಾನು ಮುಷ್ತಾಕ್ ಘೋಷಣೆ

88 ನೇ ಅ.ಭಾ.ಸಾ.ಸಮ್ಮೇಳನಾಧ್ಯಕ್ಷೆಯಾಗಿ ಭಾನು ಮುಷ್ತಾಕ್ ಘೋಷಣೆ

88 ನೇ ಅ.ಭಾ.ಸಾ.ಸಮ್ಮೇಳನಾಧ್ಯಕ್ಷೆಯಾಗಿ ಭಾನು ಮುಷ್ತಾಕ್ ಘೋಷಣೆ

ಬಳ್ಳಾರಿ: (29)
ಮುಂದಿನ ಡಿಸೆಂಬರ್ ನಲ್ಲಿ ಗಣಿನಾಡು ಬಳ್ಳಾರಿಯಲ್ಲಿ ನಡೆಯಲಿರುವ 88 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆಯನ್ನಾಗಿ ಬೂಕರ್ ಪ್ರಶಸ್ತಿ ವಿಜೇತ ಮಹಿಳಾ ಲೇಖಕಿ, ಹಾಸನದ ಭಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಕುರಿತು ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ಕಾರ್ಯಕಾರಿ ಸಮಿತಿ ಸಭೆಯು ತೆಗೆದುಕೊಂಡ ನಿರ್ಣಯದ ಬಳಿಕ ಸುದ್ದಿ ಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಅವರು ಇದೇ ಮೊದಲ‌ಬಾರಿಗೆ ಕನ್ನಡದ ಲೇಖಕಿಯೊಬ್ಬರು ಅಂತಾರಾಷ್ಟ್ರೀಯ ಮಟ್ಟದ ಬೂಕರ್ ಪ್ರಶಸ್ತಿ ಪಡೆದು ಪ್ರಪಂಚದಾದ್ಯಂತ ಕನ್ನಡದ ಹಿರಿಮೆಯನ್ನು ಪಸರಿಸಿದ್ದಾರೆ.
ಸಮ್ಮೇಳನಾಧ್ಯಕ್ಷೆಯನ್ನಾಗಿ ಅವರನ್ನೇ ನಿಯುಕ್ತಿಗೊಳಿಸುವುದು ಹೆಚ್ಚು ಸೂಕ್ತವೆಂದು ಭಾವಿಸಿ ಸಮಿತಿಯು ಈ ನಿರ್ಣಯ ಕೈಗೊಂಡಿದೆ ಎಂದರು.

ಕನ್ನಡ ಮತ್ರು ಸಂಸ್ಕೃತಿ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಆಡಳಿತ ನಡೆಸುವ ಎಲ್ಲರೊಂದಿಗೆ ಚರ್ಚಿಸಿ ಸಮ್ಮೇಳನವನ್ನು ಅತ್ಯಂತ ಅದ್ದೂರಿಯಾಗಿ ನೆರವೇರಿಸಲು ಪರಿಷತ್ತು ಇಂದಿನಿಂದಲೇ ಕಾರ್ಯಪ್ರವೃತ್ತವಾಗಲಿದೆ.

ಮಹಿಳೆಯರು ಕಡಿಮೆ ಸಂಖ್ಯೆಯಲ್ಲಿ ಸಮ್ಮೇಳನಾಧ್ಯಕ್ಷರಾಗಿದ್ದರು. ಈ ಬಾರಿ ಮತ್ತೆ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ಈ ಬಗ್ಗೆ ಕಾರ್ಯಕಾರಿ ಸಮಿತಿಯಲ್ಲಿ ತೆಗೆದುಕೊಳ್ಳುವ ಎಲ್ಲ ರೀತಿಯ ತೀರ್ಮಾನಗಳನ್ನು ಪರಿಷತ್ತು ಸ್ವೀಕರಿಸಲಿದೆ‌.

ಸಮ್ಮೇಳನದ ಯಶಸ್ಸಿಗೆ ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದ್ದು ಕನ್ನಡದ ಹಬ್ಬದಲ್ಲಿ ಎಲ್ಲರ ಪಾಲ್ಗೊಳ್ಳುವಿಕೆಗೆ ಪರಿಣತ್ತು ಮನವಿ ಮಾಡುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ,ರಾಜ್ಯ ಸಮಿತಿ ಗೌರವ ಕಾರ್ಯದರ್ಶಿ ಡಾ. ಎಚ್.ಎಲ್.ಮಲ್ಲೇಶ್ ಗೌಡ ಸೇರಿದಂತೆ ಸಮಿತಿಯ ಹಲವು ಪದಾಧಿಕಾರಿಗಳು ಇದ್ದರು.


News 9 Today

Leave a Reply