ನ್ಯೂಸ್9ಟು ಡೇ ಯ ಬಿಗ್ ಬಿಗ್ ಇಂಪಾಕ್ಟ್ ಸ್ಟೋರಿ*
ಬಿ. ನಾಗೇಂದ್ರ ಅಭಿಮಾನಿಗಳಿಗೆ ಬಿಗ್ ಗಿಫ್ಟ್ ನೀಡುವ ಸುಳಿವು ನೀಡಿದ ಕಾಂಗ್ರೆಸ್ ಹೈಕಮಾಂಡ್
*ಬಳ್ಳಾರಿ (2)ಸಿಎಂ & ಡಿಸಿಎಂ ಬಿ.ನಾಗೇಂದ್ರ ಅವರಿಗೆ ಮರು ಸಚಿವ ಸ್ಥಾನಕ್ಕೆ ಒತ್ತಾಯ*
*ಬಿ. ನಾಗೇಂದ್ರ ಅವರಿಗೆ ದೊಡ್ಡ ಖಾತೆ ನೀಡುವಂತೆ ಅಖಂಡ ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್ ನಾಯಕರಿಂದ ಒತ್ತಾಯ*
*ಪ್ರಾಣ ಸ್ನೇಹಿತ ಬಿ. ನಾಗೇಂದ್ರಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಸಚಿವ ಜಮೀರ್ ಅಹಮದ್ ಖಾನ್ ಫುಲ್ ಆಕ್ಟಿವ್*
*ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ನಲ್ಲಿ ಮತ್ತೆ ಅಧಿಕ ಬಹುಮತ ಪಡೆಯಲು ಜಿಲ್ಲೆಯ ಕಾಂಗ್ರೆಸ್ ಪಾಳಯದಲ್ಲಿ ಹುಮ್ಮಸ್ಸು*
ಮಾಡದ ತಪ್ಪಿಗೆ ಬಲಿಯಾಗಿದ್ದ ಮಾಜಿ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸಚಿವ ಸ್ಥಾನ ಕಳೆದುಕೊಂಡು ಬಹಳ ನೋವು ಅನುಭವಿಸಿದ್ದ ನಾಗೇಂದ್ರ ಅವರಿಗೆ ಇದೀಗ ಮತ್ತೆ ಅದೃಷ್ಟದ ಬಾಗಿಲು ತೆರೆಯುವ ಸುಸಮಯ ಕೂಡಿಬಂದಿದೆ
ಇನ್ನು ನಿರಂತರ ಚರ್ಚೆ ನಡೆಸಿರುವ ರಾಜ್ಯ ಹಾಗೂ ಕೇಂದ್ರ ಕಾಂಗ್ರೆಸ್ ನಾಯಕರು ಕೊನೆಗೂ ಒಂದು ತೀರ್ಮಾನಕ್ಕೆ ಬಂದು ಮಾಜಿ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡಿದರೆ ಮತ್ತೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸಹಾಯ ಆಗುತ್ತದೆ ಎನ್ನುವ ಲೆಕ್ಕಾಚಾರ ನಡೆದಿದೆ ಎಂದು ಕಾಂಗ್ರೆಸ್ ಬಲ್ಲ ಮೂಲಗಳಿಂದ ತಿಳಿದು ಬಂದಿದೆ