*ಬಿಗ್ ಬ್ರೇಕಿಂಗ್. ಬಿಜಿಪಿಯ ನರೇಂದ್ರ ಮೋದಿಗೆ ಬಿಗ್ ಶಾಕ್!*
*ಬಿಜೆಪಿಯ ಮೊತ್ತೊಂದು ವಿಕೆಟ್ ಪತನ*
*ನಗರ ಕ್ಷೇತ್ರ ಟಿಕೆಟ್ ಆಕಾಂಕ್ಷಿಯಾಗಿದ್ದ ಕೊನಂಕಿ ರಾಮಪ್ಪ ಕೆಆರ್’ಪಿಪಿಗೆ!?*
*ಜನಾರ್ದನ್ ರೆಡ್ಡಿ ರಹಸ್ಯ ಭೇಟಿ, ಮಾತುಕತೆ!*
ಬಳ್ಳಾರಿ ; ಬಳ್ಳಾರಿ ನಗರದ ಪ್ರತಿಷ್ಠಿತ ಬೆಸ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿರುವ ಕೊನಂಕಿ ರಾಮಪ್ಪ ಅವರು ಪುಟ್ಬಾಲ್ ಆಡಲು ರೆಡಿಯಾಗಿದ್ದಾರೆ.
ಕಳೆದ ಹಲವಾರು ವರ್ಷಗಳ ಕಾಲ ಪಕ್ಷದಲ್ಲಿ ಹಿರಿಯ ಧುರೀಣರಾಗಿ ದುಡಿದಿದ್ದ ಕೊನಂಕಿ ರಾಮಪ್ಪ ಅವರು ಬಿಜೆಪಿಯಿಂದ ದೂರವಿರಲು ಬಯಸಿದ್ದು, ಪುಟ್ಬಾಲ್ ಆಡಲು ರೆಡಿಯಾಗಿದ್ದಾರೆ. ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದ ಕೊನಂಕಿ ರಾಮಪ್ಪ ಅವರು ಈ ಬಾರಿಯ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈ ಕಮಾಂಡ್ ಇವರಿಗೆ ಟಿಕೆಟ್ ನೀಡದ ಕಾರಣ ಬೇಸತ್ತು ಕೆಆರ್’ಪಿಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಈಗಾಗಲೇ ಕೆಆರ್’ಪಿಪಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಅವರನ್ನು ಭೇಟಿ ಮಾಡಿ, ಪಕ್ಷಕ್ಕೆ ಸೇರುವ ಇಂಗಿತ ವ್ಯಕ್ತಿಪಡಿಸಿದ್ದಾರೆ,ಇಂದು ಅಧಿಕೃತವಾಗಿ ಫುಟ್ಬಾಲ್ ಕ್ಯಾಚ್ ಮಾಡಲಿದ್ದಾರೆ.ಕೊನಂಕಿ ರಾಮಪ್ಪ ಪ್ರಭಾವಿ ನಾಯಕರು ಬಹುದೊಡ್ಡ ಗ್ರಾಮೀಣ ಮತ್ತು ನಗರ ಪ್ರದೇಶ ಗಳಲ್ಲಿ ಇದೆ.ರಾಜಕಾರಣ ವನ್ನು ಉಲ್ಟಾ ಪಲ್ಟಾ ಮಾಡುವ ಸಾಮಾರ್ಥ್ಯ ಹೊಂದಿರುತ್ತಾರೆ.
ಕೊನಂಕಿ ರಾಮಪ್ಪ ಅವರು ಮಗ ಕೊನಂಕಿ ತಿಲಕ್ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ, ಇವರು ಕೂಡ ಕೆಆರ್’ಪಿಪಿಗೆ ಸೇರಲಿದ್ದಾರೆ ಎಂಬ ಗುಮಾನಿ ಇದೆ. ಒಟ್ಟಿನಲ್ಲಿ ಮೇ.6ಕ್ಕೆ ಪ್ರಧಾನಿ ಮೋದಿ ಬಳ್ಳಾರಿ ನಗರಕ್ಕೆ ಆಗಮಿಸುವ ಮುನ್ನ ಬಿಜೆಪಿಯ ದೊಡ್ಡ ವಿಕೆಟ್ ಪತನವಾಗಿದೆ.
ಮುಂದೆ ಇನ್ನಷ್ಟು ಬಿಜೆಪಿ ಹಿರಿಯ ನಾಯಕರು.ಪಾಲಿಕೆ ಸದಸ್ಯರು ಕೆಆರ್’ಪಿಪಿ ಸೇರಿವು ಸಾಧ್ಯತೆ ನಿಚ್ಚಳವಾಗಿದೆ.
ಈಗಾಗಲೇ ಕಾಂಗ್ರೆಸ್ ಬಹುದೊಡ್ಡ ಲೀಡರ್ ಕೂಡ ಫುಟ್ಬಾಲ್,ಕ್ಯಾಚ್ ಮಾಡಿದ್ದಾರೆ.(ಕೆ.ಬಜಾರಪ್ಪ ವರದಿಗಾರರು ಚೀಫ್ ಬ್ಯೂರೋ ಕಲ್ಯಾಣ ಕರ್ನಾಟಕ.)