ನಿಯಮ ಉಲ್ಲಂಘನೆ, ಠಾಣೆಯಲ್ಲಿ ಬರ್ತ್ ಡೇ ಆಚರಣೆ! ಡಿಜಿ-ಐಜಿಪಿ ಆದೇಶಕ್ಕೆ ಗಾಂಧಿನಗರ ಠಾಣೆಯಲ್ಲಿ ಕಿಮ್ಮತ್ತೆ ಇಲ್ಲ!
ಬಳ್ಳಾರಿ: ರಾಜ್ಯದ ಪೋಲಿಸ್ ಮಹಾ ನಿರ್ದೇಶಕರು(ಡಿಜಿ&ಐಜಿಪಿ)ಯಾವುದೇ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಅಧಿಕಾರಿಗಳು ಬರ್ತ್ ಡೇ ಆಚರಣೆ ಮಾಡುವಂತಿಲ್ಲ ಎಂಬ ಸ್ಪಷ್ಟ ಆದೇಶ ಹೊರಡಿಸಿದ್ದು, ಇದೆ. ಈ ಆದೇಶಕ್ಕೆ ಬಳ್ಳಾರಿಯಲ್ಲಿ ಕಿಮ್ಮತ್ತೆ ಇಲ್ಲದಂತಾಗಿದೆ.
ಬಳ್ಳಾರಿ ನಗರದ ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ ಗಡ್ಡದ್ ರವರು ನಿನ್ನೆ ಠಾಣೆಯಲ್ಲೆ ತಮ್ಮ ಸಿಬ್ಬಂದಿಗಳೊಂದಿಗೆ ಬರ್ತ್ ಡೇ ಆಚರಿಸಿ ಡಿಜಿ&ಐಜಿಪಿಯವರ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಿನ್ನೆ ಇಡೀ ದಿನ ರಾಜ್ಯಾದ್ಯಂತ ಪೋಲಿಸ್ ಹುತಾತ್ಮ ದಿನಾಚರಣೆ ಮಾಡಿ ಹುತಾತ್ಮ ಪೋಲಿಸರಿಗೆ ನಮನ ಸಲ್ಲಿಸಲಾಯಿತು. ಇಂತಹ ಸಂದರ್ಭದಲ್ಲಿ ಸಿದ್ದರಾಮೇಶ್ವರ ಗಡ್ಡದ್ ರವರು ತಮ್ಮ ಠಾಣೆಯಲ್ಲಿ ಬರ್ತ್ ಡೇ ಸಂಭ್ರಮಾಚರಣೆ ಮಾಡಿಕೊಂಡಿದ್ದು ಎಷ್ಟು ಸರಿ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಪೋಲಿಸ್ ಠಾಣೆಗಳಲ್ಲಿ ಈ ರೀತಿ ಬರ್ತ್ ಡೇ ಗಳನ್ನ ಆಚರಣೆ ಮಾಡಿಕೊಳ್ಳುವುದನ್ನ ಪೋಲಿಸ ಇಲಾಖೆಯ ನಿಷೇದಿಸಿದ್ದು ಈ ಕುರಿತು ಆದೇಶವಿದೆ. ಆದ್ಯಾಗೂ ಬಳ್ಳಾರಿ ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವ ಗಡ್ಡದ್ ಪೋಲಿಸ್ ಇಲಾಖೆಯ ಆದೇಶ ದಿಕ್ಕರಿಸಿ ಅದು ಪೋಲಿಸ್ ಹುತಾತ್ಮ ದಿನಾಚರಣೆಯ ದಿನವೇ ಈತ ಠಾಣೆಯಲ್ಲಿ ಬರ್ತ್ ಡೇ ಆಚರಿಸಿದ್ದು ಹಿರಿಯ ಅಧಿಕಾರಿಗಳ ಹಾಗೂ ಇಲಾಖೆಯ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಿದ್ದಾರೆ ಎಂದು ಪೋಲಿಸ್ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಈ ಕುರಿತು ಬಳ್ಳಾರಿ ಐಜಿ ಲೋಕೇಶ್ ಕುಮಾರ್ ರವರು ಸೂಕ್ತ ವಿಚಾರಣೆ ನಡೆಸಿ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ ಗಡ್ಡದ್ ವಿರುದ್ಧ ಕ್ರಮ ಜರುಗಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಬಳ್ಳಾರಿ ವಲಯ ಐಜಿಪಿಯವರು ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಎಂಬುವುದನ್ನ ಕಾದು ನೋಡಬೇಕಿದೆ.