*ಪಾರಿವಾಳ ಪಂದ್ಯಗಳನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಬ್ರೂಸ್’ಪೇಟೆ ಪೋಲಿಸರು ಮುಂದು.*
ಬಳ್ಳಾರಿ: ಬಳ್ಳಾರಿಯಲ್ಲಿ ದಿನದಿಂದ ದಿನಕ್ಕೆ ಪಾರಿವಾಳಗಳ ಪಂದ್ಯಗಳು ಜೋರಾಗಿ ನಡೆಯುತ್ತಿವೆ.
ಭಾನುವಾರ ಬಂತಂದರೆ ಸಾಕು ಬಳ್ಳಾರಿಯ ಕೆಲ ಪ್ರದೇಶಗಳಲ್ಲಿ ನೂರಾರು ಯುವಕರು, ಹಿರಿಯರು ಎಲ್ಲರೂ ಸೇರಿ ಗುಂಪುಗಳನ್ನು ಮಾಡಿಕೊಂಡು ಸಾವಿರ ರೂ ಗಟ್ಟಲೆ ಕಟ್ಟಿ ಪಾರಿವಾಳಗಳ ಪಂದ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ.
ಬೀದಿಗಳು, ಮುಖ್ಯ ರಸ್ತೆಗಳಲ್ಲಿ ರನ್ನಿಂಗ್ ಸೇರಿ ವಾಹನಗಳ ಓಡಾಟ ಕಾಣುತ್ತದೆ.
ಪಾರಿವಾಳ ಒಂದು ಪ್ರದೇಶದಿಂದ ಗುರಿಯನ್ನು ಇಟ್ಟುಕೊಂಡು ಮತ್ತೊಂದು ಪ್ರದೇಶಕ್ಕೆ ಗಗನದಲ್ಲಿ ಹಾರಿ ಬರುತ್ತದೆ.
ಅದರ ಸಮಾನವಾಗಿ ಪಾರಿವಾಳದ ಮುಖ್ಯಸ್ಥರು ವೇಗವಾಗಿ ಓಡುವ ಯುವಕರನ್ನು ಟವಲ್’ನಲ್ಲಿ ಕೈ ಹಿಡಿದು ಪಾರಿವಾಳ ಜೊತೆಗೆ ಓಡಿ ಬರಬೇಕು ಅನ್ನುವ ಸೂಚನೆ ನೀಡುತ್ತಾರೆ.
ನಿಗದಿತ ಸಮಯದಲ್ಲಿ ಗುರಿಯನ್ನು ತಲುಪಿದ ಪಾರಿವಾಳ ಮೇಲೆ ದುಡ್ಡಿನ ಸುರಿಮಳೆಯಾಗುತ್ತಿದೆ, ಇದರಿಂದ ಎಷ್ಟೋ ಮನೆತನಗಳು ಹಾಳಾಗಿವೆ.
ಕೆಲಸವನ್ನು ಬಿಟ್ಟು ಪಾರಿವಾಳ ಪಂದ್ಯಗಳನ್ನು ಆಡುವವರ ಸಂಖ್ಯೆ ಬಳ್ಳಾರಿ ನಗರದಲ್ಲಿ ತುಂಬಾ ಇದೇ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ.
ಸದ್ಯ ಹೊಸದಾಗಿ ಬಂದಿರುವ ಬ್ರೂಸ್’ಪೇಟೆ ಪೊಲೀಸಯ ಠಾಣೆಯ ಅಧಿಕಾರಿ ಮಲ್ಲಿಕಾರ್ಜುನ್ ಎನ್ ಸಿಂಧೂರ್ ಅವರಿಂದ ಕೆಲ ಪ್ರದೇಶದಲ್ಲಿ ದಾಳಿ ಮಾಡಿ ಬುದ್ದಿಮಾತು ಹೇಳಿದ್ದಾರೆ ಎನ್ನಲಾಗಿದೆ.
ಇದೇ ರೀತಿ ಪಾರಿವಾಳಗಳ ಪಂದ್ಯಾವಳಿಯನ್ನು ನಡೆಸುವವರು ಹಾಗೂ ಆಡುವವರಿಗೆ ಮುಂದೆ ಕಾನೂನಿನ ಕ್ರಮ ಜರಗಿಸಲಾಗುತ್ತದೆ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ.
ಬಳ್ಳಾರಿ ನಗರದಲ್ಲಿ ಇಂತಹ ಆಟಗಳಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಉಂಟಾಗಿ, ಜಗಳಗಳು ನಡೆದು ಠಾಣೆಗಳ ಮೆಟ್ಟಿಲು ಹತ್ತಿರುವುದು ವಾಸ್ತವದ ವಿಷಯವನ್ನು ತಿಳಿದುಕೊಂಡ ಪೊಲೀಸ್ ಅಧಿಕಾರಿಗಳು, ಇನ್ನು ಮುಂದೆ ನಮ್ಮ ವ್ಯಾಪ್ತಿಯಲ್ಲಿ ಪಾರಿವಾಳ ಪಂದ್ಯಗಳು ನಡೆಯಬಾರದು ಎಂದು ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.
ಪ್ರತಿ ಭಾನುವಾರ ನಗರದಲ್ಲಿ ನಡೆಯುವ ಪಾರಿವಾಳ ಪಂದ್ಯದಿಂದ ನಾಗರೀಕರು ಬೇಸತ್ತು ಹೋಗಿದ್ದಾರೆ.
ಬ್ರೂಸ್’ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಮಾಡಿದ ಕೆಲಸಕ್ಕೆ ಸಾರ್ವಜನಿಕರು ಅಭಿನಂದನೆಗಳು ಸಲ್ಲಿಸಿದ್ದಾರೆ.
ಉಳಿದ ಠಾಣೆಗಳ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ. ಕೆ.ಬಜಾರಪ್ಪ ವರದಿಗಾರರು. ಬಳ್ಳಾರಿ.