*ಪಿಎಸೈ ಮೇಲೆ ಜಾತಿ ನಿಂದನೆ ಪ್ರಕರಣ, ಅಮಾನತು !!.ಅಧಿಕಾರಿಗಳು ಕರ್ತವ್ಯ ಮಾಡಲು ಸಾಧ್ಯವೇ??* ಬಳ್ಳಾರಿ ಜಿಲ್ಲೆಯ ಕುರುಗೊಡು ತಾಲ್ಲೂಕಿನ ಪೋಲಿಸ್ ಠಾಣೆ ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಣಿಕಂಠ(ಕುರುಬ ಸಮಾಜದ ಅಧಿಕಾರಿ) ಅನ್ನುವ ಪಿಎಸೈ ಮೇಲೆ ಜಾತಿ ನಿಂದನೆ, (ಅಟ್ರಾಸಿಟಿ) ಪ್ರಕರಣ ದಾಖಲೆ ಮಾಡಿ,ಸೇವೆ ಯಿಂದ ಅಮಾನತು ಮಾಡಿದ್ದರೆ. *ಏನು ಇದು ಪ್ರಕರಣ* ಕುರುಗೊಡು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಲ10.ದಿನಗಳು ಹಿಂದೆ ಕೋಳುರು ಗ್ರಾಮದ ನೀರಿನ ಕಾಲುವೆ ಪಕ್ಕದಲ್ಲಿ ಒಂದು ಮಹಿಳೆಯ ಮೃತ ದೇಹ ಕಾಣಿಸಿ ಕೊಂಡಿತ್ತು. ಕೋಳುರು ಗೆ ಠಾಣೆಗೆ 12 ಕಿಲೋ ಮೀಟರ್ ದೂರ ಇರುತ್ತದೆ. ಪೋಲಿಸರು ಸ್ಥಳಕ್ಕೆ ಹೋಗುವ ಸಮಯಕ್ಕೆ ಜನರ ತುಂಬಾ ಸೇರಿಕೊಂಡಿರುತ್ತಾರೆ. ಅಲ್ಲಿಗೆ ಠಾಣೆಯ ಅಧಿಕಾರಿಗಳು ಹೋಗಿ ಜನರು ಯಾಲ್ಲರು ದೂರ ಹೋಗಿ ಸ್ಥಳದಲ್ಲಿ ಕೆಲ ಸಾಕ್ಷಿಗಳು ಸಿಗುವ ಸಾಧ್ಯತೆ ಇರುತ್ತದೆ, ಅವುಗಳನ್ನು ನೋಡಬೇಕು ಏಂದು, ಹೇಳುತ್ತಾರೆ. ಅದಕ್ಕೆ ಜನರು ಯಾರು ದೂರ ಹೋಗದೆ ಹಿನ್ನೆಲೆಯಲ್ಲಿ ಸ್ವಲ್ಪ ಲಾಠಿ ಬಿಸಿ ಇರಬಹುದು.ಜನರು ಹೊಡಿಹೊಗುವ ಸಮಯದಲ್ಲಿ ಒಬ್ಬ ವ್ಯಕ್ತಿ ವಾಲ್ಮೀಕಿ ಸಮಾಜದ ವೀರಣ್ಣ ಜಾರಿ ಕೆಳಗೆ ಬೀಳುತ್ತಾನೆ. ಅವರು ಗೆ ಕಾಲ ಪೆಟ್ಟು ಅಗಿದೆ ಪೋಲಿಸ್ ಹೊಡೆದಿದ್ದಾರೆ ಏಂದು ಜನರು ಪೋಲಿಸರು ಮೇಲೆ ಗಲಾಟೆ ಮಾಡುತ್ತಾರೆ, ಪೋಲಿಸರು ಜನರು ಕುಸ್ತಿ ಆಡಿದ್ದಾರೆ ಅನ್ನವ ಮಾತುಗಳು ಕೇಳಿಬಂದವು.ಅದೆ ಸಮಯಕ್ಕೆ ಕಂಪ್ಲಿ ಶಾಸಕರು ,ಗಣೇಶ್ ಯಾವುದೋ ಕಾರ್ಯಕ್ರಮ ನಿಮಿತ್ತವೋ ಅಥವಾ ಮತ್ತೆ ಏನೋ ಗೊತ್ತಿಲ್ಲ,10 ನಿಮಿಷದಲ್ಲಿ ಅವರು ಗಲಾಟೆ ಸ್ಥಳಕ್ಕೆ ಬರುತ್ತಾರೆ. ಇದನ್ನು ನೋಡಿದ ಶಾಸಕರು ಗ್ರಾಮದಲ್ಲಿ ಕೂತು ಕೊಂಡು, ಜನ ಪ್ರತಿನಿಧಿ ಯಾಲ್ಲವು ಸರಿ ಮಾಡಬಹುದು ಆಗಿತ್ತು. ಅದನ್ನು ಬಿಟ್ಟು ಜನರ ಜೊತೆಯಲ್ಲಿ ಪ್ರತಿಭಟನೆ ಮಾಡುತ್ತಾರೆ. ವೀರಣ್ಣ ಗೆ ವಿಮ್ಸ್ ಆಸ್ಪತ್ರೆ ಗೆ ಕಳಸಿ ಕೊಡುತ್ತಾರೆ. ಅಲ್ಲಿಯಿಂದ ಶಾಸಕರು ಆಸ್ಪತ್ರೆ ಗೆ ಹೋಗಿ, ವೀರಣ್ಣ ಗೆ ಮಾತನಾಡಿಸಿ ಎಸ್ಪಿ ಅವರ ಗೆ ನಡೆದ ಘಟನೆ ಹೇಳಿ ಪಿಎಸೈ ಮೇಲೆ ಕ್ರಮ ಕೈಗೊಳ್ಳಲು ಒತ್ತಾಯ ಮಾಡಿ ಹೋಗುತ್ತಾರೆ. ವೀರಣ್ಣಗೆ ಆಸ್ಪತ್ರೆ ಯಲ್ಲಿ ಒಂದು ಇಡೀ ಕಾಲಿಗೆ ಬ್ಯಾಂಡೇಜ್ ಹಾಕಿದ್ದು ನೋಡಿದರೆ,ಜೀವನ ಪೂರ್ತಿ,ಅಂಗವಿಕಲ ಅಗುಬಹುದು,ಅನ್ನುವ ಭಾವನೆ,ಪೋಲಿಸರು ಮೇಲೆ ಸಿಟ್ಟು ಬರುವಂತೆ ಅಗಿತ್ತು,ಆದರೆ ಇಲ್ಲಿ ಒಂದು ವಿಸ್ಮಯ ಆಗಿತ್ತು.ಮೂರು ದಿನದಲ್ಲಿ, ಅವ್ಯಕ್ತಿ ಹೊರಗೆ ಬಂದು ಮೊಹರಮ್ ಹಬ್ಬದಲ್ಲಿ ಕುಣಿಯುತ್ತಾನೆ. ಗ್ರಾಮಸ್ಥರು ಗೆ ಅನುಮಾನ ಆಗಿತ್ತು ಸಾಮಾನ್ಯವಾಗಿ ಪೋಲಿಸ್ ಕೈಯಲ್ಲಿ ಚಾರ್ಜ್ ಆಗಿದ್ದರೆ,ಅಷ್ಟು ಬೇಗನೆ, ಕುಣಿಯಲು ಸಾಧ್ಯವಿಲ್ಲವೆಂದು,ಅಲ್ಲಿ ಅವನು ಗ್ರಾಮದಲ್ಲಿ ಬ್ಯಾನರ್ ಗಳು ಹರಿದು ಪೋಲಿಸರು ವಿರುದ್ಧ ಕೂಗುವದು ಆರಂಭ ಮಾಡಿದ್ದ,ಅದೆ ಗ್ರಾಮದಲ್ಲಿ ಮೊಹರಮ್ ಹಬ್ಬವನ್ನು ಯಾವುದೇ ಗಲಾಟೆ ಇಲ್ಲದಂತೆ ಮಾಡುತ್ತವೆ ಏಂದು ಅನುಮತಿ ದಿಂದ ಮಾಡುತ್ತಾರೆ, ವೀರಣ್ಣ ನಡತೆ ನೋಡಿದ ಜನರ ಗೆ ಮೊಹರಮ್ ಹಬ್ಬವನ್ನು ನಿಲ್ಲಿಸಲು ಪ್ರಯತ್ನ ಮಾಡುತ್ತಾರೆ ಏಂದು ತಿಳಿದು ಜನರು ಪೋಲಿಸ್ ರಗೆ ಮಾಹಿತಿ ಕೊಡುತ್ತಾರೆ. ಗ್ರಾಮಕ್ಕೆ ಬೀಟಿ ನೀಡಿದ ಪೋಲಿಸರು ವೀರಣ್ಣ ಗೆ ಗಲಾಟೆ ಮಾಡ ಬೇಡಿ ಏಂದು ತಿಳಿದು ಹೇಳಿದ್ದಾರೆ, ಅದರೂ ಕೇಳದೆ, ಪೋಲಿಸರು ವಿರುದ್ಧ ಹಳೆ ಘಟನೆ ಬಗ್ಗೆ ಹಗುರವಾಗಿ ಮಾತನಾಡಿ, ಕರ್ತವ್ಯ ಕ್ಕೆ ಅಡ್ಡಿಪಡಿಸುವ ಪ್ರಯತ್ನ ಮಾಡಿದ್ದರು.ಅಲ್ಲಿ ಸ್ವಲ್ಪ ಸಾರ್ವಜನಿಕ ವಾಗಿ ಪೋಲಿಸ್ ಇಲಾಖೆ ಗೌರವ ಕ್ಕೆ ದಕ್ಕಿ ಆಗುವ ಪ್ರಯತ್ನ ಆಗಿತ್ತು, ಪಿಎಸೈ ಸ್ಥಳದಲ್ಲಿ ಅವ್ಯಕ್ತಿ ಮೇಲೆ ಹಲ್ಲೆ ಮಾಡಿದ್ದಾರೆ,ಅವಾಚ್ಯಶಬ್ದ ಗಳು ಬಳಕೆ ಮಾಡಿದ್ದಿರವ ವಿಡಿಯೋ ವೈರಲ್ ಆಗಿತ್ತು ಅದರೆ ಅದರಲ್ಲಿ ಪೂರ್ತಿ ವಿಡಿಯೋ ಇಲ್ಲ ಪಿಎಸೈ ಅವರದು ಮಾತ್ರವೇ ಇದೇ. ಗ್ರಾಮಸ್ಥರು ಗಲಾಟೆ ಮಾಡುವ ವ್ಯಕ್ತಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ, ಅಲ್ಲಿ ನಡೆದ ಒಂದು ಗಂಟೆ ಪ್ರಸಂಗ ಯಾರು ವಿಡಿಯೋ ಮಾಡಿಲ್ಲ,ಅಂದರೆ ಇದು ಸಂಪೂರ್ಣ ವಾಗಿ ಪ್ಲಾನ್ ಅಗಿ ಇರಬಹುದು. ಗಲಾಟೆ ಮಾಡಿದ ವ್ಯಕ್ತಿಯ ಭಾಷೆ ಗಳು ನೋಡಿದರೆ,ಆಕ್ರೋಶ ಬರುವಂತೆ ಇದ್ದವು ಅನ್ನುತ್ತಾರೆ ಜನರು, ಮೊದಲೇ ಪೋಲಿಸರು, ಅಪ್ಪಿತಪ್ಪಿ”ಗನ್” ಹೊರಗೆ ಹಾಕಿದರೆ, ಅಪಾಯ ಅಗುವ ಸಾಧ್ಯತೆಗಳು ಇರುತ್ತವೆ ಪೋಲಿಸರು ಸಾಮಾನ್ಯರು ಅಲ್ಲವೇ ಅಲ್ಲ. ಘಟನೆ ನಡೆದ ಮೇಲೆ ಯಾರು ಏನು ಮಾಡಿದರು, ಪ್ರಯೋಜನ ಇಲ್ಲದಂತೆ ಆಗುತ್ತದೆ.ದಯವಿಟ್ಟು ಸಾರ್ವಜನಿಕರು,ಪಕ್ಷದ ಅಭಿಮಾನಿಗಳು, ಕೂಡ ರಾಜಕಾರಣಿಗಳ ಮಾತು ಕೇಳದೆ,ಎಚ್ಚರ ದಿಂದ ಇರಬೇಕು,ಕುಟುಂಬ ಗಳು ಬೀದಿಗೆ ಬಿದ್ದರೆ,ತಮ್ಮೊಂದಿಗೆ ಯಾರು ಬರೋದು ಇಲ್ಲ,ಪಿಎಸೈ ವರ್ತನೆ ಗೆ ನಮ್ಮದು ವಿರೋಧಿ ಇದೇ. ಪಿಎಸೈ ವರ್ತನೆ ವಿಡಿಯೋ ವೈರಲ್ ಸತ್ಯಸತ್ಯತೆ ಪರಿಶೀಲನೆ ಮಾಡಬೇಕು ಅಗಿರವ,ಜವಾಬ್ದಾರಿ ಎಸ್ಪಿ ಅವರಿಗೆ ಇದೆ.*ತಪ್ಪು ಮಾಡಿದ್ದ ಯಾವುದೇ ಅಧಿಕಾರಿ ಗಳು ಗೆ ಅಮಾನತು ಅನ್ನವದು ದೊಡ್ಡ ಶಿಕ್ಷೆ.ಜಾತಿ ನಿಂದನೆ ಅಸ್ತ್ರ ಬಳಕೆ ಮಾಡಿದ್ದು ಅಪಾಯ,ಅಚ್ಚರಿ ಇನ್ನೂ ಮುಂದೆ ಯಾವುದೇ ಅಧಿಕಾರಿಗಳು ಕರ್ತವ್ಯ ಮಾಡಲು ಸಾಧ್ಯವೇ..??* ಇದು ಸತ್ಯದ ವಿಚಾರ ಇನ್ನುಮುಂದೆ ಇದೇ ಅಸ್ತ್ರ ಬಳಕೆ ಮಾಡಿದರೆ,ಇತರೆ ಸಮಾಜದ ಯಾವೊಬ್ಬ ಅಧಿಕಾರಿ ಕೆಲಸ ಮಾಡಲು ಸಾಧ್ಯವಿಲ್ಲ,ಇಂತಹ ಸಮಾಜದ ಮುಖಂಡರ ಅಧಿಕಾರಿಗಳ ಮನೆಯಲ್ಲಿ ಗುಮಾಸ್ತ ಕೆಲಸವನ್ನು ಮಾಡಬೇಕು,ಇಲ್ಲದೆ ಭಯ ಪಟ್ಟು ಕೆಲಸವನ್ನು ಬಿಡಬೇಕು ಆಗುತ್ತದೆ.ತಪ್ಪು ಮಾಡಿದ ವ್ಯಕ್ತಿ ಗೆ,ಹೆಚ್ಚಿನ ಮಟ್ಟದಲ್ಲಿ ಶಿಕ್ಷೆ ಕೊಡುವ ಶಕ್ತಿ ನ್ಯಾಯಾಲಯಕ್ಕೆ ಇದೆ.ಹಿಂದುಳಿದ ಸಮಾಜ ಗಳು ಗೆ ಅನ್ಯಾಯ ವಾದರೆ,ಅದು ಪಾರದರ್ಶಕ ವಾಗಿ ಆಗಿದ್ದರೆ, ಜಾತಿ ನಿಂದನೆ ಅಸ್ತ್ರ ವನ್ನು ಬಳಕೆ ಮಾಡಿ,ಅವರ ಕುಟುಂಬ ಕ್ಕೆ ನ್ಯಾಯ ಸಿಗುವಂತೆ ಮಾಡಿದರೆ,ಅದು ಶ್ಲಾಘನೀಯ.ಪಿಎಸೈ ವಿಚಾರ ದಲ್ಲಿ ಸಂಪೂರ್ಣ ರಾಜಕೀಯ ಇದೇ. ಪ್ರಕರಣಗಳು ದಾಖಲೆ ಆಗುತ್ತವೆ, ಕಾಲಘಟ್ಟದಲ್ಲಿ ಯಾಲ್ಲವು ಸರಿ ಹೋಗುತ್ತವೆ. ವಿನಾಕಾರಣ ಇಂತಹ ಅಸ್ತ್ರ ಗಳನ್ನು ಬಳಕೆ ಮಾಡಿದರೆ, ನಾವು ಯಾವ ದಾರಿ ಹಾಕಿದರೆ ಅದೇ ದಾರಿಯಲ್ಲಿ ಯಾಲ್ಲರು ಹೋಗಬೇಕು ಆಗುತ್ತದೆ,ಇಂತಹ ಅಪಾಯ ಯಾಲ್ಲರು ಗೆ ಆಗುತ್ತದೆ. ಯಾಲ್ಲ ಪಕ್ಷದಲ್ಲಿ ಯಾಲ್ಲ ಸಮಾಜದ ನಾಯಕರು ಗಳು ಇದ್ದಾರೆ,ಅವರ ಸಂಬಂದಿ ಗಳು,ಅಧಿಕಾರಿಗಳು ಇದ್ದಾರೆ,ಸಮಾಜದ ಅವರು ಇದ್ದಾರೆ. ನಾಳೆ ಅವರ ಗಥಿ ಏನು??.ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಆಗುತ್ತದೆ, ಮುಂದೆ ಚುನಾವಣೆ ಗಳು ಇದ್ದಾವೆ. ಜನರು ಲೆಕ್ಕಾಚಾರ ದಲ್ಲಿ ಇದ್ದಾರೆ.ನ್ಯಾಯಯುತ ವಾಗಿ ಯಾರು ಯಾರನ್ನು ಏನು ಮಾಡಲು ಸಾಧ್ಯವಿಲ್ಲ.ಕಳ್ಳ ಮಾರ್ಗ ದಿಂದ, ವಂಚನೆ ದಿಂದ ಏನಾದರೂ ಮಾಡಬಹುದು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ)
News 9 Today > State > ಪಿಎಸೈ ಮೇಲೆ ಜಾತಿ ನಿಂದನೆ ಪ್ರಕರಣ, ಅಮಾನತು !!.ಅಧಿಕಾರಿಗಳು ಕರ್ತವ್ಯ ಮಾಡಲು ಸಾಧ್ಯವೇ??*
ಪಿಎಸೈ ಮೇಲೆ ಜಾತಿ ನಿಂದನೆ ಪ್ರಕರಣ, ಅಮಾನತು !!.ಅಧಿಕಾರಿಗಳು ಕರ್ತವ್ಯ ಮಾಡಲು ಸಾಧ್ಯವೇ??*
Bajarappa13/08/2022
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025